ನಾನು ಅವ್ರ ಜೊತೆ ದೇಹ ಹಂಚಿಕೊಂಡಿದ್ರೆ 30 ಸಿನಿಮಾ ಸಿಕ್ತಿದ್ವು: ನಟಿ Payal Ghosh
ತಾವು ಎಲ್ಲರ ಜೊತೆ ದೇಹ ಹಂಚಿಕೊಂಡಿದ್ದರೆ 30ಕ್ಕೂ ಅಧಿಕ ಫಿಲ್ಮ್ಗಳಿಗೆ ನಟಿಸಬಹುದಿತ್ತು ಎಂದು ನಟಿ ಪಾಯಲ್ ಘೋಷ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಹಿಂದಿ, ಇಂಗ್ಲಿಷ್, ತೆಲುಗು ಮತ್ತು ಕನ್ನಡದ ವಿವಿಧ ರೀತಿಯ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಪಾಯಲ್ ಘೋಷ್ (Payal Ghosh) ಆಗಾಗ್ಗೆ ಸುದ್ದಿಗೆ ಬರುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆಯ ಪತ್ರ (suicide note) ಶೇರ್ ಮಾಡಿಕೊಂಡು ಸಂಚಲನ ಮೂಡಿಸಿದ್ದರು. ಸ್ಯೂಸೈಡ್ ನೋಟ್ ಅರ್ಧಕ್ಕೇ ಬರೆದಿಟ್ಟು ಅದನ್ನು ಶೇರ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು. ಕಳೆದ ವರ್ಷ ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ತಮ್ಮ ಮೇಲೆ ಹಲ್ಲೆ ಮಾಡಿ, ಆಸಿಡ್ ದಾಳಿ ನಡೆಸಲು ಪ್ರಯತ್ನಿಸಿದರು ಎಂದು ನಟಿ ಪಾಯಲ್ ಘೋಷ್ ಹೇಳಿದ್ದರು. ಔಷಧಿ ತರುವ ಸಲುವಾಗಿ ರಾತ್ರಿ 10 ಗಂಟೆ ಸುಮಾರಿಗೆ ನಟಿ ಪಾಯಲ್ ಘೋಷ್ ಮನೆಯಿಂದ ಹೊರಗೆ ಬಂದಿದ್ದರು. ಔಷಧಿ ಕೊಂಡುಕೊಂಡು ಕಾರಿನ ಬಳಿ ಬರುವಾಗ ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ಪಾಯಲ್ ಘೋಷ್ ಮೇಲೆ ಹಲ್ಲೆ ನಡೆಸಿದೆ. ಪಾಯಲ್ ಘೋಷ್ ಕೈಗೆ ರಾಡ್‌ನಿಂದ ಪೆಟ್ಟು ಬಿದ್ದಿದೆ. ಮುಸುಕುಧಾರಿ ದುಷ್ಕರ್ಮಿಗಳ ಕೈಯಲ್ಲಿದ್ದ ಬಾಟಲ್‌ಅನ್ನು ಗಮನಿಸಿದ್ದ ಪಾಯಲ್ ಘೋಷ್, ಅದು ಆಸಿಡ್ ಇರಬಹುದು ಎಂದು ಶಂಕಿಸಲಾಗಿತ್ತು. ಅದರ ಬಳಿಕ ಬಹಳ ಕುಗ್ಗಿ ಹೋಗಿದ್ದ ನಟಿ, ನಂತರ ಸ್ಯೂಸೈಡ್ ನೋಟ್ (Suicide Note) ಬರೆದಿರುವುದು ಮತ್ತಷ್ಟು ಆತಂಕಕ್ಕೀಡು ಮಾಡಿದ್ದರು.
ಈ ಸುದ್ದಿ ತಣ್ಣಗಾಗುತ್ತಲೇ ಇದೀಗ ಮತ್ತೊಂದು ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ ನಟಿ ಪಾಯಲ್. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದು ಸಕತ್ ಸದ್ದು ಮಾಡುತ್ತಿದೆ. ಇದಾಗಲೇ ಹಲವಾರು ನಟ-ನಟಿಯರು ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿದ್ದಾರೆ. ಅದರಂತೆಯೇ, ಈಗ ನಟಿ ಪಾಯಲ್ ಘೋಷ್ ಕೂಡ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಬಾಲಿವುಡ್ನ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ನೆಲೆಯೂರಬೇಕಾದರೆ ಹಾಸಿಗೆ ಹಂಚಿಕೊಳ್ಳುವುದು ಅನಿವಾರ್ಯ ಎಂದು ಇದಾಗಲೇ ಹಲವಾರು ನಟಿಯರು ಮನಬಿಚ್ಚಿ ಮಾತನಾಡಿದ್ದನ್ನೇ ಪಾಯಲ್ ಕೂಡ ಹೇಳಿಕೊಂಡಿದ್ದಾರೆ.
ನಾನು ಸತ್ತರೆ ಇವರೇ ಕಾರಣ... ಡೆತ್ ನೋಟ್ ಬರೆದ ವರ್ಷಧಾರೆ ನಟಿ Payal Ghosh
ಕರೆದವರೊಡನೆ ಹಾಸಿಗೆ ಹಂಚಿಕೊಂಡಿದ್ದರೆ ನಾನು ಇಷ್ಟೊತ್ತಿಗಾಗಲೇ 30 ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ ಎಂದು ಶಾಕಿಂಗ್ ಹೇಳಿಕೆ ಕೊಟ್ಟಿರುವ ಪಾಯಲ್ ಹಲ್ಚಲ್ ಸೃಷ್ಟಿಸಿದ್ದಾರೆ. ಅಂದಹಾಗೆ ಪಾಯಲ್ ಅವರು ಬಾಲಿವುಡ್‌ನಲ್ಲಿ ಸ್ಟಾರ್‌ಡಮ್ ಗಿಟ್ಟಿಸಿಕೊಳ್ಳದಿದ್ದರೂ ಸಿನಿಮಾ ಅವಕಾಶಗಳು ಕಡಿಮೆ ಏನೂ ಸಿಗಲಿಲ್ಲ. ಒಟ್ಟೂ 11 ಸಿನಿಮಾಗಳಲ್ಲಿ ಪಾಯಲ್ ನಟಿಸಿದ್ದಾರೆ. ಈಗ ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ತಾವು 11 ಸಿನಿಮಾಗಳಲ್ಲಿ ಮಾತ್ರ ನಟಿಸಿರುವುದಕ್ಕೆ ಕಾರಣ ನೀಡಿರುವ ನಟಿ ಪಾಯಲ್, ಒಂದು ವೇಳೆ ನಾನು ಎಲ್ಲವನ್ನೂ ಒಪ್ಪಿಕೊಂಡು, ಇತರರೊಡನೆ ಹಾಸಿಗೆ ಹಂಚಿಕೊಂಡಿದ್ದರೆ, ಇಷ್ಟೊತ್ತಿಗಾಗಲೇ ನಾನು 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ ಎಂದಿದ್ದಾರೆ. ಈ ಮೂಲಕ ದೊಡ್ಡ ದೊಡ್ಡ ಸಿನಿಮಾ ಆಫರ್‌ಗಳು ಬೇಕೆಂದರೆ ದೇಹ ಹಂಚಿಕೊಳ್ಳುವುದು ಅನಿವಾರ್ಯ ಎಂಬ ನಟಿಯರ ಮಾತಿಗೆ ಇನ್ನಷ್ಟು ಪುಷ್ಟಿ ತುಂಬಿದ್ದಾರೆ. ಆದರೆ ಇನ್ಸ್ಟಾಗ್ರಾಮ್ನಲ್ಲಿ ಅವರು ಈ ಪೋಸ್ಟ್ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಸಕತ್ ಸುದ್ದಿಯಾಗುತ್ತಿದ್ದಂತೆಯೇ ಅದನ್ನು ಡಿಲೀಟ್ ಮಾಡಿದ್ದಾರೆ.
ಪಾಯಲ್ ಘೋಷ್ ಹಿಂದಿ ಮಾತ್ರವಲ್ಲದೆ ಇಂಗ್ಲಿಷ್, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2020 ರಲ್ಲಿ, #MeToo ಅಭಿಯಾನದ ಅಡಿಯಲ್ಲಿ, ಅವರು ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ (Anurag Kasyap) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದಾಗ ಅವರು ಸುದ್ದಿಯಲ್ಲಿದ್ದರು. ಆದರೆ, ಕಶ್ಯಪ್ ತಮ್ಮ ವಿರುದ್ಧದ ಆರೋಪಗಳನ್ನು ಆಧಾರರಹಿತ ಎಂದು ಬಣ್ಣಿಸಿದ್ದರು. ನಂತರ, ನಟಿ ರಿಚಾ ಚಡ್ಡಾ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಪಾಯಲ್ ಘೋಷ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಅನುರಾಗ್ ಕಶ್ಯಪ್ ಪ್ರಕರಣದಲ್ಲಿ ಪಾಯಲ್ ತಮ್ಮ ಹೆಸರನ್ನು ಅನಗತ್ಯವಾಗಿ ಎಳೆದಿದ್ದಾಳೆ ಎಂದು ರಿಚಾ ಆರೋಪಿಸಿದ್ದರು.
ಪಾಯಲ್ ಘೋಷ್‌ಗೆ ಪ್ರೀತಿಯಲ್ಲಿ ಮೋಸ ಮಾಡಿದ್ದರಂತೆ ಕ್ರಿಕೆಟಿಗ ಇರ್ಫಾನ್ ಪಠಾಣ್ !