ಅರುಣಾ ಇರಾನಿ ಎರಡು ಬಾರಿ ಸ್ತನ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಮೊದಲ ಹಂತದಲ್ಲೇ ಕ್ಯಾನ್ಸರ್ ಗೊತ್ತಾಗಿದ್ದರೂ ಅವರು ಕಿಮೋಥೆರಪಿಯನ್ನು ನಿರಾಕರಿಸಿದ್ದರು. ಅದು ಏಕೆ ಎಂಬ ವಿಚಾರವನ್ನು ಅವರೀಗ ರಿವೀಲ್ ಮಾಡಿದ್ದಾರೆ.
ಅರುಣಾ ಇರಾನಿ ಹಿಂದಿ ಸಿನಿಮಾದಲ್ಲಿ ಬಹಳ ಜನಪ್ರಿಯವಾದ ಹೆಸರು. ಆರು ದಶಕಗಳಿಂದಲೂ ಹಿಂದಿ ಸಿನಿಮಾ ಪ್ರಿಯರನ್ನು ತಮ್ಮ ನಟನೆಯ ಮೂಲಕ ರಂಜಿಸುತ್ತಾ ಬಂದಿರುವ ನಟಿ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಇತ್ತೀಚೆಗೆ ತಾವು ಜೀವನದಲ್ಲಿ ಒಮ್ಮೆ ಅಲ್ಲ ಎರೆಡರಡು ಬಾರಿ ಸ್ತನ ಕ್ಯಾನ್ಸರ್‌ಗೆ ಒಳಗಾಗಿ ಅದರ ವಿರುದ್ಧ ಸದ್ದಿಲ್ಲದೇ ಹೋರಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಈ ಕಷ್ಟವನ್ನು ಯಾರಿಗೂ ತಿಳಿಸದೇ ಅವರೊಬ್ಬರೇ ಅನುಭವಿಸಿದ್ದನ್ನು ತಿಳಿದು ಅವರ ಅಭಿಮಾನಿಗಳು ದಂಗಾಗಿದ್ದರು. ಈಗ ಅರುಣಾ ಇರಾನಿ ತಮ್ಮ ಜೀವನದ ಆ ಅಧ್ಯಾಯದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.
ಲೆಹ್ರೆನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅರುಣಾ ಇರಾನಿ, ಚಿತ್ರೀಕರಣದಲ್ಲಿದ್ದಾಗ ಅಸ್ವಸ್ಥಳಾದ ನಂತರ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿದಾಗ ಕ್ಯಾನ್ಸರ್ ಇರುವುದು ತಿಳಿಯಿತು ಎಂದು ಹೇಳಿಕೊಂಡಿದ್ದಾರೆ. 'ಐಸೆ ಹೈ ಏಕ್ ದಿನ್ ಶೂಟಿಂಗ್ ಕರ್ ರಹೀ ಥಿ, ಪತಾ ನಹೀ ಮುಝೆ ಕೈಸೇ ಪತಾ ಲಗಾ ಪರ್ ಮೈನೆ ಬೋಲಾ 'ಮುಝೆ ಕುಚ್ ಲಗ್ ರಹಾ ಹೈ' (ನಾನು ಒಂದು ದಿನ ಶೂಟಿಂಗ್‌ನಲ್ಲಿ ಇದೆ. ನನಗೆ ಅದು ಹೇಗೆ ಗೊತ್ತಾಯಿತು ಎಂದು ತಿಳಿಯುತ್ತಿಲ್ಲ, ಆದರೆ ನನಗೆ ಏನೋ ಆಗುತ್ತಿದೆ ಎಂದು ನಾನು ಹೇಳಿದ್ದೆ) ಎಂದು ಅವರು ಹೇಳಿದ್ದಾರೆ.
2015 ರಲ್ಲಿ ನಟಿ ಅರುಣಾ ಇರಾನಿ ವೈದ್ಯರನ್ನು ಸಂಪರ್ಕಿಸಿದಾಗ ಅವರಿಗೆ ಮೊದಲ ಬಾರಿಗೆ ರೋಗನಿರ್ಣಯ ಮಾಡಲಾಯಿತು. ಆದರೆ ಅವರು ಅದನ್ನು ಸಣ್ಣ ಗಡ್ಡೆ ಎಂದು ನಿರ್ಲಕ್ಷಿಸಿದರು. ಆದಾಗ್ಯೂ, ಅರುಣಾ ಇರಾನಿ ಅದನ್ನು ತಕ್ಷಣವೇ ತೆಗೆದುಹಾಕಬೇಕೆಂದು ಒತ್ತಾಯಿಸಿದರು. ಆಗ ಅವರಿಗೆ ವೈದ್ಯರು ಕೀಮೋಥೆರಪಿಗೆ ಒಳಗಾಗಲು ಸೂಚಿಸಿದರು. ಆದರೆ ಈ ಕೀಮೋಥೆರಪಿ ತನ್ನ ಸೌಂದರ್ಯ ಹಾಗೂ ನಟನಾ ವೃತ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಾನು ಅದನ್ನು ನಿರಾಕರಿಸಿದ್ದಾಗಿ ಹೇಳಿಕೊಂಡಿದ್ದಾರೆ.
ನಂತರ ವೈದ್ಯರು ನೀವು ಮಾತ್ರೆ ತೆಗೆದುಕೊಳ್ಳಬೇಕು ಎಂದು ಹೇಳಿದರು ಮತ್ತು ನಾನು ಕೆಲಸ ಮಾಡುತ್ತಿದ್ದರಿಂದ ಅದನ್ನು ಆರಿಸಿಕೊಂಡೆ. ನನ್ನ ಕೂದಲು ಉದುರಿದರೆ ನಾನು ಹೇಗೆ ಶೂಟ್ ಮಾಡಲಿ ಎಂಬ ಚಿಂತೆ ನನ್ನದಾಗಿತ್ತು ಎಂದು ಅರುಣಾ ಇರಾನಿ ಹೇಳಿಕೊಂಡಿದ್ದಾರೆ.
ಆದರೆ ಮಾರ್ಚ್ 2020 ರಲ್ಲಿ, ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸ್ವಲ್ಪ ಮೊದಲು ಅರುಣಾ ಇರಾನಿ ಅವರಿಗೆ ಕ್ಯಾನ್ಸರ್ ಮತ್ತೆ ಕಾಣಿಸಿಕೊಂಡಿತ್ತು. ಈ ಬಾರಿ, ಅವರು ವೈದ್ಯರ ಸಲಹೆಯನ್ನು ಅನುಸರಿಸಿ ಕೀಮೋಥೆರಪಿಗೆ ಒಳಗಾಗಲು ನಿರ್ಧರಿಸಿದರು.
( ಮೇರಿ ಹಿ ಗಾಲ್ತಿ ಥಿ, ಆಸ್ ಪೆಹ್ಲೆ ಮೈನೆ ಕಿಮೊಥೆರಪಿ ನಹಿ ಲಿ ಥಿ ) ನಾನು ಮೊದಲ ಬಾರಿಗೆ ಕಿಮೊಥೆರಪಿಯನ್ನು ಆರಿಸಿಕೊಳ್ಳದ ಕಾರಣ ಅದು ನನ್ನದೇ ತಪ್ಪಾಗಿತ್ತು. ಈ ಬಾರಿ ನಾನು ಅದನ್ನು ತೆಗೆದುಕೊಂಡೆ ಎಂದು ಅವರು ಹೇಳಿಕೊಂಡಿದ್ದಾರೆ.
ಅರುಣಾ ಇರಾನಿ ಅವರ ಆರೋಗ್ಯದ ಮೇಲೆ ಕ್ಯಾನ್ಸರ್ ಮಾತ್ರ ಪರಿಣಾಮ ಬೀರಲಿಲ್ಲ, ಜೊತೆಗೆ 60ನೇ ವಯಸ್ಸಿನಲ್ಲಿ ಅವರಿಗೆ ಮಧುಮೇಹವೂ ಒಕ್ಕರಿಸಿಕೊಂಡಿತ್ತು. ಜೊತೆಗೆ ಮೂತ್ರಪಿಂಡದ ಸಮಸ್ಯೆಯನ್ನು ಎದುರಿಸಿದ್ದರು. ವೈದ್ಯರು ಅವರ ಎರಡೂ ಮೂತ್ರಪಿಂಡಗಳು ವಿಫಲವಾಗಿವೆ ಎಂದು ಹೇಳಿದ್ದರು ಆದರೆ ಅದೃಷ್ಟವಶಾತ್, ಅವರು ಪ್ರಮುಖ ಚಿಕಿತ್ಸೆಯ ಅಗತ್ಯವಿಲ್ಲದೆ ಚೇತರಿಸಿಕೊಂಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
1961ರಲ್ಲಿ ಗಂಗಾ ಜುಮ್ನಾ ಮತ್ತು ಅನ್ಪಡ್ (1962) ನಂತಹ ಚಿತ್ರಗಳಲ್ಲಿ ಬಾಲನಟಿಯಾಗಿ ನಟನೆ ಆರಂಭಿಸಿದ ಅವರು ಆರು ದಶಕಗಳಿಗೂ ಹೆಚ್ಚು ಕಾಲ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಂತರ ಕ್ರಮೇಣ ಅವರು ಪೋಷಕ ಪಾತ್ರಧಾರಿಯಾಗಿ ಬದಲಾದರು. ಔಲಾದ್ (1968), ಹಮ್ಜೋಲಿ (1970), ದೇವಿ (1970), ಮತ್ತು ನಯಾ ಜಮಾನಾ (1971) ನಂತಹ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಜೊತೆಗೆ ನಿರ್ಮಾಣ ಹಾಗೂ ನಿರ್ದೇಶನದಲ್ಲಿಯೂ ಅವರು ತೊಡಗಿಸಿಕೊಂಡಿದ್ದು, ಮೆಹಂದಿ ತೇರೆ ನಾಮ್ ಕಿ ಮತ್ತು ದೇಸ್ ಮೇ ನಿಕ್ಲ್ಲಾ ಹೋಗಾ ಚಂದ್‌ನಂತಹ ಜನಪ್ರಿಯ ಕಾರ್ಯಕ್ರಮಗಳನ್ನು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.
ಮೊದಲ ಬಾರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಅರುಣಾ ಇರಾನಿ ಕಿಮೊಥೆರಪಿಯನ್ನು ಏಕೆ ನಿರಾಕರಿಸಿದರು?ನಟಿ ಹೇಳುವಂತೆ ತನಗೆ ಮೊದಲ ಬಾರಿಗೆ ರೋಗನಿರ್ಣಯವಾಗಿದ್ದು 2015 ರಲ್ಲಿ. ಕೀಮೋಥೆರಪಿ ತನ್ನ ನೋಟ ಮತ್ತು ನಟನಾ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ಭಯದಿಂದ ಅವಳು ಅದನ್ನು ತಿರಸ್ಕರಿಸಿದಳು.
