Asianet Suvarna News Asianet Suvarna News

ಇನ್​ಸ್ಟಾಗ್ರಾಮ್​ನಲ್ಲಿ ಅಭಿಷೇಕ್​ ಬಚ್ಚನ್​ ನೋವಿನ ನುಡಿ: ಐಶ್ವರ್ಯ ಜೊತೆಗಿನ ಡಿವೋರ್ಸ್​ ನಿಜನಾ?

 ಇನ್​ಸ್ಟಾಗ್ರಾಮ್​ನಲ್ಲಿ ಅಭಿಷೇಕ್​ ಬಚ್ಚನ್​ ಬರೆದುಕೊಂಡಿದ್ದಾರೆ ನೋವಿನ ನುಡಿ: ಐಶ್ವರ್ಯ ಜೊತೆಗಿನ ಡಿವೋರ್ಸ್​ ನಿಜನಾ? ಅಷ್ಟಕ್ಕೂ ಏನಿದೆ ಇದರಲ್ಲಿ?
 

Amid Divorce Rumours With Aishwarya Rai Abhishek Bachchan Drops A Cryptic Post suc
Author
First Published Jan 27, 2024, 1:20 PM IST

ಸದ್ಯ ಬಿ-ಟೌನ್​ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ವಿಚ್ಛೇದನದ ಸುದ್ದಿ.  ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದೆ. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದರು. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್‌ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ.ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್​ ಬಚ್ಚನ್​ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗುತ್ತಿದೆ.

ಇದಾದ ಮೇಲೆ ನಡೆದ ಘಟನೆಗಳನ್ನು ತಾಳೆ ಹಾಕಿ ನೋಡಿದಾಗ ಜೋಡಿ ಪ್ರತ್ಯೇಕ ಆಗುತ್ತಿರುವುದು ನಿಜ ಎಂದೇ ನಂಬಲಾಗಿತ್ತು. ಸಾಲದು ಎಂಬಂತೆ, ನಾನು ಹಾಗೂ ಪತ್ನಿ ಐಶ್ವರ್ಯಾ ಪೋಷಕರೊಂದಿಗೆ ಜೊತೆಯಾಗಿ ವಾಸ ಮಾಡುತ್ತಿಲ್ಲ ಎಂದು ಅಭಿಷೇಕ್ ಬಚ್ಚನ್ ಹೇಳಿರುವ ವೀಡಿಯೋವೊಂದು ವೈರಲ್ ಆಗಿತ್ತು.  ಕೆಲ ದಿನಗಳ ಹಿಂದಷ್ಟೇ ಐಶ್ವರ್ಯಾ ಅವರು ತಮ್ಮ ಅತ್ತೆ ಮಾವನ ಮನೆ ಜಲ್ಸಾದಿಂದ ಹೊರಬಂದು ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದಾರೆ ಎಂದು ವರದಿ ಆದ ಬೆನ್ನಲ್ಲೇ ಈ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್​ ಆಗಿತ್ತು.  2018ರಲ್ಲಿ ಮನಮರ್ಜಿಯನ್‌ ಸಿನಿಮಾದ ಪ್ರಮೋಷನ್ ವೇಳೆ ಸಂದರ್ಶನ ಮಾಡುತ್ತಿದ್ದ ವ್ಯಕ್ತಿ ಅಭಿಷೇಕ್ ಪ್ರಸ್ತುತ ಎಲ್ಲಿ ವಾಸವಿದ್ದಾರೆ ಎಂಬ ಬಗ್ಗೆ ಸಹ ನಟ ವಿಕ್ಕಿ ಕೌಶಲ್ ಅವರ ಬಳಿ ಕೇಳಿದ್ದರು. ಇದರಲ್ಲಿ ಪರೋಕ್ಷವಾಗಿ ಸಂದರ್ಶನ ನಡೆಸಿದವರು, ಹೀಗೆ ಕೇಳಿದ್ದರು. 'ಅಭಿಷೇಕ್ ಅವರ ಮನೆಯ ಹೆಸರು ಏನು' ಇದಕ್ಕೆ ವಿಕ್ಕಿ ಕೌಶಲ್‌ ಪ್ರತಿಕ್ರಿಯಿಸುವ ವೇಳೆ ಅಭಿಷೇಕ್ ಬಚ್ಚನ್ ಅವರು ಆತನ ಉತ್ತರಕ್ಕಾಗಿ ಬಹಳ ಉತ್ಸಾಹದಿಂದ ಕಾದಿದ್ದರು ಅಲ್ಲದೇ ಆತನಿಗೆ ಕ್ಲೂ ಕೂಡ ನೀಡಿದ್ದರು. ಆದರೆ ಕೊನೆಗೆ ವಿಕ್ಕಿ ಕೌಶಲ್ ಇದಕ್ಕೆ ಜಲ್ಸಾ ಎಂದು ಉತ್ತರ ನೀಡಿದ್ದರು.  ಆದರೆ ಅಭಿಷೇಕ್ ಅವರು ಈ ಉತ್ತರ ಸತ್ಯವಲ್ಲ ಎಂಬುದನ್ನು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದರು.

ಅಭಿಷೇಕ್ ಕಬಡ್ಡಿ ಪಂದ್ಯದಲ್ಲಿ ಬಚ್ಚನ್​ ಕುಟುಂಬ: ನಿಜ ಹೇಳ್ರೋ... ತಲೆ ಕೆರೆದುಕೊಳ್ತಿರೋ ಅಭಿಮಾನಿಗಳು!

ಅದಾದ ಬಳಿಕ   ಮುಂಬೈನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಆರಾಧ್ಯ ಬಚ್ಚನ್​ ಸೇರಿದಂತೆ  ಅಮಿತಾಭ್​  ಬಚ್ಚನ್ ಕೂಡ ಒಟ್ಟಿಗೇ ಕಾಣಿಸಿಕೊಂಡಿದ್ದು, ಅಭಿಮಾನಿಗಳು ತಲೆ ಕೆರೆದುಕೊಳ್ಳುವಂತಾಗಿತ್ತು.  ಅಭಿಷೇಕ್ ಅವರ ಕಬಡ್ಡಿ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ಅನ್ನು ಹುರಿದುಂಬಿಸಲು ಮತ್ತು ಬೆಂಬಲಿಸಲು ಬಚ್ಚನ್​ ಫ್ಯಾಮಿಲಿ ಬಂದಿತ್ತು.  ಇದನ್ನು ನೋಡಿದ ನೆಟ್ಟಿಗರು ಹಾಗಿದ್ದರೆ ಎಲ್ಲವೂ ಸರಿಯಿದೆಯೇ ಎಂದು ಪ್ರಶ್ನಿಸಿದರು. ಪಂದ್ಯಾವಳಿಯಲ್ಲಿ ಅಭಿಷೇಕ್ ಅವರ ಕಬಡ್ಡಿ ತಂಡವನ್ನು ಐಶ್ವರ್ಯಾ, ಆರಾಧ್ಯ ಮತ್ತು ಅಮಿತಾಭ್​ ಬಚ್ಚನ್ ಕೂಗುತ್ತಾ ಹುರಿದುಂಬಿಸುತ್ತಿರುವುದನ್ನು ನೋಡಿದರೆ ಎಲ್ಲವೂ ಸರಿಯಾದಂತಿದೆ ಎನ್ನುತ್ತಿದ್ದರು ಫ್ಯಾನ್ಸ್.  

ಆದರೆ ಇದೀಗ ಮತ್ತೊಮ್ಮೆ ಅಭಿಷೇಕ್​ ಬಚ್ಚನ್​ ಅವರು, ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ  ಪೋಸ್ಟ್ ಮಾಡಿದ್ದು, ಇದರ ಅರ್ಥವೇನು ಗೊತ್ತಾಗದೇ ಫ್ಯಾನ್ಸ್​ ಗಲಿಬಿಲಿಗೊಂಡಿದ್ದಾರೆ. ಅಷ್ಟಕ್ಕೂ ಅಭಿಷೇಕ್​ ಬಚ್ಚನ್​ ಅವರು ಬರೆದುಕೊಂಡಿದ್ದೇನೆಂದರೆ, ‘ಸೋಲಿನ ಭಯವು ಕನಸುಗಳನ್ನು ನಾಶಪಡಿಸುತ್ತದೆ. ಆದರೆ ಆ ಸೋಲಿನಿಂದ ಪಾಠ ಕಲಿತರೆ ಕನಸುಗಳು ನನಸಾಗುತ್ತವೆ’ ಎಂದು ಅಭಿಷೇಕ್ ಬರೆದಿದ್ದಾರೆ. ಅಭಿಷೇಕ್ ಅವರ ಈ ಪೋಸ್ಟ್ ನೋಡಿ, ನಟ ಐಶ್ವರ್ಯಾ ಅವರೊಂದಿಗಿನ ಸಂಬಂಧದ ಬಗ್ಗೆ ಸುಳಿವು ನೀಡುತ್ತಿರಬಹುದು ಎಂದು ನೆಟ್ಟಿಗರು ಭಾವಿಸುತ್ತಾರೆ. ಆದರೆ ಈ ಮಾತು ನಿಜನಾ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.

ಬ್ರಾಲೆಸ್​ ಕರೀನಾ ಕಪೂರ್​ ಖಾನ್​ಗೆ ಇದು ಮದುಮಗಳ ಡ್ರೆಸ್​ ಅಂತೆ! ನಿಮ್ಮಲ್ಲಿ ಹೀಗೇನಾ ಕೇಳ್ತಿದ್ದಾರೆ ನೆಟ್ಟಿಗರು...
 

Follow Us:
Download App:
  • android
  • ios