ರಶ್ಮಿಕಾ ಮಂದಣ್ಣ ಮದುವೆಗೆ ಉಟ್ಟ ಅನಾಮಿಕಾ ಖನ್ನ ಆರೇಂಜ್ ಸೀರೆ ಬೆಲೆ ಎಷ್ಟು ಗೊತ್ತಾ?
ರಶ್ಮಿಕಾ ಮಂದಣ್ಣ ಮದುವೆಗೆ ಉಟ್ಟ ಅನಾಮಿಕ ಖನ್ನ ಆರೇಂಜ್ ಸೀರೆ ಬೆಲೆ ಎಷ್ಟು ಗೊತ್ತಾ? ಈ ಸೀರೆ ರಶ್ಮಿಕಾ ಮದುವೆಗಾಗಿ ತಯಾರಿಸಲಾಗಿದೆ. ಕೊಡವ ಹಾಗೂ ತೆಲುಗು ಸಂಪ್ರದಾಯಗಳ ಗೌರವ ಸಲ್ಲಿಸುವಂತೆ ಈ ಕಲಾತ್ಮಕ ರಚನೆ ಇದರಲ್ಲಿದೆ.

ರಶ್ಮಿಕಾ ವಿಜಯ್ ಮದುವೆಯಲ್ಲಿ ಮೇಳೈಸಿದ ಸಂಪ್ರದಾಯ
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಪ್ರಮುಖವಾಗಿ ಟ್ರೆಂಡ್‌ಗಿಂತ ಸಂಪ್ರದಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಇದೇ ಕಾರಣದಿಂದ ವಿಜಯ್ ಹಾಗೂ ರಶ್ಮಿಕಾ ರಾಜಾ ರಾಣಿಯಂತೆ ಕಂಗೊಳಿಸಿದ್ದಾರೆ. ಇವರ ಉಡುಗೆ ತೊಡುಗೆ ಭಾರತೀಯ ಸಂಪ್ರದಾಯಬದ್ಧ ಮದುವೆ ಕಳೆ ಹಾಗೂ ಸೌಂದರ್ಯವನ್ನು ಹೆಚ್ಚಿಸಿದೆ. ಇದರ ಬೆನ್ನಲ್ಲೇ ಈ ಸೆಲೆಬ್ರೆಟಿ ಜೋಡಿ ಧರಿಸಿದ್ದ ಉಡುಗೆ, ಆಭರಣ ಸೇರಿದಂತೆ ಎಲ್ಲವೂ ಚರ್ಚೆಯಾಗುತ್ತಿದೆ.
ರಶ್ಮಿಕಾ ಧರಿಸಿದ್ದ ಮುದುವೆ ಸೀರೆ ಸೀಕ್ರೆಟ್
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ತಮ್ಮ ಮದುವೆಗೆ ಅಬ್ಬರದ ವಿನ್ಯಾಸ, ಟ್ರೆಂಡ್‌ನಲ್ಲಿರುವ ವಿನ್ಯಾಸದ ಬದಲು ಗಾಂಭೀರ್ಯತೆ ಹಾಗೂ ಸಂಪ್ರದಾಯಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಈ ಮೂಲಕ ಪರಂಪರೆಯನ್ನು ಎತ್ತಿ ಹಿಡಿದಿದ್ದರು. ಮದುವೆಯಲ್ಲಿ ರಶ್ಮಿಕಾ ಮಂದಣ್ಣ ಧರಿಸಿದ್ದ ಉಡುಗೆ ವಿಶೇಷವಾಗಿ ತಯಾರಿಸಿದ ಸೀರೆಯಾಗಿದೆ. ಖ್ಯಾತ ಡಿಸೈನರ್ ಅನಾಮಿಕಾ ಖನ್ನಾ ವಿನ್ಯಾಸ ಮಾಡಿದ ಸೀರೆ.
ಇದರ ಬೆಲೆ ಎಷ್ಟು?
ಖ್ಯಾತ ಡಿಸೈನರ್ ಅನಾಮಿಕ ಖನ್ನ ರಶ್ಮಿಕಾಳಿಗೆ ಮದುವೆಗಾಗಿ ಈ ಸೀರೆ ಸಿದ್ಧಪಡಿಸಿದ್ದಾರೆ. ಇದರ ಬೆಲೆ 5 ಲಕ್ಷ ರೂಪಾಯಿ. ಭಾರತೀಯ ಕರಕುಶಲ ಹಾಗೂ ಆದುನಿಕತೆ ರಚನೆಯಲ್ಲಿ ಈ ಸೀರೆ ತಯಾರಾಗಿದೆ. ಕೊಡವ ಹಾಗೂ ತೆಲುಗು ಸಂಪ್ರದಾಯಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ಈ ಸೀರೆ ಸಿದ್ದಪಡಿಸಲಾಗಿದೆ. ಇದೇ ಕಾರಣದಿಂದ ಈ ಸೀರೆಗೆ ಅತೀಯಾದ ಅಲಂಕಾರವಿಲ್ಲ, ಆದರೆ ರಾಜಗಾಂಭೀರ್ಯತೆ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಈ ಸೀರೆ ಸಾರುತ್ತಿದೆ.
ಕೈಮಗ್ಗದ ರೇಷ್ಮೆಯಿಂದ ತಯಾರಿಸಿದ ಸೀರೆ
ಕೆಂಪು ಮಿಶ್ರಿತ ಕೇಸರಿ ಬಣ್ಣದ ಈ ವಿಶೇಷ ಸೀರೆ ಕೈಮಗ್ಗದ ರೇಷ್ಮೆಯಿಂದ ತಯಾರಿಸಲಾಗಿದೆ. ರೇಷ್ಮೆಯ ಹೊಳಪು ರಶ್ಮಿಕಾಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಅಧುನಿಕತೆ ಜೊತೆಗೆ ಸಂಪ್ರದಾಯ ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಸಾರುವಂತಿದೆ ಈ ಅದ್ಭುತ ಸೀರೆ.
ಜರ್ದೋಸಿ ಕಸೂತಿ ಕಲೆ
ರಶ್ಮಿಕಾ ಧರಿಸಿದ್ದ ಈ ಸೀರೆಯಲ್ಲಿ ಜರ್ದೋಸಿ ಕಸೂತಿ ಕಲೆ ಎದ್ದು ಕಾಣುತ್ತಿದೆ. ಚಿನ್ನ, ಬೆಳ್ಳಿ ದಾರಗಳನ್ನು ಬಳಸಿ ಮಾಡುವ ಸಂಕೀರ್ಣವಾದ ಸಾಂಪ್ರದಾಯಿಕ ಕಸೂತಿ ಕಲೆ ಈ ಸೀರೆಗೆ ಮತ್ತಷ್ಟು ಮೆರುಗು ನೀಡಿದೆ. ದಕ್ಷಿಣ ಭಾರತದ ವಾಸ್ತುಶಿಲ್ಪ, ಸಾಂಸ್ಕೃತಿ ಹಿರಿಮೆ ಹೇಳುವ ಡೆಕ್ಕನ್ ಟೆಂಪಲ್ ವಿನ್ಯಾಸ ಇದೆ. ಹೀಗಾಗಿ ರಾಜಮನೆತನದ ಕಳೆ ನೀಡುತ್ತಿದೆ.
ಟ್ರೆಂಡ್ ಆಗಿದೆ ರಶ್ಮಿಕಾ ಮಂದಣ್ಣ ಸೀರೆ
ಮದುವೆ ಬಳಿಕ ರಶ್ಮಿಕಾ ಮಂದಣ್ಣ ಸೀರೆ ಭಾರಿ ಟ್ರೆಂಡ್ ಆಗಿದೆ. ಹಲವರು ಈ ಸೀರೆ ಕುರಿತು ಸರ್ಚ್ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಹಿರಿಮೆ ಸಾರುವ ಈ ಸೀರೆ ಮುಂದಿನ ದಿನಗಳಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಲಿದೆ. ಬಹುತೇಕ ಮದುವೆಗಳಲ್ಲಿ ಈ ಸೀರೆ ಕಾಣಸಿಗುವ ಸಾಧ್ಯತೆ ಹೆಚ್ಚಾಗಿದೆ.
ಟ್ರೆಂಡ್ ಆಗಿದೆ ರಶ್ಮಿಕಾ ಮಂದಣ್ಣ ಸೀರೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

