ಮಹೇಶ್ ಬಾಬು ಮುಂದಿನ ಸಿನಿಮಾದಲ್ಲಿ ನಟಿಸಲು ತೆಲುಗಿನ ಮತ್ತೋರ್ವ ಸ್ಟಾರ್ ನಾನಿಯನ್ನು ಅಪ್ರೋಚ್ ಮಾಡಲಾಗಿದೆಯಂತೆ. ಆದರೆ ನಟ ನಾನಿ, ಮಹೇಶ್ ಬಾಬು ಜೊತೆ ನಟಿಸಲು ಹಿಂದೇಟು ಹಾಕಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ತೆಲುಗು ಸ್ಟಾರ್ ನಟ ಮಹೇಶ್ ಬಾಬು(Mahesh Babu) ಸದ್ಯ ಸರ್ಕಾರು ಪಾರಿ ಪಾಠ(Sarkaru Vaari Paata) ಸಿನಿಮಾದ ಸಕ್ಸಸ್ ನ ಸಂಭ್ರಮದಲ್ಲಿದ್ದಾರೆ. ಇತ್ತೀಚಿಗಷ್ಟೆ ಈ ಸಿನಿಮಾ ಬಿಡುಗಡೆಯಾಗಿದ್ದು ತೆಲುಗು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಈ ಸಿನಿಮಾ ಬಳಿಕ ಮಹೇಶ್ ಬಾಬು ಮುಂದಿನ ಸಿನಿಮಾಗೆ ಸಜ್ಜಾಗಿದ್ದಾರೆ. ಮಹೇಶ್ ಬಾಬು ಅವರ 28ನೇ ಸಿನಿಮಾಗಾಗಿ ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಪ್ರಿನ್ಸ್ ಮುಂದಿನ ಸಿನಿಮಾಗೆ ಖ್ಯಾತ ನಿರ್ದೇಶಕ ತ್ರಿವಿಕ್ರಮ್(Trivikram srinivas) ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಬಹಿರಂಗವಾಗಬೇಕಿದೆ.

ಅಂದಹಾಗೆ ಈ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಈ ಸಿನಿಮಾದಲ್ಲಿ ನಟಿಸಲು ತೆಲುಗಿನ ಮತ್ತೋರ್ವ ಸ್ಟಾರ್ ನಾನಿಯನ್ನು(Actor Nani) ಅಪ್ರೋಚ್ ಮಾಡಲಾಗಿದೆಯಂತೆ. ಆದರೆ ನಟ ನಾನಿ, ಮಹೇಶ್ ಬಾಬು ಜೊತೆ ನಟಿಸಲು ಹಿಂದೇಟು ಹಾಕಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ನಾನಿ, ಮಹೇಶ್ ಬಾಬು ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದ್ದಾರೆ. ಪಾತ್ರ ಇಷ್ಟವಾಗದೇ ತಿರಸ್ಕರಿಸಿದ್ರಾ ಅಥವಾ ಮಹೇಶ್ ಬಾಬು ಜೊತೆ ನಟಿಸಲು ಇಷ್ಟವಿಲ್ಲದೇ ಸಿನಿಮಾ ರಿಜೆಕ್ಟ್ ಮಾಡಿದ್ರಾ ಎನ್ನುವುದು ಇನ್ನು ಬಹಿರಂಗವಾಗಿಲ್ಲ.

ಇದೀಗ ಸಿನಿಮಾತಂಡ ಮತ್ತೊಬ್ಬ ನಟನನ್ನು ಕೇಳಿದೆ. ನಟ ಸುಶಾಂತ್ ಅವರನ್ನು ಮಹೇಶ್ ಬಾಬು ಸಿನಿಮಾದಲ್ಲಿ ನಟಿಸಲು ಕೇಳಿಕೊಂಡಿದೆಯಂತೆ. ಅಂದಹಾಗೆ ಸುಶಾಂತ್ ಈಗಾಗಲೇ ತ್ರಿವಿಕ್ರಮ್ ಜೊತೆ ಕೆಲಸ ಮಾಡಿದ್ದಾರೆ. ಅಲ ವೈಕುಂಠಪುರಂಲೋ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಹಾಗಾಗಿ ಮತ್ತೆ ತ್ರಿವಿಕ್ರಮ್ ಸಿನಿಮಾದಲ್ಲಿ ಸುಶಾಂತ್ ನಟಿಸುವ ಸಾಧ್ಯತೆ ಇದೆ. ಒಂದುವೇಳೆ ಸುಶಾಂತ್ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ರೆ ಸದ್ಯದಲ್ಲೇ ಸಿನಿಮಾತಂಡ ಅಧಿಕೃತ ಗೋಷಣೆ ಮಾಡಲಿದೆ.

ಪ್ರಿನ್ಸ್ ಮಹೇಶ್‌ ಬಾಬುಗೆ ತೆಲುಗು ಓದೋಕೆ ಬರೆಯೋಕೆ ಬರೋಲ್ಲ, ಡೈಲಾಗ್‌ನಲ್ಲಿ ಕಿಂಗ್..!

ಮಹೇಶ್ ಬಾಬು 28ನೇ ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಪೂಜಾ ಹೆಗ್ಡೆ ಈಗಾಗಲೇ ಮಹೇಶ್ ಬಾಬು ಜೊತೆ ನಟಿಸಿದ್ದಾರೆ. ಇದೀಗ ಮತ್ತೆ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಮಹೇಶ್ ಬಾಬು ಜೊತೆ ತೆರೆಹಂಚಿಕೊಳ್ಳಲು ಎಕ್ಸಾಯಿಟ್ ಆಗಿದ್ದಾರೆ. ಮುಂದಿನ ತಿಂಗಳಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

Sarkaru Vaari Paata; ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದ ಮಹೇಶ್ ಬಾಬು ಸಿನಿಮಾ, ಇಲ್ಲಿದೆ ಸಂಪೂರ್ಣ ಲೆಕ್ಕ

ಅಂದಹಾಗೆ ಮಹೇಶ್ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್ ಈಗಾಗಲೇ ಎರಡು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅತಾಡು ಮತ್ತು ಖಲೇಜಾ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದೀಗ ಮೂರನೇ ಬಾರಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಸದ್ಯದಲ್ಲೇ ಮಹೇಶ್ ಬಾಬು ಹೊಸ ಸಿನಿಮಾದ ಸಂಪೂರ್ಣ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.