ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ಗೆ ಬೆನ್ನುನೋವಿನ ಕಾರಣಕ್ಕೆ ನೀಡಲಾಗುತ್ತಿದ್ದ ಫಿಸಿಯೋಥೆರಪಿ ಚಿಕಿತ್ಸೆಯನ್ನು ವೈದ್ಯರು ಸ್ಥಗಿತಗೊಳಿಸಿದ್ದಾರೆ. ದರ್ಶನ್‌ಗೆ ಬೆನ್ನುನೋವಿನ ಯಾವುದೇ ಲಕ್ಷಣಗಳಿಲ್ಲ ಎಂದು ವರದಿ ನೀಡಿದ್ದಾರೆ.

ಬೆಂಗಳೂರು: ವೈದ್ಯರ ವರದಿಯ ಬಳಿಕ ನಟ ದರ್ಶನ್‌ಗೆ ಜೈಲಿನಲ್ಲಿ ನೀಡುತ್ತಿದ್ದ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಬೆನ್ನು ನೋವಿಗೆ ಸಂಬಂಧಿಸಿದಂತೆ ಸಿ.ವಿ.ರಾಮನ್ ಆಸ್ಪತ್ರೆ ವೈದ್ಯರ ತಂಡ ಜೈಲಾಧಿಕಾರಿಗಳಿಗೆ ವರದಿ ಸಲ್ಲಿಸಿದೆ. ದರ್ಶನ್‌ಗೆ ಜೈಲಲ್ಲೇ ಚಿಕಿತ್ಸೆ ನೀಡಿದರೆ ಸಾಕು ಎಂದು ಹೇಳಿದೆ. ನ್ಯಾಯಾಲಯದ ವಿಚಾರಣೆ ವೇಳೆ, ತಮಗೆ ತೀವ್ರ ಬೆನ್ನು ನೋವಿದ್ದು, ನಿಲ್ಲಲು ಅಥವಾ ಕೂರಲು ಸಹ ಸಾಧ್ಯವಾಗುತ್ತಿಲ್ಲ ಎಂದು ದರ್ಶನ್ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ನ್ಯಾಯಾಲಯ ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು

ಇದನ್ನೂ ಓದಿ: ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್

ನ್ಯಾಯಾಲಯದ ಆದೇಶದಂತೆ, ನಾಲ್ವರು ವೈದ್ಯರ ತಂಡ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಆರಂಭಿಸಿದ್ದರು. ವಾರಕ್ಕೆ ಎರಡು ಮೂರು ಬಾರಿ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ವೈದ್ಯರು ನಿಯಮಿತವಾಗಿ ಜೈಲಿಗೆ ಭೇಟಿ ನೀಡುತ್ತಿದ್ದರು. ಆದರೆ, ಚಿಕಿತ್ಸೆಯ ಮೊದಲ ವಾರದಲ್ಲೇ ದರ್ಶನ್ ಅವರ ಬೆನ್ನುನೋವಿನ ನೆಪ ಬಯಲಾಗಿದೆ ಎನ್ನಲಾಗಿದೆ. ದರ್ಶನ್ ಅವರಲ್ಲಿ ಬೆನ್ನುನೋವಿನ ಯಾವುದೇ ಲಕ್ಷಣಗಳಿಲ್ಲ ಎಂದು ಖಚಿತಪಡಿಸಿಕೊಂಡ ವೈದ್ಯರು, ತಕ್ಷಣವೇ ಫಿಸಿಯೋಥೆರಪಿ ಚಿಕಿತ್ಸೆ ನಿಲ್ಲಿಸಿದ್ದಾರೆ. ಪ್ರಸ್ತುತ ದರ್ಶನ್‌ಗೆ ಫಿಸಿಯೋಥೆರಪಿಯ ಅವಶ್ಯಕತೆ ಇಲ್ಲ ಎಂದು ವೈದ್ಯರ ತಂಡ ವರದಿಯಲ್ಲಿ ಉಲ್ಲೇಖಿಸಿದೆ.

ದರ್ಶನ್ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥನೆ: ನಟ ಜೈದ್‌ಖಾನ್

ಹೊಸಪೇಟೆ: ಕಲ್ಟ್‌ ಸಿನಿಮಾ ರಿಲೀಸ್ ಆಗೋದ್ರೊಳಗಡೆ ನಟ ದರ್ಶನ್ ಜೈಲಿಂದ ಹೊರಗೆ ಬರಲಿದ್ದಾರೆ ಎಂಬ ನಿರೀಕ್ಷೆ ಇದೆ ಎಂದು ನಟ ಜೈದ್ ಖಾನ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, 'ನಟ ದರ್ಶನ್ ಅಣ್ಣ ಆದಷ್ಟು ಬೇಗ ಜೈಲಿಂದ ಹೊರಗೆ ಬರಲಿ ಎಂದು ನಾನು ಪ್ರತಿದಿನ ಪ್ರಾರ್ಥಿಸುತ್ತಿರುವೆ, ದರ್ಶನ್‌ರನ್ನು ನಾನು ಕೇವಲ ಬಾಯಿ ಮಾತಿನಿಂದ ಅಣ್ಣ ಎಂದು ಕರೆಯುವುದಿಲ್ಲ, ನಿಜ ಜೀವನದಲ್ಲಿ ನನಗೆ ಅಣ್ಣ ಯಾರೂ ಇಲ್ಲ, ಆ ಜಾಗ ದರ್ಶನ್ ಅವರು ತುಂಬಿ ಕರ್ತವ್ಯ ನಿರ್ವಹಿಸಿದರು.

ಇದನ್ನೂ ಓದಿ: ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ

ಅವರು ಈಗ ಜೈಲಲ್ಲಿ ಇರುವುದು ಬೇಜಾರಾಗುತ್ತೆ. ನನ್ನ ನನ್ನ ಮೊದಲ ಸಿನಿಮಾಕ್ಕೆ ನನಗೆ ಅಣ್ಣನ ಹಾಗೇ ದರ್ಶನ್ ಬೆನ್ನೆಲುಬಾಗಿದ್ದರು. ಈಗ ಎರಡನೇ ಸಿನಿಮಾ ವೇಳೆ ಅವರು ಇದ್ದಿದ್ದರೆ ನನಗೆ ಶಕ್ತಿ ಜಾಸ್ತಿ ಆಗಿರುತ್ತಿತ್ತು. ಇಲ್ಲಿಯವರೆಗೂ ನಾನು ದರ್ಶನ್ ಅವರನ್ನು ಜೈಲಿಗೆ ಹೋಗಿ ಭೇಟಿ ಆಗಿಲ್ಲ. ಸಿನಿಮಾ ರಿಲೀಸ್ ಒಳಗೆ ದರ್ಶನ್ ಅವರು ಹೊರಗೆ ಬರುತ್ತಾರೆ ಎಂಬ ನಿರೀಕ್ಷೆ ಇದೆ. ಜೈಲಿನಿಂದ ಬರಲಿಲ್ಲ ಎಂದರೆ, ನಾನು ಅನುಮತಿ ಪಡೆದುಕೊಂಡು ಜೈಲಿಗೆ ಹೋಗುವೆ. ದರ್ಶನ್ ಅವರನ್ನು ಭೇಟಿ ಆಗಿ ಆಶೀರ್ವಾದ ಪಡೆಯುತ್ತೇನೆ ಎಂದರು.