MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಸಿನೆಮಾದಲ್ಲಿ ಅವಕಾಶ ವಂಚಿತರಾಗಿ 100 ಕೋಟಿಯ ಫಿಟ್‌ನೆಸ್ ಸಾಮ್ರಾಜ್ಯ ಕಟ್ಟಿದ ನಟ!

ಸಿನೆಮಾದಲ್ಲಿ ಅವಕಾಶ ವಂಚಿತರಾಗಿ 100 ಕೋಟಿಯ ಫಿಟ್‌ನೆಸ್ ಸಾಮ್ರಾಜ್ಯ ಕಟ್ಟಿದ ನಟ!

ಬಾಲಿವುಡ್ ನಟ ಶರ್ಮನ್ ಜೋಷಿ ಅವರು ತಮ್ಮ ನಟನಾ ವೃತ್ತಿಜೀವನದಲ್ಲಿ ಯಶಸ್ಸನ್ನು ಕಂಡುಕೊಂಡರೆ. ಅವರ ಸಹ-ನಟ ಸಾಹಿಲ್ ಖಾನ್ ಅವರು ಭಾರತೀಯ  ಚಿತ್ರರಂಗದಲ್ಲಿ ಮಿಂಚುವ ಪ್ರಯತ್ನ ವಿಫಲವಾಯ್ತು. ಆಗ ಅವರು ಸಾಧನೆಗಾಗಿ  ವಿಭಿನ್ನ ಮಾರ್ಗವನ್ನು ಆರಿಸಿಕೊಂಡರು. ಬಾಲಿವುಡ್‌ನ  ಸ್ಟೈಲ್ ಮತ್ತು ಎಕ್ಸ್‌ಕ್ಯೂಸ್ ಮಿಯಂತಹ ಚಲನಚಿತ್ರಗಳಿಂದ ನಟಿಸಿದ ನಟನನ್ನು ಇಂದಿಗೂ ಅನೇಕರು ನೆನಪಿಸಿಕೊಳ್ಳುತ್ತಾರೆ. ಆದರೆ ಆ ನಟನೀಗ ಈಗ  ಬಹುಕೋಟಿ ವ್ಯವಹಾರವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.  

2 Min read
Author : Gowthami K
Published : Oct 13 2023, 04:27 PM IST
Share this Photo Gallery
  • FB
  • TW
  • Linkdin
  • Whatsapp
18

ಸಾಹಿಲ್ ಖಾನ್ 1990 ರ ದಶಕದ ಉತ್ತರಾರ್ಧದಲ್ಲಿ ಸ್ಟೀರಿಯೋ ನೇಷನ್‌ಗಾಗಿ ಸಂಗೀತ ವೀಡಿಯೊದೊಂದಿಗೆ ತಮ್ಮ ಮನರಂಜನಾ ವೃತ್ತಿಗೆ ಕಾಲಿಟ್ಟರು. 2001 ರಲ್ಲಿ ಶರ್ಮನ್ ಜೋಶಿ ಜೊತೆಗೆ ಸ್ಟೈಲ್ ಚಿತ್ರದಲ್ಲಿ ನಟಿಸಿದರು ಮತ್ತು ನಂತರ ಅದರ ಮುಂದುವರಿದ ಭಾಗವಾದ ಎಕ್ಸ್‌ಕ್ಯೂಸ್ ಮಿಯಲ್ಲಿ ಕೂಡ ನಟಿಸಿದರು. ಆದರೆ ಈ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಅಂತಹ ಪ್ರದರ್ಶನ ನೀಡದೆ ಸೋಲು ಕಂಡಿತು.

28

ಶರ್ಮಾನ್ ಜೋಶಿ ಅವರಿಗೆ ಅಂತಿಮವಾಗಿ ದೊಡ್ಡ ಬಜೆಟ್ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕಿತು. ಆದರೆ ಸಾಹಿಲ್ ಖಾನ್ ಗೆ ಯಾವುದೇ ಅವಕಾಶಗಳು ಸಿಗಲಿಲ್ಲ. ಹೀಗಾಗಿ ನಟನೆಯನ್ನು ತೊರೆದು ಭವಿಷ್ಯದ ಬಗ್ಗೆ ಚಿಂತನೆ ನಡೆಸಿದರು. ಸಾಹಿಲ್‌ ನಟಿಸಿದ ಎಲ್ಲಾ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡ ನಂತರ ಬಾಲಿವುಡ್ ಮತ್ತು ಬಣ್ಣದ ಬದುಕಿನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದರು. 2010 ರ ದಶಕದ ಆರಂಭದಲ್ಲಿ ತನ್ನ ನಟನಾ ವೃತ್ತಿಗೆ ವಿದಾಯ ಹೇಳಿದರು. 

 
38

ಫಿಟ್‌ನೆಸ್ ಪರಿಣಿತರಾಗಿ ತಮ್ಮ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸಿ, ತನ್ನದೇ ಆದ ಫಿಟ್‌ನೆಸ್ ಕಂಪನಿಯನ್ನು ಸ್ಥಾಪಿಸುವ ಮೂಲಕ ಉದ್ಯಮಿಯಾಗಿ ಬೆಳೆಯಲು ತೀರ್ಮಾನಿಸಿದರು. ಸಾಹಿಲ್ ಖಾನ್ ಅವರ ಫಿಟ್‌ನೆಸ್ ಸಾಮ್ರಾಜ್ಯದ ಕಡೆಗಿನ ಪ್ರಯಾಣವು ದೇಶಾದ್ಯಂತ ಜಿಮ್‌ಗಳಲ್ಲಿ ಅವರ ಸಣ್ಣ ಹೂಡಿಕೆಯೊಂದಿಗೆ ಆರಂಭವಾಯ್ತು. ಜೊತೆಗೆ  2016ರಲ್ಲಿ ಡಿವೈನ್ ನ್ಯೂಟ್ರಿಷನ್ ಎಂಬ ತಮ್ಮದೇ ಆದ ಕಂಪನಿಯನ್ನು ಸ್ಥಾಪಿಸಿದರು. ಕಂಪನಿಯು ಫಿಟ್‌ನೆಸ್ ಪೂರಕಗಳಾದ ಉತ್ಪನ್ನಗಳು,  ಪ್ರೋಟೀನ್, ಕ್ರಿಯೇಟೈನ್ ಮತ್ತು ಸ್ನಾಯು ಬೆಳೆಸುವವರಿಗೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. 

48

ಹಲವಾರು ಸುದ್ದಿ ಮಾಧ್ಯಮಗಳ ವರದಿಗಳ ಪ್ರಕಾರ, ಸಾಹಿಲ್ ಖಾನ್ ಅವರ ಡಿವೈನ್ ನ್ಯೂಟ್ರಿಷನ್ ಕಂಪೆನಿ 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವ್ಯವಹಾರ ನಡೆಸುತ್ತದೆ ಮತ್ತು ಕಂಪೆನಿಯು ದೇಶಾದ್ಯಂತ ಯಶಸ್ವಿ ಜಿಮ್ ಶಾಖೆಗಳನ್ನು ಹೊಂದಿದೆ. ಇಷ್ಟು ಮಾತ್ರವಲ್ಲದೆ, ಖಾನ್ ಅವರೇ ಸ್ವತಃ ಪ್ರಮುಖ ಫಿಟ್ನೆಸ್ ತರಬೇತುದಾರರಾಗಿದ್ದಾರೆ. ಇದರ ಜೊತೆಗೆ ಯಶಸ್ವಿ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ. 

58

ಸಾಹಿಲ್ ಖಾನ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಫಿಟ್‌ನೆಸ್, ಜೀವನಶೈಲಿಯ ಬಗ್ಗೆ ತಿಳಿಸಿ ಕೊಡಲಾಗುತ್ತದೆ. ಯೂಟ್ಯೂಬ್ ಚಾನೆಲ್ ನಲ್ಲಿ ಫಿಟ್‌ನೆಸ್ ಮತ್ತು ದೇಹದಾರ್ಢ್ಯ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಕೆಲವೊಂದು ಟಿಪ್ಸ್‌ಗಳನ್ನು ಸ್ವತಃ ಸಾಹಿಲ್ ಖಾನ್ ಈ ಚಾನೆಲ್‌ ಮುಖಾಂತ ನೀಡುತ್ತಾರೆ.

68

ಸಾಹಿಲ್ ಖಾನ್ ಯೂಟ್ಯೂಬ್ ಚಾನೆಲ್ 3.2 ಮಿಲಿಯನ್ ಚಂದಾದಾರರನ್ನು ಹೊಂದಿದೆ ಮತ್ತು ಅವರ ವೀಡಿಯೊಗಳಲ್ಲಿ 29 ಕೋಟಿಗೂ ಹೆಚ್ಚು ವೀಕ್ಷಣೆ ಪಡೆಯುತ್ತದೆ. ಸಾಹಿಲ್‌ ಕಂಪೆನಿ ಡಿವೈನ್ ನ್ಯೂಟ್ರಿಷನ್ 100 ಗೂ ಹೆಚ್ಚು ಮೌಲ್ಯದ್ದಾಗಿದ್ದರೆ. ಸಾಹಿಲ್ ಖಾನ್ ನಿವ್ವಳ ಮೌಲ್ಯ 40 ರಿಂದ 60 ಕೋಟಿ ಎಂದು ಅಂದಾಜಿಸಲಾಗಿದೆ. 

78

ಸಾಹಿಲ್ ಖಾನ್ ಈಗ ಮತ್ತೆ ಟಿವಿ ಶೋಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ ಮತ್ತು ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ದುಬೈನಲ್ಲಿ ಹೆಚ್ಚಾಗಿ ಸಮಯ ಕಳೆಯುವ ಸಾಹಿಲ್‌ ತುಂಬಾ ಐಶಾರಾಮಿ ಜೀವನ ನಡೆಸುತ್ತಿದ್ದಾರೆ.

88

2003 ರಲ್ಲಿ ಸಾಹಿಲ್‌ ನರ್ತಕಿ ಮತ್ತು ನಟಿ ನೆಗರ್ ಖಾನ್ ಅವರನ್ನು ವಿವಾಹವಾದರು. ಆದರೆ ದಂಪತಿಗಳು 2005 ರಲ್ಲಿ ವಿಚ್ಛೇದನ ಪಡೆದರು. 2011 ರಲ್ಲಿ ಅವರು ತಮ್ಮ ವ್ಯಾಪಾರ ಪಾಲುದಾರರಾಗಿದ್ದ ಆಯೇಶಾ ಶ್ರಾಫ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಆಯೇಷಾ, ಸಾಹಿಲ್‌  ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ನಂತರ, ಸಾಹಿಲ್‌ ವಕೀಲರು ರಾಜಿಯಲ್ಲಿ ಇದನ್ನು ಮುಗಿಸಿದರು. 2014 ರಲ್ಲಿ ನಟಿ ಸನಾ ಖಾನ್ ಅವರ ಗೆಳೆಯ ಇಸ್ಮಾಯಿಲ್ ಖಾನ್ ಅವರೊಂದಿಗೆ ಜಿಮ್‌ನಲ್ಲಿ ಜಗಳವಾಡಿದ್ದರು. ಸಾಹಿಲ್ ಮತ್ತು ಸನಾ ಅವರ ಸಂಬಂಧದ ಬಗ್ಗೆ ವದಂತಿಗಳು ಹರಡಿದ್ದವು ಆದರೆ ನಟ ಈ ಸುದ್ದಿಯನ್ನು ನಿರಾಕರಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬಾಲಿವುಡ್
ವ್ಯವಹಾರ

Latest Videos
Recommended Stories
Recommended image1
ಮುರಿದ ಬಿದ್ದ ಮದುವೆ.. ಮತ್ತೆ 8 ವರ್ಷಕ್ಕೆ ಹಸೆಮಣೆ ಏರುತ್ತಿರುವ ರಶ್ಮಿಕಾ; ವಿಜಯ್ ದೇವರಕೊಂಡ ಜತೆ ಲವ್ ಆಗಿರೋ ಸೀಕ್ರೆಟ್ ಹೊರಬಂತು!
Recommended image2
ಪೂಲ್ ಪಾರ್ಟಿನಲ್ಲಿ ವಾಟರ್ ಬಾಲ್, ಹಸಿರು ಥೀಮ್.. ನ್ಯಾಷನಲ್ ಕ್ರಷ್+ರೌಡಿ ಸ್ಟಾರ್ ಮದುವೆ; 'ವಿರೋಶ್' ವೈಭವ ಹೇಗಿರಲಿದೆ ಗೊತ್ತಾ?
Recommended image3
26ಕ್ಕೆ ರಶ್ಮಿಕಾ-ವಿಜಯ್‌ ವಿವಾಹ : ಉದಯಪುರಕ್ಕೆ ಆಗಮನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved