Asianet Suvarna News Asianet Suvarna News

ಭಾವ-ಅಕ್ಕನ ಮಧ್ಯೆ ತಂದಿಟ್ರಾ ನಟಿ ಪ್ರಿಯಾಂಕಾ ಚೋಪ್ರಾ, ವಿಚ್ಚೇಧನ ಬಳಿಕ ಪಿಗ್ಗಿ ಅನ್‌ಫಾಲೋ ಮಾಡಿದ ನಟಿ ಸೋಫಿ

 ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರ ಭಾವ ಜೋ ಜೊನಾಸ್ ಮತ್ತು ನಟಿ ಸೋಫಿ ಟರ್ನರ್ ವಿಚ್ಚೇಧನದ ಬಳಿಕ ಈಗ ಪ್ರಿಯಾಂಕಾ  ಮತ್ತು  ನಟಿ ಸೋಫಿ ಒಬ್ಬರನ್ನೊಬ್ಬರು ಸಾಮಾಜಿಕ ಜಾಲತಾಣದಲ್ಲಿ  ಅನ್‌ಪೋಲೋ ಮಾಡಿದ್ದಾರೆ. ದಂಪತಿ ವಿಚ್ಚೇಧನಕ್ಕೆ ಪ್ರಿಯಾಂಕಾ ಕಾರಣ ಎಂಬ ಆರೋಪವಿತ್ತು.

Amid Joe Jonas divorce  Priyanka Chopra and Sophie Turner unfollow each other on social media gow
Author
First Published Oct 14, 2023, 3:27 PM IST

ಅಮೇರಿಕನ್ ಗಾಯಕ ಮತ್ತು ಗೀತ ರಚನೆಕಾರ ಜೋ ಜೊನಾಸ್ (Joe Jonas), ನಟಿ ಸೋಫಿ ಟರ್ನರ್ (Sophie Turner) ಅವರ ವಿಚ್ಛೇದನದ ಸುದ್ದಿ ಬೆಳಕಿಗೆ ಬಂದಾಗಿನಿಂದಲೂ  ವಿಚ್ಛೇದನದ ಬಗ್ಗೆ ಹಲವಾರು ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಈ ವಿವಾದಾತ್ಮಕ ವಿಚ್ಛೇದನಕ್ಕೆ ಪ್ರಿಯಾಂಕಾ ಚೋಪ್ರಾ ಅವರೇ ಕಾರಣ ಎಂದು ಗುಲ್ಲೆದ್ದಿತ್ತು. ಜೋ ಅವರ ಸಹೋದರ ನಿಕ್ ಜೋನ್ಸ್ ಮತ್ತು ಅವರ ಪತ್ನಿ ಪ್ರಿಯಾಂಕಾ ಚೋಪ್ರಾ ಹೈ ಪ್ರೊಫೈಲ್ ಬ್ರೇಕಪ್‌ನಲ್ಲಿ ಪಾತ್ರವಹಿಸಿದ್ದಾರೆಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಇದೀಗ ನಟಿ ಸೋಫಿ ಟರ್ನರ್ ತಮ್ಮ ವಿವಾಹದ ನಾಲ್ಕು ವರ್ಷಗಳ ನಂತರ ಬೇರೆಯಾಗಿದ್ದು, ವಿಚ್ಛೇದನದ ಮಧ್ಯೆ, ಸೋಫಿ ಇನ್ಸ್ಟಾಗ್ರಾಮ್ನಲ್ಲಿ ಜೋ ಅವರ ಅತ್ತಿಗೆ ಪ್ರಿಯಾಂಕಾ ಚೋಪ್ರಾ ಅವರನ್ನು  ಅನ್‌ ಫಾಲೋ ಮಾಡಿದ್ದಾರೆ. ಪ್ರಿಯಾಂಕಾ ಕೂಡ ಸೋಫಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿದ್ದಾರೆ.

ವಿವಾದದಾತ್ಮಕವಾಗಿ ಬೇರೆಯಾದ ಬಾಲಿವುಡ್‌ನ ಟಾಪ್‌

ಡೈಲಿ ಮೇಲ್ ವರದಿ ಮಾಡಿದಂತೆ, ಜೋನಾಸ್ ಕುಟುಂಬ ಆಗಾಗ ಸೋಫಿಯನ್ನು ಪ್ರಿಯಾಂಕಾಗೆ ಹೋಲಿಸಿ, ಹೀಯಾಳಿಸಿದಂತೆ ಒತ್ತಡವನ್ನು (Stress) ಉಂಟು ಮಾಡುತ್ತಿತ್ತು ಎಂದು ಹೇಳಲಾಗುತ್ತಿದೆ. ನಿಕ್ ಮತ್ತು ಪ್ರಿಯಾಂಕಾ ತಮ್ಮ ವಯಸ್ಸಿನ ಅಂತರದ ಹೊರತಾಗಿಯೂ ಹೆಚ್ಚು ಸ್ಥಿರವಾದ ಸಂಬಂಧವನ್ನು ಹೊಂದಿದ್ದರಿಂದ ಜೋ ಮತ್ತು ಸೋಫಿ ಇದೇ ರೀತಿಯ ಕೆಮಿಸ್ಟ್ರಿ ಹೊಂದಬೇಕೆಂದು ಕುಟುಂಬ ಬಯಸಿತ್ತು. ಈ  ಹೋಲಿಕೆಯು ಸೋಫಿಗೆ ಹೆಚ್ಚು ಒತ್ತಡವನ್ನುಂಟು ಮಾಡಿತು ಎಂದು ಸೋಫಿಯ ಆಪ್ತ ಸ್ನೇಹಿತರೊಬ್ಬರು ಹೇಳಿಕೊಂಡಿದ್ದರು. ವಿಚ್ಛೇದನಕ್ಕೆ  ಪ್ರಿಯಾಂಕಾ ಚೋಪ್ರಾ ನೇರವಾಗಿ ಕಾರಣವಲ್ಲದಿದ್ದರೂ ಸೋಫಿಗೆ ತನ್ನ ಬಗ್ಗೆ ಕಡಿಮೆ ವಿಶ್ವಾಸ ಮೂಡಲು ಪ್ರಿಯಾಂಕಾ ಅವರ ಸ್ಟಾರ್‌ಡಮ್ ಕಾರಣ ಎಂದೂ ಹೇಳಲಾಗಿತ್ತು.

ಮತ್ತೊಂದು ವರದಿಯ ಪ್ರಕಾರ ಸೋಫಿಯ  ಅತಿಯಾದ ಪಾರ್ಟಿ ಮಾಡುವ ಜೀವನಶೈಲಿ ವಿಚ್ಚೇಧನಕ್ಕೆ ಕಾರಣ ಎನ್ನಲಾಗುತ್ತಿದೆ. ಮತ್ತೊಂದೆಡೆ ಆಕೆ ಎರಡನೇ ಮಗುವಿನ ತಾಯಿಯಾದ ಬಳಿಕ ಕುಟುಂಬದ ಬಗ್ಗೆ  ಜವಾಬ್ದಾರಿ ತೆಗೆದುಕೊಳ್ಳುತ್ತಿರಲಿಲ್ಲ. ಮೊದಲ ಮಗಳು ವಿಲ್ಲಾ 2020ರಲ್ಲಿ ಜನಿಸಿದಳು. ಎರಡನೇ ಮಗಳು 2022ರಲ್ಲಿ ಜನಿಸಿದಳು. ಆಕೆಯ ಹೆಸರನ್ನು ಇನ್ನೂ ಕೂಡ ಜಗತ್ತಿಗೆ ತಿಳಿಸಿಲ್ಲ.

ಸಿನೆಮಾದಲ್ಲಿ ಅವಕಾಶ ವಂಚಿತರಾಗಿ 100 ಕೋಟಿಯ ಫಿಟ್‌ನೆಸ್ 

ಸೆಪ್ಟೆಂಬರ್‌ನಲ್ಲಿ ಜೋ ಜೊನಾಸ್ ಮತ್ತು ನಟಿ ಸೋಫಿ ಟರ್ನರ್ ಬೇರೆಯಾಗುತ್ತಿರುವ ಬಗ್ಗೆ ಜಂಟಿ ಹೇಳಿಕೆ ನೀಡಿದ್ದರು. ಅದ್ಭುತ ನಾಲ್ಕು ವರ್ಷಗಳ ಜೀವನದ ನಂತರ ನಾವು ನಮ್ಮ ಮದುವೆಯನ್ನು ಸೌಹಾರ್ದಯುತವಾಗಿ ಕೊನೆಗೊಳಿಸಲು ಪರಸ್ಪರ ನಿರ್ಧರಿಸಿದ್ದೇವೆ. ಏಕೆ ಎಂಬುದಕ್ಕೆ ಅನೇಕ ಊಹಾತ್ಮಕ ಕಾರಣಗಳಿವೆ. ಆದರೆ, ಇದು ನಿಜವಾಗಿಯೂ ಒಗ್ಗಟ್ಟಿನ ನಿರ್ಧಾರವಾಗಿದೆ. ಜೊತೆಗೆ ನಮಗೆ ಮತ್ತು ನಮ್ಮ ಮಕ್ಕಳಿಗಾಗಿ ಈ ಗೌಪ್ಯತೆಯನ್ನು ಪ್ರತಿಯೊಬ್ಬರೂ ಗೌರವಿಸಬಹುದು ಎಂದು ನಾವು ನಂಬಿದ್ದೇವೆ. ಏಕೆ ಎಂಬುದಕ್ಕೆ ಅನೇಕ ಊಹಾಪೋಹಗಳಿವೆ, ಆದರೆ ನಿಜವಾಗಿಯೂ ಇದು ಇಬ್ಬರೂ ತೆಗೆದುಕೊಂಡಿರುವ ನಿರ್ಧಾರವಾಗಿದೆ ಮತ್ತು ಪ್ರತಿಯೊಬ್ಬರೂ ಇದನ್ನು ಗೌರವಿಸಬಹುದು ಎಂದು ನಾವು ಪ್ರಾಮಾಣಿಕವಾಗಿ ಭಾವಿಸುತ್ತೇವೆ ಎಂದಿದ್ದರು.

Follow Us:
Download App:
  • android
  • ios