Asianet Suvarna News Asianet Suvarna News

ಅಭಿಷೇಕ್ ಕಬಡ್ಡಿ ಪಂದ್ಯದಲ್ಲಿ ಬಚ್ಚನ್​ ಕುಟುಂಬ: ನಿಜ ಹೇಳ್ರೋ... ತಲೆ ಕೆರೆದುಕೊಳ್ತಿರೋ ಅಭಿಮಾನಿಗಳು!

ಅಭಿಷೇಕ್ ಕಬಡ್ಡಿ ಪಂದ್ಯದಲ್ಲಿ ಬಚ್ಚನ್​ ಕುಟುಂಬ ಒಟ್ಟಿಗೇ ಕಾಣಿಸಿಕೊಂಡಿದ್ದು ಇದರ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿ ತಲೆ ಕೆರೆದುಕೊಳ್ತಿದ್ದಾರೆ ಅಭಿಮಾನಿಗಳು!
 

Amitabh Bachchan Aishwarya Rai Aaradhya cheer for Abhisheks kabaddi team fans react suc
Author
First Published Jan 7, 2024, 1:52 PM IST

ಸದ್ಯ ಬಿ-ಟೌನ್​ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ವಿಚ್ಛೇದನದ ಸುದ್ದಿ.  ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದೆ. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದರು. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್‌ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ.ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್​ ಬಚ್ಚನ್​ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗುತ್ತಿದೆ.

ಇದಾದ ಮೇಲೆ ನಡೆದ ಘಟನೆಗಳನ್ನು ತಾಳೆ ಹಾಕಿ ನೋಡಿದಾಗ ಜೋಡಿ ಪ್ರತ್ಯೇಕ ಆಗುತ್ತಿರುವುದು ನಿಜ ಎಂದೇ ನಂಬಲಾಗಿತ್ತು. ಸಾಲದು ಎಂಬಂತೆ, ನಾನು ಹಾಗೂ ಪತ್ನಿ ಐಶ್ವರ್ಯಾ ಪೋಷಕರೊಂದಿಗೆ ಜೊತೆಯಾಗಿ ವಾಸ ಮಾಡುತ್ತಿಲ್ಲ ಎಂದು ಅಭಿಷೇಕ್ ಬಚ್ಚನ್ ಹೇಳಿರುವ ವೀಡಿಯೋವೊಂದು ವೈರಲ್ ಆಗಿತ್ತು.  ಕೆಲ ದಿನಗಳ ಹಿಂದಷ್ಟೇ ಐಶ್ವರ್ಯಾ ಅವರು ತಮ್ಮ ಅತ್ತೆ ಮಾವನ ಮನೆ ಜಲ್ಸಾದಿಂದ ಹೊರಬಂದು ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದಾರೆ ಎಂದು ವರದಿ ಆದ ಬೆನ್ನಲ್ಲೇ ಈ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್​ ಆಗಿತ್ತು.  2018ರಲ್ಲಿ ಮನಮರ್ಜಿಯನ್‌ ಸಿನಿಮಾದ ಪ್ರಮೋಷನ್ ವೇಳೆ ಸಂದರ್ಶನ ಮಾಡುತ್ತಿದ್ದ ವ್ಯಕ್ತಿ ಅಭಿಷೇಕ್ ಪ್ರಸ್ತುತ ಎಲ್ಲಿ ವಾಸವಿದ್ದಾರೆ ಎಂಬ ಬಗ್ಗೆ ಸಹ ನಟ ವಿಕ್ಕಿ ಕೌಶಲ್ ಅವರ ಬಳಿ ಕೇಳಿದ್ದರು. ಇದರಲ್ಲಿ ಪರೋಕ್ಷವಾಗಿ ಸಂದರ್ಶನ ನಡೆಸಿದವರು, ಹೀಗೆ ಕೇಳಿದ್ದರು. 'ಅಭಿಷೇಕ್ ಅವರ ಮನೆಯ ಹೆಸರು ಏನು' ಇದಕ್ಕೆ ವಿಕ್ಕಿ ಕೌಶಲ್‌ ಪ್ರತಿಕ್ರಿಯಿಸುವ ವೇಳೆ ಅಭಿಷೇಕ್ ಬಚ್ಚನ್ ಅವರು ಆತನ ಉತ್ತರಕ್ಕಾಗಿ ಬಹಳ ಉತ್ಸಾಹದಿಂದ ಕಾದಿದ್ದರು ಅಲ್ಲದೇ ಆತನಿಗೆ ಕ್ಲೂ ಕೂಡ ನೀಡಿದ್ದರು. ಆದರೆ ಕೊನೆಗೆ ವಿಕ್ಕಿ ಕೌಶಲ್ ಇದಕ್ಕೆ ಜಲ್ಸಾ ಎಂದು ಉತ್ತರ ನೀಡಿದ್ದರು.  ಆದರೆ ಅಭಿಷೇಕ್ ಅವರು ಈ ಉತ್ತರ ಸತ್ಯವಲ್ಲ ಎಂಬುದನ್ನು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದರು.

ಹುಡುಗರು ನಿಮ್ಮನ್ನು ಕಂಡಾಕ್ಷಣ ಎಲ್ಲಿ ನೋಡ್ತಾರೆ ಎಂದಾಗ ಜಾಹ್ನವಿ ಕೊಟ್ಟ ಉತ್ತರ ಕೇಳಿ ಕರಣ್​ ಜೋಹರ್​ ಶಾಕ್​!

 

ಆದರೆ ಇದೀಗ ಕುತೂಹಲದ ಸಂಗತಿ ಎಂದರೆ, ಮುಂಬೈನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಆರಾಧ್ಯ ಬಚ್ಚನ್​ ಸೇರಿದಂತೆ  ಅಮಿತಾಭ್​  ಬಚ್ಚನ್ ಕೂಡ ಒಟ್ಟಿಗೇ ಕಾಣಿಸಿಕೊಂಡಿದ್ದು, ಅಭಿಮಾನಿಗಳು ತಲೆ ಕೆರೆದುಕೊಳ್ಳುವಂತಾಗಿದೆ.  ಅಭಿಷೇಕ್ ಅವರ ಕಬಡ್ಡಿ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ಅನ್ನು ಹುರಿದುಂಬಿಸಲು ಮತ್ತು ಬೆಂಬಲಿಸಲು ಬಚ್ಚನ್​ ಫ್ಯಾಮಿಲಿ ಬಂದಿತ್ತು.  ಕುಟುಂಬಸ್ಥರು ತಂಡವನ್ನು ಹುರಿದುಂಬಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನು ನೋಡಿದ ನೆಟ್ಟಿಗರು ಹಾಗಿದ್ದರೆ ಎಲ್ಲವೂ ಸರಿಯಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಹಾಗಿದ್ದರೆ ಇಷ್ಟು ದಿನ ನಡೆದದ್ದು ನಿಜವೋ, ಇದು ನಿಜವೋ ಒಂದೂ ಗೊತ್ತಾಗುತ್ತಿಲ್ಲ ಎಂದಿದ್ದಾರೆ.  ಪಂದ್ಯಾವಳಿಯಲ್ಲಿ ಅಭಿಷೇಕ್ ಅವರ ಕಬಡ್ಡಿ ತಂಡವನ್ನು ಐಶ್ವರ್ಯಾ, ಆರಾಧ್ಯ ಮತ್ತು ಅಮಿತಾಭ್​ ಬಚ್ಚನ್ ಕೂಗುತ್ತಾ ಹುರಿದುಂಬಿಸುತ್ತಿರುವುದನ್ನು ನೋಡಿದರೆ ಎಲ್ಲವೂ ಸರಿಯಾದಂತಿದೆ ಎನ್ನುತ್ತಿದ್ದಾರೆ ಫ್ಯಾನ್ಸ್. ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ತನ್ನ ಅಧಿಕೃತ X ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಜೆರ್ಸಿಯನ್ನು ಧರಿಸಿರುವ ಬಚ್ಚನ್‌ಗಳ ವಿಡಿಯೋ  ಹಂಚಿಕೊಂಡಿದೆ. ಇದಕ್ಕೂ ಮೊದಲು, ಶಾಲೆಯಲ್ಲಿ ಆರಾಧ್ಯ  ವಾರ್ಷಿಕ ಸಮಾರಂಭದಲ್ಲಿ ದಂಪತಿ  ಒಟ್ಟಿಗೆ ಕಾಣಿಸಿಕೊಂಡರು. ಶ್ವೇತಾ ಬಚ್ಚನ್ ಮತ್ತು ನಿಖಿಲ್ ನಂದಾ ಅವರ ಮಗ, ಅಗಸ್ತ್ಯ ನಂದಾ ಅವರ ಚೊಚ್ಚಲ ಚಿತ್ರ ‘ದಿ ಆರ್ಚೀಸ್’ ನ ಪ್ರಥಮ ಪ್ರದರ್ಶನದಲ್ಲಿ ಕುಟುಂಬವು ಒಟ್ಟಿಗೆ ಬಂದಿತ್ತು. ಅಂದಹಾಗೆ,  ಅಭಿಷೇಕ್ ಅವರು ಬಂಟಿ ವಾಲಿಯಾ ಅವರೊಂದಿಗೆ ಜೈಪುರ ಪಿಂಕ್ ಪ್ಯಾಂಥರ್ಸ್ ಸಹ-ಮಾಲೀಕರಾಗಿದ್ದಾರೆ. ತಂಡವು 2014 ರಲ್ಲಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡಲು ಪ್ರಾರಂಭಿಸಿತು. ಈಗ ಅಭಿಮಾನಿಗಳು ಫುಲ್​ ಕನ್​ಫ್ಯೂಸನ್​ನಲ್ಲಿ ಇದ್ದು, ವಿಡಿಯೋ ನೋಡಿದ ಮೇಲೆ ನಿಜ ಹೇಳ್ರೋ ಅಂತಿದ್ದಾರೆ. 

ಪುಷ್ಪಾ ಶೂಟಿಂಗ್​ ಬಿಟ್ಟು ಮುಂಬೈಗೆ ಹಾರಿದ ರಶ್ಮಿಕಾ: ಪತ್ನಿ ಆಲಿಯಾ ಎದುರೇ ಕಿಸ್​ ಕೊಟ್ಟ ರಣಬೀರ್​- ವಿಡಿಯೋ ವೈರಲ್

Follow Us:
Download App:
  • android
  • ios