ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಂಬೈನಲ್ಲಿರುವ ತಮ್ಮ ಎರಡು ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು 12.38 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸುಮಾರು 9 ವರ್ಷಗಳ ಹಿಂದೆ ಖರೀದಿಸಿದ್ದ ಈ ಆಸ್ತಿಯಿಂದ ಅವರಿಗೆ ಶೇ. 38 ರಷ್ಟು ಲಾಭ ಬಂದಿದೆ.

ಮುಂಬೈ: ಬಾಲಿವುಡ್‌ನ ಕಿಲಾಡಿ ಅಕ್ಷಯ್ ಕುಮಾರ್ ಕೇವಲ ಸಿನಿಮಾಗಳಿಂದ ಮಾತ್ರವಲ್ಲ, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲೂ ಪಂಟರ್. ವರದಿಗಳ ಪ್ರಕಾರ ಅಕ್ಷಯ್ ಕುಮಾರ್ ಮುಂಬೈನ ಮುಲುಂಡ್ ಪಶ್ಚಿಮದಲ್ಲಿರುವ (Mulund West) ತಮ್ಮ ಎರಡು ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಬರೋಬ್ಬರಿ 12.38 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

9 ವರ್ಷಗಳಲ್ಲಿ ಶೇ. 38 ರಷ್ಟು ಲಾಭ!

ಅಕ್ಷಯ್ ಕುಮಾರ್ ಈ ಫ್ಲಾಟ್‌ಗಳನ್ನು ಅಕ್ಟೋಬರ್ 2017 ರಲ್ಲಿ ಸುಮಾರು 9 ಕೋಟಿ ರೂಪಾಯಿಗೆ ಖರೀದಿಸಿದ್ದರು. ಅಂದರೆ ಸುಮಾರು 9 ವರ್ಷಗಳ ಅವಧಿಯಲ್ಲಿ ಈ ಆಸ್ತಿಯ ಮೌಲ್ಯವು ಸರಿಸುಮಾರು 1.70 ಕೋಟಿ ರೂಪಾಯಿಗಳಷ್ಟು (ಪ್ರತಿ ಫ್ಲಾಟ್‌ಗೆ) ಏರಿಕೆಯಾಗಿದೆ. ಇದು ಅಕ್ಷಯ್ ಕುಮಾರ್ ಅವರಿಗೆ ಶೇ. 38 ರಷ್ಟು ಲಾಭವನ್ನು ತಂದುಕೊಟ್ಟಿದೆ.

ಫ್ಲಾಟ್‌ಗಳ ವಿಶೇಷತೆ ಏನು?

ಮುಲುಂಡ್‌ನ ಎಲ್‌ಬಿಎಸ್ ರಸ್ತೆಯಲ್ಲಿರುವ ಓಬೆರಾಯ್ ರಿಯಾಲ್ಟಿಯ ಐಷಾರಾಮಿ ಯೋಜನೆಯಾದ ಓಬೆರಾಯ್ ಎನಿಗ್ಮಾದಲ್ಲಿ (Oberoi Enigma) ಈ ಫ್ಲಾಟ್‌ಗಳಿವೆ. ಪ್ರತಿ ಫ್ಲಾಟ್ 1,886 ಚದರ ಅಡಿ (ಕಾರ್ಪೆಟ್ ಏರಿಯಾ) ವಿಸ್ತೀರ್ಣ ಹೊಂದಿದೆ. ಪ್ರತಿ ಯೂನಿಟ್‌ನೊಂದಿಗೆ ತಲಾ 3 ರಂತೆ ಒಟ್ಟು 6 ಪಾರ್ಕಿಂಗ್ ಸ್ಲಾಟ್‌ಗಳನ್ನು ಒಳಗೊಂಡಿದೆ. ಸನ್ನಿ ಹೋಮ್ ಕೇರ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು ಈ ಎರಡೂ ಫ್ಲಾಟ್‌ಗಳನ್ನು ತಲಾ 6.19 ಕೋಟಿ ರೂಪಾಯಿಯಂತೆ ಖರೀದಿಸಿದೆ.

ಈ ವ್ಯವಹಾರಕ್ಕಾಗಿ ಖರೀದಿದಾರರು ಪ್ರತಿ ಫ್ಲಾಟ್‌ಗೆ 37.14 ಲಕ್ಷ ರೂಪಾಯಿಯಂತೆ ಒಟ್ಟು 74.28 ಲಕ್ಷ ರೂಪಾಯಿ ಸ್ಟಾಂಪ್ ಡ್ಯೂಟಿ (Stamp Duty) ಪಾವತಿಸಿದ್ದಾರೆ. ಈ ಮಾರಾಟ ಪ್ರಕ್ರಿಯೆಯು ಜೂನ್ 2026 ರಲ್ಲಿ ನೋಂದಣಿಯಾಗಿದೆ. ಕೇವಲ ಮುಲುಂಡ್ ಮಾತ್ರವಲ್ಲದೆ ಜೂನ್ 2 ರಂದು ಅಕ್ಷಯ್ ಕುಮಾರ್ ಮುಂಬೈನ ಬೋರಿವಲಿ ಈಸ್ಟ್‌ನಲ್ಲಿರುವ 'ಓಬೆರಾಯ್ ಸ್ಕೈ ಸಿಟಿ'ಯ ಎರಡು ಅಪಾರ್ಟ್‌ಮೆಂಟ್‌ಗಳನ್ನು

ಒಟ್ಟು 7.1 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಈ ಆಸ್ತಿಗಳನ್ನು ಸುವರ್ಣ ರೂಪೇಶ್ ಕುಮಾರ್ ಸಕ್ಪಾಲ್ ಎಂಬುವವರು ಖರೀದಿಸಿದ್ದಾರೆ. ಅಕ್ಷಯ್ ಕುಮಾರ್ ಇತ್ತೀಚೆಗೆ 'ವೆಲ್ಕಮ್ ಟು ದಿ ಜಂಗಲ್' (Welcome To The Jungle) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಮಿಶ್ರ ವಿಮರ್ಶೆಗಳನ್ನು ಪಡೆದಿದ್ದರೂ ಸಹ, ಬಿಡುಗಡೆಯಾದ ಕೇವಲ ಏಳು ದಿನಗಳಲ್ಲಿ ಜಾಗತಿಕವಾಗಿ 130 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದೆ.