ಬಾಲಿವುಡ್‌ನ ಫೇಮಸ್ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದ್ವೆಯಾಗ್ತಾರೆ ಎಂಬ ಸುದ್ದಿ ಇದೆ. ಆದರೆ ಇದುವರೆಗೂ ಜೋಡಿ ಈ ಬಗ್ಗೆ ಏನನ್ನೂ ದೃಢಪಡಿಸಿಲ್ಲ. ಆದ್ರೆ ಜೊತೆಗೇ ಸುತ್ತೋದು, ಅಕ್ಕಪಕ್ಕ ಮನೆ ಮಾಡೋ ಕೆಲಸ ನಡೀತಾ ಇದೆ. ಈ ನುಡವೆ ಹೇಳದೆ ಕೇಳದೆ ಗೋವಾಗೆ ಹೋಗಿದೆ ಈ ಜೋಡಿ.

ಇತ್ತೀಚೆಗಷ್ಟೇ ರಣಬೀರ್ ಮನೆ ಪಕ್ಕ ಮನೆ ಮಾಡಿದ ಆಲಿಯಾ ಭಟ್ ಸುದ್ದಿಯಾಗಿದ್ದರು. ಇದೀಗ ಮತ್ತೆ ತಮ್ಮ ಡಿಯರ್ ರಣಬೀರ್ ಜೊತೆ ಗೋವಾಗೆ ಹೊರಟಿದ್ದಾರೆ. ಇಬ್ಬರೂ ಏರ್‌ಪೋರ್ಟ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಸಖತ್ ಕ್ಯೂಟ್ ಕಾಣ್ತೀರ ಎಂದಿದ್ದಾರೆ ಫ್ಯಾನ್ಸ್.

ಆರ್‌ಆರ್‌ಆರ್‌ನಲ್ಲಿ ಅಲಿಯಾ;ನಮ್ಮ ಪ್ರೀತಿಯ ಸೀತೆಗೆ ಸ್ವಾಗತ ಎಂದ ರಾಜಮೌಳಿ!

ಆಲಿಯಾ ಮತ್ತು ರಣಬೀರ್ ಮಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೊಡಿ ಗೋವಾಗೆ ಟ್ರಿಪ್ ಹೋಗಿದ್ದಾರೆ ಎನ್ನಲಾಗಿದೆ. ಡೋಂಟ್ ಕಿಲ್ ಮಯ್ ವೈಬ್ ಎಂದು ಫಂಕಿಯಾಗಿ ಬರೆದಿದ್ದ ವೈಟ್ ಕ್ರಾಪ್‌ಟಾಪ್ ಧರಿಸಿದ್ದ ಆಲಿಯಾ, ಆಲಿವ್ ಗ್ರೀನ್ ಟ್ರೌಶರ್ ಧರಿಸಿದ್ದರು. ಮ್ಯಾಚಿಂಗ್ ಜಾಕೆಟ್, ಮಾಸ್ಕ್ ಕೂಡಾ ಧರಿಸಿದ್ದರು.

ರಣಬೀರ್ ಕಪೂರ್ ಬ್ಲೂ ಶರ್ಟ್, ಬ್ಲೂ ಜೀನ್ಸ್ ಧರಿಸಿದ್ದರು. ಬ್ಲೂ ಕ್ಯಾಪ್ ಕೂಡಾ ಇತ್ತು. ಇನ್ನೂ ಕೆಲವರು ಈ ಜೋಡಿ ಬ್ರಹ್ಮಾಸ್ತ್ರ ಸಿನಿಮಾ ಶೂಟ್‌ಗಾಗಿ ಹೋಗಿದ್ದಾರೆ ಎಂದೂ ಹೇಳಿದ್ದಾರೆ.

ರಣಬೀರ್ ವಾಸಿಸುವ ಬಿಲ್ಡಿಂಗ್‌ನಲ್ಲೇ ಹೊಸ ಅಪಾರ್ಟೆಂಟ್‌ ಕೊಂಡ ಆಲಿಯಾ!

ಇತ್ತೀಚೆಗಷ್ಟೇ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ತಮ್ಮ ಸೆಟ್‌ನಲ್ಲಿ ಆಲಿಯಾ ಅವರ ಜೊತೆಗೆ ಫೋಟೋ ಶೇರ್ ಮಾಡಿ RRR ಸಿನಿಮಾದಲ್ಲಿ ಆಲಿಯಾ ನಟಿಸುತ್ತಿರೋದನ್ನು ಕನ್‌ಫರ್ಮ್ ಮಾಡಿದ್ದರು.

 
 
 
 
 
 
 
 
 
 
 
 
 
 
 

A post shared by alia 💕 (@_aliaaabhatt)

2018ರಿಂದಲೇ ಡೇಟಿಂಗ್ ಮಾಡ್ತಿರೋ ಈ ಜೋಡಿ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಆಲಿಯಾ ಲಾಕ್‌ಡೌನ್ ಸಮಯದಲ್ಲಿ ರಣಬೀರ್ ಜೊತೆಗೇ ಮುಂಬೈನಲ್ಲಿದ್ದರು.