Asianet Suvarna News Asianet Suvarna News

ಕಟ್ಟಡದಿಂದ ಕಟ್ಟಡಕ್ಕೆ ಜಿಗಿದ ಆ್ಯಕ್ಷನ್​ ಕಿಂಗ್​: ಅಕ್ಷಯ್​ ಕುಮಾರ್​ ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್​

ಕಟ್ಟಡದಿಂದ ಕಟ್ಟಡಕ್ಕೆ ಜಿಗಿದ ಆ್ಯಕ್ಷನ್​ ಕಿಂಗ್​: ಅಕ್ಷಯ್​ ಕುಮಾರ್​ ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್​
 

Akshay Kumar jumped from building to building Video gone viral suc
Author
First Published Nov 5, 2023, 4:06 PM IST

ನಟ ಅಕ್ಷಯ್​ ಕುಮಾರ್​ ಅವರ ಚಿತ್ರಗಳು ಒಂದರ ಮೇಲೊಂದರಂತೆ ಫ್ಲಾಪ್​ ಆಗುತ್ತಿವೆ. ಯಾಕೋ ನಟನಿಗೆ ಅದೃಷ್ಟವೇ ಕೈಹಿಡಿಯುತ್ತಿಲ್ಲ. ಆದರೆ ಆ್ಯಕ್ಷನ್​ ಚಿತ್ರಗಳಲ್ಲಿ ಕೆಲವೇ ಕೆಲವು ನಟರು ಭಯಾನಕ ಸ್ಟಂಟ್​ಗಳಿಗೆ ಡ್ಯೂಪ್​ಗಳನ್ನು ಬಳಸುವುದಿಲ್ಲ. ಅಂಥವರಲ್ಲಿ ಒಬ್ಬರು ನಟ ಅಕ್ಷಯ್​ ಕುಮಾರ್​. ಇವರು ತಮ್ಮ ಬಹುತೇಕ ಆ್ಯಕ್ಷನ್​ ದೃಶ್ಯಗಳನ್ನು ತಾವೇ ಮಾಡುತ್ತಾರೆ. ಅಂಥದ್ದದಲ್ಲಿ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಒಂದು ಬಿಲ್ಡಿಂಗ್​ನಿಂದ ಇನ್ನೊಂದು ಬಿಲ್ಡಿಂಗ್​ಗೆ ಹಾರುವ ಆ್ಯಕ್ಷನ್​ ಸೀನ್​ ಇದಾಗಿದ್ದು, ನೋಡಿದರೆ ಅಬ್ಬಾ ಎನಿಸುವಂತಿದೆ. ಇದರ ವಿಡಿಯೋ ವೈರಲ್​ ಆಗಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ. ಕೆಲವರು ನಟನ ಕಾಲೆಳೆದಿದ್ದು, ನೀವು ಏನೇ  ಮಾಡಿದರೂ ಅದು ಫ್ಲಾಪೇ ಎನ್ನುತ್ತಿದ್ದಾರೆ. 

ಕೆಲ ದಿನಗಳ ಹಿಂದೆ ಅಕ್ಷಯ್​ ಕುಮಾರ್​ ವಿವಾದದಲ್ಲಿ ಸಿಲುಕಿದ್ದರು. ಇದರಿಂದ ಸಾಕಷ್ಟು ಟ್ರೋಲ್​ಗೂ ಒಳಗಾಗಿದ್ದರು. ಇದಕ್ಕೆ ಕಾರಣ,  ಪಾನ್​ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡದ್ದು. ಶಾರುಖ್​ ಖಾನ್​, ಅಕ್ಷಯ್​ ಕುಮಾರ್​ ಮತ್ತು ಅಜಯ್ ದೇವಗನ್​ ಕಾಣಿಸಿಕೊಂಡಿದ್ದಾರೆ. ಈ ಮೂವರ ಜೋಡಿ ವಿಮಲ್ ಪಾನ್​ ಮಸಾಲಾ ಜಾಹೀರಾತು ಮಾಡುತ್ತಾ ಬಂದಿದ್ದು ಬಹಳ ವರ್ಷಗಳೇ ಕಳೆದಿವೆ. ಇವರಿಂದ ಪ್ರಭಾವಿತರಾಗಿ ಇದರ ಚಟಕ್ಕೆ ದಾಸರಾಗಿರುವವರೂ ಲೆಕ್ಕವಿಲ್ಲದಷ್ಟು.  ಯಾವಾಗಲೂ ಫಿಟ್​ನೆಸ್ ಬಗ್ಗೆ ಮಾತನಾಡುವ ಅಕ್ಷಯ್ ಕುಮಾರ್ ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದು ಸರಿ ಅಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದರು. ಇದಾದ ಬೆನ್ನಲ್ಲೇ ವಿಮಲ್​ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದು ಅಕ್ಷಯ್​ ಹೇಳಿದ್ದರು.

ವಿದೇಶಕ್ಕೆ ಹೋದ್ರೆ 'ಓಹೊ ನೀವು ಮೋದಿ ಭಾರತದವ್ರಾ' ಅಂತ ಗೌರವ ಕೊಡ್ತಾರೆ ಎಂದ ಅಕ್ಷಯ್​ ಕುಮಾರ್​!

 2022ರ ಏಪ್ರಿಲ್​ನಲ್ಲಿ ಟ್ವೀಟ್ ಮಾಡಿದ್ದ ಅಕ್ಷಯ್, ‘ದಯವಿಟ್ಟು ನನ್ನ ಕ್ಷಮಿಸಿ. ಎಲ್ಲರ ಬಳಿ ನಾನು ಕ್ಷಮೆ ಕೇಳುತ್ತೇನೆ. ನೀವು ನೀಡಿರುವ ಎಲ್ಲಾ ಪ್ರತಿಕ್ರಿಯೆ ನನ್ನ ಮೇಲೆ ಪರಿಣಾಮ ಬೀರಿದೆ. ನಾನು ತಂಬಾಕು ಸೇವನೆ ಉತ್ತೇಜಿಸುವುದಿಲ್ಲ. ಮಾನವೀಯತೆಯ ಕಾರಣದಿಂದ ನಾನು ಈ ಅಡ್ವಟೈಸ್​ಮೆಂಟ್​ನಿಂದ ಹಿಂದೆ ಸರಿಯುತ್ತೇನೆ. ಇದರ ಸಂಭಾವನೆಯನ್ನು ಒಳ್ಳೆಯ ಉದ್ದೇಶಕ್ಕೆ ನೀಡಲು ಬಯಸಿದ್ದೇನೆ. ಬ್ರ್ಯಾಂಡ್​ನವರು ಒಪ್ಪಂದದ ಅವಧಿ ಮುಗಿಯುವವರೆಗೂ ಆ ಜಾಹೀರಾತನ್ನು ಟೆಲಿಕಾಸ್ಟ್ ಮಾಡಬಹುದು. ಮುಂಬರುವ ದಿನಗಳಲ್ಲಿ ನಾನು ಜಾಹೀರಾತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರುತ್ತೇನೆ’ ಎಂದಿದ್ದರು ಅಕ್ಷಯ್ ಕುಮಾರ್. ಆದರೆ ಇದರ ಬೆನ್ನಲ್ಲೇ ಜಾಹೀರಾತು ಮತ್ತೆ ಕಾಣಿಸಿಕೊಂಡಿದ್ದರಿಂದ ಜನರು ಟ್ರೋಲ್​ ಮಾಡಿದ್ದರು. ಆದರೆ ನಂತರ ಸ್ಪಷ್ಟನೆ ಕೊಟ್ಟಿದ್ದ ಅಕ್ಷಯ್​ ಕುಮಾರ್​ ತಮ್ಮ ಈ ಜಾಹೀರಾತಿನ ಅವಧಿ ಒಂದು ತಿಂಗಳವರೆಗೆ ಇದ್ದು, ಒಂದು ತಿಂಗಳು ಸಹಿಸಿಕೊಳ್ಳಿ ಎಂದಿದ್ದರು. ಅದಾದ ಬಳಿಕ ಕಳೆದ ತಿಂಗಳಿನಿಂದ ಈ ಜಾಹೀರಾತಿನಲ್ಲಿ ನಟ ಕಾಣಿಸಿಕೊಳ್ಳುತ್ತಿಲ್ಲ.

ಇದಾದ ಬಳಿಕ ಅಕ್ಷಯ್​ ಕುಮಾರ್​ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿ, ಕೆಲವರ ಕೆಂಗಣ್ಣಿಗೂ ಗುರಿಯಾದದ್ದುಂಟು. ಮೇಲಿಂದ ಮೇಲೆ ವಿದೇಶ ಪ್ರವಾಸದಲ್ಲಿರುವ ನಟ ಅಕ್ಷಯ್​ ಕುಮಾರ್​, ಅಲ್ಲಿ ತಮ್ಮನ್ನು ಯಾವ ರೀತಿ ನೋಡುತ್ತಾರೆ ಎನ್ನುವ ಕುರಿತು ಮಾತನಾಡಿದ್ದರು.  ಭಾರತದ ಪಾಸ್‌ಪೋರ್ಟ್ ಹಿಡಿದು ಯಾವುದೇ ದೇಶದ ವಲಸೆ ಕಚೇರಿಗೆ ಹೋದರೂ ಅಲ್ಲಿ ಗೌರವದಿಂದ ನೋಡುತ್ತಾರೆ. ಓಹ್! ನೀವು ಮೋದಿಯ ದೇಶದಿಂದ ಬಂದವರಾ? ಎನ್ನುತ್ತಾರೆ. ಇಂಥ ಗೌರವವನ್ನು ನಾನು ಈ ಹಿಂದೆ ಎಂದಿಗೂ ಪಡೆದೇ ಇಲ್ಲ ಎಂದಿದ್ದರು.  ಭಾರತ ಮುಂದುವರಿಯುತ್ತಿದೆ. ಇದು ವಿಶ್ವ ಖ್ಯಾತಿ ಗಳಿಸುತ್ತಿದೆ. ಭಾರತದ ಪಾಸ್‌ಪೋರ್ಟ್ ತೋರಿಸಿದರೆ ಇದು ಮೋದಿಯವರ ಭಾರತ ಅಲ್ಲವೆ ಎಂದು ಕೇಳುವಷ್ಟರ ಮಟ್ಟಿಗೆ ಭಾರತ ಸಾಗಿದೆ. ಹೀಗೆ ಹೇಳಿ ನನಗೆ ನೀಡುವ ಗೌರರವೇ ಅತ್ಯದ್ಭುತವಾದದ್ದು ಎಂದು ಅಕ್ಷಯ್​ ಕುಮಾರ್​ ಹೇಳಿದ್ದರು. ಇದನ್ನು ಒಂದು ವರ್ಗ ಸಹಿಸಿರಲಿಲ್ಲ. ಈಗ ಇವರ ಆ್ಯಕ್ಷನ್​ ಸೀನ್​ ಸಕತ್​ ಸೌಂಡ್​ ಮಾಡುತ್ತಿದೆ. 

ಅರೆಸ್ಟ್‌ ನಾಟಕವಾಡಿದ ನಟಿ ಉರ್ಫಿ ಜಾವೇದ್‌ಗೆ ಜೈಲು ಫಿಕ್ಸ್‌? ಮಾಡಿದ್ದೇನು, ಆಗಿದ್ದೇನು?

Follow Us:
Download App:
  • android
  • ios