Asianet Suvarna News Asianet Suvarna News

ಮಗಳ ಮದ್ವೆ ಬೆನ್ನಲ್ಲೇ ಆಸ್ಪತ್ರೆ ಸೇರಿರೋ ನಟ ಶತ್ರುಘ್ನ ಸಿನ್ಹಾ ಹೇಗಿದ್ದಾರೆ? ಮಗ ಹೇಳಿದ್ದೇನು?

ಸೋನಾಕ್ಷಿ ಸಿನ್ಹಾ ಅವರು ಗುಟ್ಟಾಗಿ ಮದುವೆಯಾದ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾಗಿದ್ದ ಸೋನಾಕ್ಷಿ ತಂದೆ ನಟ ಶತ್ರುಘ್ನ ಸಿನ್ಹಾ ಈಗ ಹೇಗಿದ್ದಾರೆ?
 

Shatrughan Sinhas son Luv gives health update who admitted after sonakshi Sinhas marriage suc
Author
First Published Jul 2, 2024, 4:28 PM IST

ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮದುವೆಯಾದ ಬೆನ್ನಲ್ಲೇ ಸೋನಾಕ್ಷಿ ತಂದೆ ನಟ ಶತ್ರುಘ್ನ ಸಿನ್ಹಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಅವರನ್ನು  ದಾಖಲಿಸಲಾಗಿದೆ.  ಅಲ್ಲಿ ಅವರು ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಕೆಲವು ಹೇಳಲಾಗಿತ್ತು.  ನಟ ಇತ್ತೀಚೆಗೆ ಚುನವಣಾ ಪ್ರಚಾರ ಮತ್ತು  ಮಗಳು  ಸೋನಾಕ್ಷಿ ಸಿನ್ಹಾ ಮದುವೆಗೆ ತುಂಬಾ ಓಡಾಟ ಮಾಡಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಕೆಲವರು ಹೇಳುತ್ತಿದ್ದರೆ,  ಮಗಳು ಸೋನಾಕ್ಷಿಯ ಗುಟ್ಟಾಗಿ ಮದ್ವೆಯಾಗಿದ್ದರ ಬಗ್ಗೆ ತೀವ್ರವಾಗಿ ನಟ ತಲೆಕೆಡಿಸಿಕೊಂಡಿದ್ದರು ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಇದಾಗಲೇ ಮಗಳ ಮದುವೆಯ ಕುರಿತು ಭಾರಿ ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶತ್ರುಘ್ನ ಸಿನ್ಹಾ ಅವರು ತುಂಬಾ ಬೇಸರಿಕೊಂಡಿದ್ದರು. ಇದರಿಂದ ಅವರು  ಆಘಾತಕ್ಕೆ ಒಳಗಾಗಿದ್ದರು ಎಂದೂ ಹೇಳಲಾಗುತ್ತಿದೆ.  

ಇದೀಗ ಅವರ ಪುತ್ರ ಲವ್​ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ತಂದೆ ಕೆಲವು ದಿನಗಳಿಂದ ವೈರಲ್ ಜ್ವರದಿಂದ  ಬಳಲುತ್ತಿದ್ದರು, ಆದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೇನೂ ಹೆಚ್ಚಿಗೆ ವಿಷಯವಿಲ್ಲ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.  ಇದೇ ವೇಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುವ ಸುದ್ದಿಯಲ್ಲಿ ಹುರುಳಿಲ್ಲ. ತಮ್ಮ ತಂದೆಯ ಪಕ್ಕೆಲುಬುಗಳಿಗೆ ಗಾಯವಾಗಿರುವ ಸುದ್ದಿ ಬರುತ್ತಿದೆ. ಆದರೆ ಅದು ಸತ್ಯಕ್ಕೆ ದೂರವಾದದ್ದು. ಜ್ವರದಿಂದ ಬಳಲುತ್ತಿದ್ದಾರಷ್ಟೇ ಎಂದು ಮಾಹಿತಿ ನೀಡಿದ್ದಾರೆ. ಆದರೆ ಈ ಬಗ್ಗೆ ಇನ್ನು ಹೆಚ್ಚಿಗೆ ಏನನ್ನು ಹೇಳಲು ಅವರು ನಿರಾಕರಿಸಿದ್ದಾರೆ ಎಂದು ವರದಿಯಾಗಿದ್ದಾರೆ.   "ನಾನು ಪ್ರತಿದಿನ ಆಸ್ಪತ್ರೆಗೆ ಹೋಗುತ್ತಿದ್ದೇನೆ,  ಯಾವುದೇ ಶಸ್ತ್ರಚಿಕಿತ್ಸೆ ಆಗಿಲ್ಲ. ಅವರನ್ನು ನೋಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಮಗಳ ಮದ್ವೆಯ ಅರಿವೇ ಇರದಿದ್ದ ನಟ ಶತ್ರುಘ್ನ ಸಿನ್ಹಾ ಈಗ ಭಾವುಕ ಮಾತು- ಟೀಕೆಗಳಿಗೆ ಸೋನಾಕ್ಷಿ ತಿರುಗೇಟು

ಅದೇ ಇನ್ನೊಂದೆಡೆ, ನವ ದಂಪತಿ ಸೋನಾಕ್ಷಿ ಮತ್ತು  ಜಹೀರ್ ಇಕ್ಬಾಲ್ ಮದುವೆಯ ಲೈಫ್​ ಎಂಜಾಯ್ ಮಾಡುತ್ತಿದ್ದಾರೆ. ಮದುವೆಯಾಗಿ ಐದೇ ದಿನಕ್ಕೆ ಆಸ್ಪತ್ರೆಗೆ ಹೋಗಿದ್ದರಿಂದ ಸೋನಾಕ್ಷಿ ಗರ್ಭಿಣಿ ಎಂದೇ ಸುದ್ದಿಯಾಗಿತ್ತು. ಆದರೆ ಅವರು ತಮ್ಮ ತಂದೆಯನ್ನು ನೋಡಲು ಹೋಗಿದ್ದರು ಎಂದು ಇನ್ನೊಂದು ಮೂಲಗಳು ಹೇಳುತ್ತಿವೆ. ಅಷ್ಟಕ್ಕೂ, ಶತ್ರುಘ್ನ ಅವರು ಮಗಳ ಮದುವೆಯಲ್ಲಿ ಚೆನ್ನಾಗಿ ಓಡಾಟ ನಡೆಸಿದ್ದರೂ ಗುಟ್ಟಾದ ಮದುವೆ ಮತ್ತು ಟೀಕೆಗಳಿಂದ ನಟ ತುಂಬಾ ನೊಂದುಕೊಂಡಿದ್ದರು ಎಂದು ಹತ್ತಿರದ ಮೂಲಗಳು ಹೇಳುತ್ತಿವೆ. ಇದರ ಹೊರತಾಗಿಯೂ ಅಂತರ್​ಧರ್ಮೀಯ ವಿಷಯದ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಇದಕ್ಕೆ ಒಂದು ಕಾರಣವೂ ಇದೆ. ಇದಕ್ಕೆ ಕಾರಣ ಶತ್ರುಘ್ನ ಸಿನ್ಹಾ ಅವರು ಹಿಂದೂ ಧರ್ಮವನ್ನು ಸಿಕ್ಕಾಪಟ್ಟೆ ನೆಚ್ಚಿಕೊಂಡವರು. ತಲೆತಲಾಂತರಗಳಿಂದ ಅವರ ಕುಟುಂಬ ಹಿಂದೂ ಧರ್ಮದ ಮೇಲೆ ಅಪಾರ ನಂಬಿಕೆ ಇಟ್ಟಿದ್ದರಿಂದ ಇವರಿಗೆ ಶತ್ರುಘ್ನ ಎಂದು ಹೆಸರು ಇಡಲಾಗಿತ್ತು ಎನ್ನಲಾಗಿದೆ. ಅದಾದ ಬಳಿಕ ನಟ ಕೂಡ ತಮ್ಮ ಮನೆಗೆ  ರಾಮಾಯಣ ಎಂದೂ, ಮಕ್ಕಳಿಗೆ ಲವ್​-ಕುಶ ಎಂದೂ ಹೆಸರು ಇಟ್ಟಿದ್ದಾರೆ. ಅವರು ರಾಮನ ಭಕ್ತರು. ಆದರೆ ಮಗಳು ಅನ್ಯಧರ್ಮಿಯನ ಜೊತೆ ಅದೂ ತಮ್ಮ ಗಮನಕ್ಕೆ ಬಾರದೇ ಮದುವೆಯಾಗಿರುವುದರಿಂದ ಸಹಜವಾಗಿ ಅವರಿಗೆ ಅಪಾರ ನೋವಾಗಿದೆ. ಇದರಿಂದಲೇ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗುತ್ತಿದೆ. 

ಆದರೆ ತಮ್ಮ ನೋವನ್ನು ಮುಚ್ಚಿಟ್ಟು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ನಟ,   ‘ಮದುವೆ ಎನ್ನುವುದು ಇಬ್ಬರ ನಡುವಿನ ವೈಯಕ್ತಿಕ ನಿರ್ಧಾರ. ಈ ಬಗ್ಗೆ ಕಮೆಂಟ್ ಮಾಡುವ ಅಥವಾ ಗೊಂದಲ ಸೃಷ್ಟಿಸುವ ಹಕ್ಕು ಯಾರಿಗೂ ಇಲ್ಲ. ನಾನು ಎಲ್ಲಾ ವಿರೋಧಿಗಳಿಗೆ ಇಷ್ಟನ್ನು ಹೇಳಲು ಬಯಸುತ್ತೇನೆ , ಅವರ ಜೀವನವನ್ನು ಅವರು ನಡೆಸುತ್ತಾರೆ. ನಿಮ್ಮ ಜೀವನದಲ್ಲಿ ಉಪಯುಕ್ತವಾಗುವ ಕೆಲಸವನ್ನು ನೀವು ಮಾಡಿ ಎಂದು ಹೇಳಿದ್ದರು. 'ಜನರ ಕೆಲಸವೇ ಏನಾದರೂ ಹೇಳುವುದು, ಅದಕ್ಕೆ ನಾವು ತಲೆ ಕೆಡಿಸಿಕೊಳ್ಳಬಾರದು. ನನ್ನ  ಮಗಳು ಕಾನೂನುಬಾಹಿರ ಅಥವಾ ಸಂವಿಧಾನ ಬಾಹಿರವಾಗಿ ಏನನ್ನೂ ಮಾಡಿಲ್ಲ. ಅವಳು ಚೆನ್ನಾಗಿಯೇ ಖುಷಿಯಿಂದ ಇದ್ದಾಳೆ, ಖುಷಿಯಾಗಿಯೇ ಇರುತ್ತಾಳೆ, ಅವರಿಬ್ಬರ ನಡುವೆ ಯಾರೂ ಹಸ್ತಕ್ಷೇಪ ಮಾಡುವುದನ್ನು ನಾನು ಬಯಸುವುದಿಲ್ಲ' ಎಂದು ಹೇಳಿದ್ದರು. ಆದರೆ ಇದೀಗ ಅವರು ಆಸ್ಪತ್ರೆಗೆ ದಾಖಲಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

ಪತ್ನಿಯ ಚಪ್ಪಲಿ ಕೈಯಲ್ಲಿ ಹಿಡಿದು ಸೋನಾಕ್ಷಿ ಪತಿ ಶಾಪಿಂಗ್​! ಫ್ರಿಜ್​ ಖರೀದಿ ಮಾಡ್ಬೇಡಿ ಅನ್ನೋದಾ ಟ್ರೋಲಿಗರು?
 

Latest Videos
Follow Us:
Download App:
  • android
  • ios