ಸದ್ಯಕ್ಕಂತೂ ಸೈಬಲ್ ಠಾಣೆಗೆ ದೂರು ನೀಡಿ ರುಕ್ಮಿಣಿ ಕಿರಾತಕರಿಗೆ ಪಾಠ ಕಲಿಸೋದಕ್ಕೆ ಸಿದ್ದವಾಗಿದ್ದಾರೆ. ಹಲವು ನಟಿಮಣಿಯರು ಈ ಬಗ್ಗೆ ಧಿಟ್ಟ ಧ್ವನಿ ಎತ್ತಿದ್ದಾರೆ. ಅಷ್ಟಾಗಿಯೂ ಈ ಎಐ ದುಶ್ಯಾಸನನ ಅವಾಂತರ ಹೆಚ್ತಾನೆ ಇದೆ. ಈ ದುಶ್ಯಾಸನನ್ನ ಸಂಹರಿಸೋದು ಯಾರು ಅನ್ನೋದೇ ಸದ್ಯ ಎಲ್ಲರನ್ನೂ ಕಾಡ್ತಾ ಇರೋ ಪ್ರಶ್ನೆ..!
AI ಎಂಬ ಆಧುನಿಕ ದುಶ್ಯಾಸನ.. ನಟಿಯರ ಮಾನಹರಣ..!

AI ತಂತ್ರಜ್ಞಾನ ಅಭಿವೃದ್ಧಿಯಾಗ್ತಾ ಇದೆ ಅನ್ನೋವಾಗ ನಾವು ಖುಷಿ ಪಟ್ಟಿದ್ದೆವು. ಆದರೆ ಇಂದು ಅದೇ ತಂತ್ರಜ್ಞಾನ ಮಹಿಳೆಯರ ಗೌರವಕ್ಕೆ ಧಕ್ಕೆ ತರ್ತಾ ಇದೆ. ಅದ್ರಲ್ಲೂ AI ಎಂಬ ಬೇತಾಳ ನಟಿಯರ ಬೆನ್ನುಬಿದ್ದಿದೆ. ಹಿಂದೆ ರಶ್ಮಿಕಾ, ಈಗ ರುಕ್ಮಿಣಿ ವಸಂತ್.. ಇವರ ನಡುವೆ ಅದೆಷ್ಟು ನಟಿಯರು ಡೀಪ್ಫೇಕ್ ವಿಡಿಯೋನಿಂದ ಕಿರುಕುಳ ಅನುಭವಿಸಿದ್ದಾರೋ ಲೆಕ್ಕಾನೇ ಇಲ್ಲ. ನಟಿಯರ ಸೆರಗಿಗೆ ಕೈ ಹಾಕ್ತಿರೋ ಈ ಎಐ ಬೇತಾಳವನ್ನ ಕಟ್ಟಿಹಾಕೋದ್ಯಾರು..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

ನಟಿಯರ ಸೆರಗಿಗೆ ಕೈ ಹಾಕುತ್ತಿದೆ ಎಐ ಬೇತಾಳ..!
ಯೆಸ್ ಇದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನ ಕಾಲ. ಎಲ್ಲಾ ಕ್ಷೇತ್ರಕ್ಕೂ ಎಐ ಬಂದಾಗಿದೆ. ಈ ತಂತ್ರಜ್ಞಾನ ಬಳಕೆಯಿಂದ ಅದೆಷ್ಟೋ ಕಷ್ಟದ ಕೆಲಸಗಳು ಹೂವೆತ್ತಿದಷ್ಟು ಸುಲಭ ಆಗಿಬಿಟ್ಟಿವೆ. ಆದ್ರೆ ಈ ಟೆಕ್ನಾಲಜಿಯನ್ನ ಒಳ್ಳೆದಕ್ಕೆ ಬಳಸಿಕೊಳ್ಳೊದ್ರ ಜೊತೆಗೆ ಕೆಟ್ಟದಕ್ಕೆ ಬಳಸಿಕೊಳ್ಳುವವರ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಅದಕ್ಕೆ ಸಾಕ್ಷಿ ಇತ್ತೀಚಿಗೆ ವೈರಲ್ ಆಗ್ತಾ ಇರೋ ಚಿತ್ರನಟಿಯರ ಡೀಪ್ ಫೇಕ್ ವಿಡಿಯೋಗಳು.

ಇತ್ತೀಚಿಗೆ ಕಾಂತಾರ ಬೆಡಗಿ ರುಕ್ಮಿಣಿ ವಸಂತ್ರ ಒಂದು ವಿಡಿಯೋ ವೈರಲ್ ಆಗಿತ್ತು. ರುಕ್ಮಿಣಿ ಮೊದಲ ಬಾರಿ ಬಿಕಿನಿ ಶೂಟ್ ಮಾಡಿಸಿದ್ದಾರೆ ಅನ್ನೋ ಒಕ್ಕಣಿಕೆಯೊಂದಿಗೆ ಈ ವಿಡಿಯೋ ಹರಿದಾಡ್ತಾ ಇತ್ತು.
ಈ ವಿಡಿಯೋ ಅದೆಷ್ಟು ನೈಜವಾಗಿತ್ತು ಅಂದ್ರೆ ಜನ ಇದು ರುಕ್ಕುನೇ ಅಂತ ನಂಬಿಕೊಂಡುಬಿಟ್ಟಿದ್ರು. ಕೆಲವೇಗಂಟೆಗಳಲ್ಲಿ ಇಡೀ ಇಂಟರ್ನೆಟ್ ತುಂಬಾ ರುಕ್ಕು ಬಿಕಿನಿ ವಿಡಿಯೋ ಹರಿದಾಡೋದಕ್ಕೆ ಶುರುವಾಗಿತ್ತು. ಆದ್ರೆ ಇದು ಡೀಪ್ಫೇಕ್ ವಿಡಿಯೋ..!
ಸೈಬರ್ ಕ್ರೈಂಗೆ ದೂರು ಕೊಟ್ಟ ಕಾಂತಾರ ಬೆಡಗಿ..!
ಹೌದು ಈ ವೈರಲ್ ಆಗ್ತಾ ಇರೋ ವಿಡಿಯೋ ನೋಡಿ, ಕಿಡಿ ಕಿಡಿಯಾಗಿರೋ ರುಕ್ಮಿಣಿ ಸೈಬರ್ ಸೆಲ್ಗೆ ದೂರು ಕೊಟ್ಟಿದ್ದಾರೆ. ಸೈಬರ್ ಪೊಲೀಸರು ಈ ವಿಡಿಯೋ ಸೃಷ್ಟಿಸಿದ ಕಿರಾತಕನ ಹಿಂದೆ ಬಿದ್ದಿದ್ದಾರೆ.
ರುಕ್ಮಿಣಿ ವಸಂತ್ ದೂರು-
"ನನ್ನದು ಎಂದು ಹೇಳಲಾಗುತ್ತಿರುವ ಕೆಲವು ಎಐ ಜನರೇಟೆಡ್ ನಕಲಿ ಫೋಟೋಗಳು ಅಂತರ್ಜಾಲದಲ್ಲಿ ಹರಡುತ್ತಿರುವುದು ನನ್ನ ಮತ್ತು ನನ್ನ ತಂಡದ ಗಮನಕ್ಕೆ ಬಂದಿದೆ. ಈ ಫೋಟೊಗಳು ಸಂಪೂರ್ಣವಾಗಿ ನಕಲಿ ಹಾಗೂ ಸೃಷ್ಟಿ ಮಾಡಿದ್ದು. ಈ ಫೋಟೊಗಳು ರಿಯಲ್ ಅಲ್ಲ ಎಂದು ನಾನು ನಿಮಗೆ ಸ್ಪಷ್ಟಪಡಿಸುತ್ತಿದ್ದೇನೆ. ಇಂತಹ ಫೋಟೊಗಳನ್ನು ಸೃಷ್ಟಿಸುವುದು ಹಾಗೂ ಅದನ್ನು ಹಂಚಿಕೊಳ್ಳುವುದು ಬೇಜವಾಬ್ದಾರಿ ಕೆಲಸ ಹಾಗೂ ವೈಯಕ್ತಿಕ ಗೌಪ್ಯತೆಯ ಗಂಭೀರ ಉಲ್ಲಂಘನೆ ಆಗಿದೆ."
ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಫೇಕ್ ಫೋಟೋಗಳನ್ನು ಸೃಷ್ಟಿಸಿದವರು ಹಾಗೂ ಅದನ್ನು ಹರಡುತ್ತಿರುವವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಹಾಗೇ ಸೈಬರ್ ಕ್ರೈಮ್‌ಗೆ (Cybercrime) ದೂರನ್ನು ನೀಡುತ್ತೇವೆ. ಜನರು ಯಾರೂ ಇಂತಹ ನಕಲಿ ಫೋಟೊಗಳನ್ನು ಹಂಚಿಕೊಳ್ಳಬಾರದು. ಹಾಗೇ ಕಂಟೆಂಟ್‌ಗಳ ಜೊತೆ ತಮ್ಮನ್ನು ತೊಡಗಿಸಿಕೊಳ್ಳಬಾರದು
ಅಸಲಿಗೆ ಡೀಪ್ ಫೇಕ್ ಮಾಯೆ ಅದ್ಯಾವ್ ಲೆವೆಲ್ಗೆ ಇರುತ್ತೆ ಅಂತ ಎಲ್ಲರಿಗೂ ಗೊತ್ತಾಗಿದ್ದು, 2 ವರ್ಷಗಳ ಹಿಂದೆ ರಶ್ಮಿಕಾ ವಿಡಿಯೋ ವೈರಲ್ ಆದ ಮೇಲೆ. ರಶ್ಮಿಕಾ ಲಿಫ್ಟ್ನಿಂದ ಇಳಿದು ಬರುವ ಈ ವಿಡಿಯೋ ಕಾಡ್ಗಿಚ್ಚಿನಂತೆ ಸೋಷಿಯಲ್ ಮಿಡಿಯಾ ತುಂಬಾ ಧಗಧಗಿಸಿತ್ತು.
ಅಸಲಿಗೆ ಅದ್ಯಾರೋ ಕೆನಡಾ ಮೂಲಕದ ಯುವತಿಯ ದೇಹಕ್ಕೆ ರಶ್ಮಿಕಾ ಮುಖ ಅಂಟಿಸಿ ಮಾಡಲಾದ ಡೀಪ್ ಫೇಕ್ ವಿಡಿಯೋ ಇದು. ಇದು ಅದೆಷ್ಟು ರಿಯಲ್ ರಿಯಲ್ ಆಗಿತ್ತು ಅಂದ್ರೆ ಇದು ರಶ್ಮಿಕಾನೇ ಅಂತ ಎಲ್ಲಾ ನಂಬಿಕೊಂಡಿದ್ರು,
ಆಗ ರಶ್ಮಿಕಾ ಕೂಡ ದೂರು ನೀಡಿದ್ರು. ಇದನ್ನ ಸೃಷ್ಟಿಸಿದವರ ಬಂಧನ ಕೂಡ ಆಯ್ತು. ಆಗ ಇಡೀ ಚಿತ್ರಜಗತ್ತು ಈ ಡೀಪ್ ಫೇಕ್ ಅವಾಂತರಗಳ ಬಗ್ಗೆ ಧ್ವನಿ ಎತ್ತಿತ್ತು. ಆದ್ರೆ ಅಂದಿನಿಂದ ಇಂದಿತನಕ ಈ ಎಐ ಕಾಟ ನಿಂತಿಲ್ಲ.. ಇನ್ನೂ ಜಾಸ್ತಿ ಆಗ್ತಾನೇ ಇದೆ.
ದೊಡ್ಡದಿದೆ ಡೀಪ್ಫೇಕ್ಗೆ ಬಲಿಯಾದ ನಟಿಯರ ಪಟ್ಟಿ..!
AI ಎಂಬ ಆಧುನಿಕ ದುಶ್ಯಾಸನ.. ನಟಿಯರ ಮಾನಹರಣ..!
ಹೌದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ನಟಿಯರ ಡೀಪ್ ಫೇಕ್ ವಿಡಿಯೋ ರೆಡಿ ಮಾಡಿ ಹರಿಬಿಡೋದು ಈಗ ಕಾಮನ್ ಆಗೋಗಿದೆ. ಈ ಎಐ ಎಂಬ ಆಧುನಿಕ ದುಶ್ಯಾಸನನ ಎದುರು ಬೆತ್ತಲಾದ ನಟಿಯರ ಪಟ್ಟಿ ದೊಡ್ಡದಿದೆ. ಈ ಹಿಂದೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ರ ಅನೇಕ ಡೀಪ್ ಫೇಕ್ ವಿಡಿಯೋಸ್ ಹರಿದಾಡಿದ್ವು.
ಆಲಿಯಾ ಭಟ್ ಎಐ ಫೋಟೋಗಳು, ಡೀಪ್ಫೇಕ್ ವಿಡಿಯೋಗಳು ಕೂಡ ಹಲ್ ಚಲ್ ಎಬ್ಬಿಸಿದ್ವು. ಪ್ರಿಯಾಂಕ ಛೋಪ್ರಾ , ವಿದ್ಯಾಬಾಲನ್ , ಕಾಜೋಲ್ ಕೂಡ ಇದರಿಂದ ಮುಜುಗರ ಅನುಭವಿಸಿದ್ರು.
ಇವುಗಳಲ್ಲದೆ ಇನ್ನೂ ಹಲವು ನಟಿಯರು ಈ ರೀತಿಯ ಕಿರುಕುಳಕ್ಕೆ ಒಳಗಾಗ್ತಾ ಇದ್ದಾರೆ. ಸೈಬರ್ ಕ್ರೈಂ ವಿಭಾಗ ಇಂತಹ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕರು ಮತ್ತು ನಟಿಯರು ಇಂತಹ ವಿಡಿಯೋಗಳನ್ನ ಕಂಡಾಗ ತಕ್ಷಣವೇ ಸೈಬರ್ ಕ್ರೈಂಗೆ ದೂರು ಕೊಡಬೇಕು, ಸದ್ಯ ರುಕ್ಮಿಣಿ ವಸಂತ್ ಅದೇ ಕೆಲಸವನ್ನ ಮಾಡಿದ್ದಾರೆ.
ಅಸಲಿಗೆ ಮೊನ್ನೆ ತಾನೆ ರುಕ್ಮಿಣಿ ವಸಂತ್ ನಟನೆಯ ಡ್ರ್ಯಾಗನ್ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿತ್ತು. ಕಾಂತಾರ ಬಳಿಕ ರುಕ್ಕು ನಟಿಸಿರೋ ಬಿಗ್ ಪ್ಯಾನ್ ಇಂಡಿಯಾ ಚಿತ್ರ ಇದು. ಎನ್.ಟಿಆರ್ ಜೊತೆಗೆ ರುಕ್ಮಿಣಿ ನಟಿಸಿದ್ದಾರೆ.
ಡ್ರ್ಯಾಗನ್ ಗ್ಲಿಂಪ್ಸ್ನಲ್ಲಿ ರುಕ್ಮಿಣಿ, ನಿರೂಪಣೆ ಮಾಡುವ ಸೀನ್ಸ್ ಕೂಡ ಇದ್ದು ಫ್ಯಾನ್ಸ್ ಖುಷಿಯಾಗಿದ್ರು. ಆದ್ರೆ ಅದೇ ಸಮಯದಲ್ಲಿ ಬಂದ ಈ ವಿಡಿಯೋ ಫ್ಯಾನ್ಸ್ ಅಷ್ಟೇ ಅಲ್ಲದೇ ಖುದ್ದು ರುಕ್ಮಿಣಿ ಖುಷಿ ಕಿತ್ತುಕೊಂಡಿದೆ.
ಸದ್ಯಕ್ಕಂತೂ ಸೈಬಲ್ ಠಾಣೆಗೆ ದೂರು ನೀಡಿ ರುಕ್ಮಿಣಿ ಕಿರಾತಕರಿಗೆ ಪಾಠ ಕಲಿಸೋದಕ್ಕೆ ಸಿದ್ದವಾಗಿದ್ದಾರೆ. ಹಲವು ನಟಿಮಣಿಯರು ಈ ಬಗ್ಗೆ ಧಿಟ್ಟ ಧ್ವನಿ ಎತ್ತಿದ್ದಾರೆ. ಅಷ್ಟಾಗಿಯೂ ಈ ಎಐ ದುಶ್ಯಾಸನನ ಅವಾಂತರ ಹೆಚ್ತಾನೆ ಇದೆ. ಈ ದುಶ್ಯಾಸನನ್ನ ಸಂಹರಿಸೋದು ಯಾರು.. ಅನ್ನೋದೇ ಸದ್ಯ ಎಲ್ಲರನ್ನೂ ಕಾಡ್ತಾ ಇರೋ ಪ್ರಶ್ನೆ..!
ಹೆಚ್ಚಿನ ಮನರಂಜನೆಗೆ 'ಸಿನಿಮಾ ಹಂಗಾಮ' ನೋಡಿ..


