Asianet Suvarna News Asianet Suvarna News

ಬಾಘ್‌ಬನ್ ಚಿತ್ರಕ್ಕೆ ರವಿ ಚೋಪ್ರಾ ಮೊದಲ ಆಯ್ಕೆ ಅಮಿತಾಭ್-ಹೇಮಾ ಮಾಲಿನಿ ಅಲ್ಲ, ಬೇರೆ ಯಾರೋ ಆಗಿತ್ತು!

ಬಾಘ್‌ಬನ್ ಚಿತ್ರದ ಕತೆಯನ್ನು ಅಮಿತಾಭ್‌ ಬಚ್ಚನ್ ಹಾಗೂ ಹೇಮಾ ಮಾಲಿನಿ ಅವರಿಗೆ ಹೇಳಿದಾಗ ಅವರಿಬ್ಬರೂ ಕಥೆಯನ್ನು ತುಂಬಾ ಇಷ್ಟಪಟ್ಟು ಸಹಿ ಹಾಕಿದರಂತೆ. ಬಳಿಕ ಇದು ಶೂಟಿಂಗ್ ಮುಗಿಸಿ ತೆರೆಗೆ ಬಂದಾಗ 2003ನೇ ಇಸ್ವಿ ಕಾಲಿಟ್ಟಿತ್ತು. 

Ravi Chopra original choice for Baghban is not amitabh bachchan and hema malini srb
Author
First Published Dec 20, 2023, 3:27 PM IST

ಬಿಆರ್‌ ಚೋಪ್ರಾ ಮಗ ರವಿ ಚೋಪ್ರಾ ಅವರು ಬಾಘ್‌ಬನ್ ಸಿನಿಮಾ ನಿರ್ದೇಶನ ಮಾಡಿ ಆ ಚಿತ್ರವು ಸೂಪರ್ ಹಿಟ್ ಆಗಿರುವುದು ಈಗ ಇತಿಹಾಸ. 2003ರಲ್ಲಿ ಬಂದ Baghban ಚಿತ್ರವು ಅಮಿತಾಭ್‌ ಬಚ್ಚನ್ ಮತ್ತು ಹೇಮಾ ಮಾಲಿನಿ ಜೋಡಿ ಒಳಗೊಂಡಿತ್ತು. ಈ ಚಿತ್ರವು ಕೌಂಟುಂಬಿಕ ಹಿನ್ನೆಲೆಯ ಕಥೆ ಹೊಂದಿದ್ದು ಹಲವರ ಮನಸ್ಸು ಕದಡಿತ್ತು. ಬಾಲಿವುಡ್‌ನಲ್ಲಿ ಈ ಚಿತ್ರವು ಸೂಪರ್ ಹಿಟ್ ದಾಖಲಿಸಿ ಒಳ್ಳೆಯ ವಿಮರ್ಶೆ ಪಡೆದ ಬಳಿಕ ಭಾರತದ ಇತರ ಹಲವು ಭಾಷೆಗಳಲ್ಲಿ ಅದು ರೀಮೇಕ್ ಆಗಿತ್ತು. 

ಆಸಕ್ತಿಕರ ವಿಷಯವೇನೆಂದರೆ, ಅಮಿತಾಭ್ ಬಚ್ಚನ್ ಮತ್ತು ಹೇಮಾ ಮಾಲಿನಿ ಈ ಚಿತ್ರದಲ್ಲಿ ನಟಿಸಿದ್ದರೂ ಬಾಘ್‌ಬನ್ ಚಿತ್ರಕ್ಕೆ ನಿರ್ದೇಶಕ ರವಿ ಚೋಪ್ರಾರ ಮೊಟ್ಟಮೊದಲ ಆಯ್ಕೆ ಅವರಿಬ್ಬರಲ್ಲ. ಈ ಚಿತ್ರದ ಕಥೆ 70ರ ದಶಕದಲ್ಲೇ ರವಿ ಚೋಪ್ರಾರ ತಲೆಯಲ್ಲಿ ಬಂದಿದ್ದು ಎನ್ನಲಾಗಿದೆ. ಆದರೆ, ಈ ಕಥೆಯನ್ನು ಸಿನಿಮಾ ಮಾಡುವ ಹಂತದಲ್ಲಿ ಹಲವಾರು ಸಮಸ್ಯೆಗಳು ಎದುರಾಗಿ ಅದು ಕೊನೆಗೆ 2003 ರಲ್ಲಿ ಸಿನಿಮಾ ಆಗಿ ತೆರೆಗೆ ಬಂತು ಎನ್ನಲಾಗಿದೆ. ತೆರೆಗೆ ಬಂದಿದ್ದು ಮಾತ್ರವಲ್ಲ, ಸಿನಿಮಾ ಭಾರೀ ಜನಮನ್ನಣೆ ಪಡೆದಿದೆ. 

ವಿನಯ್-ಅವಿನಾಶ್ ಕಾಳಗ, ವಿನಯ್ ಕೈ ಬೆರಳು ಮುರಿತ; ಕಾರ್ತಿಕ್ ಆಸ್ಪತ್ರೆಗೆ ದಾಖಲು!

ಈ Baghban ಚಿತ್ರಕ್ಕೆ 70ರ ದಶಕದಲ್ಲಿ ನಿರ್ದೇಶಕ ರವಿ ಚೋಪ್ರಾ ಅವರು ಕಥೆ ಹೇಳಿ, ಒಪ್ಪಿಸಿ ಆಯ್ಕೆ ಮಾಡಿದ್ದ ಸ್ಟಾರ್ ಜೋಡಿ Dilip Kumar and Waheeda Rehman ಎನ್ನಲಾಗಿದೆ. ಅವರಿಬ್ಬರೂ ಈ ಕಥೆಯನ್ನು ತುಂಬಾ ಇಷ್ಟಪಟ್ಟು ನಟಿಸಲು ಕಾತರದಿಂದ ಕಾಯುತ್ತಲೇ ಇದ್ದರಂತೆ. ಆದರೆ, ರವಿ ಚೋಪ್ರಾ ಅವರಿಗೆ ಈ ಸಿನಿಮಾ ಶೂಟಿಂಗ್ ಮಾಡಲು ನಿಜವಾಗಿಯೂ ಸಾಧ್ಯವಾಗಿದ್ದು 2000ನೇ ಇಸ್ವಿಯ ನಂತರವಷ್ಟೇ. ಆದರೆ ಅಷ್ಟೊತ್ತಿಗಾಗಲೇ ದಿಲೀಪ್ ಕುಮಾರ್ ಅವರು ಸಿನಿಮಾ ನಟನೆ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದರು, ವಹೀದಾ ರೆಹಮಾನ್ ಅವರಿಗೆ ಬಹಳಷ್ಟು ವಯಸ್ಸು ಆಗಿ ಅವರನ್ನು ನಟಿಸಿ ಎಂದು ಕರೆಯಲು ಅಸಾಧ್ಯವಾಗಿತ್ತು ಎನ್ನಲಾಗಿದೆ. 

ಮತ್ತೆ ಬಾಲಿವುಡ್ ರಾಜಕೀಯದಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡಲು ನನಗಿಷ್ಟವಿಲ್ಲ; ಪ್ರಿಯಾಂಕಾ ಚೋಪ್ರಾ

ಈ ಕಾರಣಕ್ಕೆ 2003ರಲ್ಲಿ ಬಂದ ಬಾಘ್‌ಬನ್ ಚಿತ್ರದ ಕತೆಯನ್ನು ಅಮಿತಾಭ್‌ ಬಚ್ಚನ್ ಹಾಗೂ ಹೇಮಾ ಮಾಲಿನಿ ಅವರಿಗೆ ಹೇಳಿದಾಗ ಅವರಿಬ್ಬರೂ ಕಥೆಯನ್ನು ತುಂಬಾ ಇಷ್ಟಪಟ್ಟು ಸಹಿ ಹಾಕಿದರಂತೆ. ಬಳಿಕ ಇದು ಶೂಟಿಂಗ್ ಮುಗಿಸಿ ತೆರೆಗೆ ಬಂದಾಗ 2003ನೇ ಇಸ್ವಿ ಕಾಲಿಟ್ಟಿತ್ತು. ಒಟ್ಟಿನಲ್ಲಿ, ಬಾಘ್‌ಬನ್ ಚಿತ್ರದಲ್ಲಿ ಪ್ರೇಕ್ಷಕರು ದಿಲೀಪ್ ಕುಮಾರ್-ವಹೀದಾ ರೆಹಮಾನ್ ಜೋಡಿಯನ್ನು ನೋಡುವ ಬದಲು ಅಮಿತಾಭ್‌-ಹೇಮಾ ಮಾಲಿನಿ ಜೋಡಿಯನ್ನು ತೆರೆಯ ಮೇಲೆ ನೋಡುವಂತಾಯ್ತು ಎನ್ನಬಹುದಷ್ಟೇ!

Follow Us:
Download App:
  • android
  • ios