Asianet Suvarna News Asianet Suvarna News

ಅಜಯ್​ ದೇವಗನ್​ ತಾಯಿಯಾಗಲು ಒಪ್ಪದೇ ಸಿನಿಮಾ ಬಿಟ್ಟೆ: ರೋಜಾ ಸುಂದರಿ ಮಧು!

 ಚಲನಚಿತ್ರದ ಉತ್ತುಂಗದಲ್ಲಿ ಇರುವಾಗಲೇ ನಟಿ ಮಧು ಚಿತ್ರರಂಗ ತೊರೆದದ್ದೇಕೆ? ಕಾರಣ ಬಿಚ್ಚಿಟ್ಟ ನಟಿ
 

Actress Madhu revealed why she quit bollywood at peak of her career suc
Author
First Published Jul 9, 2023, 4:18 PM IST | Last Updated Jul 9, 2023, 4:18 PM IST

1991 ರಲ್ಲಿ ಬಿಡುಗಡೆಗೊಂಡ ಚಲನಚಿತ್ರ 'ಫೂಲ್ ಔರ್ ಕಾಂಟೆ' ಅಷ್ಟೇನೂ ಸೂಪರ್​ಹಿಟ್​ ಆಗದಿದ್ದರೂ  ಚಿತ್ರವು ನಟ ಅಜಯ್ ದೇವಗನ್ ( Ajay Devgan) ಅವರನ್ನು ಮಾತ್ರ ಸೂಪರ್ ಸ್ಟಾರ್ ಮಾಡಿತು.  ಇದರಲ್ಲಿನ ಅಜಯ್​ ದೇವಗನ್​ ಅವರ  ಸಾಹಸ ದೃಶ್ಯಗಳಿಗೆ ಫ್ಯಾನ್ಸ್​ ಫಿದಾ ಆಗಿದ್ದರು.  ಹಲವು ವರ್ಷಗಳವರೆಗೆ ಇದೇ ಚಿತ್ರದೊಂದಿಗೆ  ಅಜಯ್ ದೇವಗನ್ ಗುರುತಿಸಿಕೊಳ್ಳುತ್ತಾ ಬಂದರು. ಈ  ಚಿತ್ರದಲ್ಲಿ ನಾಯಕಿಯಾಗಿ ನಟಿಸಿದವರು ಬಾಲಿವುಡ್​ ಬ್ಯೂಟಿ ಎಂದೇ ಫೇಮಸ್​ ಆಗಿದ್ದ ಮಧು.  90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ ನಟಿ ಮಧು ಅವರಿಗೆ ಸಕತ್​ ಬ್ರೇಕ್​ ತಂದುಕೊಟ್ಟ ಚಿತ್ರ ಕೂಡ ಇದೇ. ಅಂದಹಾಗೆ, ಮಧು ಅವರು ಬಾಲಿವುಡ್ ಸೂಪರ್ ಸ್ಟಾರ್ ಹೇಮಾ ಮಾಲಿನಿ ಅವರ ಸೊಸೆ ಕೂಡ. ಮಧು ಅವರ ತಂದೆ ಹೇಮಾ ಮಾಲಿನಿ ಅವರ ಸಹೋದರ ರಘುನಾಥ್.  ಬಾಲ ಕಲಾವಿದರಾಗಿ ಸೇರಿಕೊಂಡಿದ್ದ ಮಧು ಅವರು, ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಅವರಿಗೆ ಹೆಸರು ತಂದುಕೊಟ್ಟ ಚಿತ್ರ, ನಾಯಕಿಯಾಗಿ ನಟಿಸಿದ್ದ 'ಫೂಲ್ ಔರ್ ಕಾಂಟೆ' ಇದರ ಅರ್ಥ ಹೂವು ಮತ್ತು ಮುಳ್ಳು. 
 
1976 ರ ಚಿತ್ರ 'ಶರಫತ್ ಛೋಡ್ ದಿ ಮೈನೆ', 'ಡ್ರೀಮ್ ಗರ್ಲ್' ಮುಂತಾದ ಕೆಲವು ಚಿತ್ರಗಳಲ್ಲಿ ಮಧು ಕೆಲಸ ಮಾಡಿದ್ದಾರೆ. 1991 ರಲ್ಲಿ, ಇವರು  ಬಾಲಿವುಡ್ ಪ್ರಯಾಣವನ್ನು ಅಜಯ್ ದೇವಗನ್ ಜೊತೆ ಫೂಲ್ ಔರ್ ಕಾಂಟೆಯಲ್ಲಿ (Fool aur Kante) ನಾಯಕಿಯಾಗಿ ಪ್ರಾರಂಭಿಸಿದರು. ಇದಾದ ನಂತರ ಹಲವು ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದರು. 10 ವರ್ಷಗಳವರೆಗೆ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದರು.  ನೀಲಗಿರಿ, ರೋಜಾ, ಯೋಧ್​,  ಪೆಹಚಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರಿಗೆ ಸಾಕಷ್ಟು ಹೆಸರು ಕೂಡ ಬಂದಿತು.  ಇದರ ಜೊತೆಗೆ ದಕ್ಷಿಣದಲ್ಲಿ ಕೂಡ ಅನೇಕ ಸೂಪರ್‌ಹಿಟ್ ಚಲನಚಿತ್ರಗಳನ್ನು ನೀಡಿದ ಮಧು ಅವರು ಏಕಾಏಕಿ ಇಂಡಸ್ಟ್ರಿ ತೊರೆದುಬಿಟ್ಟರು.  2001 02 ರಲ್ಲಿ  ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಉದ್ಯಮದಿಂದ ವಿರಾಮ ತೆಗೆದುಕೊಂಡುಬಿಟ್ಟರು. ಇದಾದ ನಂತರ ಹಿಂತಿರುಗಿದ ಮಧು ಟಿವಿಯಲ್ಲಿ ಅನೇಕ ಧಾರಾವಾಹಿಗಳಲ್ಲಿ ಕೆಲಸ ಮಾಡಿದರು. ಇದರೊಂದಿಗೆ ಸೌತ್ ಚಿತ್ರಗಳಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ. 

ನಾನು ಅವ್ರ ಜೊತೆ ದೇಹ ಹಂಚಿಕೊಂಡಿದ್ರೆ 30 ಸಿನಿಮಾ ಸಿಕ್ತಿದ್ವು: ನಟಿ Payal Ghosh

ಮಧು (Madhu) ಈಗ ಮತ್ತೆ ಸಿನಿಮಾಗಳಲ್ಲಿ ಸಖತ್ ಕಮ್ ಬ್ಯಾಕ್ ಮಾಡಿದ್ದಾರೆ. ಇದರೊಂದಿಗೆ ಮಧು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆದರೆ ಈಗ ಅವರು ತಾವು  ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಇಂಡಸ್ಟ್ರಿ ತೊರೆದದ್ದು ಏಕೆ ಎಂಬ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಅವರು ಮೊದಲು ಹೇಳಿದ್ದು ಏನೆಂದರೆ, ನಾನು ಅಜಯ್​ ದೇವಗನ್​ ಅವರ ಅಮ್ಮನಾಗಲು ಇಷ್ಟವಿರಲಿಲ್ಲ. ಅದಕ್ಕೇ ನಾನು ಇಂಡಸ್ಟ್ರಿ ತೊರೆದೆ ಎಂದಿದ್ದಾರೆ.  ಅದಕ್ಕೆ ಸಮಜಾಯಿಷಿ ನೀಡಿರುವ ಮಧು, ಅಜಯ್ ದೇವಗನ್ ಮತ್ತು ನಾನು ಇಬ್ಬರೂ ಒಟ್ಟಿಗೆ ಇಂಡಸ್ಟ್ರಿಗೆ ಬಂದೆವು. 90 ರ ದಶಕದಲ್ಲಿ ಆಕ್ಷನ್ ಚಲನಚಿತ್ರಗಳಲ್ಲಿ ಪ್ರಾಬಲ್ಯ ಸಾಧಿಸಿದೆವು.  ಇದರಲ್ಲಿ ನನ್ನ ಪಾತ್ರಕ್ಕೂ ಒಳ್ಳೆಯ ಮೆಚ್ಚುಗೆ ಬಂದಿತು. ಇಬ್ಬರು ರೊಮ್ಯಾಂಟಿಕ್ ಕಪಲ್​ಎಂದೇ ಫೇಮಸ್​ ಆದೆವು. ಇದಲ್ಲದೇ ಹಲವಾರು ನಾಯಕರ ಜೊತೆ ತೆರೆಯ ಮೇಲೆ ದಶಕದವರೆಗೆ ರೊಮಾನ್ಸ್​ ಮಾಡಿದ್ದೇನೆ. ಅದಾದ ಬಳಿಕ ಇಂಡಸ್ಟ್ರಿ ಬಿಡಲು ತೀರ್ಮಾನಿಸಿದೆ ಎಂದಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಒಂದು ವಯಸ್ಸು ಆದ ಮೇಲೆ ಸಿನಿ ಇಂಡಸ್ಟ್ರಿಯಲ್ಲಿ ನಾಯಕಿಯಾದವರನ್ನು ಅಮ್ಮನ ಪಾತ್ರಕ್ಕೆ ಹಾಕುವುದು ಮಾಮೂಲು. ಆದರೆ ಅವರ ಎದುರು ನಾಯಕ ನಟನಾಗಿದ್ದ ಮಾತ್ರ ವಯಸ್ಸು 50 -60 ದಾಟಿದರೂ ನಾಯಕನಾಗಿಯೇ ಮುಂದುವರೆಯುತ್ತಾರೆ. ಅವರಿಗೆ ನಾಯಕಿಯಾಗಿ ನಟಿಸಿದಾಕೆ ಮುಂದೊಂದು ದಿನ ಅವರಿಗೆ ತಾಯಿಯಾಗುವ ಅನಿವಾರ್ಯತೆಯೂ ಸಿನಿಮಾದಲ್ಲಿ ಇದೆ. ಇದನ್ನೇ ಮಧು ಅವರು ಹೇಳಿದ್ದು. ಅದಕ್ಕಾಗಿಯೇ ಅವರು ಅಜಯ್​ ದೇವಗನ್​ ಅವರಿಗೆ ತಾಯಿಯಾಗಲು ನನಗೆ ಇಷ್ಟವಿರಲಿಲ್ಲ, ಮಾತ್ರವಲ್ಲದೇ ನಾನು ನಟಿಸಿರುವ ಯಾವುದೇ ನಾಯಕನಿಗೆ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟವಿಲ್ಲದ ಕಾರಣ, ಇಂಡಸ್ಟ್ರಿ ತೊರೆದೆ ಎಂದಿದ್ದಾರೆ.

ನಟ ಅವಿನಾಶ್​ ಮೋಸ ಮಾಡ್ದ, ತಂದೆಗೆ ಹೃದಯಾಘಾತವಾಯ್ತು ಎಂದು ಕಣ್ಣೀರಿಟ್ಟ ಕಿರುತೆರೆ ನಟಿ
 
 

Latest Videos
Follow Us:
Download App:
  • android
  • ios