Asianet Suvarna News Asianet Suvarna News

ಮೈಸೂರಿನಲ್ಲಿ ಪುಷ್ಪಾ 2 ಶೂಟಿಂಗ್ ಕ್ಯಾನ್ಸಲ್; ಇದಕ್ಕೆಲ್ಲಾ ಕಾರಣ ಅಲ್ಲು ಅರ್ಜುನ್!

ಪುಷ್ಪಾ 2 ಚಿತ್ರವನ್ನು ತೆರೆಗೆ ತರಲು ನಿರ್ದೇಶಕ ಸುಕುಮಾರ್ ಅವರು ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ. ಆದರೆ, ಕಥೆಗೆ ಸಂಬಂಧಪಟ್ಟು ಶೂಟಿಂಗ್ ಲೇಟ್ ಆಗುತ್ತಿದೆ ಎಂದಿದ್ದಾರೆ ಸುಕುಮಾರ್. ಜತೆಗೆ, ಇಂಡಿಯಾದ ಬ್ಯುಸಿಯೆಸ್ಟ್ ಹೀರೋಯಿನ್ ರಶ್ಮಿಕಾ ಮಂದಣ್ಣ ಅವರ ಕಾಲ್ ಶೀಟ್ ಕೂಡ ಮ್ಯಾಟರ್ ಆಗುತ್ತಿದೆ. 

Pushpa 2 shooting cancelled in mysore due to actor allu arjun back pain srb
Author
First Published Dec 2, 2023, 4:39 PM IST

ಟಾಲಿವುಡ್ ನಟ ಅಲ್ಲು ಅರ್ಜುನ್ ತೀವ್ರವಾದ ಬೆನ್ನು ನೋವಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಮೈಸೂರಿನಲ್ಲಿ 'ಪುಷ್ಪಾ 2' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ನಟ ಅಲ್ಲು ಅರ್ಜುನ್ ಅವರಿಗೆ ತೀವ್ರತರವಾದ ಬೆನ್ನು ನೋವು ಕಾಡುತ್ತಿದೆಯಂತೆ. ಆದರೂ ತಾವು ಶೂಟಿಂಗ್‌ಗೆ ತೊಂದರೆ ಆಗದಂತೆ ನಟಿಸುವುದಾಗಿ ನಟ ಅಲ್ಲು ಅರ್ಜುನ್ ಹೇಳಿದ್ದರಂತೆ. ಆದರೆ ಪುಷ್ಟ ನಿರ್ದೇಶಕರಾದ ಸುಕುಮಾರ್ ಅವರು ನಟ ಅಲ್ಲು ಅರ್ಜುನ್‌ ಅವರಿಗೆ ಎರಡು ವಾರಗಳ ರೆಸ್ಟ್ ತೆಗೆದುಕೊಳ್ಳಲು ಸೂಚಿಸಿದ್ದಾರಂತೆ. ಅದರಂತೆ, ಅಲ್ಲು ಅರ್ಜುನ್ ಶೂಟಿಂಗ್ ಸ್ಪಾಟ್‌ನಿಂದ ಸೀದಾ ಆಸ್ಪತ್ರೆಗೆ ತೆರಳಿದ್ದಾರೆ ಎನ್ನಲಾಗಿದೆ. 

ಈ ಮೊದಲು ಬಿಡುಗಡೆಯಾಗಿದ್ದ ಅಲ್ಲು ಅರ್ಜುನ್ ನಟನೆ, ಸುಕುಮಾರ್ ನಿರ್ದೇಶನದ 'ಪುಷ್ಪಾ' ಚಿತ್ರವು ಪ್ಯಾನ್ ಇಂಡಿಯಾ ಆಗಿ ಸೂಪರ್ ಹಿಟ್ ದಾಖಲಿಸಿತ್ತು. ಆ ಚಿತ್ರದಲ್ಲಿ ಅಲ್ಲು ಅರ್ಜುನ್ ಜೋಡಿಯಾಗಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ನಟಿ ಸಮಂತಾ ಅವರು ಮಾಡಿದ್ದ ಒಂದು ಡಾನ್ಸ್ ಸೂಪರ್ ಹಿಟ್ ಆಗಿತ್ತು. ಒಟ್ಟಿನಲ್ಲಿ ಹೇಳಬೇಕೆಂದರೆ ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾ ಇಡೀ ಭಾರತದಲ್ಲಿ ಸಖತ್ ಹವಾ ಸೃಷ್ಟಿಸಿತ್ತು. ಅದೇ ಸೀನಿಮಾದ ಸೀಕ್ವೆಲ್ ಆಗಿರುವ 'ಪುಷ್ಪಾ 2' ಚಿತ್ರವು ತೆರೆಗೆ ಬರಲು ಸಾಕಷ್ಟು ವೇಳೆ ತೆಗೆದುಕೊಳ್ಳುತ್ತಿದೆ ಎನ್ನಬಹುದು. 

ಬಿಗ್ ಬಾಸ್‌ ಎಲಿಮಿನೇಶನ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ; ಯಾರಾಗಬಹುದು ಔಟ್!

ಪುಷ್ಪಾ 2 ಚಿತ್ರವನ್ನು ತೆರೆಗೆ ತರಲು ನಿರ್ದೇಶಕ ಸುಕುಮಾರ್ ಅವರು ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ. ಆದರೆ, ಕಥೆಗೆ ಸಂಬಂಧಪಟ್ಟು ಶೂಟಿಂಗ್ ಲೇಟ್ ಆಗುತ್ತಿದೆ ಎಂದಿದ್ದಾರೆ ಸುಕುಮಾರ್. ಜತೆಗೆ, ಇಂಡಿಯಾದ ಬ್ಯುಸಿಯೆಸ್ಟ್ ಹೀರೋಯಿನ್ ರಶ್ಮಿಕಾ ಮಂದಣ್ಣ ಅವರ ಕಾಲ್ ಶೀಟ್ ಕೂಡ ಮ್ಯಾಟರ್ ಆಗುತ್ತಿದೆ. ಎಲ್ಲ ಕಾರಣಗಳೂ ಸೇರಿ ಪುಷ್ಪಾ 2 ಚಿತ್ರ ತೆರೆಗೆ ಬರಲು ತಡವಾಗುತ್ತಿತ್ತು. ಈಗ , ನಾಯಕ ಅಲ್ಲು ಅರ್ಜುನ್ ಅವರಿಗೆ ಬೆನ್ನು ನೋವು ಕಾಡುತ್ತಿದೆ. ಸಹಜವಾಗಿಯೇ ಚಿತ್ರದ ಶೂಟಿಂಗ್ ಇನ್ನಷ್ಟು ತಡವಾಗುತ್ತದೆ. 

ಸ್ಟಾರ್ ಸುವರ್ಣ 'ಜಾಕ್‌ಪಾಟ್'ಕಾಂಟೆಸ್ಟ್ ನಲ್ಲಿ ಭಾರೀ ಬಹುಮಾನ ಗೆದ್ದ ಹಾಸನದ ಮಹಿಳೆ

ಸದ್ಯದ ಪ್ಲಾನ್ ಪ್ರಕಾರ, ಎಲ್ಲವೂ ಅಂದುಕೊಂಡಂತೆ ನಡೆದರೆ 'ಪುಷ್ಪಾ 2' ಚಿತ್ರವನ್ನು 2024ರ ಆಗಷ್ಟ್ 15 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ. ಪುಷ್ಪಾ ಚಿತ್ರದ ಮೂಲಕ ನಟ ಅಲ್ಲು ಅರ್ಜುನ್ ಅವರು ನ್ಯಾಷನಲ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಮಾತ್ರವಲ್ಲ, ಪುಷ್ಪಾ ಚಿತ್ರದ ನಟನೆಗೆ ಅವರಿಗೆ ನ್ಯಾಷನಲ್ ಅವಾರ್ಡ್‌ ಕೂಡ ದೊರಕಿದೆ. ಒಟ್ಟಿನಲ್ಲಿ, ಪುಷ್ಪಾ 2 ಚಿತ್ರದ ಬಿಡುಗಡೆಯನ್ನೇ ಅಲ್ಲು ಅರ್ಜುನ್ ಫ್ಯಾನ್ಸ್‌ಗಳು ಕಾಯುತ್ತಿದ್ದಾರೆ. 

Follow Us:
Download App:
  • android
  • ios