ವಿದೇಶಗಳಿಗೆ ಹೋದಾಗ  ಭಾರತದ ಪಾಸ್​ಪೋರ್ಟ್​ ನೋಡಿದಾಕ್ಷಣ ಒಹೊ ನೀವು ಮೋದಿ ಭಾರತದವರಾ ಎಂದೇ ಸಂಬೋಧಿಸಿ ಗೌರವ ಕೊಡುತ್ತಾರೆ ಎಂದಿದ್ದಾರೆ ನಟ ಅಕ್ಷಯ್​ ಕುಮಾರ್​.  

ನಟ ಅಕ್ಷಯ್​ ಕುಮಾರ್​ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕಾ ಅಭಿಮಾನಿಯಾಗಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಪ್ರಧಾನಿ ಮೋದಿಯವರನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಲೇ ಇರುತ್ತಾರೆ. ಇವರು ಮೋದಿಯವರ ಕನಸಿನ ಕೂಸು ಸ್ವಚ್ಛ ಭಾರತದ ಕುರಿತು ‘ಟಾಯ್ಲೆಟ್: ಏಕ್ ಪ್ರೇಮ್‌ಕಥಾ’, ಮಂಗಳಯಾನ ಯಶಸ್ಸಿನ ಬಗ್ಗೆ ‘ಮಿಷನ್ ಮಂಗಳ್’ ಚಿತ್ರಗಳಲ್ಲಿ ನಟಿಸಿದ್ದರು. 2019ರಲ್ಲಿ ಪ್ರಧಾನಿಯವರ ಸಂದರ್ಶನ ಮಾಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಪರ-ವಿರೋಧ ನಿಲುವುಗಳು ವ್ಯಕ್ತವಾಗಿದ್ದವು. ಇದರ ಬಗ್ಗೆ ಸಾಕಷ್ಟು ಮಂದಿ ಟೀಕೆ ಮಾಡಿದ್ದರೂ ಅಕ್ಷಯ್​ ಕುಮಾರ್​ ಮಾತ್ರ ಮೋದಿಯವರನ್ನು ಹೊಗಳುವುದನ್ನು ನಿಲ್ಲಿಸುತ್ತಿಲ್ಲ. ಪ್ರಧಾನಿಯನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸುತ್ತಲೇ ಇರುತ್ತಾರೆ. ನರೇಂದ್ರ ಮೋದಿ ಅವರನ್ನು ನಾನು ಸಂದರ್ಶಿಸಿದ್ದೇನೆ ಎನ್ನುವುದೇ ನನಗಿರುವ ಹೆಮ್ಮೆ. ಕೇಳಲಾದ ಪ್ರಶ್ನೆಗಳು ಹೇಗಿದ್ದವು ಎನ್ನುವುದಕ್ಕಿಂತ, ಅವರ ಎದುರು ನಾನು ಕುಳಿತಿದ್ದೇನೆ ಎನ್ನುವುದೇ ನನಗೆ ದೊಡ್ಡ ಹೆಮ್ಮೆ ಅನಿಸಿತ್ತು. ಅವರ ಸರಳತೆ, ವ್ಯಕ್ತಿತ್ವನ್ನು ರೂಪಿಸಿಕೊಂಡ ಬಗೆಯು ನನಗೆ ತುಂಬಾ ಹಿಡಿಸಿತು ಎಂದು ಹೇಳಿದ್ದರು.

ಇಷ್ಟೆಲ್ಲಾ ಆದ ಬಳಿಕವೂ ಕೆನಡಾದ ಪೌರತ್ವ ಪಡೆದಿದ್ದರಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಭಾರತವನ್ನು ಹಾಡಿ ಹೊಗಳುವ ನಟನಿಗೆ ತಮ್ಮ ಪೌರತ್ವ ಎಲ್ಲಿಯದ್ದು ತಿಳಿದಿಲ್ಲ ಎಂದು ಹೇಳಿ ಟೀಕಿಸುತ್ತಿದ್ದರು. ಇದೀಗ ಭಾರತೀಯ ಪೌರತ್ವವನ್ನು ಪಡೆಯುವ ಮೂಲಕ ಅಕ್ಷಯ್​ ಕುಮಾರ್​ ಸದ್ಯ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಆಗಸ್ಟ್​ 15ರ ಸ್ವಾತಂತ್ರ್ಯದ ದಿನದಂದೇ ಭಾರತದ ಪೌರತ್ವ ಪಡೆದುಕೊಂಡಿದ್ದಾರೆ. ಅದೇನೇ ಇದ್ದರೂ ಪ್ರಧಾನಿ ಮೋದಿಯವರನ್ನು ಹೊಗಳುವುದನ್ನು ಮಾತ್ರ ನಿಲ್ಲಿಸಿಲ್ಲ.

ಇನ್ನೊಂದು ತಿಂಗಳು ಸಹಿಸಿಕೊಳ್ಳಿ: ಪಾನ್​ ಮಸಾಲಾ ಜಾಹೀರಾತಿಗೆ ಅಕ್ಷಯ್​ ಸ್ಪಷ್ಟನೆ-ಉಳಿದಿಬ್ಬರ ಕಥೆ?

ಮೇಲಿಂದ ಮೇಲೆ ವಿದೇಶ ಪ್ರವಾಸದಲ್ಲಿರುವ ನಟ ಅಕ್ಷಯ್​ ಕುಮಾರ್​, ಅಲ್ಲಿ ತಮ್ಮನ್ನು ಯಾವ ರೀತಿ ನೋಡುತ್ತಾರೆ ಎನ್ನುವ ಕುರಿತು ಮಾತನಾಡಿದ್ದಾರೆ. ಭಾರತದ ಪಾಸ್‌ಪೋರ್ಟ್ ಹಿಡಿದು ಯಾವುದೇ ದೇಶದ ವಲಸೆ ಕಚೇರಿಗೆ ಹೋದರೂ ಅಲ್ಲಿ ಗೌರವದಿಂದ ನೋಡುತ್ತಾರೆ. ಓಹ್! ನೀವು ಮೋದಿಯ ದೇಶದಿಂದ ಬಂದವರಾ? ಎನ್ನುತ್ತಾರೆ. ಇಂಥ ಗೌರವವನ್ನು ನಾನು ಈ ಹಿಂದೆ ಎಂದಿಗೂ ಪಡೆದೇ ಇಲ್ಲ ಎಂದಿದ್ದಾರೆ ಅಕ್ಷಯ್​ ಕುಮಾರ್​. ಭಾರತ ಮುಂದುವರಿಯುತ್ತಿದೆ. ಇದು ವಿಶ್ವ ಖ್ಯಾತಿ ಗಳಿಸುತ್ತಿದೆ. ಭಾರತದ ಪಾಸ್‌ಪೋರ್ಟ್ ತೋರಿಸಿದರೆ ಇದು ಮೋದಿಯವರ ಭಾರತ ಅಲ್ಲವೆ ಎಂದು ಕೇಳುವಷ್ಟರ ಮಟ್ಟಿಗೆ ಭಾರತ ಸಾಗಿದೆ. ಹೀಗೆ ಹೇಳಿ ನನಗೆ ನೀಡುವ ಗೌರರವೇ ಅತ್ಯದ್ಭುತವಾದದ್ದು ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

ನಾನು ‘ಟಾಯ್ಲೆಟ್: ಏಕ್ ಪ್ರೇಮ್‌ಕಥಾ’ ಹಾಗೂ ‘ಮಿಷನ್ ಮಂಗಳ್’ನಲ್ಲಿ ನಟಿಸಿದ್ದೆ. ಇದು ಬಿಜೆಪಿ ಅಧಿಕಾರಾವಧಿಯದ್ದು. ಆದರೆ ಇಷ್ಟೇ ಅಲ್ಲದೇ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಘಟನೆಗಳ ಕುರಿತ ‘ಏರ್‌ಲಿಫ್ಟ್​’ ಹಾಗೂ ‘ಮಿಷನ್ ರಾಣಿಗಂಝ್’ ಚಿತ್ರಗಳಲ್ಲೂ ನಟಿಸಿದ್ದೇನೆ. ಆದರೆ, ಆಗ ಯಾರೂ ಮಾತನಾಡಲಿಲ್ಲ. ಈಗ ಭಾರತವನ್ನು ಎಲ್ಲರೂ ನೋಡುತ್ತಿದ್ದಾರೆ. ಯಾವಾಗ ಒಳ್ಳೆಯ ಘಟನೆಗಳು ನಡೆದವು ಎನ್ನುವುದು ಮುಖ್ಯವಾಗುತ್ತದೆಯೇ ಹೊರತು ಯಾರ ಆಡಳಿತ ಆಗ ಇತ್ತು ಎಂಬುದು ಮುಖ್ಯವಲ್ಲ. ದೇಶದ ಒಳಿತಿಗೆ ಏನೆಲ್ಲಾ ಕೆಲಸಗಳಾದವು ಎಂಬುದು ಮುಖ್ಯವಾಗುತ್ತವೆ. ಈಗ ದೇಶದ ಒಳಿತಾಗುತ್ತಿದೆ. ಇದೇ ಕಾರಣಕ್ಕೆ ವಿದೇಶಗಳಿಗೆ ಹೋದಾಗಲೂ ಇಷ್ಟೊಂದು ಮನ್ನಣೆ ಸಿಗುತ್ತಿದೆ ಎಂದಿದ್ದಾರೆ ಅಕ್ಷಯ್​ ಕುಮಾರ್​. 

ವಿವೇಕ್​ ಅಗ್ನಿಹೋತ್ರಿಯ ‘ದಿ ವ್ಯಾಕ್ಸಿನ್​ ವಾರ್​’ಗೆ ಆಸ್ಕರ್​ನಿಂದ ವಿಶೇಷ ಮನ್ನಣೆ