ಬಾಲಿವುಡ್‌ನಲ್ಲಿ ಸಿನಿಮಾಗಳಿಗಿಂತ ಜಾಸ್ತಿ ಕಾಂಟ್ರವರ್ಸಿ ಮಾಡಿಕೊಳ್ಳುವ ಸ್ವರಾ ಭಾಸ್ಕರ್ ಅವರು ಮಗಳ ಜೊತೆ ಹೋಳಿ ಆಚರಿಸಿದ್ದಾರೆ, ಆದರೆ ಅವರ ಪತಿ ಹೋಳಿ ಆಚರಿಸಿಲ್ಲ. ಈ ವಿಷಯದ ಬಗ್ಗೆ ಟ್ರೋಲ್ ಮಾಡಿದವರಿಗೆ ನಟಿ ಖಡಕ್ ಉತ್ತರ ಕೊಟ್ಟಿದ್ದಾರೆ.
ಯಾವಾಗಲೂ ಕಾಂಟ್ರವರ್ಸಿಗಳಿಂದಲೇ ಸೌಂಡ್ ಮಾಡುವ ನಟಿ ಸ್ವರಾ ಭಾಸ್ಕರ್ ಅವರು ಸಹೋದರ ಎಂದು ಕರೆದವನನ್ನೇ ಪ್ರೀತಿಸಿ ಮದುವೆಯಾದರು, ವರ್ಷ ತುಂಬುವ ಮುನ್ನವೇ ತಾಯಿಯಾದರು. ಈಗ ಹೋಳಿ ವಿಚಾರಕ್ಕೆ ಮತ್ತೆ ನೆಗೆಟಿವ್ ಕಾಮೆಂಟ್‌ಗಳಿಗೆ ತುತ್ತಾಗಿದ್ದಾರೆ. ಪ್ರತಿಯೊಂದು ವಿಷಯಕ್ಕೂ ರಿಯಾಕ್ಟ್ ಮಾಡುವ ಸ್ವರಾ ಭಾಸ್ಕರ್ ಈಗ ಹೋಳಿ ವಿಚಾರಕ್ಕೂ ಉತ್ತರ ಕೊಟ್ಟಿದ್ದಾರೆ.
ಫಹಾದ್ ಅಹ್ಮದ್ ಮುಖದಲ್ಲಿ ಬಣ್ಣ ಇಲ್ಲ!
ಸ್ವರಾ ಭಾಸ್ಕರ್ ಅವರು ಕುಟುಂಬದವರು, ಸ್ನೇಹಿತರ ಜೊತೆ ಹೋಳಿ ಆಚರಿಸಿದ್ದರು. ಇನ್ನು ಮಗಳು, ಪತಿಯ ಜೊತೆಗಿನ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಸ್ವರಾ ಹಾಗೂ ಮಗಳು ರುಬಿಯಾ ಮುಖದಲ್ಲಿ ಹೋಳಿ ಇತ್ತೇ ವಿನಃ ಪತಿ ಫಹಾದ್ ಅಹ್ಮದ್ ಮುಖದಲ್ಲಿ ಬಣ್ಣ ಇರಲಿಲ್ಲ. ಈ ಫೋಟೋ ನೋಡಿ ಕೆಲವರು ಮನಸ್ಸಿಗೆ ಬಂದಹಾಗೆ ಕಾಮೆಂಟ್ ಮಾಡಿದರು.
ನಟಿ ಸ್ವರಾ ಭಾಸ್ಕರ್ ಎಕ್ಸ್ ಖಾತೆ ಬ್ಲಾಕ್ ಆಗಿದ್ದೇಕೆ?
ಮಿಶ್ರ ಪ್ರತಿಕ್ರಿಯೆ!
ರಂಜಾನ್ ಉಪವಾಸ ಮಾಡುತ್ತಿರುವ ಫಹಾದ್ ಹೋಳಿ ಆಡಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದಾರೆ. ಇವರಿಬ್ಬರು ತಮ್ಮಿಷ್ಟದ ಪ್ರಕಾರ ನಡೆದುಕೊಳ್ಳುತ್ತಿದ್ದಾರೆ ಎಂಬ ಮೆಚ್ಚುಗೆಯೂ ಸಿಕ್ಕಿದೆ.
ನೆಟ್ಟಿಗರ ಕಾಮೆಂಟ್ ಏನು?
"ನಿಮ್ಮ ಪತಿ ಯಾಕೆ ಹೋಳಿ ಆಡಲಿಲ್ಲ? ಫಹಾದ್ ಮುಖದ ಮೇಲೆ ಯಾಕೆ ಯಾವುದೇ ಬಣ್ಣ ಇಲ್ಲ? ನಿಮ್ಮ ಪತಿ ಹೋಳಿ ಆಡದೆ ಇರೋದು ಬಹಳಷ್ಟು ವಿಷಯಗಳನ್ನು ಹೇಳುತ್ತದೆ. ಜನರನ್ನು ಬಲವಂತಪಡಿಸದೆ ಹಬ್ಬಗಳನ್ನು ಆಚರಿಸುವುದು ಸಾಧ್ಯ ಅಂತ ನೀವು ಹೇಳ್ತೀರಿ. ನೀವಿಬ್ಬರೂ ಪರಸ್ಪರರ ನಂಬಿಕೆಗ, ಭಾವನೆಗಳನ್ನು ಗೌರವಿಸಿದರೆ, ನಿಜವಾಗಿಯೂ ಪ್ರೀತಿಸಿದರೆ, ಅವರು ನಿಮ್ಮ ಹಬ್ಬಗಳನ್ನು ಖುಷಿಯಿಂದ ಆಚರಿಸುತ್ತಾರೆ. ನೀವು ಅವರ ಹಬ್ಬಗಳನ್ನು ಆಚರಿಸಬಹುದು ಅಂತ ಅಂದ್ರೆ, ಅವರು ಯಾಕೆ ನಿಮ್ಮ ಹಬ್ಬಗಳನ್ನು ಆಚರಿಸಬಾರದು. ಇದು ಏಕಪಕ್ಷೀಯ ಭಾಗವಹಿಸುವಿಕೆ” ಎಂದೆಲ್ಲ ಕೆಲವರು ಕಾಮೆಂಟ್ ಮಾಡಿದ್ದಾರೆ.
ದೊಡ್ಡ ಮುನ್ನಡೆಯ ಬಳಿಕ ಸೋಲು ಕಂಡ ಸ್ವರ ಭಾಸ್ಕರ್ ಪತಿ, ಇವಿಎಂ ಮೇಲೆ ಆರೋಪ ಮಾಡಿದ ನಟಿ
ಟ್ರೋಲ್‌ಗಳಿಗೆ ಸ್ವರಾ ಭಾಸ್ಕರ್ ಉತ್ತರ ಏನು?
ನಟಿ ಸ್ವರಾ ಭಾಸ್ಕರ್ ಅವರ ಪತಿ ಫಹಾದ್ ಅಹ್ಮದ್ ಹೋಳಿ ಆಡಿಲ್ಲ ಎಂದು ಟ್ರೋಲ್ ಮಾಡಿದವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದ್ದಾರೆ, ಅಷ್ಟೇ ಅಲ್ಲದೆ ಖಡಕ್ ಉತ್ತರ ಕೂಡ ಕೊಟ್ಟಿದ್ದಾರೆ. ಸ್ವರಾ ಭಾಸ್ಕರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೋಳಿ ಫೋಟೋಗಳನ್ನು ಮರು ಪೋಸ್ಟ್ ಮಾಡಿದ್ದಲ್ಲದೆ ಮುಖ್ಯವಾದ ಸಂದೇಶವನ್ನು ಬರೆದುಕೊಂಡಿದ್ದಾರೆ. "ಹ್ಯಾಪಿ ಹೋಳಿ ಯಾ! ಯಾರನ್ನೂ ಬಲವಂತ ಮಾಡದೆ ನಮ್ಮ ಹಬ್ಬಗಳನ್ನು ಖುಷಿಯಿಂದ ಆಚರಿಸುವುದು ಸಾಧ್ಯವಿದೆ” ಎಂದು ಅವರು ಹೇಳಿಕೊಂಡಿದ್ದಾರೆ.
ವಿದೇಶಗಳಲ್ಲಿ ಹಿಂದೂ ದೇವ-ದೇವತೆಗಳಿಗೆ ಅಪಮಾನ: 'ರಾಹುಲ್ ಗಾಂಧಿ ವೈರಸ್' ಎಂದು ಪ್ರಧಾನಿ ಮೋದಿ
ಯಾಕೆ ಮುಸ್ಲಿಮರು ಹೋಳಿ ಆಚರಿಸಲ್ಲ?
ಮುಸ್ಲಿಮರು ಈಗ ಪವಿತ್ರ ರಂಜಾನ್ ಉಪವಾಸದಲ್ಲಿದ್ದಾರೆ. ಇಲ್ಲಿ ಒಂದಷ್ಟು ನೀತಿ-ನಿಯಮ ಇರುವುದು. ಇದರ ಜೊತೆಗೆ ಹೋಳಿ ಎನ್ನುವುದು ಹಿಂದುಗಳ ಹಬ್ಬ. ಉಪವಾಸದಲ್ಲಿರುವ ಸಮಯದಲ್ಲಿ ಮುಸ್ಲಿಮರು ಬೇರೆ ಧರ್ಮದ ಹಬ್ಬ ಆಚರಿಸೋದಿಲ್ಲ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ನಿಖರ ಪುರಾವೆಗಳಿಲ್ಲ.
