ಬಾಲಿವುಡ್‌ನ ಈ ಸ್ಟಾರ್‌ ಕಿಡ್‌ ಅತ್ಯಂತ ಹೆಚ್ಚು ಫ್ಲಾಪ್‌ ಮೂವಿಗಳನ್ನು ನೀಡಿದ ಆಕ್ಟರ್‌ ಎಂದು ಗುರುತಿಸಿಕೊಂಡಿದ್ದಾರೆ. ಇವರು ನಟಿಸಿದ ಸಾಲು ಸಾಲು ಸಿನಿಮಾಗಳು ಸೋತು ಹೋಗಿವೆ. ಆದರೂ ಭರ್ತಿ 200 ಕೋಟಿ ರೂ. ಬಜೆಟ್‌ನ ಸಿನಿಮಾ ಇವರ ಕೈಯಲ್ಲಿದೆ. ಯಾರು ಆ ನಟ?

ಸಿನಿಮಾದಲ್ಲಿ ಅಭಿನಯಿಸಿ ಯಶಸ್ಸನ್ನು ಗಳಿಸುವುದು ಅಷ್ಟು ಸುಲಭವಲ್ಲ. ಸಾಕಷ್ಟು ಸೌಂದರ್ಯ, ಪ್ರತಿಭೆ, ಡ್ಯಾನ್ಸ್, ಆಕ್ಷನ್‌ ಎಲ್ಲದರಲ್ಲೂ ಪರಿಣತಿಯಿದ್ದರೂ ಕೆಲವೊಮ್ಮೆ ನಟನನ್ನು ಪ್ರೇಕ್ಷಕರು ಒಪ್ಪಿಕೊಳ್ಳುವುದಿಲ್ಲ. ಸಿನಿಮಾ ಕುಟುಂಬದಿಂದ ಬಂದ ಸ್ಟಾರ್‌ಕಿಡ್‌ಗಳೆಲ್ಲರೂ ಸೂಪರ್‌ಸ್ಟಾರ್ ಆಗುವುದಿಲ್ಲ. ಹಿಂದಿನ ದಿನಗಳಲ್ಲಿ ಸ್ಟಾರ್ ಪವರ್, ಜನರನ್ನು ಥಿಯೇಟರ್‌ಗೆ ಸೆಳೆಯುವ ನಟನ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತಿತ್ತು. ಆದರೆ ಸೋಷಿಯಲ್ ಮೀಡಿಯಾಗಳ ಹಾವಳಿಯಿಂದ ಇದು ಬದಲಾಗಿದೆ. ಅನೇಕ ನಟರು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗದಿದ್ದರೂ ಸೋಷಿಯಲ್ ಮೀಡಿಯಾ ಫೇಮ್‌ನಿಂದ ದೊಡ್ಡ ಚಿತ್ರಗಳನ್ನು ಪಡೆಯುತ್ತಲೇ ಇರುತ್ತಾರೆ.

ಹಾಗೆಯೇ ಈ ನಟ (Actor) ಬಾಲಿವುಡ್‌ನ ಅತ್ಯಂತ ಹೆಚ್ಚು ಫ್ಲಾಪ್‌ ಮೂವಿಗಳನ್ನು ನೀಡಿದ ಆಕ್ಟರ್‌ ಎಂದು ಗುರುತಿಸಿಕೊಂಡಿದ್ದಾರೆ. ಇವರು ನಟಿಸಿದ ಸಾಲು ಸಾಲು ಸಿನಿಮಾಗಳು ಸೋತು (Flop) ಹೋಗಿವೆ. ಆದರೂ ಭರ್ತಿ 200 ಕೋಟಿ ರೂ. ಬಜೆಟ್‌ನ ಸಿನಿಮಾ ಇವರ ಕೈಯಲ್ಲಿದೆ. ಆ ನಟ ಮತ್ಯಾರೂ ಅಲ್ಲ ಅರ್ಜುನ್ ಕಪೂರ್.

ಸೌತ್‌ ಸಿನಿ ಇಂಡಸ್ಟ್ರಿಯಲ್ಲಿ ಅತೀ ದೊಡ್ಡ ಫ್ಲಾಪ್ ಸಿನಿಮಾ ಮಾಡಿದ ನಟ ಈ ಸೂಪರ್‌ಸ್ಟಾರ್‌!

ಸತತ 9 ಫ್ಲಾಪ್‌ ಸಿನಿಮಾಗಳನ್ನು ನೀಡಿದ ಸ್ಟಾರ್‌ ಕಿಡ್‌
ಅರ್ಜುನ್ ಕಪೂರ್ ಸಿನಿಮಾ ಜೀವನ ನಿರೀಕ್ಷಿಸಿದಷ್ಟು ಸುಲಭವಾಗಿರಲ್ಲಿಲ್ಲ. ಅರ್ಜುನ್ ಕಪೂರ್‌, ತನ್ನ ತಂದೆ ಚಲನಚಿತ್ರ ನಿರ್ಮಾಪಕ (Producer) ಬೋನಿ ಕಪೂರ್ ಚಿಕ್ಕಪ್ಪ ಸಂಜಯ್ ಕಪೂರ್ ಅವರಂಥಾ ಪ್ರಸಿದ್ಧ ಚಲನಚಿತ್ರ ಕುಟುಂಬದಿಂದ ಬಂದರೂ ಯಶಸ್ಸು ಕಾಣಲ್ಲಿಲ್ಲ. ಚೊಚ್ಚಲ ಸಿನಿಮಾ 'ಇಶಾಕ್ಜಾದೆ' ಹಿಟ್ ಆಗಲ್ಲಿಲ್ಲ. ಆ ಬಳಿಕ ನಟಿಸಿದ '2 ಸ್ಟೇಟ್ಸ್‌' ಸೂಪರ್‌ ಹಿಟ್ ಆಯಿತು. ಆ ನಂತರ ನಟಿಸಿದ ಎಲ್ಲಾ ಸಿನಿಮಾಗಳೂ ತೋಪೆದ್ದು ಹೋಗಿವೆ. 

2016 ರಿಂದ, ಅರ್ಜುನ್ ಒಂಬತ್ತು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವೆಲ್ಲವೂ ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್‌ ಎಂದು ಗುರುತಿಸಿಕೊಂಡಿವೆ. ಇವುಗಳಲ್ಲಿ ಹಾಫ್ ಗರ್ಲ್‌ಫ್ರೆಂಡ್, ಮುಬಾರಕನ್, ನಮಸ್ತೆ ಇಂಗ್ಲೆಂಡ್, ಇಂಡಿಯಾಸ್ ಮೋಸ್ಟ್ ವಾಂಟೆಡ್, ಪಾಣಿಪತ್, ಸಂದೀಪ್ ಔರ್ ಪಿಂಕಿ ಫರಾರ್, ಏಕ್ ವಿಲನ್ ರಿಟರ್ನ್ಸ್, ಕುಟ್ಟೆ ಮತ್ತು ಇತ್ತೀಚಿನ 'ದಿ ಲೇಡಿ ಕಿಲ್ಲರ್' ಸಹ ಸೇರಿವೆ. ಹೀಗಾಗಿಯೇ ಅರ್ಜುನ್‌ ಕಪೂರ್‌ನ್ನು ಬಾಲಿವುಡ್‌ನ ದೊಡ್ಡ ಫ್ಲಾಪ್ ನಟ ಎಂದು ಸಿನಿಮಾ ವಿಶ್ಲೇಷಕರು ಗುರುತಿಸುತ್ತಾರೆ.

ಬರೋಬ್ಬರಿ 25 ಫ್ಲಾಪ್‌ ಸಿನ್ಮಾ ಮಾಡಿದ್ರೂ ಈ ನಟನನ್ನು ಫ್ಯಾನ್ಸ್ ಸೂಪರ್‌ಸ್ಟಾರ್ ಅಂತಾನೆ ಕರೆದ್ರು!

ಅರ್ಜುನ್ ಕಪೂರ್ ಮುಂದಿನ ಚಿತ್ರಗಳು
ನಿರಂತರವಾದ ಬಾಕ್ಸಾಫೀಸ್ ಸೋಲು ಅರ್ಜುಲ್‌ ಕಪೂರ್ ಸಿನಿಮಾ ಜೀವನಕ್ಕೆ ಅಡ್ಡಿಯಾಗಿಲ್ಲ. ನಟ ಪ್ರಸ್ತುತ ಎರಡು ಬಿಗ್ ಬಜೆಟ್‌ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಮೊದಲನೆಯದು 'ಮೇರಿ ಬಿವಿ ಕಾ' ರಿಮೇಕ್. ಇನ್ನೊಂದು ರೋಹಿತ್ ಶೆಟ್ಟಿಯವರ ಮಹತ್ವಾಕಾಂಕ್ಷೆಯ ಕಾಪ್ ಯೂನಿವರ್ಸ್ ಚಿತ್ರ 'ಸಿಂಗಂ ಎಗೇನ್‌'.

ಬರೋಬ್ಬರಿ 200-ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ 'ಸಿಂಗಂ ಎಗೇನ್‌' ಚತ್ರದಲ್ಲಿ ಅಕ್ಷಯ್‌ ಕುಮಾರ್, ರಣವೀರ್ ಸಿಂಗ್‌, ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಟೈಗರ್ ಶ್ರಾಫ್‌ ನಟಿಸುತ್ತಿದ್ದಾರೆ. ಇವರ ಜೊತೆಗೆ ಚಿತ್ರದಲ್ಲಿ ಅರ್ಜುನ್ ಕಪೂರ್ ಸಹ ಕಾಣಿಸಿಕೊಳ್ಳಲಿದ್ದಾರೆ. ಇದು ಬಾಲಿವುಡ್‌ನಲ್ಲಿ ನಿರ್ಮಿಸುತ್ತಿರುವ ಅತ್ಯಂತ ದುಬಾರಿ ಸಾಹಸ ಚಿತ್ರಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.