Asianet Suvarna News Asianet Suvarna News

ರಶ್ಮಿಕಾ ಮಂದಣ್ಣ 'ಅನಿಮಲ್‌'ನಲ್ಲಿ ಮಿಂಚಿದ ತೃಪ್ತಿ ಧಿಮ್ರಿ; ಹಾಟ್ ಅವತಾರಕ್ಕೆ ಭಾರತ ಫಿದಾ!

ಆಗಸ್ಟ್ 7,2023ರಂದು ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಸ್ಯಾಂಡಲ್‌ವುಡ್ ಸೇರಿದಂತೆ ಇಡೀ ಕರ್ನಾಟಕ ಶೋಕಸಾಗರದಲ್ಲಿ ಮುಳುಗಿತು.  

Sandalwood some important events from july 2023 to December 2023 srb
Author
First Published Dec 15, 2023, 6:47 PM IST

ಈ ವರ್ಷದ ಜನವರಿಯಿಂದ (ಜನವರಿ 2023) ಜೂನ್ ವರೆಗಿನ ಅವಧಿಯಲ್ಲಿ ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯಲ್ಲಿ ಯಾವುದೇ ಸಿನಿಮಾಗಳು ಹೇಳಿಕೊಳ್ಳುವಂಥ ಸಕ್ಸಸ್ ಪಡೆದಿಲ್ಲ. ಅಲ್ಲಿಗೆ ಅರ್ಧ ವರ್ಷ ಮುಗಿದೇ ಹೋಗಿದೆ. ಜುಲೈದಿಂದ ಡಿಸೆಂಬರ್ 2023ರ ಅವಧಿಯಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಏನೇನು ಘಟನೆಗಳು ಆಗಿವೆ. ಈ ಬಗೆಗಿನ ಒಂದು ಪಕ್ಷಿ ನೋಟ ಇಲ್ಲಿದೆ. ಹಳೆಯ ಘಟನೆಗಳು ಮರುನೆನಪು ಮಾಡಿಕೊಳ್ಳುವ ಒಂದು ಸದಾವಕಾಶ ಈ ಮೂಲಕ ತೆರೆದುಕೊಂಡಿದೆ.

ಜುಲೈ 21 ರಂದು ಬಿಡುಗಡೆಯಾದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರವು ಸ್ವಲ್ಪ ಸೌಂಡ್ ಮಾಡಿದೆ ಎನ್ನಬಹುದು. ಸ್ಟಾರ್ ಸಿನಿಮಾಗಳ ಸದ್ದು, ಕಲೆಕ್ಷನ್ ಮಾಡಲು ಅಸಾಧ್ಯವಾದರೂ ಈ ಚಿತ್ರವು ಹೊಸಬರ ಸಿನಿಮಾ ಮಾಡಬಹುದಾದ ಕಮಾಲ್ ಮಾಡಿದೆ. ಹಾಕಿದ ಬಂಡವಾಳಕ್ಕಿಂತ ಮೋಸವಾಗದಂತೆ ಕಲೆಕ್ಷನ್ ಮಾಡುವ ಮೂಲಕ ಚಿತ್ರವು ಹಿಟ್ ದಾಖಲಿಸಿದೆಎನ್ನಬಹುದು. ರಾಜ್ ಬಿ ಶೆಟ್ಟಿ ನಟನೆ-ನಿರ್ದೇಶನದ ಟೋಬಿ ಚಿತ್ರವು ತುಂಬಾ ನಿರೀಕ್ಷೆ ಹುಟ್ಟಿ ಹಾಕಿತ್ತು. ಆದರೆ, ಚಿತ್ರ ನಿರೀಕ್ಷೆ ತಲುಪಲು ವಿಫಲವಾಗಿ ಶೆಟ್ಟರ ಫ್ಯಾನ್ಸ್‌ಗಳಿಗೆ ನಿರಾಸೆ ಉಂಟುಮಾಡಿದೆ ಎನ್ನಬಹುದು.

ರಾಜಮೌಳಿ ನಿರ್ದೇಶನ, ಜೂನಿಯರ್ ಎಂಟಿಆರ್ ಹಾಗೂ ರಾಮ್‌ ಚರಣ್ ಅಭಿನಯದ ಆರ್‌ಆರ್‌ಆರ್ ಸಿನಿಮಾಕ್ಕೆ ಆಸ್ಕರ್ ಅವಾರ್ಡ್‌ ಬಂದಿದೆ. ಈ ಮೂಲಕ, ಭಾರತ ಮತ್ತು ಮುಖ್ಯವಾಗಿ ಸೌತ್ ಇಂಡಿಯಾ ಹೆಮ್ಮೆ ಪಟ್ಟುಕೊಂಡಿದೆ. RRR ಸಿನಿಮಾದ ಒಂದು ಹಾಡಿಗೆ ಪ್ರಶಸ್ತಿ ಪಡೆಯುವ ಮೂಲಕ ರಾಜಮೌಳಿ ನೇತೃತ್ವದ ಆರ್‌ಆರ್‌ಆರ್ ಟೀಮ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆ ಪಡುವಂತೆ ಮಾಡಿದೆ. 

ಆಸ್ಕರ್ ಪ್ರಶಸ್ತಿ ಸೆಲೆಕ್ಷನ್ ಕಮಿಟಿಗೆ ಜೂನಿಯರ್ ಎನ್‌ಟಿಆರ್‌ ಹಾಗೂ ರಾಮ್ ಚರಣ್ ಎಂಟ್ರಿ ಕೊಟ್ಟಿದ್ದಾರೆ. ಆಸ್ಕರ್ ಪ್ರಶಸ್ತಿ ತಂಡಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗಲಿದ್ದು, ದಿ ಅಕಾಡೆಮಿ ಮೋಷನ್ ಪಿಕ್ಚರ್ಸ್ & ಆರ್ಟ್ಸ್‌ ಮುಂದೆ ಸೇರಲಿರುವ 398 ಹೊಸ ಸದಸ್ಯರ ಲಿಸ್ಟ್ ರಿಲೀಸ್ ಆಗಿದೆ. ಆ ಲಿಸ್ಟ್‌ನಲಿ ಭಾರತೀಯ ಚಿತ್ರರಂಗದಿಂದ ಜೂನಿಯರ್ ಎನ್‌ಟಿಆರ್‌ ಹಾಗೂ ರಾಮ್ ಚರಣ್, ನಿರ್ಮಾಪಕ ಕರಣ್ ಜೋಹರ್, ಸಿದ್ಧಾರ್ಥ್ ರಾಯ್ ಕಪೂರ್, ನಿರ್ದೇಶಕ ಮಣಿರತ್ನಂ, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ನಿರ್ದೇಶಕ ಕೆ.ಕೆ. ಸೆಂಥಿಲ್ ಕುಮಾರಂದ್ ಹೆಸರು ಲಿಸ್ಟ್‌ನಲ್ಲಿದೆ. ಈ ಮೂಲಕ ಭಾರತಕ್ಕೆ ಗರಿ ಮೂಡಿದೆ. 

ಜುಲೈ 4 ರಂದು ಬಾಲಿವುಡ್ ಸ್ಟಾರ್ ಶಾರುಖ್ ಖಾನ್‌ಗೆ ಅಪಘಾತ: ಮೂಗಿಗೆ ಪೆಟ್ಟು, ತೀವ್ರ ರಕ್ತಸ್ರಾವವಾಗಿತ್ತು. ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ಹಿಂತಿರುಗಿದ್ದಾರೆ ನಟ ಶಾರುಖ್ ಖಾನ್. ಇತ್ತ ಸ್ಯಾಂಡಲ್‌ವುಡ್‌ನಲ್ಲಿ ಕನ್ನಡ ಚಿತ್ರಗಳ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ july 5 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಜುಲೈ 8 ರಂದು Karnataka Budget 2023ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಖಾಸಗಿ ಸಹಭಾಗಿತ್ವದಲ್ಲಿ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸಲಾಗುವು ಎಂದು ಘೋಷಣೆ ಮಾಡಿದ್ದಾರೆ. 

ಸ್ಯಾಂಡಲ್‌ವುಡ್‌ ಜಗತ್ತಿನಲ್ಲಿ ಒಂದು ಅಹಿತಕರ ಘಟನೆ ನಡೆಯಿತು. ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಮ್​​ ಎನ್ ಕುಮಾರ್​ ಅವರ ಹಣಕಾಸಿನ ವಿವಾದ ಕೋರ್ಟ್ ಮೆಟ್ಟಿಲೇರಿ, ಆಮೇಲೆ ಮಾತುಕತೆ ಹಾಗೂ ಕೋರ್ಟ್‌ ಮಧ್ಯೆ ಪ್ರವೇಶದ ಮೂಲಕ ಬಗೆ ಹರಿದಿದೆ. ಜುಲೈ 12 ರಂದು ನಟ ಶಿವರಾಜ್‌ಕುಮಾರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 

ಸಂಚಾರಿ ನಿಯಮ ಉಲ್ಲಂಘಿಸಿದ ನಟ ದಳಪತಿ ವಿಜಯ್‌ಗೆ ಬಿತ್ತು ದಂಡ. ದಳಪತಿ ವಿಜಯ್ ತಮ್ಮ ಪಕ್ಷದ ಸದಸ್ಯರನ್ನು ಭೇಟಿ ಮಾಡಿ ಮನೆಗೆ  ಹಿಂದಿರುಗುವಾಗ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಟ್ರಾಫಿಕ್ ಪೊಲೀಸರು ವಿಜಯ್‌ಗೆ ದಂಡ ವಿಧಿಸಿದ್ದಾರೆ ಎಂದು ವರದಿಯಾಗಿದೆ. ಜುಲೈ, 15, ಶವವಾಗಿ ಪತ್ತೆಯಾದ ನಟ-ನಿರ್ದೇಶಕ ರವೀಂದ್ರ ಮಹಾಜನಿ ಮರಾಠಿ ಸಿನಿಮಾರಂಗದ ಖ್ಯಾತ ನಟ, ನಿರ್ದೇಶಕ ರವೀಂದ್ರ ಮಹಾಜನಿ ಶವವಾಗಿ ಪತ್ತೆಯಾಗಿದ್ದಾರೆ. ಪುಣೆಯ ಪುಣೆಯ ತಾಲೇಗಾಂವ್ ನಲ್ಲಿರುವ Xrbia ಸೊಸೈಟಿಯ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. 

ಜುಲೈ 16 ಮೊದಲ ಸಂಭಾವನೆ ಚಾರಿಟಿಗೆ ನೀಡಿದ ಮಹೇಶ್ ಬಾಬು ಪುತ್ರಿ ಸಿತಾರಾ: ಫ್ಯಾನ್ಸ್ ಮೆಚ್ಚುಗೆ ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಪುತ್ರಿ ಸಿತಾರಾ ತನ್ನ ಮೊದಲ ಸಂಭಾವನೆಯನ್ನು ಚಾರಿಗೆ ದೇಣಿಗೆ ನೀಡಿದ್ದಾರೆ. ಸಿತಾರಾ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಜುಲೈ 16, ಸಿಎಂ ಸಿದ್ದರಾಮಯ್ಯ 'ಆಷಾಢ ಅಶುಭ' ಆಚರಣೆ: ನಟ ಅಹಿಂಸಾ ಚೇತನ್‌ ಕಿಡಿ. ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದ ನಾಯಕ ನಟ ಅಹಿಂಸಾ ಚೇತನ್‌ ಈಗ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ. ರಮ್ಯಾ ಲೇಡಿ ಸೂಪರ್‌ಸ್ಟಾರ್, ಅವರ ಮೇಲೆ ಬೇಜಾರಿಲ್ಲ: 'ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ' ನಿರ್ದೇಶಕ ನಿತಿನ್. 

ಬ್ಯಾನರ್ ಕಟ್ಟುವಾಗ ಅವಘಡ; ನಟ ಸೂರ್ಯ ಅಭಿಮಾನಿಗಳ ಧಾರುಣ ಸಾವು ತಮಿಳು ನಟ ಸೂರ್ಯ ಹುಟ್ಟುಹಬ್ಬ ದಿನ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಆಂಧ್ರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಆಗಸ್ಟ್ -4, ಖ್ಯಾತ ನಟನಿಗೆ ಇದೆಂಥ ಸಾವು? ಭಿಕ್ಷೆ ಬೇಡುತ್ತ ಬೀದಿಯಲ್ಲಿಯೇ ಹೆಣವಾದ ಮೋಹನ್! ಕಮಲ್​ ಹಾಸನ್​ ಸೇರಿದಂತೆ ಹಲವು ನಾಯಕರ ಜೊತೆ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದ ಕಾಲವುಡ್​ ನಟ ಮೋಹನ್​ ಅವರು ಭಿಕ್ಷೆ ಬೇಡುತ್ತಾ ಬೀದಿ ಬದಿ ಹೆಣವಾಗಿ ಸಿಕ್ಕಿದ್ದಾರೆ. 

ಆಗಸ್ಟ್-7, ದಯಾಮರಣ ಕೋರಿ ಪ್ರಾಣ ಬಿಟ್ಟ ಖ್ಯಾತ ನಟಿ! ಕ್ಯಾನ್ಸರ್​ ಚಿಕಿತ್ಸೆಗೆ ಹಣವಿಲ್ಲದೇ ಸಿಂಧು ದುರಂತ ಸಾವು! ಜೀವನದುದ್ದಕ್ಕೂ ಕಣ್ಣೀರಿನಲ್ಲಿಯೇ ಕೈತೊಳೆದ ತಮಿಳು ನಟಿ ಸಿಂಧು ಸ್ತನ ಕ್ಯಾನ್ಸರ್​ ಚಿಕಿತ್ಸೆಗೆ ಹಣಕ್ಕೆ ಪರದಾಡಿ ಕೊನೆಯುಸಿರೆಳೆದಿದ್ದಾರೆ. 

ಆಗಸ್ಟ್ 7,2023ರಂದು ಸ್ಪಂದನಾ ಸಾವು; ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಸ್ಯಾಂಡಲ್‌ವುಡ್ ಸೇರಿದಂತೆ ಇಡೀ ಕರ್ನಾಟಕ ಶೋಕಸಾಗರದಲ್ಲಿ ಮುಳುಗಿತ್ತು. ಈಗಲೂ ಸ್ಪಂದನಾ ನೆನಪು ಮಾಸಿಲ್ಲ. 

ಆಗಸ್ಟ್ 13, ಸ್ಯಾಂಡಲ್‌ವುಟ್‌ ನಟ, ನಿರ್ದೇಶಕ ರಿಯಲ್‌ ಸ್ಟಾರ್‌ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವಾಗ ಹೇಳಿದ 'ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ' ಎಂಬ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಜಾತಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ನಟ ಉಪೇಂದ್ರನ ವಿರುದ್ಧ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

ಆಗಸ್ಟ್ 15ಕ್ಕೆ -ಈಗ ನಡೆಯುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 10 ರ ಬಗ್ಗೆ ಸುದ್ದಿ ವೈರಲ್. ಆಮೇಲೆ ಬಿಗ್ ಬಾಸ್ ಶುರುವಾಗಿದ್ದು ಆಕ್ಟೋಬರ್ 8ಕ್ಕೆ . ಆಗಸ್ಟ್‌ನಲ್ಲಿ ಬಿಡುಗಡೆಯಾದ ತಮಿಳು ಸಿನಿಮಾ ಘೋಸ್ಟ್ ಹಿಟ್. ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಸಪ್ತ ಸಾಗರದಾಚೆ ಯೆಲ್ಲೋ ಸೈಡ್ ಎ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿತು. 

2021ರ ಸಾಲಿನ ಹಾಗೂ 69ನೇ ಆವೃತ್ತಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (National Film Awards) ಕೇಂದ್ರ ಸರ್ಕಾರ   ಘೋಷಣೆ ಮಾಡಿದೆ. ಕನ್ನಡದ ಚಾರ್ಲಿ 777ಗೆ ಪ್ರಾದೇಶಿಕವಾರು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸಿಕ್ಕಿದ್ದು, ಕನ್ನಡದ ಸುಬ್ರಹ್ಮಣ್ಯ ಬಾದೂರ್​ ಅವರಿಗೆ ವಿಶೇಷ ವಿಮರ್ಶೆ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ ಇದರ ಜೊತೆಗೆನೇ ಇನ್ನೊಂದು ಪ್ರಶಸ್ತಿಯ ಗರಿ ಕನ್ನಡದ ಕಿರೀಟಕ್ಕೆ ಸೇರಿದೆ. ಅದುವೇ ಬಾಳೆ ಬಂಗಾರ! ಹೌದು. ನಾನ್ ಫೀಚರ್ ವಿಭಾಗದಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದಿದೆ ಬಾಳೆ ಬಂಗಾರ. ಇದನ್ನು ನಿರ್ದೇಶಿಸಿದವರು ಜೊತೆಜೊತೆಯಲಿ ಧಾರಾವಾಹಿ ಖ್ಯಾತಿಯ ಅನಿರುದ್ಧ್. ಭಾರತಿ ವಿಷ್ಣುವರ್ಧನ್​ ಅವರ ಕುರಿತು ಈ ಕಿರುಚಿತ್ರ ನಿರ್ಮಿಸಲಾಗಿದೆ. 

30 ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದ ಮಹಾಲಕ್ಷ್ಮಿ ಇತ್ತೀಚೆಗಷ್ಟೇ ಟಿಆರ್‌ಪಿ ಅನ್ನೋ ಸಿನಿಮಾದಲ್ಲಿ ನಟಿಸಿದ್ರು. ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗೋ 'ಕಾವೇರಿ ಕನ್ನಡ ಮೀಡಿಯಂ' ಧಾರವಾಹಿ ಮೂಲಕ ಕನ್ನಡ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ನಟಿ ಮಹಾಲಕ್ಷ್ಮಿ ಬಗ್ಗೆ ನೂರೆಂಟು ಕಥೆಗಳಿವೆ. 

ಅಕ್ಟೋಬರ್ 15ರ ಬೆಳಗ್ಗೆ 10.15ರಿಂದ 10.30ರ ನಡುವಿನ ಮುಹೂರ್ತದಲ್ಲಿ ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಾಗುತ್ತದೆ. ಕಳೆದ ಬಾರಿಯ 412ನೇ ದಸರಾವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಿದ್ದರು.. ಈ ಬಾರಿ ಈ ಗೌರವ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಒಲಿದು ಬಂದಿದ್ದು, ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಸನಾತನ ಧರ್ಮ ಡೆಂಗ್ಯೂ ಮಲೇರಿಯಾ ಇದ್ದಂಗೆ, ಅದನ್ನು ಬೇರು ಸಹಿತ ನಿರ್ಮೂಲನೆ ಮಾಡಬೇಕು- ಎಂದ ಸ್ಟಾಲಿನ್. ಅದಕ್ಕೆ ದನಿ ಗೂಡಿಸಿದ ಕಮಲ್ ಹಾಸನ್, ಪ್ರಕಾಶ್ ರಾಜ್. ಆದರೆ, 'ಸನಾತನ ಧರ್ಮ ಕಾಪಾಡೋದು ನಮ್ಮೆಲ್ಲರ ಜವಾಬ್ದಾರಿ' ಎಂದು ಹೇಳಿದ ನಟ ರಾಮ್‌ ಚರಣ್‌ ಟ್ವೀಟ್‌ ಭಾರೀ ವೈರಲ್. ರೀಲ್ಸ್‌ ಲೋಕದ ಜೋಡಿ ವರಣ್ ಆರಾಧ್ಯ ಮತ್ತು ವರ್ಷಾ ಕಾವೇರಿ ನಡುವೆ ಬ್ರೇಕಪ್, ಸ್ಪಷ್ಟನೆ ಕೊಟ್ಟ ವರುಣ್ ಆರಾಧ್ಯ. ಇಬ್ಬರ ಲವ್ ಸ್ಟೋರಿ ಭಾರಿ ವೈರಲ್, ಚರ್ಚೆ ಆಗಿತ್ತು. 

ನಟ ವಿಜಯ್ ಪುತ್ರಿ ಆತ್ಮಹತ್ಯೆ ಕಾರಣ ನಿಗೂಢ: ಅಪ್ಪ-ಅಮ್ಮನ ಹಳೆಯ ವಿಡಿಯೋ ವೈರಲ್​! ನಟ ವಿಜಯ್ ಆಂಟೋನಿ ಅವರ ಪುತ್ರಿ ಆತ್ಮಹತ್ಯೆ ಇನ್ನೂ ನಿಗೂಢವಾಗಿದೆ. ಆಕೆಯ ಒತ್ತಡಕ್ಕೆ ಕಾರಣವೇನು ಎನ್ನುವ ನಡುವೆಯೇ ವಿಜಯ್​ ಮತ್ತು ಪತ್ನಿಯ  ಹಳೆಯ ವಿಡಿಯೋ-ಪೋಸ್ಟ್​ ವೈರಲ್​ ಆಗಿದೆ. '3 ಈಡಿಯಟ್ಸ್'ನಲ್ಲಿ ಎಲ್ಲರನ್ನೂ ಬಿದ್ದು ಬಿದ್ದು ನಗಿಸಿದ ಅಖಿಲ್ ಮಿಶ್ರಾ ವಿಧಿವಶರಾದರು. 

ಸೂಪರ್  ಹಿಟ್ '3 ಈಡಿಯಟ್ಸ್'  ಚಿತ್ರದಲ್ಲಿ ನಟಿಸಿದ್ದ ನಟ ಅಖಿಲ್ ಮಿಶ್ರಾ ದೇಹಾಂತ್ಯವಾಗಿದೆ. ಅವರ ದಿವ್ಯ ಆತ್ಮಕ್ಕೆ ಶಾಂತಿಯನ್ನು ಕೋರಿ ಬಹಳಷ್ಟು ಸಂದೇಶಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಶೋಕದ ಸುದ್ದಿಗೆ ಬಾಲಿವುಡ್ ಅಂಗಳ ಅಕ್ಷರಶಃ ನಲುಗಿದೆ. ಸ್ಯಾಂಡಲ್‌ವುಡ್‌ನಲ್ಲಿ ನಾನು ನಂದಿನಿ ಹಾಡು ವೈರಲ್. ಕಾವೇರಿ ಹೋರಾಟಕ್ಕೆ ಸಿನಿತಾರೆಯರ ಬೆಂಬಲ. ದರ್ಶನ್, ಶಿವ ರಾಜ್‌ಕುಮಾರ್ ಸೇರಿದಂತೆ ಅನೇಕ ಹಿರಿಕಿರಿಯ ನಟನಟಿಯರು ತಮ್ಮ ಅಮೋಘ ಬೆಂಬಲ ಸೂಚಿಸಿದ್ದಾರೆ. 

ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಕಾರು ಅಪಘಾತ: ಮಹಿಳೆ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿತ್ತು. ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಅವರು ಬೆಂಗಳೂರಿನಲ್ಲಿ ರಾತ್ರಿ ವೇಳೆ ಹಿಟ್‌ ಅಂಡ್‌ ರನ್‌ ಮಾಡಿದ್ದು, ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿದ್ದಾಳೆ. ಇವರ ಜೊತೆಗಿದ್ದ ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದೆ.

ಅಕ್ಟೋಬರ್ 8 ರಂದು ಕನ್ನಡ ಕಿರುತೆರೆ ಮೋಸ್ಟ್ ಫೇಮಸ್ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ಶುರು. ಹುಲಿ ಉಗುರು ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ, ಬಿಡುಗಡೆ. ಹುಲಿ ಉಗುರು ಕೇಸ್‌ಗೆ ಸಂಬಂಧಿಸಿ ನಟ ಜಗ್ಗೇಶ್, ದರ್ಶನ್ ಹಾಗೂ ನಿಖಿಲ್ ಕುಮಾರಸ್ವಾಮಿ ವಿಚಾರಣೆ. ಅಮ್ಮನ ಗಿಫ್ಟ್ ಎಂದು ಹೇಳಿಕೆ ಕೊಟ್ಟು ಅದನ್ನು ಸರ್ಕಾರದ ಸುಪರ್ದಿಗೆ ಒಪ್ಪಿಸಿದ ನಟ ಜಗ್ಗೇಶ್. 

ರಶ್ಮಿಕಾ ಮಂದಣ್ಣ ಡೀಫ್ ಫೇಕ್ ವಿಡಿಯೋ ವೈರಲ್. ಈ ಬಗ್ಗೆ ಬಾಲಿವುಡ್ ಅಮಿತಾಭ್ ಬಚ್ಚನ್ ಸೇರಿದಂತೆ ಹಲವರಿ ನಟಿ ರಶ್ಮಿಕಾಗೆ ಬೆಂಬಲ ಸೂಚಿಸಿ ಡೀಫ್ ಫೇಕ್ ವಿಡಿಯೋವನ್ನು ಖಂಡಿಸಿದ್ದಾರೆ. 

ಹಿರಿಯ ನಟ ಚಂದ್ರ ಮೋಹನ್ ಹೃದಯಾಘಾತದಿಂದ ಸಾವು; ಕಂಬನಿ ಮಿಡಿದ ಚಿತ್ರರಂಗ. 

ಡಿಸೆಂಬರ್ 8 ರಂದು ಕನ್ನಡ ಮೂಲದ ಬಹುಭಾಷಾ ಹಿರಿಯ ನಟಿ ಲೀಲಾವತಿ ನಿಧನ. 85 ವರ್ಷದ ನಟಿ ಲೀಲಾವತಿ ಅವರು ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ಅವರದೇ ತೋಟದ ಮನೆಯಲ್ಲಿ ಮಗ ವಿನೋದ್ ರಾಜ್, ಕುಟುಂಬಸ್ಥರು ಹಾಗೂ ಊರಿನ ಗ್ರಾಮಸ್ಥರು ಸೇರಿ ಸಂಪ್ರದಾಯದಂತೆ ನೆರವೇರಿಸಿ ಅಗಲಿದ ಹಿರಿಯ ನಟಿಗೆ ಅಂತಮ ನಮನ-ಗೌರವ ಸಲ್ಲಿಸಿದರು. 

ಡಿಸೆಂಬರ್ 15 ಮುಗಿದಿದೆ. ಇನ್ನೇನು 15 ದಿನಗಳ ಬಳಿಕ ಹೊಸ ವರ್ಷ 2024 ಕಾಲಿಡಲಿದೆ. 

Follow Us:
Download App:
  • android
  • ios