Asianet Suvarna News Asianet Suvarna News

ವಿದೇಶಗಳಲ್ಲಿ ಹಿಂದೂ ದೇವ-ದೇವತೆಗಳಿಗೆ ಅಪಮಾನ: 'ರಾಹುಲ್ ಗಾಂಧಿ ವೈರಸ್' ಎಂದು ಪ್ರಧಾನಿ ಮೋದಿ

ಕಾಂಗ್ರೆಸ್ ಪಕ್ಷ ಕೆಲವು ಮತಗಳಿಗಾಗಿ ಯಾವಾಗ ಬೇಕಾದರೂ ನಮ್ಮ ನಂಬಿಕೆ ಮತ್ತು ಸಂಸ್ಕೃತಿಯನ್ನು ಪಣಕ್ಕಿಡಬಹುದು. ಇತ್ತೀಚೆಗೆ ಅಮೆರಿಕಕ್ಕೆ ಹೋಗಿದ್ದ ಪಕ್ಷದ ವೈರಸ್ ಹೇಳಿಕೆಯನ್ನು ನೀವು ಕೇಳಿರಬಹುದು ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ರಾಹುಲ್ ಗಾಂಧಿಯನ್ನ ವೈರಸ್‌ಗೆ ಹೋಲಿಸಿದ್ದಾರೆ.

pm modi hits out at rahul gandhi says he is insulted deva-devta rav
Author
First Published Sep 19, 2024, 10:01 PM IST | Last Updated Sep 19, 2024, 10:36 PM IST

PM Modi Jammu Kashmir Visit : ಕಾಂಗ್ರೆಸ್ ಪಕ್ಷ ಕೆಲವು ಮತಗಳಿಗಾಗಿ ಯಾವಾಗ ಬೇಕಾದರೂ ನಮ್ಮ ನಂಬಿಕೆ ಮತ್ತು ಸಂಸ್ಕೃತಿಯನ್ನು ಪಣಕ್ಕಿಡಬಹುದು. ಇತ್ತೀಚೆಗೆ ಅಮೆರಿಕಕ್ಕೆ ಹೋಗಿದ್ದ ಪಕ್ಷದ ವೈರಸ್ ಹೇಳಿಕೆಯನ್ನು ನೀವು ಕೇಳಿರಬಹುದು ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ರಾಹುಲ್ ಗಾಂಧಿಯನ್ನ ವೈರಸ್‌ಗೆ ಹೋಲಿಸಿದ್ದಾರೆ.

25 ಸೆಪ್ಟೆಂಬರ್ 2024 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಎರಡನೇ ಹಂತದ ಮತದಾನದ ಮೊದಲು,  ಜಮ್ಮುವಿನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ನಾಯಕ ಪ್ರೀತಿಯ ಅಂಗಡಿಯ ಹೆಸರಿನಲ್ಲಿ ದ್ವೇಷದ ವಸ್ತುಗಳನ್ನು ಮಾರಾಟ ಮಾಡುವ ಹಳೆಯ ನೀತಿಯನ್ನು ಹೊಂದಿದ್ದಾರೆ. ಇವರು ನಮ್ಮ ದೇವರು, ದೇವತೆಗಳು ದೇವರಲ್ಲ ಅಂತಾರೆ... ಹಿಂದೂ ಧರ್ಮದಲ್ಲಿ ಪ್ರತಿ ಹಳ್ಳಿಯಲ್ಲಿ ದೇವರನ್ನು ಪೂಜಿಸುವ ಸಂಪ್ರದಾಯವಿದೆ. ನಾನೂ ಕೂಡ ದೇವರನ್ನು ಪೂಜಿಸುತ್ತೇನೆ ನನ್ನಂತೆ ಎಲ್ಲ ಹಿಂದೂಗಳು ದೇವರನ್ನು ನಂಬುತ್ತಾರೆ. ಆದರೆ ಈ ಕಾಂಗ್ರೆಸ್ ನವರು ದೇವರೇ ಇಲ್ಲ ಎನ್ನುತ್ತಾರೆ ಇದು ನಮ್ಮ ಧರ್ಮ, ದೇವರಿಗೆ ಮಾಡಿದ ಅಪಮಾನ ಅಲ್ಲವೇ ಎಂದು ವಾಗ್ದಾಳಿ ನಡೆಸಿದರು.

 

'ಒಂದು ದೇಶ ಒಂದು ಚುನಾವಣೆ' ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವಕ್ಕೆ ಮಾರಕ: ಮಲ್ಲಿಕಾರ್ಜುನ ಖರ್ಗೆ

ರಾಹುಲ್‌ಗಾಂಧಿಯದು ನಕ್ಸಲಿಯ ಚಿಂತನೆ

ರಾಹುಲ್ ಗಾಂಧಿಯದು ನಕ್ಸಲಿಯ ಚಿಂತನೆ. ನಮ್ಮ ಹಿಂದೂ ಧರ್ಮ ದೇವರುಗಳನ್ನು ನಂಬುವುದಿಲ್ಲ. ಆದರೆ ಹಿಂದೂಗಳ ಮತಕ್ಕಾಗಿ ಒಮ್ಮೊಮ್ಮೆ ಆಸ್ತಿಕನಂತೆ ತೋರುತ್ತಾರೆ. ಇನ್ನು ಕೆಲವು ಮತಗಳಿಗಾಗಿ ಹಿಂದೂ ದೇವ-ದೇವತೆಗಳೇ ಇಲ್ಲ ಅಂತಾರೆ. ಕಾಂಗ್ರೆಸ್‌ನವರು ಇಂತಹ ಹೇಳಿಕೆ ತಪ್ಪಿನಿಂದ ಆಡುವುದಲ್ಲ, ಬದಲಿಗೆ ಉದ್ದೇಶಪೂರ್ವಕ ಮಾತನಾಡುತ್ತಾರೆ. ಇದು ನಕ್ಸಲಿಯರ ಚಿಂತನೆ ಮತ್ತು ಇತರೆ ದೇಶಗಳಿಂದ ಆಮದು ಮಾಡಿಕೊಂಡ ಚಿಂತನೆಯಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ಗೆ ವೋಟ್‌ಬ್ಯಾಂಕ್ ಬಿಟ್ಟರೆ ಬೇರೇನೂ ಇಲ್ಲ:

ಜಮ್ಮುವಿನ ಈ ಪ್ರದೇಶವನ್ನು ವರ್ಷಗಳಿಂದ ಕಾಂಗ್ರೆಸ್, ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಕುಟುಂಬಗಳು ಘಾಸಿಗೊಳಿಸಿದ್ದರು. ಈ ಬಾರಿ ನಿಶಾನ್ ಆಯ್ಕೆ ಮಾಡಬೇಕು. ನಿಮ್ಮ ಹಿತಾಸಕ್ತಿಗೆ ಆದ್ಯತೆ ನೀಡುವುದು ಬಿಜೆಪಿ ಮಾತ್ರ. ನಿಮ್ಮ ವಿರುದ್ಧ ದಶಕಗಳಿಂದ ನಡೆಯುತ್ತಿದ್ದ ತಾರತಮ್ಯವನ್ನು ಕೊನೆಗೊಳಿಸಿದ್ದು ಬಿಜೆಪಿ. ಹೀಗಾಗಿ ಆಮಿಷೆಗಳಿಗೆ ಒಳಗಾಗದೆ ಬಿಜೆಪಿ . ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕವಾಗಿ ಡೋಗ್ರಾ ಪರಂಪರೆಯ ಮೇಲೆ ಈ ದಾಳಿಯನ್ನು ಪ್ರಾರಂಭಿಸಿದ್ದಾರೆ, ಇದು ಪ್ರೀತಿಯ ಅಂಗಡಿಯ ಹೆಸರಿನಲ್ಲಿ ದ್ವೇಷದ ವಸ್ತುಗಳನ್ನು ಮಾರಾಟ ಮಾಡುವ ಅವರ ಹಳೆಯ ನೀತಿಯಾಗಿದೆ, ಅವರಿಗೆ ಮತ ಬ್ಯಾಂಕ್ ಹೊರತುಪಡಿಸಿ ಬೇರೇನೂ ಕಾಣಿಸುವುದಿಲ್ಲ ಎಂದು ಪ್ರಧಾನಿ ಮೋದಿ ಕುಟುಕಿದ್ದಾರೆ.

ಕಾಂಗ್ರೆಸ್-ಎನ್‌ಸಿ ಮೈತ್ರಿ ಪಾಕಿಸ್ತಾನ ಸ್ವಾಗತಿಸುತ್ತೆ!

ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ, ಪಿಪಲ್ಸ್ ಡೆಮಾಕ್ಟಟಿಕ್ ಪಾರ್ಟಿ(ಪಿಡಿಪಿ) ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿಗೆ ನೀಡುವ ಒಂದೊಂದು ಮತವೂ ಅವರು ಮತ್ತೆ 370ನೇ ವಿಧೀ ಮರಳಿ ತರಲು ಬಯಸುತ್ತಾರೆ. ಇದರರ್ಥ ಅವರು ಕಣಿವೆಯಲ್ಲಿ ಮತ್ತೆ ರಕ್ತಪಾತವನ್ನು ಬಯಸುತ್ತಾರೆ. ಜನರ ರಕ್ತಪಾತದಿಂದ ಅವರು ಹಿಂದಿನಿಂದಲೂ ಅಧಿಕಾರ ನಡೆಸಿಕೊಂಡು ಬಂದಿದ್ದಾರೆ. ಪಾಕಿಸ್ತಾನದಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಯನ್ನು ಸ್ವಾಗತಿಸಲಾಗುತ್ತದೆ ಎಂದರೆ ನೀವು ತಿಳಿಯಿರಿ ಎಚ್ಚರಿಸಿದರು.

ಮೋದಿ ಜೊತೆ ಗಣೇಶ ಪೂಜೆ ಮಾಡೋಕೆ ಸಮಯ ಇದೆ, ಉಮರ್‌ ಖಾಲಿದ್ ವಿಚಾರಣೆ ಮಾಡೋಕೆ ಆಗಲ್ವಾ? ಸಿಜೆಐಗೆ ಸ್ವರಾ ಭಾಸ್ಕರ್‌ ಆವಾಜ್‌!

ಈಗಾಗಲೇ ಕಾಂಗ್ರೆಸ್-ಎನ್‌ಸಿ ಪ್ರಣಾಳಿಕೆಯಿಂದ ಪಾಕಿಸ್ತಾನವು ತುಂಬಾ ಸಂತೋಷವಾಗಿದೆ. ಅಷ್ಟೇ ಅಲ್ಲದೆ ಅದು ಬಹಿರಂಗವಾಗಿ ಬೆಂಬಲವನ್ನು ನೀಡಿದೆ. ಪಾಕಿಸ್ತಾನದ ರಕ್ಷಣಾ ಸಚಿವರು ಕಾಂಗ್ರೆಸ್ -ಎನ್‌ಸಿ ಮೈತ್ರಿಯನ್ನು ಬಯಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಕಾರ್ಯಸೂಚಿಯನ್ನು ಹೇರಲು ನಾವು ಬಿಡುವುದಿಲ್ಲ. ವಿಶ್ವದ ಯಾವುದೇ ಶಕ್ತಿಯೂ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರಳಿ ತರಲು ಸಾಧ್ಯವಿಲ್ಲ ಎಂದರು.

Latest Videos
Follow Us:
Download App:
  • android
  • ios