- Home
- Entertainment
- Cine World
- Trisha Krishnan: ಪುನೀತ್ ರಾಜ್‌ಕುಮಾರ್ ಜೊತೆ 'ಪವರ್'ಫುಲ್ ರೊಮಾನ್ಸ್ ಮಾಡಿದ್ದ ನಟಿ ತ್ರಿಷಾ ಆಸ್ತಿ ಇಷ್ಟೊಂದಾ? ಓ ಮೈ ಗಾಡ್!
Trisha Krishnan: ಪುನೀತ್ ರಾಜ್‌ಕುಮಾರ್ ಜೊತೆ 'ಪವರ್'ಫುಲ್ ರೊಮಾನ್ಸ್ ಮಾಡಿದ್ದ ನಟಿ ತ್ರಿಷಾ ಆಸ್ತಿ ಇಷ್ಟೊಂದಾ? ಓ ಮೈ ಗಾಡ್!
ತ್ರಿಶಾ ಅವರು ಗ್ಲಾಮರ್, ನಟನೆ ಜೊತೆ, ಗಳಿಕೆಯ ವಿಷಯದಲ್ಲಿಯೂ ಉನ್ನತ ಸ್ಥಾನದಲ್ಲೇ ಇದ್ದಾರೆ.. ಈ ಸೌಂದರ್ಯರಾಣಿಯ ಆಸ್ತಿಗಳು ಹಾಗೂ ಐಷಾರಾಮಿ ಜೀವನಶೈಲಿ, ಹಣಕಾಸು ಪ್ಲಾನ್ ಸೇರಿದಂತೆ ಹಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ ನೋಡಿ…

Trisha Krishnan: ನಟಿ ತ್ರಿಶಾ ಆಸ್ತಿ ಮೌಲ್ಯ!
ಭಾರತದ ನಾಯಕಿ ನಟಿಯರಲ್ಲಿ ದಕ್ಷಿಣ ಭಾರತದ ಸುಂದರಿ ತ್ರಿಷಾ ಕೃಷ್ಣನ್ ಹೆಸರು ಬಿಡಲು ಆಗೋದೇ ಇಲ್ಲ. ಗ್ಲಾಮರ್ ಮತ್ತು ನಟನೆಯಲ್ಲಿ ಮಾತ್ರವಲ್ಲದೆ ಗಳಿಕೆಯ ವಿಷಯದಲ್ಲೂ ತ್ರಿಶಾ ಕೃಷ್ಣನ್ (Trisha Krishnan) ಉನ್ನತ ಸ್ಥಾನದಲ್ಲಿದ್ದಾರೆ.. ಬ್ಯೂಟಿ ಕ್ವೀನ್ ತ್ರಿಶಾ ಅವರ ನಿವ್ವಳ ಮೌಲ್ಯ ಮತ್ತು ಐಷಾರಾಮಿ ಜೀವನಶೈಲಿಯ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ ನೋಡಿ..
ಕಳೆದ 2 ದಶಕಗಳ ಕಾಲ ದಕ್ಷಿಣ ಬೆಳ್ಳಿತೆರೆಯಲ್ಲಿ ಮಿಂಚಿರುಬ ನಾಯಕಿಯರಲ್ಲಿ ತ್ರಿಶಾ ಕೃಷ್ಣನ್ ಒಬ್ಬರು. ಅವರು ಈ ಅಪರೂಪದ ಸಾಧನೆಯನ್ನು ಬಹಳ ಸುಲಭವಾಗಿ ಸಾಧ್ಯ ಮಾಡಿಕೊಂಡಿದ್ದಾರೆ.. ಅನೇಕ ಹೊಸ ನಟಿಯರು ಬರುತ್ತಿದ್ದರೂ, ತ್ರಿಶಾ ಅವರಿಗಿರುವ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಅದೇ ಚಾರ್ಮ್, ಅದೇ ಚಾನ್ಸ್ ಈಗಲೂ ಇದೆ ತ್ರಿಷಾಗೆ!
ತ್ರಿಶಾ ಅವರು ಗ್ಲಾಮರ್ ಮತ್ತು ನಟನೆಯೊಂದಿಗೆ ಮಾತ್ರವಲ್ಲದೆ,ಅವರು ಗಳಿಕೆಯ ವಿಷಯದಲ್ಲಿಯೂ ಉನ್ನತ ಸ್ಥಾನದಲ್ಲೇ ಇತ್ತಿದ್ದಾರೆ.. ಈ ಸೌಂದರ್ಯರಾಣಿಯ ಆಸ್ತಿಗಳು ಹಾಗೂ ಐಷಾರಾಮಿ ಜೀವನಶೈಲಿಯ ಮೌಲ್ಯದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ ನೋಡಿ.
1999 ರಿಂದ ಚಲನಚಿತ್ರೋದ್ಯಮದಲ್ಲಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿರುವ ನಟಿ ತ್ರಿಶಾ, ಆಸ್ತಿಗಳ ವಿಷಯದಲ್ಲಿಯೂ ಸಹ ಸಖತ್ ಸ್ಮಾರ್ಟ್. ಸದ್ಯಕ್ಕೆ ತ್ರಿಷಾ ಅವರ ಒಟ್ಟು ಆಸ್ತಿ ಸುಮಾರು ರೂ. 130 ಕೋಟಿ ಎನ್ನಲಾಗಿದೆ. ಸಿನಿಮಾಗಳು ಮಾತ್ರವಲ್ಲ, ಸ್ಮಾರ್ಟ್ ಹೂಡಿಕೆಗಳು, ಸ್ಮಾರ್ಟ್ ಪ್ಲಾನ್‌ಗಳು ಅವರನ್ನು ಇಷ್ಟು ಶ್ರೀಮಂತರನ್ನಾಗಿ ಮಾಡಿವೆ.
ತ್ರಿಷಾಗೆ ಆದಾಯ ಎಲ್ಲಿಂದ ಬರುತ್ತದೆ? ತ್ರಿಶಾ ಅವರ ಪ್ರಮುಖ ಆದಾಯದ ಮೂಲ ಸಿನಿಮಾಗಳು. ವಿಶೇಷವಾಗಿ ಬ್ಲಾಕ್‌ಬಸ್ಟರ್ "ಪೊನ್ನಿಯಿನ್ ಸೆಲ್ವನ್" ನಂತರ, ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ. ಸುದ್ದಿ ಮೂಲಗಳ ಪ್ರಕಾರ, ತ್ರಿಶಾ ಪ್ರಸ್ತುತ ಪ್ರತಿ ಚಿತ್ರಕ್ಕೆ ಸುಮಾರು 5 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರೆ. ಚಲನಚಿತ್ರಗಳ ಜೊತೆಗೆ, ಬ್ರಾಂಡ್ ಜಾಹೀರಾತುಗಳು ಕೂಡ ಅವರ ಆದಾಯಕ್ಕೆ ಸಾಕಷ್ಟು ಕೊಡುಗೆ ನೀಡುತ್ತವೆ.
ತ್ರಿಶಾ ಅವರು ರಿಯಲ್ ಎಸ್ಟೇಟ್‌ನಲ್ಲಿನ ತನ್ನ ಬೃಹತ್ ಹೂಡಿಕೆಗಳಿಂದ ಗಳಿಸಿದ ಹಣವನ್ನು ಬುದ್ಧಿವಂತಿಕೆಯಿಂದ ಮರುಹೂಡಿಕೆ ಮಾಡುತ್ತಿದ್ದಾರೆ. ಅವರು ಹೈದರಾಬಾದ್‌ನಲ್ಲಿ ಒಂದು ಐಷಾರಾಮಿ ಬಂಗಲೆ ಹೊಂದಿದ್ದು, ಅದರ ಬೆಲೆ ಈಗ ಸುಮಾರು 6 ಕೋಟಿ ರೂ. ಜೊತೆಗೆ, ಚೆನ್ನೈನಲ್ಲಿ ವಾಸಿಸುವ ಮನೆ ಕೂಡ ತುಂಬಾ ದುಬಾರಿಯಾಗಿದೆ. ಅವರು ಈ ಆಸ್ತಿಯನ್ನು ಸುಮಾರು 10 ಕೋಟಿ ರೂಗೆ ಖರೀದಿಸಿದ್ದಾರೆ ಎನ್ನಲಾಗಿದೆ.
ನಟಿ ತ್ರಿಶಾ ಬಳಿ ಐಷಾರಾಮಿ ಕಾರುಗಳಿವೆ. ಮರ್ಸಿಡಿಸ್-ಬೆನ್ಜ್ ಎಸ್-ಕ್ಲಾಸ್, 75 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯು 5-ಸೀರೀಸ್, 60 ಲಕ್ಷ ರೂ. ಮೌಲ್ಯದ ರೇಂಜ್ ರೋವರ್ ಇವೊಕ್ ಹಾಗೂ 63 ಲಕ್ಷ ರೂ. ಮೌಲ್ಯದ ಮರ್ಸಿಡಿಸ್-ಬೆನ್ಜ್ ಇ-ಕ್ಲಾಸ್ ಸೇರಿವೆ. ಈ ಕಾರುಗಳು ಅವರ ಐಷಾರಾಮಿ ಜೀವನಶೈಲಿಯ ಶ್ರೇಣಿಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತವೆ.
ಸದ್ಯಕ್ಕೆ ನಟಿ ತ್ರಿಶಾ ಕೃಷ್ಣನ್ ಅವರು ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಎದುರು "ವಿಶ್ವಂಭರ" ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೂ, ಸೂರ್ಯ ಅವರೊಂದಿಗೆ ಆಕ್ಷನ್ ಥ್ರಿಲ್ಲರ್ "ಕರುಪ್ಪ" ಕೂಡ 2026 ರಲ್ಲಿ ಬಿಡುಗಡೆಯಾಗಲಿದೆ. ಮತ್ತೊಂದೆಡೆ, ಮೋಹನ್ ಲಾಲ್ ಜೊತೆಗೆ "ರಾಮ್" ಚಿತ್ರದಲ್ಲಿ ತ್ರಿಶಾ ನಟಿಸಲಿದ್ದಾರೆ. ಈ ಮೂಲಕ ತ್ರಿಷಾ ಅವರು ಇನ್ನಷ್ಟು ಮತ್ತಷ್ಟು ಶ್ರೀಮಂತರಾಗೋದು ಖಚಿತ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

