ಅರೆಸ್ಟ್ ನಾಟಕವಾಡಿದ ನಟಿ ಉರ್ಫಿ ಜಾವೇದ್‌ಗೆ ಜೈಲು ಫಿಕ್ಸ್? ಮಾಡಿದ್ದೇನು, ಆಗಿದ್ದೇನು?
ಪಬ್ಲಿಸಿಟಿಗಾಗಿ ನಕಲಿ ಪೊಲೀಸರಿಂದ ಅರೆಸ್ಟ್ ನಾಟಕವಾಡಿದ್ದ ನಟಿ ಉರ್ಫಿ ಜಾವೇದ್ ಮತ್ತು ತಂಡಕ್ಕೆ ಭಾರಿ ಸಂಕಷ್ಟ ಎದುರಾಗಿದೆ. ಅಷ್ಟಕ್ಕೂ ಆಗಿದ್ದೇನು?
ಉರ್ಫಿ ಜಾವೇದ್ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್ (Troll) ಆಗುವುದು ಎಂದರೆ ತುಂಬಾ ಖುಷಿಯ ಹಾಗೆ ಕಾಣಿಸುತ್ತಿದೆ. ಇದೇ ಕಾರಣಕ್ಕೆ ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿ ಅರೆಬರೆ ಡ್ರೆಸ್ ರುಚಿ ನೋಡಿ ಅದನ್ನು ಬಿಡುತ್ತಿಲ್ಲ.
ಇಷ್ಟೇ ಆಗಿದ್ದರೆ ದಿನನಿತ್ಯವೂ ಟ್ರೋಲ್‌ಗೆ ಒಳಗಾಗಿ, ಅದನ್ನು ನಟಿ ಖುಷಿ ಪಡಬಹುದಿತ್ತು. ಆದರೆ ಒಮ್ಮೆ ಪಬ್ಲಿಸಿಟಿಯ ಹುಚ್ಚು ಹಿಡಿದರೆ ಅದು ಯಾವ ಮಟ್ಟಿಗೆ ಬೇಕಾದರೂ ಹೋಗಬಹುದು. ಉರ್ಫಿ ವಿಷಯದಲ್ಲಿಯೂ ಹೀಗೆಯೇ ಆಗಿದೆ. ಮೊನ್ನೆ ಉರ್ಫಿ ಮತ್ತು ಸಹೋದರಿ ಹಾಗೆ ಸುಮ್ಮನೆ ಲೋಖಂಡವಾಲಾದಲ್ಲಿ ಕಾಫಿ ಕುಡಿಯಲು ಹೋದಾಗ ಮಹಿಳಾ ಪೊಲೀಸರು ಬಂದು ಅರೆಸ್ಟ್ ಮಾಡಿದ್ದಾರೆ. ಸುಮ್ಮನೆ ಕುಳಿತಿದ್ದ ಉರ್ಫಿಯನ್ನು ಕರೆದು ತಕ್ಷಣವೇ ಪೊಲೀಸ್ ಜೀಪ್ ಹತ್ತಲು ಹೇಳಿದ್ದಾರೆ. ನಾನು ಯಾಕೆ ಬರಬೇಕು ನಾನು ಏನು ಮಾಡಿದೆ ಎಂದು ಉರ್ಫಿ ಪ್ರಶ್ನೆ ಮಾಡಿದಾಗ ಯಾರು ಇಷ್ಟು ಚಿಕ್ಕ ಪಟ್ಟೆಯನ್ನು ಹಾಕಿಕೊಂಡು ಹೊರ ಬರುತ್ತಾರೆ ಎಂದು ಮಹಿಳಾ ಪೇದೆ ಉತ್ತರಿಸುತ್ತಾರೆ. ಇಬ್ಬರು ಮಹಿಳಾ ಪೇದೆಗಳು ಉರ್ಫಿ ಕೈ ಹಿಡಿದುಕೊಂಡು ಜೀಪ್‌ನಲ್ಲಿ ಲೋಖಂಡವಾಲಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಾರೆ.
ಉರ್ಫಿ ಜಾವೇದ್ ಅರೆಸ್ಟ್; ಪೊಲೀಸ್ ಸ್ಟೇಷನ್‌ಗೆ ಹೀಗೂ ಹೋಗ್ಬೋದಾ ಎಂದ ನೆಟ್ಟಿಗರು!
ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡಿತು. ನಿಜವಾಗಿಯೂ ಉರ್ಫಿ ಜಾವೇದ್ ಅರೆಸ್ಟ್ ಆದರು ಎಂದೇ ಹಲವರು ಅಂದುಕೊಂಡಿದ್ದರೆ, ಕೆಲವರು ಮಾತ್ರ ಇದು ಪಬ್ಲಿಸಿಟಿಯ ಸ್ಟಂಟ್ ಎಂದು ಹೇಳುತ್ತಿದ್ದರು. ಆದರೆ ಪಬ್ಲಿಸಿಟಿಗಾಗಿ ಹೀಗೆ ಮಾಡಲಾಗಿದೆ ಎನ್ನುವುದು ತಿಳಿದುಬಂದಿದೆ. ನಕಲಿ ಪೊಲೀಸರು ಬಂದು ಉರ್ಫಿಯನ್ನು ಅರೆಸ್ಟ್ ಮಾಡುವ ಹಾಗೆ ಮಾಡಿದ್ದು, ಅದರ ವಿಡಿಯೋ ಶೂಟ್ ಮಾಡಿಸಿದ್ದಾರೆ. ಹೀಗೆ ಮಾಡಿದರೆ ಇನ್ನಷ್ಟು ಪಬ್ಲಿಸಿಟಿ ಸಿಗುವ ಆಸೆಯಲ್ಲಿ ಉರ್ಫಿ ಜೊತೆ ನಕಲಿ ಪೊಲೀಸರೂ ಸೇರಿದ್ದಾರೆ.
ಆದರೆ ಆದದ್ದೇ ಬೇರೆ. ಇದು ನಕಲಿ ಎಂದು ತಿಳಿಯುತ್ತಲೇ ಮುಂಬೈ ಕ್ರೈಂ ಪೊಲೀಸರು ನಟಿ ಮತ್ತು ಅವರ ತಂಡದ ವಿರುದ್ಧ ಗರಂ ಆಗಿದ್ದಾರೆ. ಹೀಗೆ ಸಾರ್ವಜನಿಕವಾಗಿ ಪೊಲೀಸರ ಸಮವಸ್ತ್ರವನ್ನು ದುರುಪಯೋಗಪಡಿಸಿಕೊಂಡದ್ದೂ ಅಲ್ಲದೇ, ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುವಂತೆ ಮಾಡಿರುವ ಆರೋಪದ ಮೇಲೆ ನಟಿ ಮತ್ತು ತಂಡದ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅದೂ ಅಂತಿಂಥ ಕೇಸ್ ಅಲ್ಲ, ಕ್ರಿಮಿನಲ್ ಕೇಸ್ ಜಡಿಯಲಾಗಿದೆ. ಮುಂದೆ ಏನಾಗುತ್ತದೋ ಎನ್ನುವುದನ್ನು ಕಾದು ನೋಡಬೇಕಿದೆ. ಆದರೆ ನಟಿಯ ವಿರುದ್ಧವೇ ಹಲವರು ಕಮೆಂಟ್ ಮಾಡಿದ್ದು, ಅತಿಯಾದರೆ ಹೀಗೆಯೇ ಆಗುವುದು ಎನ್ನುತ್ತಿದ್ದಾರೆ. ಇನ್ನು ಕೆಲವರು ಇದೆಲ್ಲಾ ಬೇಕಿತ್ತಾ ಅಂತಿದ್ದಾರೆ. ಕ್ರಿಮಿನಲ್ ಕೇಸ್ ದಾಖಲಾಗಿರುವ ಕಾರಣ, ಈಕೆಗೆ ಜೈಲೇ ಗತಿ ಎನ್ನಲಾಗುತ್ತಿದೆ.
ಉರ್ಫಿಯ ಹೊಸ ಫ್ರೆಂಡ್ ಕುಲ್ಫಿ: ರುಂಡ- ಮುಂಡ ಇಲ್ಲದ ನೂತನ ಸ್ನೇಹಿತೆಯ ಪರಿಚಯಿಸಿದ ನಟಿ!