ದೊಡ್ಡ ಮುನ್ನಡೆಯ ಬಳಿಕ ಸೋಲು ಕಂಡ ಸ್ವರ ಭಾಸ್ಕರ್ ಪತಿ, ಇವಿಎಂ ಮೇಲೆ ಆರೋಪ ಮಾಡಿದ ನಟಿ
ಮಹಾರಾಷ್ಟ್ರದ ಅನುಶಕ್ತಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಟಿ ಸ್ವರಾ ಭಾಸ್ಕರ್ ಪತಿ ಫಹಾದ್ ಅಹ್ಮದ್ ಸೋಲು ಕಂಡಿದ್ದಾರೆ. ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೂ, ಕೊನೆಯ ಹಂತದಲ್ಲಿ ಹಿನ್ನಡೆ ಅನುಭವಿಸಿದರು. ಸ್ವರಾ ಭಾಸ್ಕರ್ ಚುನಾವಣಾ ಆಯೋಗದ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಮುಂಬೈ (ನ.23): ನಟಿ ಸ್ವರ ಭಾಸ್ಕರ್ ಪತಿ ಫಹಾದ್ ಅಹ್ಮದ್ ಮಹಾರಾಷ್ಟ್ರದ ಅನುಶಕ್ತಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಅಧಿಕೃತವಾಗಿ ಫಲಿತಾಂಶ ಪ್ರಕಟ ಮಾಡಬೇಕಿದೆ. ಆದರೆ, ಮತ ಎಣಿಕೆ ಪ್ರಕ್ರಿಯೆ ಮುಕ್ತಾಯ ಕಂಡಿದ್ದು, ಮಹಾಯುತಿ ಒಕ್ಕೂಟದಲ್ಲಿರವ ಅಜಿತ್ ಪವಾರ್ ಎನ್‌ಸಿಪಿಯ ಸನಾ ಮಲಿಕ್ ಎದುರು ಫಹಾದ್ ಸೋಲು ಕಂಡಿದ್ದಾಗಿ ವರದಿಯಾಗಿದೆ. ಈ ಕ್ಷೇತ್ರದಲ್ಲಿ ಫಹಾದ್, ಶರದ್ ಪವಾರ್ ಎನ್‌ಸಿಪಿ ಪರವಾಗಿ ಸ್ಪರ್ಧೆ ಮಾಡಿದ್ದರು. ಆರಂಭದಿಂದಲೂ ಫಹಾದ್ ಮುನ್ನಡೆ ಕಾಯ್ದುಕೊಂಡಿದ್ದರೂ, ಅವರ ಅಂತರ ಅಲ್ಪವಾಗಿತ್ತು. ಆದರೆ, ಮತ ಎಣಿಕೆ ಮುಕ್ತಾಯ ಕಾಣುವ ಹಂತದಲ್ಲಿ ಎದುರಾಳಿ ಸನಾ ಮಲೀಕ್ 3 ಸಾವಿರ ಮತಗಳಿಗಿಂತ ಮುನ್ನಡೆ ಕಾಯ್ದುಕೊಂಡಿದ್ದು, ಇಷ್ಟೇ ಅಂತರದ ಗೆಲುವು ಕಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸ್ವರಾ ಭಾಸ್ಕರ್, ಮುಂಬೈನ ಅನುಶಕ್ತಿ ನಗರ ಕ್ಷೇತ್ರದಲ್ಲಿ ಫಹಾದ್ ಅಹ್ಮದ್ ಮುನ್ನಡೆಯಲ್ಲಿದ್ದರು. ಆದರೆ, ಯಾವಾಗ ಶೇ. 99ರಷ್ಟು ಚಾರ್ಜ್ ಆದ ಇವಿಎಂ ಓಪನ್ ಮಾಡಿದರೋ ಅಲ್ಲಿಗೆ ಅವರು ಹಿನ್ನಡೆಗೆ ಬಿದ್ದರು ಎಂದುದ್ದಾರೆ. ಎನ್‌ಸಿಪಿ ಎಸ್‌ಪಿ ಪರವಾಗಿ ಅನುಶಕ್ತಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ ಫಹಾದ್ ಝಿರಾರ್ ಅಹ್ಮದ್ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, 17, 18 ಹಾಗೂ 19ನೇ ಸುತ್ತಿನಲ್ಲಿ ಶೇ. 99ರಷ್ಟು ಬ್ಯಾಟರಿ ಚಾರ್ಜ್ ಆಗಿದ್ದ ಇವಿಎಂಅನ್ನು ಓಪನ್ ಮಾಡಿದ ಬಳಿಕ ಬಿಜೆಪಿ ಬೆಂಬಲಿತ ಎನ್‌ಸಿಪಿ-ಅಜಿತ್ ಪವಾರ್ ಪಕ್ಷದ ಸ್ಪರ್ಧಿ ಮುನ್ನಡೆ ಪಡೆದುಕೊಂಡರು' ಎಂದು ಬರೆದುಕೊಂಡಿದ್ದಾರೆ.
ನಿಖಿಲ್ ಪಾಲಿಗೆ ಇನ್ನೂ ಮುಗಿದಿಲ್ಲ ಕುರುಕ್ಷೇತ್ರದ ಶಾಪ, ಅಭಿಮನ್ಯುಗೆ ಇನ್ನೆಷ್ಟು ದಿನ ವನವಾಸ!
ಇಡೀ ದಿನ ಅದರಲ್ಲಿ ವೋಟಿಂಗ್ ನಡೆದಿದ್ದರೂ ಈ ಮಷಿನ್‌ಗಳಲ್ಲಿ ಶೇ. 99ರಷ್ಟು ಚಾರ್ಜ್ ಇರೋಕೆ ಹೇಗೆ ಸಾಧ್ಯ? 99% ಚಾರ್ಜ್ ಆಗಿರುವ ಬ್ಯಾಟರಿಗಳ ಎಲ್ಲಾ ವೋಟ್‌ಗಳು ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ಮುನ್ನಡೆ ನೀಡಲು ಹೇಗೆ ಸಾಧ್ಯ? ಎಂದು ಸ್ವರಾ ಭಾಸ್ಕರ್ ಪ್ರಶ್ನೆ ಮಾಡಿದ್ದಾರೆ. ಅದರೊಂದಿಗೆ ಚುನಾವಣಾ ಆಯೋಗ ಹಾಗೂ ಮಹಾ ವಿಕಾಸ್ ಅಘಾಡಿಯ ಹಿರಿಯ ನಾಯಕರನ್ನು ಟ್ಯಾಗ್ ಮಾಡಿದ್ದಾರೆ.
ಏಕ್‌ನಾಥ್ ಶಿಂಧೆ-ದೇವೇಂದ್ರ ಫಡ್ನವಿಸ್, ಯಾರಾಗ್ತಾರೆ ಮಹಾರಾಷ್ಟ್ರ ಸಿಎಂ?
ಫಹಾದ್ ಅಹ್ಮದ್ ಟ್ವೀಟ್ ಮೂಲಕ ತಮ್ಮ ಫಲಿತಾಂಶ್ ಮಾಹಿತಿಯನ್ನು 17ನೇ ಸುತ್ತಿನ ಮತಎಣಿಕೆಯವರೆಗೂ ಫಹಾದ್ ಮುನ್ನಡೆಯಲ್ಲಿದ್ದರು. ಈ ವಿಚಾರದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್ ಪುತ್ರಿ ಸನಾ ಮಲಿಕ್ ವಿರುದ್ಧ ಫಹಾದ್ ಅಹಮದ್ ಕಣಕ್ಕಿಳಿದಿದ್ದರು.