- Home
- Entertainment
- TV Talk
- ಕೆಲವೇ ದಿನಗಳಲ್ಲಿ ನಟಿ Mokshitha Pai 'ಜಗದ್ದಾತ್ರಿ' ಧಾರಾವಾಹಿ ಆರಂಭ; ಯಾವ ಸೀರಿಯಲ್ ಅಂತ್ಯ ಆಗಲಿದೆ?
ಕೆಲವೇ ದಿನಗಳಲ್ಲಿ ನಟಿ Mokshitha Pai 'ಜಗದ್ದಾತ್ರಿ' ಧಾರಾವಾಹಿ ಆರಂಭ; ಯಾವ ಸೀರಿಯಲ್ ಅಂತ್ಯ ಆಗಲಿದೆ?
Mokshitha Pai Jagaddhatri Kannada Serial: ಖಾಸಗಿ ವಾಹಿನಿಯಲ್ಲಿ ‘ಜಗದ್ದಾತ್ರಿ’ ಧಾರಾವಾಹಿ ಪ್ರಸಾರ ಆಗಲಿದೆ. ಮೋಕ್ಷಿತಾ ಪೈ, ವಿಜಯ್ ಸೂರ್ಯ ನಟನೆಯ ಈ ಸೀರಿಯಲ್‌ಗೋಸ್ಕರ ಇನ್ನೊಂದು ಧಾರಾವಾಹಿ ಅಂತ್ಯ ಆಗಲಿದೆ. ಹಾಗಾದರೆ ಯಾವ ಧಾರಾವಾಹಿ ಮುಗಿಯಲಿದೆ?

ಆಕ್ಷನ್ ಅವತಾರ ತಾಳಿದ ಮೋಕ್ಷಿತಾ ಪೈ
‘ಜಗದ್ದಾತ್ರಿ’ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದೆ. ನಟಿ ಮೋಕ್ಷಿತಾ ಪೈ ಅವರು ಸಖತ್ ಆಕ್ಷನ್ ಅವತಾರ ತಾಳಿದ್ದಾರೆ. ವಿಜಯ್ ಸೂರ್ಯ ಕೂಡ ಇವರಿಗೆ ಸಾಥ್ ನೀಡಿದ್ದಾರೆ. ಅಂದಹಾಗೆ ಕವಿತಾ ಗೌಡ, ಚಂದನಾ ಗೌಡ, ಲಕ್ಷ್ಮೀ ಸಿದ್ದಯ್ಯ ಕೂಡ ನಟಿಸಿದ್ದಾರೆ.
ದೊಡ್ಡ ತಾರಾಗಣವಿರುವ ಸೀರಿಯಲ್
ದೊಡ್ಡ ತಾರಾಗಣವಿರುವ ಸೀರಿಯಲ್ ಇದಾಗಿದೆ. ಈ ಪ್ರೋಮೋ ಸಖತ್ ಡಿಫರೆಂಟ್ ಆಗಿ ಬಂದಿದೆ. ಒಟ್ಟಿನಲ್ಲಿ ಈ ಧಾರಾವಾಹಿ ಕತೆ ಏನು? ಮೋಕ್ಷಿತಾ ಪಾತ್ರ ಹೇಗಿರಲಿದೆ ಎಂಬ ಪ್ರಶ್ನೆ ಕಾಡುತ್ತಿದೆ. ಈ ಸೀರಿಯಲ್ ನೋಡಲು ವೀಕ್ಷಕರು ಕಾಯುತ್ತಲಿದ್ದಾರೆ.
ಸೀರಿಯಲ್ ಆರಂಭ ಆಗೋದು ಯಾವಾಗ?
ಜಗದ್ದಾತ್ರಿ ಧಾರಾವಾಹಿ ಪ್ರಸಾರದ ದಿನಾಂಕ ರಿವೀಲ್ ಆಗಿಲ್ಲ. ಒಟ್ಟಿನಲ್ಲಿ ಈ ಧಾರಾವಾಹಿ ಆರಂಭ ಆಗಲು ಇನ್ನು ಸ್ವಲ್ಪ ಸಮಯ ಆಗುವುದು. ಈ ಸೀರಿಯಲ್‌ಗೋಸ್ಕರ ಇನ್ನೊಂದು ಧಾರಾವಾಹಿ ಅಂತ್ಯ ಆಗಬೇಕಿದೆ.
ಅಮೃತಧಾರೆ ಧಾರಾವಾಹಿ 1000 ಎಪಿಸೋಡ್ ಪ್ರಸಾರ
ಅಮೃತಧಾರೆ ಧಾರಾವಾಹಿ 1000 ಎಪಿಸೋಡ್ ಪ್ರಸಾರ ಆಗಿದೆ. ಕನ್ನಡ ಕಿರುತೆರೆ ಲೋಕದಲ್ಲಿ ಇದೊಂದು ಮೈಲಿಗಲ್ಲು ಎನ್ನಬಹುದು. ಅಮೃತಧಾರೆ ಧಾರಾವಾಹಿ ಅಂತ್ಯ ಆಗಲಿದೆಯಾ ಎಂಬ ಬಗ್ಗೆ ಸೀರಿಯಲ್ ತಂಡವಾಗಲೀ, ಕಲಾವಿದರಾಗಲೀ ಉತ್ತರ ಕೊಟ್ಟಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

