Asianet Suvarna News Asianet Suvarna News

ಲಂಡನ್‌ನಲ್ಲಿ ಸ್ನೇಹಿತೆಯರನ್ನು ಭೇಟಿಯಾದ ದೀಪಿಕಾ ಪಡುಕೋಣೆ; ಕ್ಯಾಮೆರಾಗೆ ಬಿಂದಾಸ್ ನಗೆ ಬೀರಿದ ಸುಂದರಿ!

ದೀಪಿಕಾ ಪಡುಕೋಣೆ ತಮ್ಮ ಗೆಳತಿಯರೊಟ್ಟಿಗೆ ನಲಿದ ಈ ಕ್ಷಣಗಳಲ್ಲಿ ವೈಟ್ ಹೂಡಿ (white hoodie), ಮ್ಯಾಚಿಂಗ್ ಜಾಗ್ಗಸ್ (matching joggers) ಮತ್ತು ಉದ್ದವಾದ ಬಹಳಷ್ಟು ಲೇಯರ್‌ಗಳು ಇರುವ ಹೊರಕೋಟು ಧರಿಸಿದ್ದಾರೆ. ಖುಷಿಯಿಂದ ನಗುತ್ತ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ.

Bollywood actress Deepika Padukone with her friends in London srb
Author
First Published Dec 2, 2023, 5:40 PM IST

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಲಂಡನ್‌ನಲ್ಲಿ ತನ್ನ ಸ್ನೇಹಿತೆಯರಿಗೆ ರೆಸ್ಟೋರೆಂಟ್ ಒಂದರಲ್ಲಿ ಪಾರ್ಟಿ ಕೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಹಲವು ವರ್ಷಗಳ ಬಳಿಕ ಅಲ್ಲಿ ಸೇರಿದ್ದ ಸ್ನೇಹಾ ರಾಮಚಂದರ್ ಹಾಗೂ ದಿವ್ಯಾ ನಾರಾಯಣನ್ ಜತೆ ನಟಿ ದೀಪಿಕಾ ನಕ್ಕುನಲಿದು ಸಂತೋಷ ಅನುಭವಿಸಿದ್ದಾರೆ. ಲಂಡನ್ ರೆಸ್ಟೋರೆಂಟ್‌ನಲ್ಲಿ ಒಟ್ಟಾಗಿ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಅವುಗಳನ್ನು ಹಂಚಿಕೊಂಡು ತಾವೆಷ್ಟೇ ಬೆಳೆದರೂ ಇನ್ನೂ ಸ್ನೇಹಿತೆಯನ್ನು ಮರೆತಿಲ್ಲ ಎಂಬುದನ್ನು ಜಗತ್ತಿನ ಮುಂದೆ ತೋರಿಸಿಕೊಂಡಿದ್ದಾರೆ ನಟಿ ದೀಪಿಕಾ ಪಡುಕೋಣೆ.  

ನಟಿ ದೀಪಿಕಾ ಪಡುಕೋಣೆ ಮದುವೆ ಬಳಿಕ ಕೂಡ ಬಹಳಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಚಾಲ್ತಿಯಲ್ಲಿದ್ದಾರೆ, ಈ ಮೊದಲು ಸಾಕಷ್ಟು ನಟಿಯರು, ಅದರಲ್ಲೂ ಪ್ರಮುಖವಾಗಿ ಬಾಲಿವುಡ್ ನಟಿಯರು ಮದುವೆ ಬಳಿಕ ನಟನೆ ನಿಲ್ಲಿಸಿದ ಉದಾಹರಣೆಗಳಿವೆ. ಆದರೆ ಇತ್ತೀಚೆಗೆ ಈ ಟ್ರೆಂಡ್ ಸ್ವಲ್ಪ ಬದಲಾಗಿದ್ದು, ಹಾಲಿವುಡ್ ನಟಿಯರಂತೆ ಬಾಲಿವುಡ್ ಹಾಗೂ ಇತರ ಭಾಷೆಗಳಲ್ಲಿಯೂ ನಟಿಯರೂ ಕೂಡ ತಮ್ಮ ಕೆರಿಯರ್ ಮುಂದುವರೆಸುತ್ತಾರೆ. ಅದರಂತೆ ನಟಿ ದೀಪಿಕಾ ಕೂಡ ಈಗಲೂ ಸಾಕಷ್ಟು ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. 

ಮೈಸೂರಿನಲ್ಲಿ ಪುಷ್ಪಾ 2 ಶೂಟಿಂಗ್ ಕ್ಯಾನ್ಸಲ್; ಇದಕ್ಕೆಲ್ಲಾ ಕಾರಣ ಅಲ್ಲು ಅರ್ಜುನ್!

ದೀಪಿಕಾ ಪಡುಕೋಣೆ ತಮ್ಮ ಗೆಳತಿಯರೊಟ್ಟಿಗೆ ನಲಿದ ಈ ಕ್ಷಣಗಳಲ್ಲಿ ವೈಟ್ ಹೂಡಿ (white hoodie), ಮ್ಯಾಚಿಂಗ್ ಜಾಗ್ಗಸ್ (matching joggers) ಮತ್ತು ಉದ್ದವಾದ ಬಹಳಷ್ಟು ಲೇಯರ್‌ಗಳು ಇರುವ ಹೊರಕೋಟು ಧರಿಸಿದ್ದಾರೆ. ಖುಷಿಯಿಂದ ನಗುತ್ತ ಕ್ಯಾಮೆರಾಗೆ ಫೋಸ್ ಕೊಟ್ಟಿರುವ ನಟಿ ದೀಪಿಕಾ ನಗುವನ್ನು ಕ್ಯಾಮೆರಾಗಳು ಸ್ವೀಕರಿಸಿ ಹೊರಜಗತ್ತಿಗೆ ಹರಿಬಿಟ್ಟಿವೆ. 

ಹಿರಣ್ಯ ಸಿನಿಮಾ ಟೀಸರ್ ಲಾಂಚ್; ಮಾಸ್ ಅವತಾರದಲ್ಲಿ ಅಬ್ಬರಿಸಿದ ನಟ ರಾಜವರ್ಧನ್ ಮೇಲೆ ಮೂಡಿದೆ ಭಾರೀ ನಿರೀಕ್ಷೆ!

ಒಟ್ಟಿನಲ್ಲಿ, ನಟಿ ದೀಪಿಕಾ ಪಡುಕೋಣೆ, ಭಾರತದಿಂದಾಚೆ, ವಿದೇಶದ ಲಂಡನ್‌ ಎಂಬಲ್ಲಿ ತನ್ನ ಗೆಳತಿಯರೊಟ್ಟಿಗೆ ಅಮೂಲ್ಯ ಕ್ಷಣಗಳನ್ನು ಕಳೆದಿದ್ದಾರೆ. ಅಂದಹಾಗೆ, ದೀಪಿಕಾ ಪಡುಕೋಣೆ ಸದ್ಯ 'ಕಲ್ಕಿ 2898 ಎಡಿ', ಫೈಟರ್' ಮತ್ತು 'ಸಿಂಗಮ್ ಅಗೇನ್' ಚಿತ್ರಗಳಿಗೆ ಸಹಿ ಹಾಕಿದ್ದು, ಶೆಡ್ಯೂಲ್ ಪ್ರಕಾರ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ದೀಪಿಕಾ ಪತಿ, ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಕೂಡ ಹಲವು ಚಿತ್ರಗಳಿಗೆ ಸಹಿ ಹಾಕಿದ್ದು, ಶೂಟಿಂಗ್‌ ಶೆಡ್ಯೂಲ್‌ಗಳಲ್ಲಿ ಬ್ಯುಸಿ ಆಗಿದ್ದಾರೆ. 

 

 

Follow Us:
Download App:
  • android
  • ios