Asianet Suvarna News Asianet Suvarna News

ಧರ್ಮೇಂದ್ರ @88: 51 ರೂ.ಗಳಿಂದ 450 ಕೋಟಿಯ ಒಡೆಯನಾದ ಬಾಲಿವುಡ್​ ನಟನ ಇಂಟರೆಸ್ಟಿಂಗ್ ಸ್ಟೋರಿ!

 ಬಾಲಿವುಡ್​ ನಟ ಧರ್ಮೇಂದ್ರ ಅವರಿಗೆ ಇಂದು 88ನೇ ಹುಟ್ಟುಹಬ್ಬದ ಸಂಭ್ರಮ. ಈ ಸಮಯದಲ್ಲಿ ಅವರ ಗಳಿಕೆಯ ಕುರಿತು ಇಂಟರೆಸ್ಟಿಂಗ್​ ಮಾಹಿತಿ ಬೆಳಕಿಗೆ ಬಂದಿದೆ.
 

Dharmendra turns 88 was paid  Rs 51 for his debut now owns Rs 450 crore net worth suc
Author
First Published Dec 8, 2023, 4:55 PM IST

ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಅಂಥ ಒಂದು ಅಪರೂಪದ ಕಲಾವಿದ ಧರ್ಮೇಂದ್ರ.  ಬಾಲಿವುಡ್​ನ ಈ ಸೂಪರ್​ಸ್ಟಾರ್​ ಇಂದು ಅಂದರೆ ಡಿಸೆಂಬರ್​ 8ರಂದು ತಮ್ಮ 88ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರಿಗೆ ಲಕ್ಷಾಂತರ ಅಭಿಮಾನಿಗಳು ಸೇರಿದಂತೆ ಕುಟುಂಬಸ್ಥರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಮಗ ಸನ್ನಿ ಡಿಯೋಲ್​ ಅವರು ಅಪ್ಪನ ಹುಟ್ಟುಹಬ್ಬವನ್ನು ಆಚರಿಸಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಭಾವನಾತ್ಮಕವಾಗಿ ಆಚರಿಸಿರುವ ಈ ಹುಟ್ಟುಹಬ್ಬಕ್ಕೆ ಗಣ್ಯಾತಿಗಣ್ಯರು ಶುಭಾಶಯ ಕೋರುತ್ತಿದ್ದಾರೆ.  63 ವರ್ಷಗಳ ಹಿಂದೆ ತಮ್ಮ ವೃತ್ತಿಜೀವನ ಪ್ರಾರಂಭಿಸಿರುವ ಧರ್ಮೇಂದ್ರ ಅವರು  ಕಳೆದ 6 ದಶಕಗಳಿಂದ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದು, ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ಎಂದರೆ ಅವರ ತಾಕತ್ತು ಎಷ್ಟು ಎನ್ನುವುದು ತಿಳಿಯುತ್ತದೆ.

ಅವರ ಹುಟ್ಟುಹಬ್ಬದಂದು ಅವರ ಬದುಕಿನ ಇಂಟರೆಸ್ಟಿಂಗ್​ ವಿಷಯವೊಂದು ಬೆಳಕಿಗೆ ಬಂದಿದೆ. 1960ರಲ್ಲಿ ‘ದಿಲ್ ಭಿ ತೇರಾ ಔರ್ ಹಮ್ ಭಿ ತೇರೆ’ ಚಿತ್ರದ ಮೂಲಕ ಧರ್ಮೇಂದ್ರ ನಟನಾ ಜಗತ್ತಿಗೆ ಕಾಲಿಟ್ಟರು. ಒಮ್ಮೆ 'ಡ್ಯಾನ್ಸ್ ದೀವಾನೆ 3' ಕಾರ್ಯಕ್ರಮದಲ್ಲಿ, ಚಿತ್ರಕ್ಕೆ ಸಹಿ ಹಾಕಲು ಕೇವಲ 51 ರೂಪಾಯಿಗಳನ್ನು ಪಡೆದಿರುವುದಾಗಿ ನಟ ಹೇಳಿದ್ದರು. ಅಂದರೆ ಇವರು ತಮ್ಮ ಸಿನಿಮಾ ಪಯಣ ಶುರು ಮಾಡಿದ್ದು 51 ರೂಪಾಯಿಗಳಿಂದ. 'ದಿಲ್ ಭಿ ತೇರಾ ಔರ್ ಹಮ್ ಭಿ ತೇರೆ' ಚಿತ್ರವನ್ನು ಮೂವರು ನಿರ್ಮಾಪಕರು ಸೇರಿ ನಿರ್ಮಿಸಿದ್ದರು. ಈ ಹಿನ್ನೆಲೆಯಲ್ಲಿ, ಮೂವರೂ ತಲಾ 17 ರೂಪಾಯಿಗಳಂತೆ ಧರ್ಮೇಂದ್ರ ಅವರಿಗೆ ನೀಡಿದ್ದರು. ಮೂವರೂ ಸೇರಿ 17-17 ರೂಪಾಯಿ ಅಂದರೆ ಒಟ್ಟು 51 ರೂಪಾಯಿ ಧರ್ಮೇಂದ್ರ ಅವರಿಗೆ ಸಿಕ್ಕಿತ್ತು. 

ಇಂಥ ಪತ್ನಿಯರೂ ಇರ್ತಾರಾ? ಸವತಿ ಹೇಮಾ ಮಾಲಿನಿಯನ್ನೇ ಹಾಡಿ ಹೊಗಳಿದ್ದ ಧರ್ಮೇಂದ್ರ ಮೊದಲ ಪತ್ನಿ!

ಧರ್ಮೇಂದ್ರ ಅವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಇಲ್ಲಿಯವರೆಗೆ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಏತನ್ಮಧ್ಯೆ, ಅವರು ಖ್ಯಾತಿಯನ್ನು ಗಳಿಸಿದ್ದು ಮಾತ್ರವಲ್ಲದೆ ಸಾಕಷ್ಟು ಸಂಪತ್ತನ್ನೂ ಗಳಿಸಿದ್ದಾರೆ. ಅಂದಹಾಗೆ ನಟನ ಸದ್ಯದ ಆಸ್ತಿ  450 ಕೋಟಿ ರೂಪಾಯಿ.  ಇವರು ಲೋನಾವಾಲಾದಲ್ಲಿ 100 ಎಕರೆ ಪ್ರದೇಶದಲ್ಲಿ ಫಾರ್ಮ್‌ಹೌಸ್ ಹೊಂದಿದ್ದಾರೆ. ಈ ಸ್ಥಳದಲ್ಲಿ ಕೃಷಿಯನ್ನೂ ಮಾಡುತ್ತಾರೆ. ಈ ಫಾರ್ಮ್‌ಹೌಸ್‌ನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿದೆ. ಧರ್ಮೇಂದ್ರ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫಾರ್ಮ್‌ಹೌಸ್‌ನ ನೋಟವನ್ನು ತೋರಿಸುತ್ತಲೇ ಇರುತ್ತಾರೆ.

ಇಷ್ಟೇ ಅಲ್ಲದೇ, ಇವರು, ಮಹಾರಾಷ್ಟ್ರದಲ್ಲಿ 17 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಕೆಲವು ಆಸ್ತಿ ಹೊಂದಿದ್ದಾರೆ. ರಾಜ್ಯದಲ್ಲಿ ಕೃಷಿ ಮತ್ತು ಕೃಷಿಯೇತರ ಭೂಮಿಯಲ್ಲಿ 88 ಲಕ್ಷ ಹಾಗೂ 52 ಲಕ್ಷಕ್ಕೂ ಹೆಚ್ಚು ಬಂಡವಾಳ ಹೂಡಿದ್ದಾರೆ. 2015 ರ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಧರ್ಮೇಂದ್ರ ಅವರು ಲೋನಾವಾಲಾದ ತಮ್ಮ ಫಾರ್ಮ್‌ಹೌಸ್ ಬಳಿ 12 ಎಕರೆ ಪ್ರದೇಶದಲ್ಲಿ 30-ಕಾಟೇಜ್ ರೆಸಾರ್ಟ್ ಅನ್ನು ನಿರ್ಮಿಸಲು ರೆಸ್ಟೋರೆಂಟ್ ಸರಪಳಿಯೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದಾರೆ.

ಪತ್ನಿ, ನಟಿ ಹಾಗೂ ರಾಜಕಾರಣಿ ಹೇಮಾ ಮಾಲಿನಿಯವರು ಪತಿ ಧರ್ಮೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅನೇಕ ವರ್ಷಗಳ ನನ್ನ ಪ್ರೀತಿಯ ಜೀವನ ಸಂಗಾತಿಗೆ, ತುಂಬಾ ಸಂತೋಷ, ಆರೋಗ್ಯಕರ ಮತ್ತು ಸಂತೋಷದಾಯಕ ಜನ್ಮದಿನದ ಶುಭಾಶಯಗಳು. ನಿಮ್ಮ ಹೃದಯವು ಹಿಡಿದಿಟ್ಟುಕೊಳ್ಳಬಹುದಾದ ಎಲ್ಲಾ ಪ್ರೀತಿಯನ್ನು ಹೊಂದಿರುವಿರಿ.  ನೀವು ನನಗೆ ತುಂಬಾ ವಿಶೇಷವಾಗಿದ್ದೀರಿ. ನಿಮಗೆ ಪ್ರೀತಿಯ ಜನ್ಮದಿನದ ಶುಭಾಶಯಗಳು ಎಂದು ಬರೆದಿದ್ದಾರೆ. ಇದೇ ವೇಳೆ ಮಗ ಸನ್ನಿ ಡಿಯೋಲ್​, ಇಶಾ ಡಿಯೋಲ್, ಅಹನಾ​ ಸೇರಿದಂತೆ ಸಿನಿ ಕ್ಷೇತ್ರದ ದಿಗ್ಗಜರು ಶುಭಾಶಯಗಳನ್ನು ತಿಳಿಸಿದ್ದಾರೆ. ನನ್ನ ಜೀವನದ ಮೊದಲ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಇಶಾ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಬದುಕಲ್ಲಿ ಇಷ್ಟು ಪುರುಷರಾ? ವಿವಾಹಿತ ನಟರ ಬಾಳಲ್ಲೂ ಲಗ್ಗೆ ಇಟ್ಟಿದ್ರಾ ದೇಸಿ ಗರ್ಲ್​?

Follow Us:
Download App:
  • android
  • ios