ನಟ ಅವಿನಾಶ್​ ಮೋಸ ಮಾಡ್ದ, ತಂದೆಗೆ ಹೃದಯಾಘಾತವಾಯ್ತು ಎಂದು ಕಣ್ಣೀರಿಟ್ಟ ಕಿರುತೆರೆ ನಟಿ

ಬಿಗ್​ಬಾಸ್​ ಖ್ಯಾತಿಯ ನಟಿ ಪಾಲಕ್ ಪುರಸ್ವಾನಿ ತಮ್ಮ ಬ್ರೇಕಪ್​ ಬಗೆಗಿನ ನೋವು ತೋಡಿಕೊಂಡಿದ್ದು, ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. 
 

Palak Purswani says her father had heart attack after her breakup with Avinash suc

ಪಾಲ್ಕಿ ಎಂದೇ ಫೇಮಸ್​ ಆಗಿರೋ ನಟಿ  28 ವರ್ಷದ ಪಾಲಕ್ ಪುರಸ್ವಾನಿ (Palak Purswani). ಮಹಾರಾಷ್ಟ್ರದ ನಾಗ್ಪುರದ ಈ ಬೆಡಗಿ ಫ್ಯಾಷನ್ ವಿನ್ಯಾಸದಲ್ಲಿ ಪದವಿ ಹೊಂದಿ ಯೋಗ, ಕುದುರೆ ಸವಾರಿ, ಪ್ರಯಾಣ, ಶಾಪಿಂಗ್ ಮತ್ತು ನೃತ್ಯ ಪಟುವಾಗಿದ್ದರೂ  ಈಕೆ ಸಕತ್​ ಫೇಮಸ್​ ಆಗಿದ್ದು, ಬಿಗ್​ಬಾಸ್​ನ ಓಟಿಟಿ ಸೀಸನ್​-2ನಲ್ಲಿ ಭಾಗವಹಿಸಿದ್ದಾಗ.  ಬಡಿ ದೇವ್ರಾಣಿ, ಬಡೇ ಭೈಯಾ ಕಿ ದುಲ್ಹನಿಯಾ, ನಾಸ್ತಿಕ್, ಮೇರಿ ಹನಿಕಾರಕ್ ಬೀವಿ,  ಯೇ ರಿಷ್​ತೇ ಹೈ ಪ್ಯಾರ್ ಕೆ ಧಾರಾವಾಹಿಗಳ ಮೂಲಕವೂ ಸಾಕಷ್ಟು ಜನಪ್ರಿಯಗೊಂಡಿರುವ ಕಿರುತೆರೆ ನಟಿ ಪಾಲಕ್​, Roohaniyat ವೆಬ್ ಸರಣಿಯೊಂದಿಗೆ ಮನೆ ಮಾತಾದವರು. ಆದರೆ ಇವರು ಸಕತ್​ ಹೈಲೈಟ್​ ಆಗಿದ್ದು ಬಿಗ್​ಬಾಸ್​ನಲ್ಲಿ.  
 
ಬಿಗ್​ಬಾಸ್​ ಮನೆಯಲ್ಲಿ ಹಳೆದ ಬಾಯ್​ಫ್ರೆಂಡ್​​   ಅನ್ನು ಕಂಡು ಹಿಂದಿನ ಕಹಿ ಘಟನೆಗಳನ್ನು ನೆನೆದು ಅತ್ತಿದ್ದಾರೆ ಪಾಲಕ್​.  ತಮ್ಮ ಮಾಜಿ ಗೆಳೆಯನಾಗಿರುವ  ನಟ ಅವಿನಾಶ್ ಸಚ್‌ದೇವ್ (Avinash Sachdev) ತಮಗೆ ತುಂಬಾ ಮೋಸ ಮಾಡಿದ್ದಾರೆ ಎಂದು ಕಣ್ಣೀರಿಟ್ಟ ನಟಿ, ಇದರಿಂದ ತಮ್ಮ ತಂದೆ ಕೂಡ ಹಾರ್ಟ್​ ಎಟ್ಯಾಕ್​ ಎದುರಿಸಬೇಕಾಯಿತು ಎಂದು ಹೇಳಿದ್ದಾರೆ. ತಮ್ಮ ಷೋ ದುರ್ಗಾ-ಮಾತಾ ಕಿ ಛಾಯಾ ಕಾರ್ಯಕ್ರಮದ ಸೆಟ್‌ಗಳಲ್ಲಿ ಈ ಘಟನೆ ಸಂಭವಿಸಿದ್ದು, ತಾವು ಹೇಗೆ ಇದರಿಂದ ಖಿನ್ನತೆ ಎದುರಿಸಬೇಕಾಯಿತು ಎಂದು ನಟಿ ವಿವರಿಸಿದ್ದಾರೆ.  ಪಾಲಕ್ ಮತ್ತು ಅವಿನಾಶ್ ಬಿಗ್ ಬಾಸ್ OTT 2 ನಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರು. ಕೊನೆಗೆ ನಟಿ  ಪಾಲಕ್ ಹೊರಹಾಕಲ್ಪಟ್ಟರು. ಈ ಸಂದರ್ಭದಲ್ಲಿ ಹಿಂದಿನ ದಿನಗಳನ್ನು ನೆನೆದು ನಟಿ ಕಣ್ಣೀರಾಗಿದ್ದಾರೆ.

'ಬಿಗ್ ಬಾಸ್'ನಲ್ಲಿ ಲಿಪ್​ಲಾಕ್​- ಅಂಗ ಪ್ರದರ್ಶನ: ಮುಸ್ಲಿಂ ರಾಷ್ಟ್ರಗಳ ಬಗ್ಗೆ ಸಲ್ಮಾನ್​ ಹೇಳಿದ್ದೇನು?
 
ಅಂದಹಾಗೆ ಪಾಲಕ್​ ಅವರು,  ಅವಿನಾಶ್ ಸಚ್​ದೇವ್ ಅವರೊಂದಿಗೆ ಸುಮಾರು ನಾಲ್ಕ  4 ವರ್ಷಗಳಿಂದ  ಸಂಬಂಧದಲ್ಲಿದ್ದರು. ಪರಸ್ಪರ ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದ ಈ ಜೋಡಿ, ಲವ್​ ಬರ್ಡ್ಸ್​ ಎಂದೇ ಫೇಮಸ್​ ಆದವರು. ಅಷ್ಟೇ ಅಲ್ಲದೇ ಮದುವೆಗೂ ಯೋಚನೆ ಮಾಡಿದ್ದರು ಇವರು. ಇದೇ ಕಾರಣಕ್ಕೆ ಇಬ್ಬರ ಎಂಗೇಜ್​ಮೆಂಟ್​ ಕೂಡ ನಡೆದಿತ್ತು.  ಆದರೆ ಅದೊಂದು ದಿನ ಏಕಾಏಕಿ ಫ್ಯಾನ್ಸ್​ಗೆ ಜೋಡಿ ಶಾಕ್​ ಕೊಟ್ಟಿತ್ತು. ತಮ್ಮ ಸಂಬಂಧ ಮುರಿದು ಬಿದ್ದಿರುವುದಾಗಿ ಜೋಡಿ ಹೇಳಿಕೊಂಡಿತ್ತು. ಇವರ ಬ್ರೇಕಪ್ ವಿಚಾರ ಆಗ ಬಹಳ ಸುದ್ದಿಯಾಗಿತ್ತು. ಆದರೆ ಈಗ ಮತ್ತೊಮ್ಮೆ ಅದನ್ನು ನೆನಪು ಮಾಡಿಕೊಳ್ಳಲು ಕಾರಣ,  ಬಿಗ್​ಬಾಸ್ ಒಟಿಟಿ 2 (Biggboss OTT) ಮೂಲಕ ಒಂದೇ ಕಡೆ ಸೇರುವಂತಾದುದಕ್ಕೆ.  

ಪಾಲಕ್​ ಅವರು ಬಿಗ್​ಬಾಸ್​ನಿಂದ  ಎಲಿಮಿನೇಟ್ ಆಗುತ್ತಲೇ ಹಿಂದಿನ ದಿನಗಳನ್ನು ನೆನೆದಿದ್ದಾರೆ. ಅವಿನಾಶ್​ ತಮಗೆ ಮೋಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.  ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿರುವ ನಟಿ ಪಾಲಕ್​,  ನನ್ನ ತಂದೆ ಕೂಡ ಅವಿನಾಶ್​ನನ್ನು ಮಗನಂತೆಯೇ ಕಂಡಿದ್ದರು. ಆದರೆ ಆತ ನನಗೆ ಮೋಸ ಮಾಡಿದ ನಿಶ್ಚಿತಾರ್ಥವೂ ಆಗಿತ್ತು. ಅದು ಕೂಡ ಬ್ರೇಕ್​ ಅಪ್​ ಆಯಿತು. ಈ ವಿಷಯ ತಿಳಿಯುತ್ತಲೇ  ತಂದೆಗೆ ಮೈನರ್ ಹಾರ್ಟ್ ಎಟ್ಯಾಕ್​ ಆಯಿತು ಎಂದು ನಟಿ ಹೇಳಿದ್ದಾರೆ.  'ನನ್ನ ತಂದೆ ನಮ್ಮಿಬ್ಬರನ್ನೂ ತುಂಬಾ ಪ್ರೀತಿಸುತ್ತಿದ್ದರು.  ಅವಿನಾಶ್​ನನ್ನು ಮಗನಂತೆ ತಿಳಿದಿದ್ದರು. ನಮ್ಮ ಬ್ರೇಕ್​ ಆದಾಗಲೂ  ಅವರ ಕುಟುಂಬದಿಂದ ಯಾರೊಬ್ಬರೂ ಒಂದು ಕಾಲ್ ಕೂಡಾ ಮಾಡಲಿಲ್ಲ. ಇದರಿಂದ ತಂದೆ ತುಂಬಾ  ನೊಂದುಕೊಂಡರು' ಎಂದಿದ್ದಾರೆ.

ಈ ಘಟನೆಯ ಬಳಿಕ ನಾನೂ ಡಿಪ್ರೆಷನ್​ಗೆ ಹೋಗಿದ್ದೆ. ತಂದೆಯನ್ನು ಹೇಗೋ ಸಮಾಧಾನ ಮಾಡಿದೆ. ಆದರೆ ಆತ ನನಗೆ ಹೀಗೆ ಮೋಸಮಾರಬಾರದಿತ್ತು ಎಂದಿದ್ದಾರೆ.  ಅವಿನಾಶ್ ನನಗೆ ಮೋಸ ಮಾಡಿದ ಸಂದರ್ಭ ನಾನು ದುರ್ಗಾ-ಮಾತಾ ಕಿ ಛಾಯಾ ಶೂಟಿಂಗ್ ಸೆಟ್​ನಲ್ಲಿದ್ದೆ. ಆಗ ಬ್ರೇಕಪ್​ ವಿಷಯ ಬಂತು.  ನಾನು ಕುಸಿದು ಕುಳಿತು ಜೋರಾಗಿ ಅಳಲಾರಂಭಿಸಿದೆ. ನನ್ನ ಬಳಿ ಇದ್ದ ನಟಿ ಸಿಮ್ರನ್ ನನಗೆ ಸಮಾಧಾನ ಮಾಡಿದರು.  ನಾನು ಡಿಪ್ರೆಷನ್​ಗೆ ಹೋಗಿದ್ದೆ.  ಅವಳೇ ನನ್ನನ್ನು ಡಿಪ್ರೆಷನ್​ನಿಂದ ಹೊರಗೆ ತಂದಳು ಎಂದಿದ್ದಾರೆ ಪಾಲಕ್​.

ಬೇಡ ಬೇಡ ಎಂದ್ರೂ ಗಾಯಕನಿಗೆ ಪದೇ ಪದೇ ಕಿಸ್​ ಕೊಟ್ಟ ಬಿಗ್​ಬಾಸ್​ ಸ್ಪರ್ಧಿ: ಉರ್ಫಿ ಹೇಳಿದ್ದೇನು?
 

Latest Videos
Follow Us:
Download App:
  • android
  • ios