ಮೇಕಪ್​ಗೆ ನಾಲ್ಕು ಗಂಟೆ, ತೆಗೆಯಲು ಒಂದು ಗಂಟೆ... 81 ವರ್ಷದ 'ಅಶ್ವತ್ಥಾಮ'ನ ತೆರೆಮರೆಯ ಕಥೆಯಿದು...

ಮೇಕಪ್​ಗೆ ನಾಲ್ಕು ಗಂಟೆ, ತೆಗೆಯಲು ಒಂದು ಗಂಟೆ...  ಕಲ್ಕಿ ಚಿತ್ರದಲ್ಲಿ 81 ವರ್ಷದ ಅಮಿತಾಭ್​ ಬಚ್ಚನ್​ 'ಅಶ್ವತ್ಥಾಮ'ನಾದ ತೆರೆಮರೆಯ ಕಥೆಯಿದು...
 

Amitabh Bachchan Looks Unrecognisable As Ashwatthama In Kalki 2898 four hous makeup suc

ಇದೇ ನಾಲ್ಕರಂದು ಬಿಡುಗಡೆಗೊಂಡು ಘರ್ಜಿಸುತ್ತಿದೆ ಕಲ್ಕಿ 2898 AD. ಟಿಕೆಟ್ ದರ ಹೆಚ್ಚಾಗಿದ್ದರೂ ಕೂಡ ಜನ ಸಿನಿಮಾವನ್ನು ನೋಡುತ್ತಿದ್ದಾರೆ. ಮೊದಲ ದಿನವೇ ಇನ್ನೂರು ಕೋಟಿ ಸಮೀಪಿಸಿದ್ದ 'ಕಲ್ಕಿ 2898 AD' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ನಾಗ್ ಅಶ್ವಿನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ.  ಪ್ರಭಾಸ್ ನಟಿಸಿರುವ ಈ ಚಿತ್ರದಲ್ಲಿ,  ಅಮಿತಾಭ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿ ದಿಶಾ ಪಟಾನಿ ಕೂಡ ಚಿತ್ರದ ಭಾಗವಾಗಿದ್ದಾರೆ. 

ನಟರಾದ ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್, ಎಸ್ ಎಸ್ ರಾಜಮೌಳಿ, ರಾಮ್ ಗೋಪಾಲ್ ವರ್ಮಾ ಅತಿಥಿ ಪಾತ್ರದಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಪಶುಪತಿ, ಶೋಭನಾ, ಅನ್ನಾ ಬೆನ್ ಮತ್ತು ಇತರರು ಸಹ ಚಿತ್ರದ ಭಾಗವಾಗಿದ್ದಾರೆ. ವಿಶ್ವಾದ್ಯಂತ 500 ಕೋಟಿ ರೂಪಾಯಿಗಳನ್ನು ಗಳಿಸಿ ಇದನ್ನು ಮೀರಿ ಮುನ್ನುಗ್ಗುತ್ತಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗಿದ್ದು,  ಕಲ್ಕಿ ಇದುವರೆಗೆ ತೆಲುಗು ಪ್ರದೇಶಗಳಲ್ಲಿ ಹೆಚ್ಚಿನ ಗಳಿಕೆ ಮಾಡಿದೆ. ಇಂದು  ಅಮಿತಾಭ್​ ಬಚ್ಚನ್​ ಅವರು  ತಮ್ಮ ಮಗ ಅಭಿಷೇಕ್ ಬಚ್ಚನ್ ಅವರೊಂದಿಗೆ ಮೊದಲ ಬಾರಿಗೆ ಕಲ್ಕಿ 2898 AD ಸಿನಿಮಾವನ್ನು ವೀಕ್ಷಿಸಿದ್ದು ಅದರ ಬಗ್ಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಮಗಳ ಮದ್ವೆ ಬೆನ್ನಲ್ಲೇ ಆಸ್ಪತ್ರೆ ಸೇರಿರೋ ನಟ ಶತ್ರುಘ್ನ ಸಿನ್ಹಾ ಹೇಗಿದ್ದಾರೆ? ಮಗ ಹೇಳಿದ್ದೇನು?
 
ಇದೀಗ ನಟ ಅಮಿತಾಭ್​ ಬಚ್ಚನ್​ ಅವರ ಅಶ್ವತ್ಥಾಮ ಪಾತ್ರದ ಕುರಿತು ಇಂಟರೆಸ್ಟಿಂಗ್​ ವಿಷಯವೊಂದು ಹೊರಬಿದ್ದಿದೆ. ಅದೇನೆಂದರೆ, ಅಮಿತಾಭ್​ ಅವರು ಈ ಪಾತ್ರಕ್ಕಾಗಿ ಪ್ರತಿದಿನ ನಾಲ್ಕು ಗಂಟೆ ಮೇಕಪ್​ ಮಾಡಿಕೊಳ್ಳುತ್ತಿದ್ದಂತೆ. ಕರಣ್​ದೀಪ್​ ಸಿಂಗ್​ ಈ ಮೇಕಪ್​  ಕಲಾವಿದರು. ಮೇಕಪ್​ ಅನ್ನು ತೆಗೆಯಲು ಒಂದು ಗಂಟೆ ಹಿಡಿದಿತ್ತು ಎನ್ನುವ ಸತ್ಯವಿದು. ಅಷ್ಟಕ್ಕೂ ನಟ ಅಮಿತಾಭ್​ ಅವರು ಇದೇ ಮೊದಲಲ್ಲ. ಈ ಹಿಂದೆ ಕೂಡ ಬ್ಲ್ಯಾಕ್​ ಚಿತ್ರಕ್ಕೆ ಇದೇ ರೀತಿ ದಿನಪೂರ್ತಿ ಮೇಕಪ್​ ಮಾಡಿಕೊಂಡದ್ದು ಇದೆ. ವಯಸ್ಸು 81 ಆದರೂ ಇವರ ಎನರ್ಜಿ ಮಾತ್ರ ನಿಂತಿಲ್ಲ. ಇಷ್ಟು ದೀರ್ಘ ಅವಧಿಯವರೆಗೆ ಮೇಕಪ್​  ಮಾಡಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಆದರೆ ಅದನ್ನು ಸಾಬೀತು ಮಾಡಿ ತೋರಿಸಿದ್ದಾರೆ ಅಮಿತಾಭ್​. 

ಅಂದಹಾಗೆ ಈಚೆಗಷ್ಟೇ ನಟನಿಗೆ ಸಿನಿಮಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿ ರಾಷ್ಟ್ರ ಮತ್ತು ಸಮಾಜಕ್ಕೆ ನೀಡಿರುವ ಅಮೋಘ ಕೊಡುಗೆ ಗಮನಿಸಿ ಲತಾ ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ ಲಭಿಸಿದೆ.  ಕಳೆದ ಮೂರು ವರ್ಷಗಳಿಂದ ಲತಾ ಮಂಗೇಶ್ಕರ್​ ಕುಟುಂಬ ಈ ಪ್ರಶಸ್ತಿಯನ್ನು ದಿಗ್ಗಜರಿಗೆ ನೀಡಿ ಗೌರವಿಸುತ್ತಿದೆ.  ಭಾರತೀಯ ಸಿನಿಮಾ, ಸಂಸ್ಕೃತಿ ಮತ್ತು ಸಮಾಜದ ಮೇಲೆ ಅಮಿತಾಭ್​ ಬಚ್ಚನ್ ಅವರು ಬೀರಿದ ಪ್ರಭಾವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕಳೆದ ಏಪ್ರಿಲ್​ನಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 

ವಿಶ್ವ ಕಪ್​ನಲ್ಲಿ ಭಾರತ ಗೆಲ್ಲಲು ಬಾಲಿವುಡ್​ ಸ್ಟಾರ್ ಅಮಿತಾಭ್​ ಬಚ್ಚನ್​ ಇದೆಂಥ 'ತ್ಯಾಗ' ಮಾಡಿದ್ರು?
 

 
 
 
 
 
 
 
 
 
 
 
 
 
 
 

A post shared by Filmfare (@filmfare)

Latest Videos
Follow Us:
Download App:
  • android
  • ios