ಜನಮೆಚ್ಚಿದ ಕಾರ್ಯಕ್ರಮ ರಾಮಾಯಣದಲ್ಲಿ ನಟಿಸಿದ್ದ ಕಲಾವಿದ ಇನ್ನಿಲ್ಲ ರಾವಣ ಖ್ಯಾತಿಯ ಕಲಾವಿರ 82 ವರ್ಷದಲ್ಲಿ ನಿಧನ 

ರಮಾನಂದ ಸಾಗರ್ ಅವರ ರಾಮಾಯಣದಲ್ಲಿ ರಾವಣನ ಪಾತ್ರ ಮಾಡಿದ್ದ ಹಿರಿಯ ನಟ ಅರವಿಂದ್ ತ್ರಿವೇದಿ(Arvind Trivedi) (82) ಮೃತಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟ ಅರುಣ್ ಗೋವಿಲ್ ಹಾಗೂ ಸುನಿಲ್ ಲಹ್ರಿ ಅರವಿಂದ್ ತ್ರಿವೇದಿ ಅವರ ಸಾವನ್ನು ದೃಢಪಡಿಸಿದ್ದಾರೆ. ಭಾವನಾತ್ಮಕ ಪೋಸ್ಟ್ ಮೂಲಕ ರಾಮಾಯಣದ ತಮ್ಮ ಸಹನಟನನ್ನು ನೆನಪಿಸಿಕೊಂಡಿದ್ದಾರೆ.

ರಾಮಾಯಣದಲ್ಲಿ ರಾಮನ ಪಾತ್ರ ಮಾಡಿದ್ದ ಅರುಣ್ ಗೋವಿಲ್ ಅರವಿಂದ್ ತ್ರಿವೇದಿ ಅವರನ್ನು ನನ್ನ ನೆಚ್ಚಿನ ಸ್ನೇಹಿತ ಎಂದು ಮೆಚ್ಚಿ ಬರೆದಿದ್ದಾರೆ. ಸುನಿಲ್ ಲಹ್ರಿ ಅವರು ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರ ಮಾಡಿದ್ದರು.

ಸೀತಾಪಹರಣ ಮಾಡಿದ್ದಕ್ಕೆ ಜನರ ಭಾವುಕರಾದ 'ರಾವಣ'!

ನಮ್ಮ ನೆಚ್ಚಿನ ಅರವಿಂದ್ ತ್ರಿವೇದಿ ನಮ್ಮ ಜೊತೆಗಿಲ್ಲ ಎಂಬುದು ತುಂಬಾ ದುಖಃದ ವಿಚಾರ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನನಗೆ ಮಾತು ಬರುತಿಲ್ಲ. ನನ್ನ ತಂದೆಯಂತಿದ್ದವರು, ಗುರುಗಳು ಇನ್ನಿಲ್ಲ ಎಂದು ಬರೆದಿದ್ದಾರೆ.

View post on Instagram

ರಾಮಾಯಣದ ರಾವಣನ ಪಾತ್ರಧಾರಿ ಅರವಿಂದ ತ್ರಿವೇದಿ ಬಗ್ಗೆ ಒಂದಿಷ್ಟು

ರಾಮಾಯಣದಲ್ಲಿ ಸೀತಾ ಪಾತ್ರವನ್ನು ನಿರ್ವಹಿಸಿದ ನಟಿ ದೀಪಿಕಾ ಚಿಖ್ಲಿಯಾ, ಅರವಿಂದ ತ್ರಿವೇದಿ ಅವರನ್ನು ನೆನಪಿಸಿಕೊಂಡು ತುಂಬಾ ಒಳ್ಳೆಯ ವ್ಯಕ್ತಿ ಎಂದು ಬರೆದಿದ್ದಾರೆ.

View post on Instagram

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಟ್ವೀಟ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ರಾಮಾಯಣ ನಟನಿಗೆ ಸಂತಾಪ ಸೂಚಿಸಿದ ಅವರು ಶ್ರೀ ಅರವಿಂದ್ ತ್ರಿವೇದಿ ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರು ಕೇವಲ ಅಸಾಧಾರಣ ನಟ ಮಾತ್ರವಲ್ಲ ಸಾರ್ವಜನಿಕ ಸೇವೆಯ ಬಗ್ಗೆ ಉತ್ಸುಕರಾಗಿದ್ದರು. ತಲೆಮಾರುಗಳ ಭಾರತೀಯರು ಅವರನ್ನು ಅವರ ಕೆಲಸಕ್ಕಾಗಿ ನೆನಪಿಸಿಕೊಳ್ಳುತ್ತಾರೆ. ನಟನ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ. ಓಂ ಶಾಂತಿ ಎಂದು ಬರೆದಿದ್ದಾರೆ.

Scroll to load tweet…

ಶ್ರೀರಾಮನನ್ನು ಮನೆ ಮನೆಗೆ ತಲುಪಿಸಿದ ನಟರು ಇವರು!

ಅರವಿಂದ ತ್ರಿವೇದಿಯ ಸೋದರಳಿಯ ಕೌಸ್ತುಭ್ ತ್ರಿವೇದಿ ಅವರು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಂದ ಅರವಿಂದ್ ಅವರು ಬಳಲುತ್ತಿದ್ದರು. ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು ಎಂದು ಹೇಳಿದ್ದಾರೆ. ಅವರು ಸ್ವಲ್ಪ ಸಮಯದಿಂದ ಆರೋಗ್ಯವಾಗಿರಲಿಲ್ಲ. ಅನಾರೋಗ್ಯ ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ರಾಮಾಯಣದ ಸುಗ್ರೀವ ಪಾತ್ರಧಾರಿ ಶ್ಯಾಮಸುಂದರ್‌ ಕಲಾನಿ ಇನ್ನಿಲ್ಲ

ಈ ವರ್ಷದ ಆರಂಭದಲ್ಲಿ, ಅರವಿಂದ್ ತ್ರಿವೇದಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ವೈರಲ್(Viral) ಆಗಿತ್ತು. ಸುನೀಲ್ ಲಾಹ್ರಿ ಸ್ಪಷ್ಟೀಕರಣವನ್ನು ನೀಡಿ ದೇವರ ಕೃಪೆಯಿಂದ, ಅರವಿಂದ್ ಜಿ ಚೆನ್ನಾಗಿದ್ದಾರೆ, ಅವರು ಆರೋಗ್ಯವಾಗಿರಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದಿದ್ದರು.

ಮೂರು ದಶಕಗಳಷ್ಟು ಹಳೆಯ ಧಾರಾವಾಹಿ ಅಗ್ರಸ್ಥಾನ ಅಲಂಕರಿಸಿದ್ದು ಹೇಗೆ?

Scroll to load tweet…

ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್‌ಡೌನ್(Lockdown) ಸಮಯದಲ್ಲಿ, ದೂರದರ್ಶನವು ದೂರದರ್ಶನದಲ್ಲಿ ರಮಾನಂದ್ ಸಾಗರ್ ಅವರ ರಾಮಾಯಣವನ್ನು ದಿನಕ್ಕೆ ಎರಡು ಬಾರಿ ಪ್ರಸಾರ ಮಾಡಲು ಪ್ರಾರಂಭಿಸಿದಾಗ ಅದು ಮತ್ತೆ ಭಾರೀ ವೀಕ್ಷಣೆ ಪಡೆಯಿತು. ಅರವಿಂದ್ ತ್ರಿವೇದಿ ಅವರು ಸೀತಾ ಹರಣದ ದೃಶ್ಯವನ್ನು ನೋಡುತ್ತಿರುವ ವಿಡಿಯೋ ಆಗ ವೈರಲ್ ಆಗಿತ್ತು.

ಆ ಕಾಲದಲ್ಲಿ ಸೀರಿಯಲ್‌ ರಾಮ ಸೀತೆಗೆ ಪೂಜೆ, ಮಂಗಳಾರತಿ ಮಾಡಿದ ನಟಿಯರು!

1987 ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಣವು ತಕ್ಷಣವೇ ಜನಪ್ರಿಯತೆಯನ್ನು ಗಳಿಸಿತು. ಅರುಣ್ ಗೋವಿಲ್, ದೀಪಿಕಾ ಚಿಖ್ಲಿಯಾ ಮತ್ತು ಸುನಿಲ್ ಲಾಹ್ರಿ ಅವರಿಗೆ ಭಾರೀ ಖ್ಯಾತಿ ತಂದುಕೊಟ್ಟಿತು.

ದೂರದರ್ಶನದಲ್ಲಿ ಪ್ರಸಾರವಾಗೋ ರಾಮಾಯಣ, ಬಾಲ್ಯದ ನೆನಪಿನ ಬುತ್ತಿ

ರಾಮಾಯಣದಲ್ಲಿ ಅವರ ಅರವಿಂದ್ ತ್ರಿವೇದಿ ಅವರ ವ್ಯಾಪಕ ಯಶಸ್ವಿ ಪಾತ್ರದ ಹೊರತಾಗಿ ಬಾಲಿವುಡ್ ಮತ್ತು ಗುಜರಾತಿ ಚಿತ್ರರಂಗದಲ್ಲಿ ಸುಮಾರು 300 ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರವಿಂದ್ ತ್ರಿವೇದಿ ಅವರು ವಿಕ್ರಮ್ ಔರ್ ಬೇಟಾಲ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಅವರು ಗುಜರಾತಿ ಚಿತ್ರರಂಗದಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿರುವ ದೇಶ್ ರೇ ಜೋಯಾ ದಾದ ಪರದೇಶ ಜೋಯಾ ಚಿತ್ರದಲ್ಲಿ ನಟಿಸಿದ್ದಾರೆ.