ಸ್ವಂತ OTT ಘೋಷಿಸಿದ ಶಾರುಖ್ ಖಾನ್; ಸಲ್ಮಾನ್ ಖಾನ್ ಹೇಳಿದ್ದೇನು?
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸ್ವಂತ ಒಟಿಟಿಯನ್ನು ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಎಸ್ ಆರ್ ಕೆ ಪ್ಲಸ್ ಹೆಸರಿನಲ್ಲಿ ಒಟಿಟಿ ಪ್ರಾರಂಭಮಾಡುತ್ತಿರುವ ಶಾರುಖ್ ಖಾನ್ ಗೆ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟ ಸಲ್ಮಾನ್ ಖಾನ್ ಅಭಿನಂದನೆ ಸಲ್ಲಿಸಿದ್ದಾರೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿ ನೀಡಿದ್ದಾರೆ. ಶಾರುಖ್ ರನ್ನು ದೊಡ್ಡ ಪರದೆ ಮೇಲೆ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಈ ನಡುವೆ ಶಾರುಖ್ ಹೊಸ ನಿರ್ಧಾರ ಅಚ್ಚರಿ ಮೂಡಿಸಿದೆ. ಶಾರುಖ್ ಸಿನಿಮಾ ಬಿಡುಗಡೆ ಆಗದೆ ನಾಲ್ಕೈದು ವರ್ಷಗಳೇ ಆಗಿವೆ. ಸದ್ಯ ಶಾರುಖ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಜೊತೆಗೆ ಜಾಹಿರಾತು ಕ್ಷೇತ್ರದಲ್ಲೂ ಸಕ್ರೀಯರಾಗಿದ್ದಾರೆ. ನಟನೆ, ನಿರ್ಮಾಣದಲ್ಲಿ ಬ್ಯುಸಿಯಾಗಿದ್ದ ಕಿಂಗ್ ಖಾನ್ ಇದೀಗ ಸಿನಿಮಾ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಶಾರುಖ್ ಖಾನ್ ಸ್ವಂತ ಒಟಿಟಿ ಘೋಷಿಸುವ ಮೂಲಕ ಒಟಿಟಿ ಕ್ಷೇತ್ರಕ್ಕೆ ಕಾಲಿಟದ್ದಾರೆ.
ಇತ್ತೀಚೆಗೆ ottಯಲ್ಲಿ ಜಾಹಿರಾತಿನ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದ ಶಾರುಖ್ ಖಾನ್ ಇದೀಗ ತನ್ನದೆ ಆದ ಒಟಿಟಿ ಪ್ಲಾಟ್ ಫಾರ್ಮ್ ಆರಂಭಿಸುವ ಮೂಲಕ ಆನ್ ಲೈನ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತನ್ನ ಹೊಸ ಒಟಿಟಿ ಬಗ್ಗೆ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗ ಪಡಿಸಿರುವ ಶಾರುಖ್ ಖಾನ್, "ಸದ್ಯದಲ್ಲೇ ಒಟಿಟಿ ಜಗತ್ತಿನಲ್ಲಿ ಏನಾದರೂ ಸಂಭವಿಲಿದೆ" ಎಂದು ಹೇಳಿದ್ದಾರೆ.
ಅಂದಹಾಗೆ ಶಾರುಖ್ ಖಾನ್ ಒಟಿಟಿಗೆ 'ಎಸ್ ಆರ್ ಕೆ ಪ್ಲಸ್(SRK plus)' ಎಂದು ಹೆಸರಿಟ್ಟಿದ್ದಾರೆ. ಶಾರುಖ್ ಖಾನ್ ಎಂಟ್ರಿಯಿಂದ ಒಟಿಟಿ ಕ್ಷೇತ್ರದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಅಂದಹಾಗೆ ಶಾರುಖ್ ನಟನೆ ಜೊತೆಗೆ ಸಿನಿಮಾ ನಿರ್ಮಾಣ ಕ್ಷೇತ್ರದಲ್ಲೂ ಸಕ್ರೀಯರಾಗಿದ್ದರು. 'ರೆಡ್ ಚಿಲ್ಲೀಸ್' ನಿರ್ಮಾಣ ಸಂಸ್ಥೆ ಮೂಲಕ ಶಾರುಖ್ ಅನೇಕ ಸಿನಿಮಾಗಳನ್ನು, ಟಿವಿ ಶೋಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಒಟಿಟಿಗೆ ಎಂಟ್ರಿ ಕೊಡುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಲು ಮುಂದಾಗಿದ್ದಾರೆ.
ಶಾರುಖ್ ಖಾನ್ ಹೊಸ ಪ್ರಯತ್ನಕ್ಕೆ ಗೆಳೆಯ ಸಲ್ಮಾನ್ ಖಾನ್ ಸಹ ಸಾಥ್ ನೀಡಿದ್ದಾರೆ. ಶಾರುಖ್ ಖಾನ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಸಲ್ಮಾನ್ ಖಾನ್, "ಹೊಸ ಒಟಿಟಿ ಆಪ್ ಎಸ್ ಆರ್ ಕೆ ಪ್ಲಸ್ ಗೆ ಅಭಿನಂದನೆಗಳು. ಈ ಬಗ್ಗೆ ತುಂಬಾ ಎಕ್ಸಾಯಿಟ್ ಆಗಿದ್ದೇನೆ" ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಮಾತ್ರವಲ್ಲದೆ ನಿರ್ದೇಶಕ ಅನುರಾಗ್ ಕಶ್ಯಪ್, ಕರಣ್ ಜೋಹರ್ ಸೇರಿದಂತೆ ಬಾಲಿವುಡ್ ನ ಅನೇಕ ಗಣ್ಯರು ಟ್ವೀಟ್ ಮಾಡಿ ಶಾರುಖ್ ಖಾನ್ ಹೊಸ ಒಟಿಟಿಗೆ ಶುಭಹಾರೈಸುತ್ತಿದ್ದಾರೆ. https://kannada.asianetnews.com/cine-world/is-salman-khan-marriage-gossip-is-true-r8a4is
ಶಾರುಖ್ ಖಾನ್ ಸ್ವಂತ ಒಟಿಟಿ ಮೂಲಕ ಎಂಟ್ರಿ ಕೊಡುತ್ತಿರುವುದು ಒಟಿಟಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯ ನಿರೀಕ್ಷೆ ಹುಟ್ಟುಹಾಕಿದೆ. ಈಗಾಗಲೇ ಅನೇಕ ಒಟಿಟಿಗಳು ಕಾರ್ಯ ನಿರ್ವಹಿಸುತ್ತಿವೆ. ಅಮೆಜಾನ್ ಪ್ರೈಂ, ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ಸೋನಿ ಲಿವ್, ಜೀ೫ ಸೇರಿದಂತೆ ದೊಡ್ಡ ಒಟಿಟಿಗಳು ಪ್ರಕ್ಷಕರ ಗಮನ ಸೆಳೆಯುತ್ತಿವೆ. ಈ ನಡುವೆ ಶಾರುಖ್ ಹೊಸ ಒಟಿಟಿ ಅಭಿಮಾನಿಗಳಲ್ಲಿ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. https://kannada.asianetnews.com/gallery/cine-world/kareena-kapoor-hrithik-roshan-film-kabhi-khushi-kabhie-gham-completed-19-years-of-release-qlfn94
ಇತ್ತೀಚಿಗೆ ಶಾರುಖ್ ಖಾನ್, ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಿಂದ ಸಾಕಷ್ಟು ಮುಜುಗರ ಎದುರಿಸಿದ್ದರು. ಈ ಪ್ರಕರಣದ ಬಳಿಕ ಶಾರುಖ್ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿದ್ದರು. ಇದೀಗ ಸಹಜ ಸ್ಥಿತಿಗೆ ಮರಳುತ್ತಿರುವ ಶಾರುಖ್ ಭರ್ಜರಿ ಸುದ್ದಿ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ನಡುವೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಿನಿಮಾರಂಗದ ಎಂಟ್ರಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆರ್ಯನ್ ಖಾನ್ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ, ಸ್ಕ್ರಿಪ್ಟ್ ಬರಹಗಾರರಾಗಿ ಪದಾರ್ಪಣೆ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಇದೀಗ ತನ್ನದೆ ಹೊಸ ಒಟಿಟಿ ಮೂಲಕ ಮಗನನ್ನು ಬಣ್ಣದ ಲೋಕಕ್ಕೆ ಕರೆತರುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ನಟನಾಗಿ, ನಿರ್ಮಾಪಕನಾಗಿ ದೊಡ್ಡ ಮಟ್ಟದಲ್ಲಿ ಸಾದನೆ ಮಾಡಿರುವ ಶಾರುಖ್ ಒಟಿಟಿ ಕ್ಷೇತ್ರದಲ್ಲೂ ಸಕ್ಸಸ್ ಕಾಣುತ್ತಾರಾ ಎಂದು ಕಾದು ನೋಡಬೇಕು.