ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್(Shah Rukh Khan) ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಬಾಲಿವುಡ್ ಕಿಂಗ್ ಖಾನ್ ಮನ್ನತ್ ಬಂಗಲೆ ಹೆಸರು ಸದ್ದು ಮಾಡಿತ್ತು. ಮನ್ನತ್(Mannat) ನಾಮಫಲಕ ವಿಚಾರವಾಗಿ ಅಚ್ಚರಿ ಮೂಡಿಸಿತ್ತು. ದುಬಾರಿ ನಾಮಫಲಕ ಹಾಕಿಸುವ ಮೂಲಕ ಅಭಿಮಾನಿಗಳು ಬೆರಗಾಗುವಂತೆ ಮಾಡಿದ್ದರು. ಇದೀಗ ದುಬಾರಿ ನಾಮಫಲಕ ಕಾಣೆಯಾಗಿದೆ.

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್(Shah Rukh Khan) ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಳು ರಿಲೀಸ್ ಆಗಿಲ್ಲ ಎಂದರೂ ಶಾರುಖ್ ಹೆಸರು ಟ್ರೆಂಡಿಂಗ್ ನಲ್ಲಿ ಇರುತ್ತೆ. ಇತ್ತೀಚಿಗಷ್ಟೆ ಬಾಲಿವುಡ್ ಕಿಂಗ್ ಖಾನ್ ಮನ್ನತ್ ಬಂಗಲೆ ಹೆಸರು ಸದ್ದು ಮಾಡಿತ್ತು. ಮನ್ನತ್(Mannat) ನಾಮಫಲಕ ವಿಚಾರವಾಗಿ ಅಚ್ಚರಿ ಮೂಡಿಸಿತ್ತು. ದುಬಾರಿ ನಾಮಫಲಕ ಹಾಕಿಸುವ ಮೂಲಕ ಅಭಿಮಾನಿಗಳು ಬೆರಗಾಗುವಂತೆ ಮಾಡಿದ್ದರು. ಇತ್ತೀಚಿಗಷ್ಟೆ ಶಾರುಖ್ ಹಳೆಯ ನಾಮಫಲಕ ಬದಲಾಯಿಸಿದ್ದರು. ಶಾರುಖ್ ಮನೆಯಲ್ಲಿ ಕೊಂಚ ಬದಲಾವಣೆಯಾದರೂ ಅಭಿಮಾನಿಗಳು ಬಹುಬೇಗ ಪತ್ತೆಹಚ್ಚುತ್ತಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. ಹಾಗೆ ಮನ್ನತ್ ಹೊಸ ನಾಮಫಲಕ ಕೂಡ ಎಲ್ಲರ ಗಮನ ಸೆಳೆದಿತ್ತು.

ಅನೇಕ ವರ್ಷಗಳಿಂದ ಇದ್ದ ಮಾಮಫಲಕ ಬದಲಾಗುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದೇ ಸಮಯಕ್ಕೆ ನಾಮಫಲಕದ ಬೆಲೆ ಕೇಳಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. ಅಂದಹಾಗೆ ಬರೋಬ್ಬರಿ 25 ಲಕ್ಷದ ರೂಪಾಯಿಯ ನಾಮಫಲಕ ಅದಾಗಿತ್ತು. ಆದರೀಗ ಮತ್ತೆ ಮನ್ನತ್ ಹೆಸರು ಸದ್ದು ಮಾಡುತ್ತಿದೆ. ಯಾಕೆಂದರೆ ದುಬಾರಿ ನಾಮಫಲಕ ನಾಪತ್ತೆಯಾಗಿದೆ. ಶಾರುಖ್ ಮನೆಯ ಮುಂದೆ ಇದ್ದ ನಾಮಫಲಕ ಕಾಣುತ್ತಿಲ್ಲ. ಅಭಿಮಾನಿಗಳು ನಾಪತ್ತೆಯಾಗಿರುವ ದುಬಾರಿ ನಾಮಫಲಕದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ನಾಮಫಲಕ ಇಲ್ಲದ ಶಾರುಖ್ ಮನೆಯ ಫೋಟೋವನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.

ಅಂದಹಾಗೆ ಹೊಸ ನಾಮಫಲಕ ಡಿಸೈನ್ ಮಾಡಿಸಿದ್ದು ಶಾರುಖ್ ಪತ್ನಿ ಗೌರಿ ಖಾನ್. ಶಾರುಖ್ ಪತ್ನಿ ಇಂಟೀರಿಯರ್ ಡಿಸೈನರ್. ಬಾಲಿವುಡ್ ನ ಅನೇಕ ಸ್ಟಾರ್ ಕಲಾವಿದರ ಮನೆಯ ಇಂಟೀರಿಯರ್ ಡಿಸೈನ್ ಮಾಡಿಸಿದ್ದು ಗೌರಿ ಖಾನ್. ತನ್ನ ನಿವಾಸದ ನಾಮಫಲಕವನ್ನು ಆಕರ್ಷವಾಗಿ ಡಿಸೈನ್ ಮಾಡಿದ್ದರು. ಆದರೀಗ ಕಾಣೆಯಾಗಿದೆ.

ಅಬ್ಬಾ..!! Shah Rukh Khan 'ಮನ್ನತ್' ನಿವಾಸದ ಹೊಸ ನಾಮಫಲಕದ ಬೆಲೆ ಇಷ್ಟೊಂದಾ

ನಾಮಫಲಕ ತೆಗೆದಿದ್ದು ಯಾಕೆ?

ಮೂಲಗಳ ಪ್ರಕಾರ ಮನ್ನತ್ ನಾಮಫಲಕ ದುರಸ್ತಿಗಾಗಿ ತೆಗಿಯಲಾಗಿದೆ. ಸರಿಯಾದ ಬಳಿಕ ಮತ್ತೆ ಅದೇ ಜಾಗದಲ್ಲಿ ಇಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಶಾರುಖ್ ಮನೆಯ ಅಂದವನ್ನು ಹೆಚ್ಚಿಸಿದ್ದ ದುಬಾರಿ ನಾಮಫಲಕ ಮಿಸ್ ಆಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅನೇಕ ಅಭಿಮಾನಿಗಳು ಶಾರುಖ್ ಮನೆಯ ಫೋಟೋಗಳನ್ನು ಮತ್ತ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಮತ್ತೆ ಯಾವಾಗ ಕಾಣಿಸಿಕೊಳ್ಳಲಿದೆ ಎಂದು ಕಾತರರಾಗಿದ್ದಾರೆ.

Scroll to load tweet…


Drug Case ಶಾರುಖ್ ಪುತ್ರ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್

ಇನ್ನು ಶಾರುಖ್ ಖಾನ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದ ಸೋಲಿನ ಬಳಿಕ ಶಾರುಖ್ ಮತ್ತೆ ತೆರೆಮೇಲೆ ಬಂದಿಲ್ಲ. ಸದ್ಯ ಮೂರು ವರ್ಷಗಳ ಬಳಿಕ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿರುವ ಶಾರುಖ್ ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇತ್ತೀಚಿಗಷ್ಟೆ ಪಠಾಣ್ ಸಿನಿಮಾದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಸಿನಿಮಾದಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಮತ್ತು ಅಟ್ಲೀ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಶಾರುಖ್ ತಾಪ್ಸಿ ಪನ್ನು ಮತ್ತು ದಕ್ಷಿಣದ ಸ್ಟಾರ್ ನಟಿ ನಯನತಾರಾ ಜೊತೆ ನಟಿಸುತ್ತಿದ್ದಾರೆ. ಶಾರುಖ್ ಅವರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಮುಂದಿನ ವರ್ಷ ಜನವರಿ ವರೆಗೂ ಕಾಯಲೇಬೆಕು.