ಪತ್ರಕರ್ತನಿಗೆ ಬೆದರಿಕೆ; ನಟ ಸಲ್ಮಾನ್ ಖಾನ್ ಗೆ ಸಮನ್ಸ್ ಜಾರಿಮಾಡಿದ ಕೋರ್ಟ್

ಪತ್ರಕರ್ತರೊಬ್ಬರು 2019ರಲ್ಲಿ ನೀಡಿದ ದೂರಿನ ಆಧಾರದ ಮೇಲೆ ಮುಂಬೈ ನ್ಯಾಯಾಲಯ ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಮತ್ತು ಬಾಡಿಗಾರ್ಡ್(Bodyguard) ನವಾಜ್ ಶೇಖ್ ಅವರಿಗೆ ಸಮನ್ಸ್ ದಾರಿ ಮಾಡಿದೆ.

Court Summoned to Salman Khan and bodyguard in Journalist Criminal Intimidation Case

ಪತ್ರಕರ್ತರೊಬ್ಬರು 2019ರಲ್ಲಿ ನೀಡಿದ ದೂರಿನ ಆಧಾರದ ಮೇಲೆ ಮುಂಬೈ ನ್ಯಾಯಾಲಯ ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಮತ್ತು ಬಾಡಿಗಾರ್ಡ್(Bodyguard) ನವಾಜ್ ಶೇಖ್ ಅವರಿಗೆ ಸಮನ್ಸ್ ದಾರಿ ಮಾಡಿದೆ.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೀಟ್ ಆರ್ ಆರ್ ಖಾನ್ ಮಂಗಳವಾರ ತಮ್ಮ ಆದೇಶದಲ್ಲಿ ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣ ಗಮನಿಸಿ ಇಬ್ಬರಿಗೂ ಸಮನ್ಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿದೆ. ಸಲ್ಮಾನ್ ಖಾನ್ ಮತ್ತು ಬಡಿಗಾರ್ಡ್ ಶೇಖ್ ವಿರುದ್ಧ ಸೆಕ್ಷನ್ 504 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ರಕರ್ತ ಅಶೋಕ್ ಪಾಂಡೆ ಅವರು ತಮ್ಮ ದೂರಿನಲ್ಲಿ ಪತ್ರಕರ್ತ ಅಶೋಕ್ ಪಾಂಡೆ ಮತ್ತು ಅಂಗರಕ್ಷಕ ಶೇಖ್ ವಿರುದ್ಧ ಜರುಗಿಸುವಂತೆ ಕೋರಿದ್ದರು. ಸಲ್ಮಾನ್ ಖಾನ್ ಮುಂಬೈ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುವಾಗ ಕೆಲವು ಪತ್ರಕರ್ತರು ಅವರ ಫೋಟೋ ಕ್ಲಿಕ್ಕಿಸಲು ಮುಂದಾದಾಗ ಸಲ್ಮಾನ್ ಖಾನ್ ಮೊಬೈಲ್ ಕಿತ್ತುಕೊಂಡರು. ಬಳಿಕ ವಾಗ್ವಾದಕ್ಕಿಳಿದರು, ಬೆದರಿಕೆ ಹಾಕಿದರು ಎಂದು ಪಾಂಡೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ಸ್ವಂತ OTT ಘೋಷಿಸಿದ ಶಾರುಖ್ ಖಾನ್; ಸಲ್ಮಾನ್ ಖಾನ್ ಹೇಳಿದ್ದೇನು?

ಈ ಹಿಂದೆ ನ್ಯಾಯಾಲಯ ಸ್ಥಳೀಯ ಪೋಲೀಸ್ ಠಾಣೆಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಮಂಗಳವಾರ ತನ್ನ ಆದೇಶದಲ್ಲಿ ದಾಖಲೆಯಲ್ಲಿರುವ ಪೊಲೀಸ್ ವರದಿಗಳನ್ನು ಗಮನದಲ್ಲಿ ಇಟ್ಟುಕೊಂಡು ಆರೋಪಿಗಳ ವಿರುದ್ಧ ವಿಚಾರಣೆ ಮುಂದುವರೆಸಲು ಸಾಕಷ್ಟು ಆಧಾರಗಳಿವೆ ಎಂದು ನ್ಯಾಯಾಲಯ ಹೇಳಿದೆ. ಸಮನ್ಸ್ ನೀಡಿದ ಬಳಿಕ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕಾಗುತ್ತದೆ.

Salman Khan Marriage: ಬಾಲಿವುಡ್ ಸುಲ್ತಾನ್ ಸೀಕ್ರೆಟ್ ಆಗಿ ಮದುವೆ ಆದ್ರಾ ?

ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆ ಪ್ರಕರಣ

ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಕೃಷ್ಣಮೃಗ ಬೇಟೆ ಪ್ರಕರಣ(Blackbuck Poaching Case) ಸಂಬಂಧ ಜೋಧಪುರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಎರಡು ಅರ್ಜಿಯನ್ನು ರಾಜಸ್ಥಾನದ ಹೈಕೋರ್ಟ್ ಗೆ(Rajasthan High Court) ವರ್ಗಾವಣೆ ಮಾಡಲು ಅನುಮತಿ ನೀಡಿದೆ. ಎಲ್ಲಾ ಮೂರು ಪ್ರಕರಣಗಳನ್ನು ಒಂದೇ ಸ್ಥಳದಲ್ಲಿ ವಿಚಾರಣೆ ನಡೆಯಲು ಜೋಧಪುರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಎರಡು ಅರ್ಜಿಗಳನ್ನು ವರ್ಗಾವಣೆ ಮಾಡುವಂತೆ ಕೋರಿ ಸಲ್ಮಾನ್ ಖಾನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಆಗಲೇ ಒಂದು ಅರ್ಜಿ ವಿಚಾರಣೆ ನಡೆಯುತ್ತಿದೆ. ಇದೀಗ ವರ್ಗಾವಣೆಯಾದ ಅರ್ಜಿ ಸೇರಿದಂತೆ ಎಲ್ಲಾ ಅರ್ಜಿಗಳ ವಿಚಾರಣೆ ಹೈಕೋರ್ಟ್ ನಲ್ಲಿಯೇ ನಡೆಯಲಿದೆ.

ವಿಚಾರಣೆ ಬಳಿಕ ನ್ಯಾಯಮೂರ್ತಿ ಪಿ ಎಸ್ ಭಾಟಿ ಅರ್ಜಿ ವರ್ಗಾವಣೆಗೆ ಅನುಮತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖಾನ್ ಪರ ವಕೀಲ ಹೆಚ್ ಎಂ ಸರಸ್ವತ್, ಎಲ್ಲಾ ಪ್ರಕರಣಗಳ ವಿಚಾರಣೆ ಒಂದೇ ಸ್ಥಳದಲ್ಲಿ ನಡೆಯಲಿದ್ದು, ಇದು ಅಮೂಲ್ಯ ಸಮಯವನ್ನು ಉಳಿಸುತ್ತೆದ ಎಂದು ಹೇಳಿದರು. ಎರಡು ಕೃಷ್ಣಮೃಗಗಳನ್ನು ಬೇಟಿಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 5, 2018ರಲ್ಲಿ ಜಿಲ್ಲಾ ಸೆಷನ್ ನ್ಯಾಯಾಲಯ ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ತೀರ್ಪು ನೀಡಿ, ಐದು ವರ್ಷಗಳ ಶಿಕ್ಷೆ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ರಾಜಸ್ಥಾನ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಉಳಿದ ಎರಡು ಅರ್ಜಿ ಜೋಧಪುರ ಸೆಷನ್ ಕೋರ್ಟ್ ನಲ್ಲಿತ್ತು. ಈ ಎರಡು ಅರ್ಜಿಗಳು ಹೈಕೋರ್ಟ್ ಹೈಕೋರ್ಟ್ ಗೆ ವರ್ಗಾವಣೆಯಾದರೆ ಒಟ್ಟಿಗೆ ವಿಚಾರಣೆ ನಡೆಸಬಹುದು ಎಂಬುದು ಸಲ್ಮಾನ್ ಖಾನ್ ಅವರ ಮನವಿ ಆಗಿತ್ತು. ಸಲ್ಮಾನ್ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.

ಏನಿದು ಪ್ರಕರಣ?

ನಟ ಸಲ್ಮಾನ್ ಖಾನ್ 1998ರಲ್ಲಿ ಹಮ್ ಸಾಥ್ ಸಾಥ್ ಹೈ ಸಿನಿಮಾ ಚಿತ್ರೀಕರಣ ವೇಳೆ ಜೋಧಪುರ್ ಬಳಿಯ ಕಂಕಣಿ ಗ್ರಾಮದಲ್ಲಿ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಯಾಡಿದ್ದರು. ಪರವಾನಗಿ ಇಲ್ಲದ ಬಂದೂಕು ಬಳಕೆ ಮಾಡಲಾಗಿತ್ತು ಎನ್ನುವ ಆರೋಪ ಕೇಳಿಬಂದಿತ್ತು. ಅಕ್ರಮ ಶಸ್ತ್ರಾಸ್ತ್ರ ಬಳಕೆ ಮಾಡಿರುವ ಸಂಬಂಧ ಅಕ್ರಮ ಶಸ್ತ್ರಾಸ್ತ ಕಾಯ್ದೆ ಮತ್ತು ವನ್ಯಜೀವಿ ರಕ್ಷಣಾ ಕಾಯಿದೆ ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು.

1998ರ ಸೆಪ್ಟೆಂಬರ್‌ 26, 27ರಂದು ಭಾವಾಡದಲ್ಲಿ ಕೃಷ್ಣಮೃಗ ಕೊಂದಿದ್ದ ಪ್ರಕರಣ, ಹಾಗೂ 1998ರ ಸೆಪ್ಟೆಂಬರ್‌ 28, 29ರಂದು ಮಥಾನಿಯಾದಲ್ಲಿ ಚಿಂಕಾರ ಕೊಂದ ಆರೋಪ ಹೊರಿಸಲಾಗಿತ್ತು.

Latest Videos
Follow Us:
Download App:
  • android
  • ios