ಥಿಯೇಟರ್ ನಲ್ಲಿ ಈಗ್ಲೂ ಅಬ್ಬರಿಸ್ತಿರುವ ಧುರಂಧರ್ ಸಿನಿಮಾ ಯಾವಾಗ ಒಟಿಟಿಗೆ ಬರುತ್ತೆ? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಧುರಂಧರ್ ಸಿನಿಮಾ ಯಾವ ಪ್ಲಾಟ್ಫಾರ್ಮ್ ನಲ್ಲಿ, ಯಾವಾಗ ರಿಲೀಸ್ ಆಗ್ತಿದೆ ಗೊತ್ತಾ?

ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ಬಸ್ಟರ್ ಸಕ್ಸಸ್ ಕಂಡಿರುವ ಸಿನಿಮಾ ಧುರಂಧರ್. ಸಿನಿಮಾ ತೆರೆ ಕಂಡು ಎರಡು ವಾರವಾಗ್ತಿದ್ದಂತೆ ಬಹುತೇಕ ಸಿನಿಮಾಗಳು ಥಿಯೇಟರ್ ನಿಂದ ಹೊರ ಬೀಳುತ್ವೆ. ಆದ್ರೆ ಧುರಂಧರ್ ಈ ವಿಚಾರದಲ್ಲೂ ದಾಖಲೆ ಬರೆದಿದೆ. ಡಿಸೆಂಬರ್ 5, 2025ರಂದು ಸಿನಿಮಾ ತೆರೆಗೆ ಬಂದಿದೆ. ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಆರ್. ಮಾಧವನ್ ಅಭಿಮಾನಿಗಳು ಎರಡು ತಿಂಗಳಾಗ್ತಾ ಬಂದ್ರೂ ಉತ್ಸಾಹ ಕಳೆದುಕೊಂಡಿಲ್ಲ. ಈಗ್ಲೂ ಥಿಯೇಟರ್ ಗೆ ಬರ್ತಿದ್ದಾರೆ. ಈ ಮಧ್ಯೆ ಸಿನಿಮಾವನ್ನು ಮನೆಯಲ್ಲಿ ಕುಳಿತು ನೋಡಲು ಬಯಸಿದ್ದ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ.

ಒಟಿಟಿಯಲ್ಲಿ ಯಾವಾಗ ಬರುತ್ತೆ ಧುರಂಧರ್? 

ಆದಿತ್ಯ ಧರ್ ನಿರ್ದೇಶನದ ಈ ಚಿತ್ರ ಶೀಘ್ರದಲ್ಲೇ ಡಿಜಿಟಲ್ ಪ್ಲಾಟ್ಫಾರ್ಮ್ಗೆ ಬರಲಿದೆ. ಒಟಿಟಿ (OTT) ಪ್ಲೇ ವರದಿಯ ಪ್ರಕಾರ, ಧುರಂಧರ್ ಜನವರಿ 30 ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುವ ನಿರೀಕ್ಷೆಯಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ಬಿಡುಗಡೆಯಾಗಿ ಎರಡು ತಿಂಗಳೊಳಗೆ ಒಟಿಟಿಗೆ ಬರ್ತಿದೆ. ಆದ್ರೆ ಥಿಯೇಟರ್ ಗೆ ಸಿನಿ ಪ್ರಿಯರನ್ನು ಸೆಳೆಯುವ ಉದ್ದೇಶದಿಂದ ನಿರ್ಮಾಪಕರು ಡಿಜಿಟಲ್ ಬಿಡುಗಡೆ ವಿಳಂಬಮಾಡ್ತಿದ್ದಾರೆ ಎನ್ನಲಾಗ್ತಿದೆ.

ಅತ್ಯಂತ ದುಬಾರಿ ಮೊತ್ತಕ್ಕೆ ಧುರಂಧರ್ ನೆಟ್ ಫ್ಲಿಕ್ ಜೊತೆ ಒಪ್ಪಂದ ಮಾಡ್ಕೊಂಡಿದೆ ಎನ್ನುವ ಸುದ್ದಿ ಇದೆ. ವರದಿಗಳ ಪ್ರಕಾರ, ನೆಟ್ಫ್ಲಿಕ್ಸ್ ಧುರಂಧರ್ ಮತ್ತು ಅದರ ಮುಂಬರುವ ಧುರಂಧರ್ 2 ಎರಡೂ ಸಿನಿಮಾ ಒಟಿಟಿ ಹಕ್ಕನ್ನು ಪಡೆದಿದೆ. ಇದಕ್ಕೆ ಒಟ್ಟೂ 130 ಕೋಟಿ ಮೌಲ್ಯದ ಒಪ್ಪಂದ ಮಾಡ್ಕೊಂಡಿದೆ ಎನ್ನಲಾಗ್ತಿದೆ. ಈ ಒಪ್ಪಂದ ರಣವೀರ್ ಸಿಂಗ್ ವೃತ್ತಿಜೀವನದಲ್ಲಿ ದೊಡ್ಡ ಮೈಲಿಗಲ್ಲ.

Trisha Krishnan: ಪುನೀತ್‌ ರಾಜ್‌ಕುಮಾರ್ ಜೊತೆ 'ಪವರ್'ಫುಲ್ ರೊಮಾನ್ಸ್ ಮಾಡಿದ್ದ ನಟಿ ತ್ರಿಷಾ ಆಸ್ತಿ ಇಷ್ಟೊಂದಾ? ಓ ಮೈ ಗಾಡ್!

ಧುರಂಧರ್ ಕಥೆ ಏನು? 

ಧುರಂಧರ್ ಕಥೆಯು ಕರಾಚಿಯ ಮಾಫಿಯಾ ಜಾಲವನ್ನು ನುಸುಳುವ ಹಮ್ಜಾ ಅಲಿ ಮಝಾರಿ (ರಣವೀರ್ ಸಿಂಗ್) ಎಂಬ ನಿಗೂಢ ಭಾರತೀಯ ಏಜೆಂಟ್ ಸುತ್ತ ಸುತ್ತುತ್ತದೆ. ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಒಳಗಿನಿಂದ ಭಯೋತ್ಪಾದಕ ಚಟುವಟಿಕೆಗಳನ್ನು ಕಿತ್ತುಹಾಕುವುದು ಹಮ್ಜಾನ ಗುರಿ. ಈ ಸಿನಿಮಾ IC-814 ಅಪಹರಣ ಮತ್ತು 2001 ರ ಸಂಸತ್ತಿನ ದಾಳಿಯಂತಹ ನಿಜ ಜೀವನದ ಘಟನೆಗಳಿಂದ ಪ್ರೇರಿತವಾಗಿದೆ. ಧುರಂಧರ್ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು 2025 ರ ಅತಿದೊಡ್ಡ ಚಿತ್ರವಾಗಿ ಹೊರಹೊಮ್ಮಿದೆ. ಧುರಂಧರ್ ಭಾರತದಲ್ಲಿ ಸುಮಾರು 1000 ಕೋಟಿ ಗಳಿಸಿದೆ.

ಧುರಂಧರ್ ಸಕ್ಸಸ್ ನಂತ್ರ ಈಗ ಎಲ್ಲರ ಕಣ್ಣು ಚಿತ್ರದ ಮುಂದುವರಿದ ಭಾಗ ಧುರಂಧರ್ 2 ಮೇಲಿದೆ. ಧುರಂಧರ್ 2 ಇದೇ ಮಾರ್ಚ್ 19 ರಂದು ತೆರೆಗಪ್ಪಳಿಸಲಿದೆ. ಯಶ್ ಅಭಿನಯದ ಟಾಕ್ಸಿಕ್ : ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾ ಕೂಡ ಇದೇ ದಿನ ತೆರೆಗೆ ಬರಲಿದೆ.

ಸಲ್ಲು ಭಯಕ್ಕೆ ಸಿಂಗರ್ ಅರಿಜಿತ್ ವಿದಾಯ? ಹಾಡು ನಿಲ್ಲಿಸಿದ್ದೇಕೆ ಬಾಲಿವುಡ್ ಗಾನಕೋಗಿಲೆ?

ಧುರಂಧರ್ ಸಿನಿಮಾದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಭಯಾನಕ ಕ್ರಿಮಿನಲ್ ರೆಹಮಾನ್ ಡಕಾಯಿತನ ಪಾತ್ರದಲ್ಲಿ ಅಕ್ಷಯ್ ಖನ್ನಾ ಅಭಿನಯ ಸಿನಿಮಾದ ಪ್ಲಸ್ ಪಾಯಿಂಟ್. ಎಸ್ಪಿ ಚೌಧರಿ ಅಸ್ಲಾಂ ಪಾತ್ರದಲ್ಲಿ ಸಂಜಯ್ ದತ್, ಅಜಯ್ ಸನ್ಯಾಲ್ ಪಾತ್ರದಲ್ಲಿ ಆರ್. ಮಾಧವನ್ ಮತ್ತು ಮೇಜರ್ ಇಕ್ಬಾಲ್ ಪಾತ್ರದಲ್ಲಿ ಅರ್ಜುನ್ ರಾಂಪಾಲ್ ನಟಿಸಿದ್ದಾರೆ. ಯೆಲಿನಾ ಜಮಾಲಿ ಪಾತ್ರದಲ್ಲಿ ಸಾರಾ ಅಲಿ ಖಾನ್ ನಟಿಸಿದ್ದಾರೆ.