Asianet Suvarna News Asianet Suvarna News

ಫ್ಯಾನ್ಸ್ ಸೆಲ್ಪಿ ಕೇಳಿದ್ದಕ್ಕೆ ಗೊಣಗಾಡುತ್ತಾ ಮುಖ ಊದಿಸಿಕೊಂಡ ಕನಸಿನ ಕನ್ಯೆ

ಬಾಲಿವುಡ್‌ ನಟಿ ಹೇಮಮಾಲಿನಿ ಅವರು ತಮ್ಮೊಂದಿಗೆ ಸೆಲ್ಫಿ ಕೇಳಲು ಬಂದ ಅಭಿಮಾನಿಯಿಂದ ಸಿಟ್ಟುಗೊಂಡು ಗೊಣಗಾಡಿ ಮುಖ ಊದಿಸಿಕೊಂಡ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Bollywood Dream Girl Hema malini Got angry after a Fan asks selfie with her akb
Author
First Published Jan 11, 2024, 9:37 AM IST

ಬಾಲಿವುಡ್‌ ನಟಿ ಹೇಮಮಾಲಿನಿ ಅವರು ತಮ್ಮೊಂದಿಗೆ ಸೆಲ್ಫಿ ಕೇಳಲು ಬಂದ ಅಭಿಮಾನಿಯಿಂದ ಸಿಟ್ಟುಗೊಂಡು ಗೊಣಗಾಡಿ ಮುಖ ಊದಿಸಿಕೊಂಡ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉರ್ದುವಿನ ಖ್ಯಾತ ಕವಿ, ಗೀತಾ ಸಾಹಿತಿ, ಹಾಗೂ ಸಿನಿಮಾ ನಿರ್ಮಾಪಕ ಗುಲ್ಜರ್ ಅವರ ಆತ್ಮಕತೆ 'ಗುಲ್ಜರ್ ಸಾಬ್ : ಹಜಾರ್ ರಹೇನ್ ಮುಡ್ ಕೆ ದೇಖಿನ್' ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಹೇಮಾ ಆಗಮಿಸಿದ್ದರು. ಈ ವೇಳೆ ಅಲ್ಲಿದ್ದ ಪಪಾರಾಜಿಗಳಿಗೆ ಪೋಸ್‌ ಕೊಡ್ತಿದ್ದ ವೇಳೆ ಅಲ್ಲೊಬ್ಬ ಅಭಿಮಾನಿ ಬಂದು ಸೆಲ್ಫಿ ನೀಡುವಂತೆ ಕೇಳಿದ್ದಾನೆ ಎನ್ನಲಾಗಿದ್ದು, ಇದರಿಂದ ಸಿಟ್ಟಿಗೆದ್ದ ಹೇಮಾ ಆತನ ಬಗ್ಗೆ ಗೊಣಗಾಡುತ್ತಾ ಸೆಲ್ಫಿ ನೀಡದೇ ಬೈದುಕೊಂಡು ಹೋಗಿದ್ದಾರೆ ಎಂದು ವರದಿ ಆಗಿದೆ.

ಈ ವೀಡಿಯೋ ನೋಡಿದ ಜನ ಮಾತ್ರ ಹೇಮಾ ವಿರುದ್ಧ ಸಿಟ್ಟಿಗೆದ್ದಿದ್ದು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಸುಂದರವಾದ ಬಿಳಿ ಬಣ್ಣದ ಕೆಂಪು ಜರಿಯ ಅಂಚನ್ನು ಹೊಂದಿದ್ದ ಸಾರಿಯಲ್ಲಿ ಕಂಗೊಳಿಸುತ್ತಿದ್ದ ಹೇಮಾರನ್ನು ನೋಡಿ ಅಭಿಮಾನಿಯೊಬ್ಬ ಸೆಲ್ಫಿ ಕೇಳಲು ಬಂದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಹೇಮಾ, ಕೆಲವರು ಸೆಲ್ಫಿಗಾಗಿಯೇ ಬರುತ್ತಾರೆ ಎಂದು ಗೊಣಗಾಡುತ್ತಾ ಮುಖವನ್ನು ಗಡಿಗೆ ಮಾಡುತ್ತಾ ಮುಂದೆ ಸಾಗಿದ್ದಾರೆ. ಈ ವೀಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದ್ದು, ಹೇಮಾಮಾಲಿನಿ ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಕೆಲವರು ಈಕೆ ಬರು ಬರುತ್ತಾ ಇನ್ನೊಂದು ಜಯಾ ಬಚ್ಚನ್ ಆಗುತ್ತಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. (ಜಯಾ ಬಚ್ಚನ್ ಕೂಡ ಪಪಾರಾಜಿಗಳು ಹಾಗೂ ಫೋಟೋ ತೆಗೆಯುವವರ ವಿರುದ್ಧ ಸದಾ ಕಿಡಿಕಾರುತ್ತಿರುತ್ತಾರೆ)  ಮತ್ತೊಬ್ಬರು ಈಕೆ ತನ್ನ ಮುಖವನ್ನು ಎಷ್ಟು ಕೆಟ್ಟದಾಗಿ ಮಾಡಿಕೊಂಡಿದ್ದಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಬಾಘ್‌ಬನ್ ಚಿತ್ರಕ್ಕೆ ರವಿ ಚೋಪ್ರಾ ಮೊದಲ ಆಯ್ಕೆ ಅಮಿತಾಭ್-ಹೇಮಾ ಮಾಲಿನಿ ಅಲ್ಲ, ಬೇರೆ ಯಾರೋ ಆಗಿತ್ತು!

ಇತ್ತೀಚೆಗೆ ಹೇಮಾ ಮಾಲಿನಿ ತನ್ನ ಪತಿ ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರ ಹುಟ್ಟುಹಬ್ಬಕ್ಕೆ ಅದ್ದೂರಿ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಆ ಪಾರ್ಟಿಯಲ್ಲಿ ನಟ ಜೀತೇಂದ್ರ, ಶಬಾನಾ ಅಜ್ಮಿ, ಪದ್ಮಿನಿ ಕೊಲ್ಹಪುರೆ ಸೇರಿದಂತೆ  ಬಾಲಿವುಡ್‌ನ ಬಹುತೇಕ ಪ್ರಮುಖ ನಟನಟಿಯರು ಭಾಗಿಯಾಗಿದ್ದರು. ಈ ಪಾರ್ಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ನಟಿ, ನನ್ನ ಪ್ರೀತಿಯ ಜೀವನ ಸಂಗಾತಿಗೆ, ತುಂಬಾ ಸಂತೋಷ, ಆರೋಗ್ಯಕರ ಮತ್ತು ಸಂತೋಷದಾಯಕ ಜನ್ಮದಿನದ ಶುಭಾಶಯಗಳು, ನಿಮ್ಮ ಹೃದಯವು ಹಿಡಿದಿಟ್ಟುಕೊಳ್ಳಬಹುದಾದ ಎಲ್ಲಾ ಪ್ರೀತಿಯನ್ನು ನಿಮಗೆ ಸಿಗಲಿ. ಒಂದು ದಿನವು ಎಲ್ಲಾ ಸಂತೋಷವನ್ನು ತರಬಹುದು. ನೀವು ನನಗೆ ಎಷ್ಟು ವಿಶೇಷವಾಗಿದ್ದೀರಿ ಎಂಬುದನ್ನು ನೀವು ನೋಡಬಹುದು ಎಂದು ನಾನು ಭಾವಿಸುತ್ತೇನೆ. ಪ್ರೀತಿಯ ಜನ್ಮದಿನದ ಶುಭಾಶಯಗಳು ಎಂದು ಬರೆದಿದ್ದರು.

ಧರ್ಮೇಂದ್ರ @88: 51 ರೂ.ಗಳಿಂದ 450 ಕೋಟಿಯ ಒಡೆಯನಾದ ಬಾಲಿವುಡ್​ ನಟನ ಇಂಟರೆಸ್ಟಿಂಗ್ ಸ್ಟೋರಿ!

ಶೋಲೆ, ರಾಜ ರಾಣಿ, ಭಗ್ವಾತ್ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಹೇಮಾ ಮಾಲಿನಿ ಒಂದು ಕಾಲದ ಬಾಲಿವುಡ್‌ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. 
ವಿವಾಹಿತ ಧರ್ಮೇಂದ್ರ ಅವರನ್ನು ವಿವಾಹವಾಗಿದ್ದ ಹೇಮಾ ಮಾಲಿನಿ ಇಬ್ಬರು ಹೆಣ್ಣ ಮಕ್ಕಳಿಗೆ ಪೋಷಕರಾಗಿದ್ದಾರೆ. 
 

 
 
 
 
 
 
 
 
 
 
 
 
 
 
 

A post shared by Voompla (@voompla)

 

 

Follow Us:
Download App:
  • android
  • ios