Asianet Suvarna News Asianet Suvarna News

ಪತಿಗೆ ನಮ್ಮ ವಿಷ್ಯ ಹೇಳಿದ್ದೀರಾ ಎಂದು ಮೊದಲ ನಾಯಕಿಗೆ ಪ್ರಶ್ನಿಸಿದ ಶಾರುಖ್​ ಖಾನ್​!

ಶಾರುಖ್​ ಖಾನ್​ ಜೊತೆ ಮೊದಲ ನಾಯಕಿಯಾಗಿ ನಟಿಸಿದ ನಟಿ ರೇಣುಕಾ ಶಹಾನೆ. ಸರ್ಕಸ್​ ಧಾರಾವಾಹಿಯ ಕುರಿತು ಇಬ್ಬರ ನಡುವೆ ನಡೆದ ಚಾಟ್​ ವೈರಲ್​ ಆಗಿದ್ದು, ಏನಿದೆ ಈ ಚಾಟ್​ನಲ್ಲಿ?
 

Shah Rukh Khan asked the first heroine if she told her husband about them
Author
First Published Feb 6, 2023, 9:47 PM IST

1989-90ರ ಸುಮಾರಿಗೆ ದೂರದರ್ಶನ ಚಾನೆಲ್​ನಲ್ಲಿ ಎಲ್ಲರ ಮನ ಗೆದ್ದಿರುವ ಸರ್ಕಸ್​ (Circus) ಧಾರಾವಾಹಿ ನೆನಪಿದೆಯಾ? ಶಾರುಖ್​ ಖಾನ್​ (Shah Rukh Khan) ಅವರಿಗೆ ಬ್ರೇಕ್​ ಕೊಟ್ಟ ಧಾರಾವಾಹಿ ಇದು. ಅಲ್ಲಿಂದಲೇ ಅವರ ಸಿನಿ ಪಯಣ ಶುರುವಾದದ್ದು ಎಂದರೂ ತಪ್ಪಾಗಲಿಕ್ಕಿಲ್ಲ. ಇಂದು ಶಾರುಖ್‌  ಸೂಪರ್‌ ಸ್ಟಾರ್‌ ಆಗಿರಬಹುದು. ಆದರೆ  ಅವರಿಗೆ ದೊಡ್ಡ ಮಟ್ಟದ  ಜನಪ್ರಿಯತೆ ತಂದುಕೊಟ್ಟದ್ದು ಸರ್ಕಸ್​ ಧಾರಾವಾಹಿ.  ಆ ಧಾರಾವಾಹಿಗೆ ಅಜೀಜ್‌ ಮಿಶ್ರಾ (Ajeej Mishra) ನಿರ್ದೇಶನ ಮಾಡಿದ್ದರು. ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದಾಗ ಮುದ್ದುಮೊಗದ ರೇಣುಕಾ ಶಹಾನೆ. ಈ ಧಾರಾವಾಹಿಯನ್ನು 2020ರ ಲಾಕ್​ಡೌನ್​ ಟೈಂನಲ್ಲಿ ಡಿಡಿಯಲ್ಲಿ ಪುನಃ ಪ್ರಸಾರ ಮಾಡಲಾಗಿತ್ತು. ಹಾಗೆ ನೋಡಿದರೆ ಶಾರುಖ್​ ಅವರ ಮೊದಲ ನಾಯಕಿ ರೇಣುಕಾ ಅವರೇ. ಪಠಾಣ್​ ಚಿತ್ರದಲ್ಲಿ ರೇಣುಕಾ ಅವರ ಪತಿ ಅಶುತೋಷ್ ರಾಣಾ ಅವರೂ ನಟಿಸಿದ್ದಾರೆ. ಇದರಲ್ಲಿ ಅವರದ್ದು ಕರ್ನಲ್​ ಲೂಥ್ರಾ ಪಾತ್ರ. ಇದೀಗ ಪಠಾಣ್​ ಚಿತ್ರವನ್ನು ರೇಣುಕಾ ಅವರು ಪತಿಯ ಜೊತೆ ವೀಕ್ಷಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಶಾರುಖ್​ ಮತ್ತು ರೇಣುಕಾ ನಡುವೆ ಟ್ವಿಟರ್​ನಲ್ಲಿ ಹಾಸ್ಯಭರಿತ ಮಾತುಕತೆ ನಡೆದಿದ್ದು, ಅದು ವೈರಲ್​ ಆಗಿದೆ. 

ತಮ್ಮ ಪತಿ ಅಶುತೋಷ್​ ರಾಣಾ (Ashutosh Rana) ಜೊತೆ ಪಠಾಣ್​ ಚಿತ್ರವನ್ನು ನೋಡಿಬಂದ ಮೇಲೆ ರೇಣುಕಾ ಟ್ವಿಟರ್‌ನಲ್ಲಿ ಸರ್ಕಸ್​ನ ತುಣುಕೊಂದನ್ನು ಶೇರ್​ ಮಾಡಿದ್ದಾರೆ. ಅದರಲ್ಲಿ ನಾಯಕನಾಗಿದ್ದ ಶೇಖರ್​ (ಶಾರುಖ್ ಖಾನ್​),​  ನಾಯಕಿಯಾಗಿದ್ದ ಮಾರಿಯಾ ಅರ್ಥಾತ್​ ರೇಣುಕಾ ಶಹಾನೆ (Renuka Shahane) ಅವರಿಗೆ ನಾವು ಎಷ್ಟೊಂದು ವರ್ಷಗಳ ಬಳಿಕ ಭೇಟಿಯಾಗುತ್ತಿದ್ದೇವೆ ಅಲ್ಲವೆ ಎಂದು ಪ್ರಶ್ನಿಸುತ್ತಾನೆ. ಅದನ್ನೇ ರೇಣುಕಾ ಶೇರ್​ ಮಾಡಿದ್ದಾರೆ. ಇದಕ್ಕೆ ಶಾರುಖ್​ ಎಂದಿನಂತೆ  ತಮ್ಮ ಮೊದಲ ನಾಯಕಿಗೆ ಹಾಸ್ಯದ ಉತ್ತರ ಕೊಟ್ಟಿದ್ದಾರೆ.  ರೇಣುಕಾ ಅವರು, 'ಕರ್ನಲ್ ಲೂತ್ರಾ ಜಿ ಜೊತೆ ಅಂತಿಮವಾಗಿ ಪಠಾಣ್​ (Pathaan) ವೀಕ್ಷಿಸಲಿದ್ದೇನೆ.  ಹವಾಮಾನ ಉತ್ತಮವಾಗಿದೆ. ಪತಿಯ ಜೊತೆ ಸೀಟ್ ಬೆಲ್ಟ್‌ಗಳನ್ನು ಜೋಡಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. 

ಇದಕ್ಕೆ ತಮಾಷೆಯ ಪ್ರತಿಕ್ರಿಯೆ ನೀಡಿರುವ ಶಾರುಖ್​,   'ನೀವು ನನ್ನ ಮೊದಲ ನಾಯಕಿ ಎಂದು ಕರ್ನಲ್ ಲೂತ್ರಾ (Curnol Luthra) ಅವರಿಗೆ ಹೇಳಿದ್ದೀರಾ  ಅಥವಾ ನಾವು ಅದನ್ನು ರಹಸ್ಯವಾಗಿಡಬೇಕೆ' ಎಂದು ಚಟಾಕಿ ಹಾರಿಸಿದ್ದಾರೆ. ಒಂದು ವೇಳೆ ಅವರಿಗೆ ಈ ರಹಸ್ಯ ಹೇಳಿದರೆ  ನನ್ನನ್ನು ಏಜೆನ್ಸಿಯಿಂದ ವಜಾಗೊಳಿಸಬಹುದು ಎಂದಿದ್ದಾರೆ. ಅಸಲಿಗೆ ಪಠಾಣ್​ ಚಿತ್ರದಲ್ಲಿ ದೀಪಿಕಾ ಹಾಗೂ ಶಾರುಖ್​ ಮಧ್ಯೆ ಏನೋ ನಡೆಯುತ್ತಿದೆ ಎನ್ನುವುದು ಕರ್ನಲ್ ಲೂತ್ರಾ ಅವರ ಬಳಿ ಗುಪ್ತವಾಗಿ ಇಡಲಾಗಿತ್ತು. ಏಕೆಂದರೆ ಇದರಲ್ಲಿ ದೀಪಿಕಾ ಐಎಸ್​ಐನ ಏಜೆಂಟ್​ (ISI Agent) ಆಗಿದ್ದರಿಂದ ಇಬ್ಬರ ನಡುವಿನ ಪ್ರೀತಿಯನ್ನು ಯಾರಿಗೂ ಹೇಳಿರಲಿಲ್ಲ. ಅದಕ್ಕೇ ಶಾರುಖ್​ ಖಾನ್​  ಹೀಗೆ ತಮಾಷೆಯಾಗಿ ಹೇಳಿದ್ದಾರೆ. 

Shah Rukh Khan: 'ಪಠಾಣ್'​ ಅಬ್ಬರದ ನಡುವೆಯೇ ಶಾರುಖ್​ ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​!

ಅಲ್ಲಿಗೆ ಸುಮ್ಮನೇ ಇರದ ರೇಣುಕಾ ಅವರು,  'ಹ್ಹಹ್ಹಹ್ಹಾ... ಅವರಿಂದ ಯಾವುದಾದರೂ ವಿಷಯ ಗುಪ್ತವಾಗಿ ಇಡಲು ಸಾಧ್ಯವೆ? ಖಂಡಿತಾ ಇಲ್ಲ. ನೀವೇ ಅವರನ್ನು ಅಂತರ್ಯಾಮಿ ಎಂದು ಹೇಳಿದ್ದೀರಿ. ಏನೇ ಆದರೂ ಅವರು ನಿಮ್ಮನಂತೂ ಫೈರ್​ (Fire) ಮಾಡಲು ಸಾಧ್ಯವಿಲ್ಲ. ಏಕೆಂದರೆ, ನೀವು ಮಾಡುವ ಕೆಲಸ ಅವರಿಂದ ಮಾಡಲು ಆಗುವುದಿಲ್ಲವಲ್ಲ ಎಂದು ಪಠಾಣ್​ ಚಿತ್ರಕ್ಕೆ ಹೊಂದಿಕೆ ಆಗುವಂತೆ ಉತ್ತರ ಕೊಟ್ಟಿದ್ದಾರೆ. ಈ ಪ್ರಶ್ನೋತ್ತರ ಸಕತ್​ ವೈರಲ್​ ಆಗಿದ್ದು, ನೆಟ್ಟಿಗರು ತುಂಬಾ ಖುಷಿ ಪಟ್ಟಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್​ಗಳು (Comments) ಬರುತ್ತಿವೆ. 

 

Follow Us:
Download App:
  • android
  • ios