ಪ್ರೇಕ್ಷಕರ ಹೃದಯ ಗೆದ್ದಿರುವ ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ಸಿನಿಮಾ 36.01 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ನಟನೆಯ ಸರ್ಕಾರು ವಾರಿ ಪಾಟ ಸಿನಿಮಾಗೆ ಮೊದಲ ದಿನ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹೇಶ್ ಬಾಬು ಅವರ ಬಾಲಿವುಡ್ ಹೇಳಿಕೆಯ ಬಳಿಕ ತೆರಿಗೆ ಬಂದ ಬಂದ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿತ್ತು. ಹಿಂದಿ ಮಂದಿಯನ್ನು ಕೆರಳಿಸಿದ್ದ ಮಹೇಶ್ ಬಾಬು ಅವರ ಸರ್ಕಾರು ವಾರಿ ಪಾಟ ಸಿನಿಮಾ ಹೇಗಿರಲಿದೆ, ಪ್ರೇಕ್ಷಕರ ಪ್ರತಿಕ್ರಿಯೆ ಏನು, ಎಂದು ಕಾತರದಿಂದ ಕಾಯುತ್ತಿದ್ದರು. ಇದೀಗ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ.

ಪ್ರೇಕ್ಷಕರ ಹೃದಯ ಗೆದ್ದಿರುವ ಸರ್ಕಾರು ವಾರಿ ಪಾಟ ಸಿನಿಮಾ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ಸಿನಿಮಾ 36.01 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಸಿನಿಮಾ ವಿಶ್ಲೇಷಕ ರಮೇಶ್ ಬಾಲಾ ನೀಡಿರುವ ಮಾಹಿತಿ ಪ್ರಕಾರ ಆಂಧ್ರಪ್ರದೇಶದಲ್ಲಿ ಸಿನಿಮಾ ಭರ್ಜರಿ ಗಳಿಕೆ ಮಾಡಿದೆ ಎಂದಿದ್ದಾರೆ. ಒಟ್ಟಾರೆ ಅಂದರೆ ವಿಶ್ವದಾದ್ಯಂತ ಈ ಸಿನಿಮಾ ಮೊದಲ ದಿನ 40 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಹೇಶ್ ಬಾಬು ಸಿನಿಮಾಗೆ ಉತ್ತಮ ಮಾರುಕಟ್ಟೆ ಇದೆ. ಇದು ಈ ಸಿನಿಮಾ ಮೂಲಕವೂ ಸಾಭೀತಾಗಿದೆ. ಅಂದಹಾಗೆ ಇನ್ನು ಕೆಜಿಎಫ್-2 ಹವಾ ಕಡಿಮೆಯಾಗಿಲ್ಲ. ಸಿನಿಮಾ ಬಿಡುಗಡೆಯಾಗಿ ತಿಂಗಳಾದರೂ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆದರೂ ಮಹೇಶ್ ಬಾಬು ಸಿನಿಮಾ ಭರ್ಜರಿ ಗಳಿಕೆ ಮಾಡಿದೆ. ಅಂದಹಾಗೆ ಈ ಸಿನಿಮಾ ಹಿಂದಿಯಲ್ಲಿ ತೆರೆಗೆ ಬಂದಿಲ್ಲ.

ಬಾಲಿವುಡ್‌ಗೆ ನನ್ನನ್ನು ಕೊಳ್ಳಲು ಸಾಧ್ಯವಿಲ್ಲ ಎಂದಿದ್ದ ಮಹೇಶ್ ಬಾಬು ಸಂಭಾವನೆ ಕೇಳಿದ್ರೆ ಅಚ್ಚರಿ ಪಡುತ್ತೀರಿ

ಸರ್ಕಾರು ವಾರಿ ಪಾಟ ಸಿನಿಮಾ ನಿರ್ದೇಶಕ ಪರಶುರಾಮ್ ಸಾರಥ್ಯದಲ್ಲಿ ಮೂಡಿಬಂದಿದೆ. ತಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ಕೀರ್ತಿ ಸುರೇಶ್ ಈ ಸಿನಿಮಾ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

Sarkaru Vaari Paata: ಶೂಟಿಂಗ್ ಸೆಟ್‌ನಲ್ಲಿ ಮಹೇಶ್‌ ಬಾಬು ಕೆನ್ನೆಗೆ ಹೊಡೆದ ನಟಿ?

ಬಾಲಿವುಡ್ ಬಗ್ಗೆ ಮಹೇಶ್ ಬಾಬು ಹೇಳಿಕೆ

ಹಿಂದಿ ಸಿನಿಮಾರಂಗಕ್ಕೆ ನನ್ನನ್ನು ಕೊಳ್ಳುವ ಶಕ್ತಿ ಇಲ್ಲ ಎಂದಿರುವ ಮಹೇಶ್ ಬಾಬು ಹಿಂದಿ ಸಿನಿಮಾಗಳನ್ನು ಕಾಯುತ್ತ ನಾನು ಸಮಯ ವ್ಯರ್ಥ ಮಾಡುವುದಿಲ್ಲ ಎಂದು ಹೇಳಿದ್ದರು. ಹಲವಾರು ಬಾಲಿವುಡ್ ಸಿನಿಮಾಗಳ ಆಫರ್ ಬಂದಿವೆ ಎಂದು ಬಹಿರಂಗ ಪಡಿಸಿದ್ದ ಪ್ರಿನ್ಸ, 'ನನಗೆ ಹಿಂದಿಯಲ್ಲಿ ಸಾಕಷ್ಟು ಆಫರ್ ಗಳು ಬಂದಿವೆ. ಆದರೆ ಅವರು ನನ್ನನ್ನು ಕೊಳ್ಳಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ನನ್ನ ಸಮಯ ವ್ಯರ್ಥ ಮಾಡುವುದಿಲ್ಲ. ತೆಲುಗು ಸಿನಿಮಾರಂಗದಲ್ಲಿ ನನಗೆ ಇರುವ ಪ್ರೀತಿ ಮತ್ತು ಸ್ಟಾರ್‌ಡಮ್ ಬಿಟ್ಟು ಬೇರೆ ಸಿನಿಮಾರಂಗಕ್ಕೆ ಹೋಗುವ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ನಾನು ಇಲ್ಲೇ ಸಿನಿಮಾ ಮಾಡುತ್ತೇನೆ ಅವುಗಳನ್ನು ಎಲ್ಲರೂ ನೋಡುತ್ತಾರೆ' ಎಂದು ಹೇಳಿದರು. ಈ ಹೇಳಿಕೆ ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ಈ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ.