Salman Khan Marriage: ಬಾಲಿವುಡ್ ಸುಲ್ತಾನ್ ಸೀಕ್ರೆಟ್ ಆಗಿ ಮದುವೆ ಆದ್ರಾ ?

ಬಾಲಿವುಡ್‌ನ (Bollywood)ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಸಲ್ಮಾನ್ ಖಾನ್ (Salman Khan). ಸಲ್ಲು ಮಿಯಾ ಯಾವಾಗ ಮದುವೆಯಾಗ್ತಾರೆ ಅನ್ನೋದು ಬಿಟೌನ್ ಪಾಲಿಗೆ ಮಿಲಿಯನ್ ಡಾಲರ್ ಪ್ರಶ್ನೆ. ಆದ್ರೆ ಸದ್ಯ ಸೀಕ್ರೆಟ್ (Secret)  ಆಗಿ ಬಾಲಿವುಡ್‌ನ ಸುಲ್ತಾನ್ ಮದುವೆ ಆಗಿ ಬಿಟ್ರಾ ಅನ್ನೋ ಸುದ್ದಿ ಹರಿದಾಡ್ತಿದೆ.

Is Salman Khan Marriage Gossip Is True

ಬಾಲಿವುಡ್ (Bollywood) ಸೂಪರ್ ಸ್ಟಾರ್, ಬಿಟೌನ್‌ನ ಸುಲ್ತಾನ್ ಸಲ್ಮಾನ್ ಖಾನ್ (Salman Khan). ತಮ್ಮ 56ರ ಹರೆಯದಲ್ಲೂ ಖಡಕ್ ಮೈಕಟ್ಟು, ಹ್ಯಾಂಡ್‌ಸಮ್ ಲುಕ್‌ನಿಂದ ಗಮನ ಸೆಳೆಯುತ್ತಿರುವ ಹೀರೋ. ಸಲ್ಮಾನ್ ಖಾನ್ ಸಿನಿಮಾ ರಂಗಕ್ಕೆ ಬಂದು 30 ವರ್ಷಗಳೇ ಕಳೆದಿವೆ. ಹೀಗಿದ್ದೂ ದಬಾಂಗ್ ಹೀರೋ (Hero) ಹಿಂದಿನಂತೇ ತಮ್ಮ ಚಾರ್ಮ್ ಉಳಿಸಿಕೊಂಡಿರುವುದು ಸುಳ್ಳಲ್ಲ. ಬಾಲಿವುಡ್‌ನ ಬಹಳ ಜನಪ್ರಿಯ ಹಾಗೂ ಪ್ರಭಾವಿ ಹೀರೋ ಸಲ್ಮಾನ್ ಖಾನ್ ಹಲವು ವರ್ಷಗಳಿಂದ ಬಿಗ್‌ಬಾಸ್ ಹೋಸ್ಟ್ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಸಿನಿಮಾಗಳೆಂದರೆ ಅವು ಬಾಕ್ಸ್ ಆಫೀಸ್ ರೆಕಾರ್ಡ್ ಬ್ರೇಕ್ ಮಾಡೋದು ಗ್ಯಾರಂಟಿ ಅನ್ನೋ ಮಾತೂ ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿದೆ.

ಸಲ್ಮಾನ್ ಖಾನ್ ಸಿನಿಮಾಗಳ ಬಗ್ಗೆ ಮಾತನಾಡುವಷ್ಟೇ ಇವರ ಲೈಫಿನ ಬಗ್ಗೆಯೂ ಜನರು ಮಾತಾಡ್ತಾರೆ. ಆಗಾಗ ಅವರ ಗರ್ಲ್ ಫ್ರೆಂಡ್ (Girl Friend)  ಸುದ್ದಿ, ರಿಲೇಶನ್‌ಶಿಪ್‌ನ ಸುದ್ದಿ, ಅವರ ಮದುವೆಯ ಸುದ್ದಿ ಜನರ ಬಾಯಲ್ಲಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡ್ತನೇ ಇರ್ತವೆ. ಸದ್ಯ ಈಗ ಸಲ್ಮಾನ್ ಖಾನ್ ಮದುವೆಯಾಗಿದ್ದಾರೆ ಅನ್ನೋ ಸುದ್ದಿ ವೈರಲ್ ಆಗ್ತಿದೆ. ಈ ಬಗ್ಗೆ ಸಲ್ಮಾನ್ ಖಾತ್ ಇನ್‌ಸ್ಟಾಗ್ರಾಂನಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.

ಸಲ್ಮಾನ್ ಸೊನಾಕ್ಷಿಯನ್ನು ಮದ್ವೆಯಾದ್ರಂತೆ, ಈ ಸುಳ್ಳು ಸುದ್ದಿ ವೈರಲ್ ಆಗಿದ್ದೇಕೆ?

ಹಮ್ ಆಪ್ಕೆ ಹೈ ಕೌನ್‌ನಲ್ಲಿನ ಪ್ರೇಮ್ ಪಾತ್ರದ ಆಪ್ ಕಿ ಶಾದಿ ಹೋಗಯಿ (ನಿಮ್ಮ ಮದುವೆಯಾಯಿತೇ) ಎಂದು ಕೇಳುವುದಕ್ಕೆ ಸಲ್ಮಾನ್ ಖಾನ್ ಹೋಗಯಿ (ಆಯಿತು) ಎಂದು ಹೇಳುವ ವೀಡಿಯೋ ಇದಾಗಿದೆ. 

ಇತ್ತೀಚಿಗಷ್ಟೇ ಸದ್ಯಕ್ಕೀಗ ಸಲ್ಮಾನ್ ಖಾನ್ ದಬಾಂಗ್ (Dabang) ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರನ್ನು ವರಿಸಿದ್ದಾರೆ ಅನ್ನೋದು ಸುದ್ದಿಯಾಗಿತ್ತು. ಅದಕ್ಕೆ ಪೂರಕವಾಗಿ ಅವರ ಮದುವೆಯ ಫೋಟೋಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಸಲ್ಮಾನ್ ಕ್ಲಿಪ್, ಜಾಹೀರಾತನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಪ್ರೇಮ್ ಮದುವೆಯ ಬಗ್ಗೆ ಕೇಳಿದರು. ಇದಕ್ಕೆ  ಉತ್ತರಿಸಿದ ಸಲ್ಮಾನ್, ಮದುವೆ ಮುಗಿದಿದೆ ಎಂದು ಹೇಳಿದರು. ಆದರೆ, ಇವರಿಬ್ಬರು ಯಾರ ಮದುವೆಯ ಬಗ್ಗೆ ಮಾತನಾಡಿದ್ದಾರೆ ಎಂಬುದು ವಿಡಿಯೋದಲ್ಲಿ ಬಹಿರಂಗವಾಗಿಲ್ಲ.

ಸಲ್ಮಾನ್ ಖಾನ್ ಅಭಿನಯದ ಹಮ್ ಆಪ್ಕೆ ಹೈ ಕೌನ್ ಚಿತ್ರ 1994ರಲ್ಲಿ ಬಿಡುಗಡೆಯಾಗಿತ್ತು. ರಾಜಶ್ರೀ ಪ್ರೊಡಕ್ಷನ್ಸ್ ನಿರ್ಮಿಸಿದ, ಸೂರಜ್ ಬರ್ಜಾತ್ಯಾ ಬರೆದು ನಿರ್ದೇಶಿಸಿದ ಸಿನಿಮಾ ಇದಾಗಿದೆ. ಸಲ್ಮಾನ್ ಜೊತೆಗೆ ಈ ಚಿತ್ರದಲ್ಲಿ ಮಾಧುರಿ ದೀಕ್ಷಿತ್, ಮೊಹ್ನಿಶ್ ಬಹ್ಲ್, ರೇಣುಕಾ ಶಹಾನೆ, ಅನುಪಮ್ ಖೇರ್, ರೀಮಾ ಲಾಗೂ, ಅಲೋಕ್ ನಾಥ್ ಮತ್ತು ಬಿಂದು ನಟಿಸಿದ್ದಾರೆ. ಇದು ಅಜಿತ್ ವಚಾನಿ, ಸತೀಶ್ ಶಾ, ಹಿಮಾನಿ ಶಿವಪುರಿ ಮತ್ತು ದಿಲೀಪ್ ಜೋಶಿ ಸೇರಿದಂತೆ ಇತರ ತಾರಾಗಣವನ್ನು ಒಳಗೊಂಡಿತ್ತು. ಈ ಚಿತ್ರವು ಕೇಶವ್ ಪ್ರಸಾದ್ ಮಿಶ್ರಾ ಅವರ ಹಿಂದಿ ಕಾದಂಬರಿ ಕೊಹ್ಬರ್ ಕಿ ಶಾರ್ಟ್ ಅನ್ನು ಆಧರಿಸಿದ ನದಿಯಾ ಕೆ ಪಾರ್ (1982) ನ ಆಧಾರಿತವಾಗಿದೆ..

ಅಷ್ಟಕ್ಕೂ ಸಲ್ಮಾನ್ ಖಾನ್ ಆಫರ್ ಶ್ರದ್ಧಾ ಕಪೂರ್‌ ರಿಜೆಕಟ್‌ ಮಾಡಿದ್ದೇಕೆ?

ಸಲ್ಮಾನ್ ತನ್ನ ಮುಂಬರುವ ಚಿತ್ರ ಟೈಗರ್ 3ನಲ್ಲಿ ಕತ್ರಿನಾ ಕೈಫ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸಲ್ಲು ಮಿಯಾ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದರು ಮತ್ತು ಅದರ ಟೀಸರ್ ಅನ್ನು ಸಹ ಹಂಚಿಕೊಂಡಿದ್ದಾರೆ. ಇಮ್ರಾನ್ ಹಶ್ಮಿ ನಟಿಸಿರುವ ಬೇಹುಗಾರಿಕೆ ಆಕ್ಷನ್ ಥ್ರಿಲ್ಲರ್ 2023 ಏಪ್ರಿಲ್ 21ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಟ್ವಿಟರ್‌ನಲ್ಲಿ ಸಲ್ಮಾನ್ ಖಾನ್ ಮನೀಶ್ ಶರ್ಮಾ ನಿರ್ದೇಶನದ ಮತ್ತು ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಚಿತ್ರದ ಪ್ರೋಮೋ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಶೀರ್ಷಿಕೆಯಾಗಿದೆ, ‘ಹಮ್ ಸಬ್ ಅಪ್ನಾ ಅಪ್ನಾ ಖಯಾಲ್ ರಾಖೇನ್ (ನಮ್ಮನ್ನು ನಾವು ನೋಡಿಕೊಳ್ಳೋಣ) 2023ರ ಈದ್‌ನಲ್ಲಿ ಟೈಗರ್3 ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಚಿತ್ರದ ಶೂಟಿಂಗ್‌ಗಾಗಿ ಚಿತ್ರತಂಡ ದೆಹಲಿಗೆ ಬಂದಿತ್ತು. ಚಿತ್ರೀಕರಣ ಮುಗಿದ ಬಳಿಕ ಸಲ್ಮಾನ್ ತನ್ನ ಸಹ ನಟಿಯರಾದ ಕತ್ರೀನಾ ಕೈಫ್ ಮತ್ತು ಇಮ್ರಾನ್ ಅವರೊಂದಿಗೆ ಮುಂಬೈಗೆ ಮರಳಿದ್ದರು. ಮೂವರು ಟರ್ಕಿ, ಆಸ್ಟ್ರಿಯಾ ಮತ್ತು ರಷ್ಯಾ ಸೇರಿದಂತೆ ಹಲವಾರು ವಿದೇಶಿ ಸ್ಥಳಗಳಲ್ಲಿ ಚಿತ್ರೀಕರಣ ಪೂರ್ತಿಗೊಳಿಸಿದ್ದಾರೆ. ಏಕ್ ಥಾ ಟೈಗರ್ ಫ್ರಾಂಚೈಸಿಯ ಮೊದಲ ಚಿತ್ರವು 2012ರಲ್ಲಿ ಹೊರ ಬಂದಿತ್ತು. ಈ ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸಿದ್ದರು. ಎರಡನೇ ಚಿತ್ರ ಟೈಗರ್ ಜಿಂದಾ ಹೈ 2017ರಲ್ಲಿ ಬಿಡುಗಡೆಯಾಯಿತು ಮತ್ತು ಅದನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ್ದರು. 

Latest Videos
Follow Us:
Download App:
  • android
  • ios