ಹಣವಿಲ್ಲದೆ ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದ ವ್ಯಕ್ತಿ, ಈಗ 500ಕ್ಕೂ ಹೆಚ್ಚು ಸಿನ್ಮಾದಲ್ಲಿ ನಟಿಸಿದ ಸಕ್ಸಸ್‌ಫುಲ್ ನಟ!

ಮುಂಬೈ ಆಗಮಿಸಿದ ಆ ವ್ಯಕ್ತಿ ಮನೆಯಿಲ್ಲದೆ ಬೀಚ್‌ನಲ್ಲಿ ವಾಸಿಸುತ್ತಿದ್ದರು. ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದರು. ಒಂದು ಪತ್ರವು ಅವರ ಜೀವನವನ್ನು ಬದಲಾಯಿಸಿತು. ಸದ್ಯ 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿ ಬಾಲಿವುಡ್‌ನ ಸಕ್ಸಸ್‌ಫುಲ್ ನಟ ಎನಿಸಿಕೊಂಡಿದ್ದಾರೆ.

Anupam Kher lived on beaches, slept on railway station, one letter changed his life Vin

ಮಾರ್ಚ್ 7, 1955ರಂದು ಜನಿಸಿದ ಅನುಪಮ್ ಖೇರ್, ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಪ್ರಮುಖ, ಪೋಷಕ ಪಾತ್ರ ಒಳಗೊಂಡಂತೆ ಹಲವಾರು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಎಂಟು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರಿಗೆ 2004ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಆದರೆ, ಚಿತ್ರರಂಗದಲ್ಲಿ ಅನುಪಮ್‌ ಖೇರ್ ದಿನಗಳು ಅಷ್ಟು ಸುಗಮವಾಗಿರಲ್ಲಿಲ್ಲ. ಬಾಂಬೆಗೆ (ಇಂದಿನ ಮುಂಬೈ) ಆಗಮಿಸಿದ ದಿನಗಳಲ್ಲಿ, ಅವರು ಒಂದು ತಿಂಗಳ ಕಾಲ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದರು. ಬೀಚ್‌ಗಳಲ್ಲಿ ಮಲಗಿಯೂ ದಿನಗಳನ್ನು ಕಳೆದಿದ್ದರು.

ಬಾಲಿವುಡ್‌ನ ಅತಿದೊಡ್ಡ ಫ್ಲಾಪ್ ನಟ; ಬ್ಯಾಕ್‌ ಟು ಬ್ಯಾಕ್‌ 9 ಮೂವಿ ಸೋತ್ರೂ ಕೈಯಲ್ಲಿದೆ 200 ಕೋಟಿಯ ಸಿನಿಮಾ!

ಅಜ್ಜ ಬರೆದ ಪತ್ರದಿಂದ ನಟನಾದ ಅನುಪಮ್‌ ಖೇರ್‌
ಹ್ಯೂಮನ್ಸ್ ಆಫ್ ಬಾಂಬೆಯೊಂದಿಗೆ ಮಾತನಾಡುವಾಗ ನಟ ಒಮ್ಮೆ, 'ನಾನು ಬಡ ಕುಟುಂಬದಿಂದ ಬಂದಿದ್ದೇನೆ. ನಮ್ಮದು ಅವಿಭಕ್ತ ಕುಟುಂಬವಾಗಿತ್ತು.  ಕುಟುಂಬದಲ್ಲಿ 14 ಜನರಿಗೆ ವಾಸಿಸಲು ಒಂದು ಸಣ್ಣ ಕೋಣೆ ಮತ್ತು ಸ್ಥಳವನ್ನು ಹೊಂದಿದ್ದೆವು. ನನ್ನ ಅಜ್ಜಿ ಮತ್ತು ನನ್ನ ಚಿಕ್ಕಪ್ಪ, ಚಿಕ್ಕಮ್ಮ, ನನ್ನ ಸೋದರಸಂಬಂಧಿಗಳು. ಇಷ್ಟು ಜನರ ಕುಟುಂಬ ನಿರ್ವಹಣೆಗೆ ತಂದೆಯ ಆದಾಯ ಮಾತ್ರವಿತ್ತು. ಅವರು 50ರ ದಶಕದ ಕೊನೆಯಲ್ಲಿ ಮತ್ತು 60ರ ದಶಕದ ಆರಂಭದಲ್ಲಿ ತಿಂಗಳಿಗೆ 90 ರೂಪಾಯಿಗಳನ್ನು ಗಳಿಸುತ್ತಿದ್ದರು' ಎಂದು ತಿಳಿಸಿದ್ದರು. 

ಮುಂಬೈನಲ್ಲಿನ ಜೀವನದ ಬಗ್ಗೆ ಒಮ್ಮೆ ಅನುಪಮ್‌ ಖೇರ್‌ ಒಮ್ಮೆ ತಮ್ಮ ಅಜ್ಜನಿಗೆ ಪತ್ರ ಬರೆದರು, ಅವರು ಕಳುಹಿಸಿದ ಮತ್ತು ಮರಳಿ ಪಡೆದ ಒಂದು ಪತ್ರವು ಅವರ ಜೀವನವನ್ನು ಬದಲಾಯಿಸಿತು. ಅನುಪಮ್‌ ಖೇರ್‌ ತಮ್ಮ ಅಜ್ಜನಿಗೆ ಬರೆದ ಪತ್ರದಲ್ಲಿ, 'ನಾನು ನಂಬಲಾಗದಷ್ಟು ಅವಮಾನವನ್ನು ಅನುಭವಿಸುತ್ತಿದ್ದೇನೆ, ನಾನು ನಗರದಲ್ಲಿ ಉಳಿಯಲು ಬಯಸುವುದಿಲ್ಲ. ಶಿಮ್ಲಾ ಅಥವಾ ಲಕ್ನೋ ಅಥವಾ ದೆಹಲಿಗೆ ಹಿಂತಿರುಗಲು ಬಯಸುತ್ತೇನೆ. ಇಲ್ಲಿ ನಾನು ಒಬ್ಬ ವ್ಯಕ್ತಿಯಾಗಿ, ನಟನಾಗಿ ಅವಮಾನಿತನಾಗಿದ್ದೇನೆ. ನಾನು ನನ್ನ ರಾತ್ರಿಗಳನ್ನು ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಕಳೆಯುತ್ತಿದ್ದೇನೆ. ಕೊನೆಯ ರೈಲು ಹೊರಡುವಾಗ ನಾನು 1:40 ಕ್ಕೆ ಮಲಗಬೇಕು ಮತ್ತು ಮೊದಲ ರೈಲು ಪ್ರಾರಂಭವಾದಾಗ 4.40 ಕ್ಕೆ ಎದ್ದೇಳಬೇಕು. ನಾನ್ಯಾಕೆ ಇಲ್ಲಿದ್ದೇನೆ ಎಂದು ಅರ್ಥವಾಗುತ್ತಿಲ್ಲ' ಎಂದು ಬರೆದಿದ್ದರು.

ಮುಂಬರುವ ಚಿತ್ರಕ್ಕಾಗಿ ಭರ್ತಿ 280 ಕೋಟಿ ಸಂಭಾವನೆ ಪಡೀತಿರೋ ಸೂಪರ್‌ಸ್ಟಾರ್‌; ಶಾರೂಕ್‌, ಅಲ್ಲು ಅರ್ಜುನ್‌, ಯಶ್ ಅಲ್ಲ!

ಇದಕ್ಕೆ ಪ್ರತಿಯಾಗಿ ಅಜ್ಜ ಬರೆದ ಪತ್ರ ತಮ್ಮ ಬದುಕನ್ನೇ ಬದಲಿಸಿದೆ ಎಂದು ಅನುಪಮ್‌ ಖೇರ್‌ ತಿಳಿಸಿದ್ದಾರೆ. 'ನಿನ್ನನ್ನು ಇಲ್ಲಿಯವರೆಗೆ ತರಲು ನಿನ್ನ ಅಪ್ಪ-ಅಮ್ಮ ತುಂಬಾ ಶ್ರಮಪಟ್ಟಿದ್ದಾರೆ. ಕಷ್ಟಗಳು ಬರುತ್ತವೆ. ಒದ್ದೆಯಾದವನಿಗೆ ಮಳೆಯ ಭಯ ಯಾಕೆ' ಎಂದು ಅನುಪಮ್ ಖೇರ್ ಅಜ್ಜ ಪತ್ರದಲ್ಲಿ ತಿಳಿಸಿದ್ದರು. ಇಲ್ಲಿಂದ ಅನುಪಮ್‌ ಖೇರ್ ಚಿತ್ರರಂಗದಲ್ಲಿ ಮುಂದುವರಿಯುವ ನಿರ್ಧಾರ ತೆಗೆದುಕೊಂಡರು.

ಅನುಪಮ್ ಖೇರ್ 1984 ರಲ್ಲಿ ಹಿಂದಿ ಚಲನಚಿತ್ರಗಳೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು, ಅದು ಮಹೇಶ್ ಭಟ್ ನಿರ್ದೇಶನದ ಚಲನಚಿತ್ರ ಸಾರಾಂಶ್. ಚಿತ್ರದಲ್ಲಿ, ಅವರು ತಮ್ಮ ಮಗನನ್ನು ಕಳೆದುಕೊಳ್ಳುವ 65 ವರ್ಷದ ನಿವೃತ್ತ ಮಧ್ಯಮ ವರ್ಗದ ಶಿಕ್ಷಕನ ಪಾತ್ರವನ್ನು ನಿರ್ವಹಿಸಿದ್ದರು. ಅವರು ಚಿಕ್ಕ ವಯಸ್ಸಿನಲ್ಲಿ ಈ ಪಾತ್ರವನ್ನು ನಿರ್ವಹಿಸಿದರು, ಅವರಿಗೆ ಕೇವಲ 29 ವರ್ಷ. ಅಂದಿನಿಂದ, ನಟ 500 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

Latest Videos
Follow Us:
Download App:
  • android
  • ios