Asianet Suvarna News Asianet Suvarna News

ಲಲಿತ್ ಮೋದಿ - ಸುಶ್ಮಿತಾ ಸೇನ್ ನಡುವೆ ಬ್ರೇಕಪ್? ಮಾಜಿ ವಿಶ್ವ ಸುಂದರಿ ಹೆಸರು, ಫೋಟೋ ತೆಗೆದಾಕಿದ IPL ಸಂಸ್ಥಾಪಕ

ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ನಡುವೆ ಬ್ರೇಕಪ್ ವದಂತಿ ವೈರಲ್ ಆಗಿದೆ. ಹೌದು ಇಬ್ಬರು ಪ್ರೀತಿ ವಿಚಾರ ಬಹಿರಂಗ ಪಡಿಸಿ ಕೆಲವೇ ದಿನಗಳಲ್ಲಿ ಬ್ರೇಕಪ್ ವಿಚಾರ ಸದ್ದು ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. 

Did Lalit Modi breake up with Sushmita Sen, IPL founder removes Sushmitas name in Instagram sgk
Author
First Published Sep 5, 2022, 5:20 PM IST

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಮತ್ತು ಉದ್ಯಮಿ ಲಲಿತ್ ಮೋದಿ ಸಂಬಂಧ ಕಳೆದ ಕೆಲವು ದಿನಗಳ ಹಿಂದೆ ಹಾಟ್ ಟಾಪಿಕ್ ಆಗಿತ್ತು. ಲಲಿತ್ ಮೋದಿ ಟ್ವೀಟ್ ಮೂಲಕ ಸುಶ್ಮಿತಾ  ಸೇನ್ ಜೊತೆಗಿನ ಸಂಬಂಧವನ್ನು ಬಹಿರಂಗ ಪಡಿಸಿದ ನಂತರ ಚಿತ್ರರಂಗದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ಮಾಜಿ ವಿಶ್ವಸುಂದರಿ ಜೊತೆಗಿನ ಲಲಿತ್ ಮೋದಿಯ ರೊಮ್ಯಾಂಟಿಕ್ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. ಲಲಿತ್ ಮೋದಿ ಬಹಿರಂಗವಾಗಿಯೇ ಸುಶ್ಮಿತಾ ಫೋಟೋ ಶೇರ್ ಮಾಡಿ ಪ್ರೀತಿ ವಿಚಾರ ಹಂಚಿಕೊಂಡಿದ್ದರು. ಲಲಿತ್ ಮೋದಿ, ಸುಶ್ಮಿತಾ ಜೊತೆ ಫೋಟೋ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಆದರೂ ಹೆಚ್ಚು ತಲೆಕಿಡಿಸಿಕೊಳ್ಳದ ಈ ಜೋಡಿ ಬಳಿಕ  ಟ್ರೋಲಿಗರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದರು. ಇದೀಗ ಇಬ್ಬರ ನಡುವೆ ಬ್ರೇಕಪ್ ವದಂತಿ ವೈರಲ್ ಆಗಿದೆ. ಹೌದು ಇಬ್ಬರು ಪ್ರೀತಿ ವಿಚಾರ ಬಹಿರಂಗ ಪಡಿಸಿ ಕೆಲವೇ ದಿನಗಳಲ್ಲಿ ಬ್ರೇಕಪ್ ವಿಚಾರ ಸದ್ದು ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. 

ಅಂದಹಾಗೆ ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಪ್ರೀತಿ ವಿಚಾರ ಬಹಿರಂಗ ಪಡಿಸಿದ ಹಾಗೆ ಬ್ರೇಕಪ್ ವಿಚಾರವನ್ನು ಹಂಚಿಕೊಂಡಿಲ್ಲ. ಆದರೆ ಲಲಿತ್ ಮೋದಿ ನಡೆ ಇಬ್ಬರ ನಡುವೆ ಯಾವುದು ಸರಿಯಿಲ್ಲ ಎನ್ನುವುದನ್ನು ಸಾರಿ ಹೇಳುತ್ತಿದೆ. ಲಲಿತ್ ಮೋದಿ, ಸುಶ್ಮಿತಾ ಸೇನ್ ಜೊತೆಗಿನ ಪ್ರೀತಿ ವಿಚಾರ ಬಹಿರಂಗ ಪಡಿಸಿದ ಬಳಿಕ ಇನ್ಸ್ಟಾಗ್ರಾಮ್ ನಲ್ಲಿ ಸುಶ್ಮಿತಾ ಸೇನ್ ಹೆಸರನ್ನು ಸೇರಿಕೊಂಡಿದ್ದರು. ಅಲ್ಲದೆ ಸುಶ್ಮಿತಾ ಜೊತೆ ಇದ್ದ ಫೋಟೋವನ್ನು ಡಿಪಿಗೆ ಹಾಕಿದ್ದರು. ಇದೀಗ ಡಿಪಿ ಬದಲಾಯಿಸಿದ್ದಲ್ಲದೇ ಸುಶ್ಮಿತಾ ಹೆಸರನ್ನು ಕೈಬಿಟ್ಟಿದ್ದಾರೆ. ಇನ್ಸ್ಟಾಗ್ರಾಮ್ ಬಯೋದಲ್ಲಿ ಲಲಿತ್ ಮೋದಿ, 'ಕೊನೆಗೂ ನಾನು ನನ್ನ ಸಂಗಾತಿ ಜೊತೆ ಹೊಸ ಜೀವನ ಪ್ರಾರಂಭಿಸಿದೆ. ನನ್ನ ಲವ್ ಸುಶ್ಮಿತಾ ಸೇನ್' ಎಂದು ಬರೆದುಕೊಂಡು ಹಾರ್ಟ್ ಇಮೋಜಿ ಹಾಕಿದ್ದರು. 

'ಗೋಲ್ಡ್ ಡಿಗ್ಗರ್' ಎಂದ ನೆಟ್ಟಿಗರಿಗೆ ಸುಶ್ಮಿತಾ ಸೇನ್ ಖಡಕ್ ಪ್ರತಿಕ್ರಿಯೆ; ಪ್ರಿಯಾಂಕಾ, ರಣ್ವೀರ್ ಬೆಂಬಲ

ಇದೀಗ ಆ ಸಾಲನನ್ನು ತೆಗೆದು ಹಾಕಿದ್ದಾರೆ. ಜೊತೆಗೆ ಸುಶ್ಮಿತಾ ಜೊತೆಗಿದ್ದ ಡಿಪಿಯನ್ನು ಕಿತ್ತಾಕಿದ್ದಾರೆ. ಅಂದಹಾಗೆ ಸುಶ್ಮಿತಾ ಸೇನ್ ಬಗ್ಗೆ ಹಾಕಿದ್ದ ದೀರ್ಘವಾದ ಪೋಸ್ಟ್ ಮಾತ್ರ ಇನ್ನು ಹಾಗೆ ಇದೆ. ಲಲಿತ್ ಮೋದಿ ಅವರ ಅವರ ಈ ನಡೆ ಇಬ್ಬರ ನಡುವಿನ ಬ್ರೇಕಪ್‌ಗೆ ಪುಷ್ಠಿ ನೀಡಿದೆ. ಇನ್ನು ಅಷ್ಟೆಯಲ್ಲ ಸುಶ್ಮಿತಾ ಸೇನ್ ಪೋಸ್ಟ್‌ಗಳಿಗೆ ಲಲಿತ್ ಮೋದಿ ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದರು. ಆದರೀಗ ಯಾವುದೇ ಪ್ರತಿಕ್ರಿಯೆ ನೀಡದೆ ಸೈಲೆಂಟ್ ಆಗಿದ್ದಾರೆ. ಇತ್ತ ಸುಶ್ಮಿತಾ ಸೇನ್ ತನ್ನ ಮಾಜಿ ಬಾಯ್ ಫ್ರೆಂಡ್ ಜೊತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಇಬ್ಬರು ದೂರ ದೂರ ಆಗಿದ್ದಾರೆ ಎನ್ನುವುದನ್ನು ಹೇಳುತ್ತಿವೆ. 

Did Lalit Modi breake up with Sushmita Sen, IPL founder removes Sushmitas name in Instagram sgk

ಅವಳು ಹಣಕ್ಕೆ ಮಾರಾಟವಾಗಿದ್ದಾಳೆ; ಸುಶ್ಮಿತಾ ಸೇನ್ ವಿರುದ್ಧ ಹರಿಹಾಯ್ದ ತಸ್ಲೀಮಾ ನಸ್ರೀನ್

ಸುಶ್ಮಿತಾ ಸೇನ್ ಬಗ್ಗೆ ಲಲಿತ್ ಮೋದಿ ಪೋಸ್ಟ್ 

'ಮಾಲ್ಡೀವ್ಸ್‌ ಗ್ಲೋಬಲ್ ಟೂರ್‌ ಮುಗಿಸಿ ಲಂಡನ್‌ಗೆ ಹಿಂತಿರುಗಿದ್ದೀವಿ ನಮ್ಮ ಕುಟುಂಬದ ಜೊತೆ. ಹೇಳುವುದನ್ನು ಮರೆಯಬಾರದು ನನ್ನ ಬೆಟರ್‌ಹಾಫ್‌ ನನ್ನ ಜೊತೆಗಿದ್ದಾರೆ- ಸುಶ್ಮಿತಾ ಸೇನ್. ಹೊಸ ಜೀವನ. ಚಂದ್ರನ ಮೇಲಿರುವಷ್ಟೇ ಸಂತೋಷವಾಗುತ್ತಿದೆ' ಎಂದು ಟ್ವೀಟ್ ಮಾಡಿದ್ದರು. ಸುಶ್ಮಿತಾ ಸೇನ್ ಜೊತೆಗಿನ ಫೋಟೋಗಳನ್ನು ಸಹ ಶೇರ್ ಮಾಡಿದ್ದರು. ಲಲಿತ್ ಮೋದಿ ಸದ್ಯ ಲಂಡನ್‌ನಲ್ಲಿದ್ದಾರೆ. 2010ರಿಂದ ಲಲಿತ್ ಮೋದಿ ಲಂಡನ್ ನಲ್ಲಿ ವಾಸುತ್ತಿದ್ದಾರೆ.  

Follow Us:
Download App:
  • android
  • ios