ಹಿಟ್ ಚಿತ್ರವನ್ನು ಯಾರೂ ತಡೆಯೋಕಾಗಲ್ಲ; ಪಠಾನ್ ಬಾಯ್ಕಾಟ್‌ ಬಗ್ಗೆ ಅನುಪಮ್ ಖೇರ್ ರಿಯಾಕ್ಷನ್

ಶಾರುಖ್‌ ಖಾನ್ ಪಠಾನ್ ಯಶಸ್ಸಿನ ಬಗ್ಗೆ ರಿಯಾಕ್ಟ್‌ ಮಾಡಿದ ಅನುಪಮ್ ಖೇರ್. ಬಾಲಿವುಡ್‌ ಬಾಯ್ಕಾಟ್‌ ಟ್ರೆಂಡ್‌ ಉಳಿಯುವುದಿಲ್ಲ ಎಂದ ನಟ.... 

Actor Anupam Kher reacts to Shah rukh khan pathaan success boycott trend in shiv shastri balboa event vcs

ಬಾಲಿವುಡ್‌ 2023ರ ಬಾಕ್ಸ್‌ ಆಫೀಸ್‌ ಕಲೆಕ್ಷನ್ ಓಪನ್ ಮಾಡಿದ ಶಾರುಕ್ ಖಾನ್ ಪಠಾನ್ ಸಿನಿಮಾ ಬಗ್ಗೆ ಬಿ-ಟೌನ್ ಸ್ಟಾರ್ ನಟರು ಕಾಮೆಂಟ್ ಮಾಡುತ್ತಿದ್ದಾರೆ. 49ನೇ ವಯಸ್ಸಿಗೆ ಶಾರುಕ್‌ ಹಿಟ್‌ ಕೊಟ್ಟಿರುವುದರ ಬಗ್ಗೆ ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ರಿಲೀಸ್‌ಗೂ ಮುನ್ನ ನೂರಾರೂ ವಿಚಾರಕ್ಕೆ ಕಾಂಟ್ರವರ್ಸಿಯಲ್ಲಿ ಸಿಲುಕಿಕೊಂಡರು ಬಿಟ್ಟಿ ಪ್ರಚಾರ ಪಡೆದು 20 ಕೋಟಿ ಉಳಿಸಿರುವುದಾಗಿ ಹೇಳಿದ್ದರು. ಶಾರುಕ್ ಖಾನ್‌ಗೆ ಜೋಡಿಯಾಗಿ ಡಿಂಪಲ್ ಹುಡುಗಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹ್ಮ ನಟಿಸಿದ್ದಾರೆ. ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿದೆ. 

ಪಠಾನ್‌ ಸಿನಿಮಾ ಶಾರುಕ್ ಖಾನ್ ಮತ್ತು ಚಿತ್ರತಂಡಕ್ಕೆ ಮಾತ್ರ ಸಾಥ್ ಕೊಟ್ಟಿಲ್ಲ ಬದಲಿಗೆ ಬಾಲಿವುಡ್‌ ಸಿನಿಮಾಗಳು ಎಷ್ಟೇ ಟ್ರೋಲ್ ಆದರು ಬಾಯ್ಕಾಟ್ ಮಾಡಿದ್ದರು ಒಳ್ಳೆ ಕಥೆ ಇದ್ದರೆ ಸಿನಿ ರಸಿಕರು ಗೆಲ್ಲಿಸುತ್ತಾರೆ ಅನ್ನೋ ನಂಬಿಕೆ ಕೊಟ್ಟಿದೆ. ಹೀಗಾಗಿ ವರ್ಸಟೈಲ್ ನಟ ಅನುಪಮ್ ಖೇರ್ ಬಾಯ್ಕಾಟ್ ಮತ್ತು ಪಠಾನ್‌ ಬಗ್ಗೆ ರಿಯಾಕ್ಟ್‌ ಮಾಡಿದ್ದಾರೆ. ಅನುಪಮ್ ಖೇರ್ ನಿರ್ಮಾಣದ ಶಿವ ಶಾಸ್ತ್ರಿ ಬಲ್ಬೋವಾ ಪ್ರಚಾರದ ವೇಳೆ ನೀಡಿರುವ ಹೇಳಿಕೆ ವೈರಲ್ ಅಗುತ್ತಿದೆ. 

'ಈಗಿನ ಕಾಲದಲ್ಲಿ ಯಾರೂ ಟ್ರೋಲ್, ನೆಗೆಟಿವ್ ಕಾಮೆಂಟ್‌ಗಳಿಂದ influence ಆಗಿ ಸಿನಿಮಾ ನೋಡಲು ಹೋಗುವುದಿಲ್ಲ. ಟ್ರೆಂಡ್‌ ಇಟ್ಟುಕೊಂಡು ಯಾರೂ ಸಿನಿಮಾ ನೋಡುವುದಿಲ್ಲ. ಸಿನಿಮಾದ ಟ್ರೈಲರ್ ಸೂಪರ್ ಆಗಿದ್ದರೆ ನಾವು ಸಿನಿಮಾ ನೋಡಬೇಕು ಎಂದು ತೀರ್ಮಾನ ಮಾಡುತ್ತೀವಿ. ಸಿನಿಮಾ ಚೆನ್ನಾಗಿ ಮಾಡಿದ್ದಾರೆ ಅಂದ ಮೇಲೆ ಯಾರಿಂದಲೂ ಸೋಲಿಸಲು ಆಗುವುದಿಲ್ಲ, ಯಾರು ಏನೇ ಹೇಳಿದ್ದರು ಕಥೆಯನ್ನು ನಾಶ ಮಾಡಲು ಆಗುವುದಿಲ್ಲ.  ಹೇಟ್‌ ಟ್ರೆಂಡ್‌ ಇದ್ದರೂ ಸಿನಿಮಾವನ್ನು ಜನರು ನೋಡುತ್ತಾರೆ' ಎಂದು ಅನುಪಮ್ ಖೇರ್‌ ಹೇಳಿದ್ದಾರೆ. 

ನನ್ನ ಮಕ್ಕಳಿಗಿಂತ ನೀವು ತುಂಬಾ ಇಷ್ಟ: ಪ್ರಧಾನಿ ಮೋದಿಗೆ ನಟ ಅನುಪಮ್ ಖೇರ್ ತಾಯಿಯ ಪ್ರೀತಿಯ ವಿಶ್

'ಸಿನಿಮಾ ವೀಕ್ಷಕರು ಯಾವ ಕಾರಣಕ್ಕೂ ಸಿನಿಮಾ ಬಾಯ್ಕಾಟ್ ಮಾಡುವುದಿಲ್ಲ.  ನಾವೆಲ್ಲರೂ ಕೋವಿಡ್‌ ಪ್ಯಾಂಡಮಿಕ್‌ ಎದುರಿಸಿದ್ದೀವಿ ಲಾಕ್‌ಡೌನ್‌ ಜೀವನ ಹೇಗಿತ್ತು ಎಂದು ಗೊತ್ತಾಗಿದೆ ಬೇಡ ಅಂದರೂ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಈ ರೀತಿ ಆಗಿರುವುದು 100 ವರ್ಷಗಳ ನಂತರ ಅನಿಸುತ್ತದೆ. ಈ ಸಮಯದಲ್ಲಿ ಜನರು ಮನೋರಂಜನೆ ಹುಡುಕುತ್ತಾರೆ. ಓಟಿಟಿಗಳು ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು ಅದರಲ್ಲಿ ರಿಲೀಸ್ ಆಗಿರುವ ಎಲ್ಲಾ ಸಿನಿಮಾಗಳನ್ನು ಜನರು ನೋಡಿದ್ದಾರೆ. ಕೊರೋನಾ ಭಯದಿಂದ ಜರನ್ನು ಹೊರ ಕರೆದುಕೊಂಡು ಬರುವುದು ತುಂಬಾ ಕಷ್ಟವಾಗಿತ್ತು. ಗಂಗೂಬಾಯಿ ಕಾಠಿವಾಡಿ ರಿಲೀಸ್ ಆದ ನಂತರ ಜನರು ಚಿತ್ರಮಂದಿರಕ್ಕೆ ಭೇಟಿ ನೀಡಲು ಆರಂಭಿಸಿದ್ದರು ಅದಾದ ನಂತರ  ದಿ ಕಾಶ್ಮೀರಿ ಫೈಲ್ಸ್‌, ಭೂಲ್ ಭುಲೈಯಾ 2, ಕಾರ್ತಿಕೇಯ 2, ಬ್ರಹ್ಮಾಸ್ತ್ರ ಭಾಗ 1 ಮತ್ತು ಪಠಾನ್ ಎಲ್ಲವೂ ಸೂಪರ್ ಹಿಟ್. ಮುಂಬರುವ ಶಿವ ಶಾಸ್ತ್ರಿ ಬಲ್ಬೋವಾ ಸಿನಿಮಾ ಕೂಡ ಜನರು ನೋಡುತ್ತಾರೆ. ಫೆಬ್ರವರಿ 10ರಂದು ಶಿವ ಶಾಸ್ತ್ರಿ ಬಲ್ಬೋವಾ ರಿಲೀಸ್ ಅಗುತ್ತಿದೆ' ಎಂದಿದ್ದಾರೆ ಅನುಪಮ್ ಖೇರ್. 

ಪ್ರಧಾನಿ ಮೋದಿ ಭೇಟಿಯಾಗಿ ತಾಯಿ ಕೊಟ್ಟ ವಿಶೇಷ ಉಡುಗೊರೆ ನೀಡಿದ ಕಾಶ್ಮೀರ್ ಫೈಲ್ಸ್ ನಟ ಅನುಪಮ್ ಖೇರ್

ಹಿಂದಿಯಲ್ಲಿ ಹೀರೋ ಸೇಲ್: 

 ದಕ್ಷಿಣ ಭಾರತದ ಸಿನಿಮಾಗಳು ಕಥೆ ಹೇಳಿದ್ರೆ ಹಿಂದಿ ಸಿನಿಮಾಗಳು ಸ್ಟಾರ್‌ಗಳನ್ನು ಸೇಲ್ ಮಾಡುತ್ತಾರೆ ಎಂದು ಅನುಪಮ್ ಹೇಳಿದ್ದಾರೆ. ಇತ್ತೀಚಿಗಷ್ಟೆ ಈ ಟೈಮ್ಸ್ ಜೊತೆ ಮಾತನಾಡಿದ ಅನುಪಮ್ ಖೇರ್ ದಕ್ಷಿಣ ಭಾರತೀಯ ಸಿನಿಮಾಗಳನ್ನು ಹೊಗಳಿದ್ದಾರೆ. ತೆಲುಗಿನಲ್ಲಿ ಸಿನಿಮಾ ಮಾಡಿದ್ದೇನೆ, ತೆಲುಗು ಸಿನಿಮಾಗಳಿಂದ ತುಂಬಾ ಕಲಿತ್ತಿದ್ದೇನೆ. ತಮಿಳು ಭಾಷೆಯಲ್ಲೂ ಸಿನಿಮಾ ಮಾಡುತ್ತೀದ್ದೇನೆ. ಮಲಯಾಳಂನಲ್ಲೂ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. 'ದಕ್ಷಿಣ ಭಾರತದ ಸಿನಿಮಾರಂಗ ಮತ್ತು ಬಾಲಿವುಡ್ ನಡುವೆ ವ್ಯತ್ಯಾಸವೇನಿದೆ ಎಂದು ನಾನು ಯೋಚಿಸುತ್ತೇನೆ,  ದಕ್ಷಿಣ ಭಾರತದವರು ಹಾಲಿವುಡ್‌ಗೆ ಒಲವು ತೋರುತ್ತಿಲ್ಲ. ಅವರು ಕಥೆಗಳನ್ನು ಹೇಳುತ್ತಿದ್ದಾರೆ, ಇಲ್ಲಿ ನಾವು ಹೀರೋಗಳನ್ನು ಮಾರಾಟ ಮಾಡುತ್ತಿದ್ದೇವೆ' ಎಂದು ಹೇಳಿದರು.

Latest Videos
Follow Us:
Download App:
  • android
  • ios