Asianet Suvarna News Asianet Suvarna News

ಸೌಂದರ್ಯದ ಬಗ್ಗೆ 'ಬ್ಯೂಟಿ ಕ್ವೀನ್' ಪಾಠ; ಕತ್ರಿನಾ ಕೈಫ್ ಮಾತು ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ!

ಯಾವುದೇ ಮಹಿಳೆ ಇನ್ನೊಬ್ಬರ ಸೌಂದರ್ಯವನ್ನು ನೋಡಿ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಆರೋಗ್ಯ ಮತ್ತು ಚೈತನ್ಯವಷ್ಟೇ ಜೀವನಕ್ಕೆ ಅಗತ್ಯ ಎಂಬುದು ನನ್ನ ಭಾವನೆ. 

Beauty is not in make up says Bollywood actress Katrina Kaif srb
Author
First Published Dec 16, 2023, 1:42 PM IST

ಬಾಲಿವುಡ್ ನಟಿ ಕತ್ರಿನಾ ಕೈಫ್ ಬ್ಯೂಟಿ ಬೊಂಬೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅದೇ ಕತ್ರಿನಾ ಬ್ಯೂಟಿ ಬಗ್ಗೆ ಏನು ಹೇಳಿದ್ದಾರೆ ಗೊತ್ತೇ? ಈ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿರುವ ಕತ್ರಿನಾ ಕೈಫ್ 'ಬ್ಯೂಟಿ ಎಂಬುದು ಮೇಕಪ್‌ನಿಂದ ಬರುವಂಥದ್ದಲ್ಲ. ಈಗಾಗಲೇ ಇರುವ ಸೌಂದರ್ಯವನ್ನು ಮೇಕಪ್ ಮೂಲಕ ಇನ್ನೂ ಹೆಚ್ಚಾಗಿ ಕಾಣಿಸುವಂತೆ ಮಾಡಬಹುದಷ್ಟೇ. ಇಲ್ಲದಿರುವ ಸೌಂದರ್ಯವನ್ನು ಮೇಕಪ್ ಮಾಡಿ ತರಿಸಲು ಅಸಾಧ್ಯ. ಅಷ್ಟಕ್ಕೂ ಬ್ಯೂಟಿ ಎಂಬುದು ಯಾರೋ ಒಬ್ಬರು ಇಬ್ಬರಲ್ಲಿ ಇರುವುದಲ್ಲ. 

ಎಲ್ಲ ಮಹಿಳೆಯರೂ ಅವರದೇ ಆದ ರೀತಿಯಲ್ಲಿ ಸೌಂದರ್ಯವತಿಯರೇ ಆಗಿರುತ್ತಾರೆ. ಅವರವರ ಸೌಂದರ್ಯ ಅವರವರದು. ಯಾರನ್ನೋ ಯಾರಿಗೋ ಹೋಲಿಕೆ ಮಾಡಿ ನೋಡುವಂಥದ್ದು ಏನೂ ಇಲ್ಲ. ಮೇಕಪ್ ತೆಗೆದು ಇದ್ದಾಗ ನಮ್ಮ ಚರ್ಮ ಎಷ್ಟು ಹೊಳಪಾಗಿರುತ್ತದೆಯೋ ಅದನ್ನೇ ನಿಜವಾದ ಸೌಂದರ್ಯ ಎನ್ನಬಹುದು. ಅದನ್ನೇ ನಾವು ಕಾಪಾಡಿಕೊಳ್ಳಬೇಕು. ಮೇಕಪ್ ಮಾಡಿಕೊಳ್ಳುವುದು ಅವರವರ ವೃತ್ತಿಯ ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ಆದರೆ, ಯಾವತ್ತೂ ಇರುವ ಸ್ಕಿನ್ ಚೆನ್ನಾಗಿ ಇರುವಂತೆ ನೋಡಿಕೊಳ್ಳಬೇಕು. 

ವಾರದ ಕತೆ ಕಿಚ್ಚನ ಜತೆ ಮತ್ತೆ ಬಂತು; ಯಾರಿಗೆ ಗೇಟ್ ಪಾಸ್, ಯಾರು ಆಗಲಿದ್ದಾರೆ ಪಾಸ್!

ನನ್ನ ಪ್ರಕಾರ ಯಾವುದೇ ಮಹಿಳೆ ಇನ್ನೊಬ್ಬರ ಸೌಂದರ್ಯವನ್ನು ನೋಡಿ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಆರೋಗ್ಯ ಮತ್ತು ಚೈತನ್ಯವಷ್ಟೇ ಜೀವನಕ್ಕೆ ಅಗತ್ಯ ಎಂಬುದು ನನ್ನ ಭಾವನೆ. ಎಲ್ಲರೂ ಒಂದೇ ರೀತಿ ಇರುವುದಿಲ್ಲ, ಇರಬೇಕಾಗಿಯೂ ಇಲ್ಲ. ಮಾಡೆಲಿಂಗ್‌ಗೆ ಬೇಕಾದ ಸೌಂದರ್ಯವೇ ಬೇರೆ, ನಟನೆಗೆ ಬೇಕಾದ ಬ್ಯೂಟಿಯೇ ಬೇರೆ. ಸೌಂದರ್ಯವೆಂಬುದು ಒಂದೇ ಮಾನದಂಡದಿಂದ ಅಳೆಯಬೇಕಾದ ಅಗತ್ಯವಲ್ಲ. ಮುಖದಲ್ಲಿ ಸ್ಮೈಲ್ ಇದ್ದರೆ ನೋಡುವವರಿಗೆ ಅದೇ ಹೆಚ್ಚಿನ ಸೌಂದರ್ಯದ ಅನುಭವ ಕೊಡುತ್ತದೆ. 

ರಶ್ಮಿಕಾ ಮಂದಣ್ಣ 'ಅನಿಮಲ್‌'ನಲ್ಲಿ ಮಿಂಚಿದ ತೃಪ್ತಿ ಧಿಮ್ರಿ; ಹಾಟ್ ಅವತಾರಕ್ಕೆ ಭಾರತ ಫಿದಾ!

ಒಟ್ಟಿನಲ್ಲಿ, ಕತ್ರಿನಾರನ್ನು ಜಗತ್ತು ಸೌಂದರ್ಯ ದೇವತೆ ಎಂಬಂತೆ ಆರಾಧಿಸುತ್ತದೆ. ಆದರೆ, ಸ್ವತಃ ಕತ್ರಿನಾ ಕೈಫ್ ಸೌಂದರ್ಯದ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಹೊಂದಿದ್ದಾರೆ ಎಂಬುದು ಅಚ್ಚರಿಯಾದರೂ ಸತ್ಯ. ಕಳೆದ ತಿಂಗಳು ಬಿಡುಗಡೆಯಾದ 'ಟೈಗರ್ 3' ಚಿತ್ರದ ಮೂಲಕ ನಟಿ ಕತ್ರಿನಾ ಕೈಫ್ ಇತ್ತೀಚೆಗೆ ಸಖತ್ ಟ್ರೆಂಡ್‌ನಲ್ಲಿ ಇದ್ದರು. ಆದರೆ, ಟೈಗರ್ 3 ಚಿತ್ರವು ನಿರೀಕ್ಷೆಯಂತೆ ಓಡಲಿಲ್ಲ. ಟೈಗರ್ 3 ಚಿತ್ರವು ಹಿಟ್ ದಾಖಲಿಸದೇ ಇರುವ ಕಾರಣಕ್ಕೆ ಕತ್ರಿನಾ ಫ್ಯಾನ್ಸ್ ತಮ್ಮ ನೆಚ್ಚಿನ ನಟಿಯ ಮುಂಬರವ ಚಿತ್ರದ ಬಗ್ಗೆ ಕಾದು ಕುಳಿತಿದ್ದಾರೆ ಎನ್ನಬಹುದು. 

Follow Us:
Download App:
  • android
  • ios