ಆಲಿಯಾ ರಣ್‌ಬೀರ್ ಮದುವೆಗೆ 28 ಅತಿಥಿಗಳಿಗೆ ಮಾತ್ರ ಆಹ್ವಾನ

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಗೆ ಕೇವಲ 28 ಅತಿಥಿಗಳು ಮಾತ್ರ ಹಾಜರಿರುತ್ತಾರೆ ಎಂದು ಆಲಿಯಾ ಸಹೋದರ ರಾಹುಲ್ ಭಟ್ ಬಹಿರಂಗಪಡಿಸಿದ್ದಾರೆ. 

Bollywood couple Alia Bhatt and Ranbir Kapoor wedding to have only 28 guests akb

ಮುಂಬೈ(ಏ.11): ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಗೆ ಕೇವಲ 28 ಅತಿಥಿಗಳು ಮಾತ್ರ ಹಾಜರಿರುತ್ತಾರೆ ಎಂದು ಆಲಿಯಾ ಸಹೋದರ ರಾಹುಲ್ ಭಟ್ ಬಹಿರಂಗಪಡಿಸಿದ್ದಾರೆ. ಅಲಿಯಾ ಭಟ್ ಅವರ ಸಹೋದರ ತಮ್ಮ ಸಹೋದರಿ ಮತ್ತು ರಣಬೀರ್ ಕಪೂರ್ ಅವರ ಮದುವೆಯಲ್ಲಿ ಭಾಗವಹಿಸುವ ಅತಿಥಿಗಳ ವಿವರವನ್ನು ಹಂಚಿಕೊಂಡಿದ್ದು, ಈ ವಿವಾಹದಲ್ಲಿ ಈ ಜೋಡಿಯ ಅತ್ಯಾಪ್ತ ಕೇವಲ 28 ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಈಗ ಬಾಲಿವುಡ್‌ನ ಟಾಕ್ ಅಪ್‌ ದ ಟೌನ್ ಆಗಿದ್ದು, ಊಟದ ಮೆನುವಿನಿಂದ ಮದುವೆಗೆ ಆಗಮಿಸುವ ಅತಿಥಿಗಳ ಪಟ್ಟಿಯವರೆಗೆ, ಜನರು ಎಲ್ಲವನ್ನೂ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಈಗ, ಆಲಿಯಾ ಅವರ ಸಹೋದರ ರಾಹುಲ್ ಭಟ್ ಅವರು ಇಂಡಿಯಾ ಟುಡೇಗೆ ನೀಡಿದ ಸಣ್ಣ ಸಂದರ್ಶನದಲ್ಲಿ ಮದುವೆಯ ಸಿದ್ಧತೆ ಬಗ್ಗೆ ತಿಳಿಸಿದ್ದಾರೆ.

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವಿವಾಹವು ಕುಟುಂಬದವರು ಮತ್ತು ಎರಡು ಕುಟುಂಬದ ಅತ್ಯಾಪ್ತರನ್ನು ಸೇರಿ ಒಟ್ಟು ಕೇವಲ 28 ಅತಿಥಿಗಳು ಮಾತ್ರ ಮದುವೆಗೆ ಹಾಜರಾಗುತ್ತಾರೆ ಮತ್ತು ಬಹುತೇಕ ಇವರೆಲ್ಲ ಕುಟುಂಬ ಸದಸ್ಯರಾಗಿರುತ್ತಾರೆ ಎಂದು ರಾಹುಲ್ ಭಟ್ ಹೇಳಿದ್ದಾರೆ. ಅವರು ಭಾರಿ ಭದ್ರತೆಯೊಂದಿಗೆ ಚೆಂಬೂರಿಗೆ ಬಸ್‌ನಲ್ಲಿ ಬರಲಿದ್ದಾರೆ. ಆಲಿಯಾ ಹಾಗೂ ರಣಬೀರ್ ವಿವಾಹವಾಗಲಿರುವ ಕಪೂರ್‌ ಕುಟುಂಬ ಒಡೆತನದ ಆರ್‌ಕೆ ಸ್ಟುಡಿಯೋ ಹೌಸ್ ಮುಂಬೈನ ಚೆಂಬೂರ್‌ನಲ್ಲಿದೆ.

ಮದ್ವೆ ಮೊದಲೇ ಹನಿಮೂನ್ ಮಡ್ತಾರಾ ಆಲಿಯಾ-ರಣಬೀರ್: ಗೋವಾಕ್ಕೆ ಹಾರಿದ ಜೋಡಿ

ರಾಹುಲ್ ಭಟ್(Rahul Bhatt), ಮಹೇಶ್ ಭಟ್ (Mahesh Bhatt) ಮತ್ತು ಕಿರಣ್ ಭಟ್ (Kiran Bhatt) ಅವರ ಮಗ, ಆದರೆ ಪೂಜಾ ಭಟ್ ಈತನಿಗೆ ಹಿರಿಯ ಸಹೋದರಿಯಾಗಬೇಕು. ಆಲಿಯಾ ಮಹೇಶ್ ಭಟ್ ಅವರ ಎರಡನೇ ಪತ್ನಿ ಸೋನಿ ರಜ್ದಾನ್ (Soni Razdan) ಅವರ ಮಗಳು. ಆದರೆ ಎರಡು ಕುಟುಂಬಗಳು ಅನೋನ್ಯವಾಗಿವೆ. ತಂಗಿಯ ಮದುವೆಯ ಬಗ್ಗೆ ರಾಹುಲ್ ತುಂಬಾ ಉತ್ಸುಕರಾಗಿದ್ದಾರೆ. ಆಲಿಯಾ ಸಹೋದರನಾಗಿದ್ದರೂ ರಾಹುಲ್ ಗ್ಲಾಮರ್ ಲೋಕದಲ್ಲಿ ಇಲ್ಲ. ರಾಹುಲ್‌ ಫಿಟ್ನೆಸ್ ಬೋಧಕರಾಗಿದ್ದು, 2010 ರಲ್ಲಿ ಸಲ್ಮಾನ್ ಖಾನ್-ಹೋಸ್ಟ್ ಮಾಡಿದ ಬಿಗ್ ಬಾಸ್ 4ರಲ್ಲಿ (Bigg Boss) ಭಾಗವಹಿಸಿದ್ದರು.

ಈ ಹಿಂದೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ರಾಜಸ್ತಾನದ ಉದಯಪುರದಲ್ಲಿ (Udaipur) ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ನಂತರ, ಮುಂಬೈನ (Mumbai) ಚೆಂಬೂರ್‌ನಲ್ಲಿರುವ (Chembur) ರಣಬೀರ್‌ ಕಪೂರ್ ಪೂರ್ವಜರ ಮನೆ ಆರ್‌ಕೆ ಹೌಸ್‌ನಲ್ಲಿ (RK house) ಈ ಜೋಡಿ ಹಸೆಮಣೆ ಏರಲಿದ್ದಾರೆ. ಆದರೆ ರಣಬೀರ್ ಮತ್ತು ಆಲಿಯಾ ಬಾಂದ್ರಾ (Bandra)ಮನೆ ವಾಸ್ತುದಲ್ಲಿ ವಿವಾಹವಾಗಲಿದ್ದಾರೆ ಎಂದು IndiaToday.in ನಂಬಲರ್ಹ ಮೂಲಗಳಿಂದ ತಿಳಿದುಕೊಂಡಿತ್ತು. ರಣಬೀರ್ ಮತ್ತು ಆಲಿಯಾ ( Alia Bhatt) ಮದುವೆಯನ್ನು ಎಲ್ಲಿ ನಡೆಸಬೇಕೆಂದು ಎಲ್ಲಾ ಲಾಜಿಸ್ಟಿಕ್ಸ್ ಅನ್ನು ನೋಡುತ್ತಿದ್ದಾರೆ. ಸದ್ಯಕ್ಕೆ ರಣಬೀರ್ ಬಾಂದ್ರಾ ಮನೆ ವಾಸ್ತುದಲ್ಲಿ ಮದುವೆ ನಡೆಸಲು ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿವೆ. ಎಲ್ಲಾ ವಿವಾಹ ಕಾರ್ಯಗಳು ವಾಸ್ತುವಿನಲ್ಲಿಯೇ ನಡೆಯಲಿವೆ. ಈ ಜೋಡಿ ತಮ್ಮ ಆಪ್ತರು ಮತ್ತು ಸ್ನೇಹಿತರನ್ನು ಮದುವೆಗೆ ಆಹ್ವಾನಿಸಿದ್ದಾರೆ.

ರಣಬೀರ್-ಆಲಿಯಾ ಮದುವೆಗೆ ನಿಗದಿ ಆಯ್ತು ಮುಹೂರ್ತ..! 

ಇಷ್ಟು ದಿನ ಗೌಪ್ಯವಾಗಿದ್ದ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ (Alia Bhatt) ಮದುವೆಗೆ ಈಗ ಮಹೂರ್ತ ಫಿಕ್ಸ್ ಆಗಿದೆ. ಸರಳ ಸಮಾರಂಭದ ಮೂಲಕ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ರಣಬೀರ್ ಆಲಿಯಾ ಭಟ್ ಮದುವೆ ಏಪ್ರಿಲ್‌ನಲ್ಲಿ ನಡೆಯಲಿದೆ ಅಂತ ಬಿಟೌನ್ ತುಂಬಾ ಗುಲ್ಲೆದ್ದಿದೆ. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾಗಿ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಸೆಟ್ಟೇರಿ ಹಲವು ವರ್ಷಗಳೇ ಕಳೆದಿವೆ. ಈ ಸಿನಿಮಾದ ಸೆಟ್‌ನಲ್ಲಿ ಇಬ್ಬರ ಮಧ್ಯೆ ಪ್ರೀತಿ ಅರಳಿತ್ತು ಅಂತ ಹೇಳಲಾಗುತ್ತಿದೆ. ಅಷ್ಟೆ ಅಲ್ಲ ಆಲಿಯಾಗೆ ಚಿಕ್ಕ ವಯಸ್ಸಿನಲ್ಲೇ ರಣಬೀರ್ ಮೇಲೆ ಕ್ರಶ್ ಆಗಿತ್ತಂತೆ. ಈಗ ಪ್ರೇಮದಲ್ಲಿ ಬಿದ್ದಿರೋ ಈ ಜೋಡಿ ಮದುವೆ ಆಗಲು  ಡಿಸೈಡ್ ಮಾಡಿದೆ. ಆದ್ರೆ ಈ ಜೋಡಿ ವಿವಾಹಕ್ಕೆ ಐಶಾ ಐಷಾರಾಮಿ ಹೋಟೆಲ್ ಅಥವಾ ವಿಲ್ಲಾವನ್ನ ಹುಡುಕಿಲ್ಲ. ಅವರ ಪೂರ್ವಜರ ಮನೆಯಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ. ವಿಶೇಷ ಎಂದರೆ, ಇದೇ ಮನೆಯಲ್ಲಿ ರಣಬೀರ್ ಕಪೂರ್ ತಂದೆ-ತಾಯಿ, ರಿಷಿ ಕಪೂರ್ ಹಾಗೂ ನೀತು ಕಪೂರ್ 1980ರ ಜನವರಿ 20ರಂದು ಮದುವೆ ಆಗಿದ್ರು.

Latest Videos
Follow Us:
Download App:
  • android
  • ios