ವಿವಾದದಾತ್ಮಕವಾಗಿ ಬೇರೆಯಾದ ಬಾಲಿವುಡ್ನ ಟಾಪ್ ಪ್ರೇಮಿಗಳು
ಬಾಲಿವುಡ್ ನಲ್ಲಿ ಅನೇಕ ಜೋಡಿಗಳು ಹಲವು ವರ್ಷಗಳ ಕಾಲ ಸುತ್ತಾಡಿ, ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ಮಾತ್ರವಲ್ಲ ಹಲವು ಬ್ರೇಕ್ ಅಪ್ ಗೆ ಕಾರಣಗಳು ಕೂಡ ಆಶ್ಚರ್ಯವನ್ನು ಉಂಟು ಮಾಡುತ್ತದೆ. ಇಂದು ಬಾಲಿವುಡ್ನಲ್ಲಿ ಅತ್ಯಂತ ವಿವಾದಾತ್ಮಕ ಬ್ರೇಕ್ ಅಪ್ ಗಳ ಬಗ್ಗೆ ವಿವರ ನೀಡುತ್ತಿದ್ದೇವೆ.
ಸಲ್ಮಾನ್ ಖಾನ್-ಐಶ್ವರ್ಯ ರೈ 1999 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು, 2002 ರಲ್ಲಿ ಬೇರ್ಪಟ್ಟರು. ನಟಿ ನೀಡಿದ ಸಂದರ್ಶನದಲ್ಲಿ, ಸಲ್ಮಾನ್ ನನ್ನೊಂದಿಗೆ ದೈಹಿಕವಾಗಿ ವರ್ತಿಸಿದ ಸಂದರ್ಭಗಳಿವೆ. ಆತ ಮಧ್ಯಪಾನ ಮಾಡಿ ದುರ್ವರ್ತನೆಯನ್ನು ತೋರಿದ ಕೆಟ್ಟ ಹಂತಗಳಲ್ಲಿ ಕೂಡ ಸಹಿಸಿಕೊಂಡು ಅವನೊಂದಿಗೆ ನಿಂತಿದ್ದೆ. ಮೌಖಿಕ, ದೈಹಿಕ ಮತ್ತು ಭಾವನಾತ್ಮಕ ನಿಂದನೆ ಅವನಿಂದ ಆಗಿದೆ. ಆದುದರಿಂದಲೇ ಇತರ ಸ್ವಾಭಿಮಾನಿ ಮಹಿಳೆಯಂತೆ ನಾನು ಅವನೊಂದಿಗೆ ನನ್ನ ಸಂಬಂಧವನ್ನು ಕೊನೆಗೊಳಿಸಿದೆ ಹೇಳಿದ್ದರು.
ಬಿಪಾಶಾ ಬಸು-ಜಾನ್ ಅಬ್ರಹಾಂ ಸುಮಾರು 10 ವರ್ಷಗಳ ಡೇಟಿಂಗ್ ನಂತರ ಬೇರ್ಪಟ್ಟರು. ಈ ಬಗ್ಗೆ ಮಾತನಾಡಿದ ನಟಿ, ಯಾವುದೇ ವಿಘಟನೆಯು ಉತ್ತಮವಾದ ವಿಘಟನೆಯಲ್ಲ, ಮುರಿದ ಸ್ನೇಹ ಸೇರಿದಂತೆ ಎಲ್ಲವನ್ನೂ ಸಮಯವು ಗುಣಪಡಿಸುತ್ತದೆ. ಆದರೆ ಮೋಸ, ದಾಂಪತ್ಯ ದ್ರೋಹ ಮತ್ತು ವಂಚನೆಯನ್ನು ಕ್ಷಮಿಸಲು ಸಾಧ್ಯವೇ ಇಲ್ಲ ಎಂದಿದ್ದರು. ಜಾನ್ ಅಬ್ರಹಾಂ ವರ್ಷಗಳ ಕಾಲ ಒಟ್ಟಿಗೆ ಕಳೆದರೂ ಕಮಿಟ್ ಆಗಲು ತಯಾರಿರಲಿಲ್ಲ. ನಟಿಯನ್ನು ಮದುವೆಯಾಗಲು ತಯಾರಿರಲಿಲ್ಲ.
ದೀಪಿಕಾ ಪಡುಕೋಣೆ-ರಣಬೀರ್ ಕಪೂರ್ ಸಂಬಂಧವು ಹಲವು ವರ್ಷಗಳ ಬಳಿಕ ಕೊನೆಗೊಂಡಿತು. ಮಾಧ್ಯಮ ವರದಿಗಳ ಪ್ರಕಾರ, ರಣಬೀರ್ ದೀಪಿಕಾಗೆ ಮೋಸ ಮಾಡಿದ್ದಾನೆ. ಈ ಹಿಂದೆ ದೀಪಿಕಾ ಪಡುಕೋಣೆಗೆ ಮೋಸ ಮಾಡಿದ್ದನ್ನು ರಣಬೀರ್ ಕಪೂರ್ ಒಪ್ಪಿಕೊಂಡಿದ್ದರು. ಅವರು ಬೇರ್ಪಡಲು ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿರಬಹುದು.
ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ 2005 ಮತ್ತು 2009 ರ ನಡುವೆ ಸಂಬಂಧದಲ್ಲಿದ್ದರು. 2009 ರಲ್ಲಿ ನೆಸ್ ವಾಡಿಯಾ ಪಾರ್ಟಿಯೊಂದರಲ್ಲಿ ಕಪಾಳಮೋಕ್ಷ ಮಾಡಿದ ನಂತರ ಪ್ರೀತಿ ಮತ್ತು ನೆಸ್ ಬೇರೆಯಾದರು. 2014 ರಲ್ಲಿ ನಟಿ ಪ್ರೀತಿ ಜಿಂಟಾ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಉದ್ಯಮಿ ನೆಸ್ ವಾಡಿಯಾ ತನಗೆ ಕಿರುಕುಳ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ನಟಿ ದೂರು ದಾಖಲಿಸಿ, ಬಲಗೈಯಲ್ಲಿ ಮೂಗೇಟುಗಳನ್ನು ತೋರಿಸುವ ನಾಲ್ಕು ಚಿತ್ರಗಳನ್ನು ಸಹ ಸಲ್ಲಿಸಿದ್ದರು.
ನಟ ರಣಬೀರ್ ಮತ್ತು ಕತ್ರಿನಾ 6 ವರ್ಷಗಳ ಡೇಟಿಂಗ್ ಮಾಡಿ ಬಳಿಕ ಬೇರ್ಪಟ್ಟರು. ವರದಿಗಳ ಪ್ರಕಾರ, ರಣಬೀರ್ ತಾಯಿ ನೀತು ಕಪೂರ್ ಗೆ ಕತ್ರಿನಾ ಇಷ್ಟವಿರಲಿಲ್ಲ. 2016 ರಲ್ಲಿ ಪ್ರೇಮಿಗಳು ಬೇರ್ಪಟ್ಟಿದ್ದರು. ನಟಿ ಅದನ್ನು ಆಶೀರ್ವಾದ ಎಂದು ಕರೆದರು.
ಹಾನ್ ಮೈನೆ ಭಿ ಪ್ಯಾರ್ ಕಿಯಾ ಆನ್-ಸ್ಕ್ರೀನ್ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ಐದು ವರ್ಷಗಳ ಕಾಲ ನಿಜ ಜೀವನದಲ್ಲಿ ಡೇಟಿಂಗ್ ಮಾಡುತ್ತಿದ್ದರು ಮತ್ತು 2002 ರಲ್ಲಿ ಅಮಿತಾಬ್ ಬಚ್ಚನ್ ಅವರ 60 ನೇ ಹುಟ್ಟುಹಬ್ಬದಂದು ನಿಶ್ಚಿತಾರ್ಥ ಮಾಡಿಕೊಂಡರು. ಆದಾಗ್ಯೂ, ಅಭಿಷೇಕ್ ಮತ್ತು ಕರಿಷ್ಮಾ ಅವರ ಬ್ರೇಕ್ಅಪ್ 2003 ರಲ್ಲಿ ಚರ್ಚೆಯಾಯಿತು. ಅಭಿಷೇಕ್ ಆಗ ಪ್ರಸಿದ್ಧ ನಟನಾಗಿರಲಿಲ್ಲ. ಕರಿಷ್ಮಾ ಟಾಪ್ ನಟಿಯಾಗಿದ್ದರು. ಇದು ಜೋಡಿಗಳಿಬ್ಬರ ತಾಯಿಯಂದಿರ ನಡುವೆ ಚರ್ಚೆಗೆ ಕಾರಣವಾಗಿತ್ತಂತೆ.