ಶ್ರೀರಾಮನ ಪಾತ್ರದಲ್ಲಿ ಹೃದಯಂಗಮವಾಗಿ ನಟಿಸಿ ಚಿತ್ರ ರಸಿಕರ ಮನ ಗೆದ್ದ, ಭಾರತೀಯರ ಕಣ್ಣಿನಲ್ಲಿ ರಾಮನೆಂದರೆ ಹೀಗೇ ಎಂಬ ಚಿತ್ರಣ ಮೂಡಿಸಿದ ನಟರು ಇವರೆಲ್ಲ! ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಯುವ ದಿನ ಇವರೆಲ್ಲ ನೆನಪಾಗುತ್ತಾರೆ. 

ಭಾರತದ ಪ್ರತಿಯೊಂದು ಭಾಷೆಯಲ್ಲೂ ರಾಮಾಯಣ ಚಲನಚಿತ್ರವಾಗಿ ಬಂದಿದೆ. ಎಂಬತ್ತರ ದಶಕದಲ್ಲಿ ರಾಮಾಯಣ ಸೀರಿಯಲ್ ಆಗಿ‌ ಮನೆ ಮನೆ ತಲುಪಿತು. ಅದಕ್ಕೂ ಮೊದಲು ಹಾಗೂ ನಂತರವೂ ನಾನಾ ಭಾಷೆಗಳಲ್ಲಿ ಅಲ್ಲಿನ ಪ್ರಮುಖ ನಟರು ಕೆಲವು ಸಿನಿಮಾಗಳಲ್ಲಿ ರಾಮನ ಪಾತ್ರಧಾರಿಗಳಾಗಿ ನಟಿಸಿದ್ದರು. 

ದೂರದರ್ಶನದಲ್ಲಿ ಪ್ರಸಾರವಾದ ರಮಾನಂದ ಸಾಗರರ ರಾಮಾಯಣ ಸೀರಿಯಲ್‌ನಲ್ಲಿ ಅರುಣ್ ಗೋವಿಲ್ ಅವರು ಶ್ರೀರಾಮನ ಪಾತ್ರ ಮಾಡಿದರು. ದೀಪಿಕಾ ಚಿಕಾಲಿಯಾ ಸೀತೆಯಾಗಿದ್ದರು. ಅವರು ಆ ದಿನಗಳಲ್ಲಿ ಎಲ್ಲೇ ಹೋದರೂ ಶ್ರೀರಾಮನನ್ನೇ ಕಾಣುವಂತೆ ಭಕ್ತಿ ಭಾವದಿಂದ ನೋಡಲಾಗುತ್ತಿತ್ತಂತೆ. ಅವರು ಸೀತೆ ಸಮೇತ ತೆರೆಯ ಮೇಲೆ ಬರುವಾಗ, ಆರತಿ ಎತ್ತಿ ಹಣ್ಣುಕಾಯಿ ಮಾಡುವ ಕೈಮುಗಿಯುವ ಸೀನುಗಳೂ ಭಾರತದ ಸಾವಿರಾರು ಮನೆಗಳಲ್ಲಿ ಆಗುತ್ತಿದ್ದುದು ಉಂಟು. ನಂತರ ಅನೇಕ ವರ್ಷಗಳ ಕಾಲ ಅವರಿಗೆ ಸರಿಯಾದ ಇತರ ರೋಲ್‌ಗಳೇ ಸಿಗಲಿಲ್ಲ. ಕಾರಣ, ಶ್ರೀರಾಮನ ಪಾತ್ರ ಮಾಡಿದವನು ಇಂಥ ಚಿಲ್ಲರೆ ರೋಲ್ ಮಾಡುವುದು ಸರಿಯಲ್ಲ ಎಂಬ ಭಾವನೆ!

ರಾಮನ ಜನ್ಮಸ್ಥಳ ಪತ್ತೆಗೆ ನೇಪಾಳ ಉತ್ಖನನ..! 

ತೆಲುಗಿನಲ್ಲಿ ಎನ್‌ಟಿಆರ್ ಅವರ ಶ್ರೀರಾಮನ ಲೆಗಸಿಯನ್ನು ಮುಂದುವರಿಸಿದವರು ನಂದಮೂರಿ ಬಾಲಕೃಷ್ಣ. ಶ್ರೀರಾಮರಾಜ್ಯಂ, ಶ್ರೀರಾಮಪಟ್ಟಾಭಿಷೇಕಂ ಫಿಲಂಗಳಲ್ಲಿ ರಾಮನಾಗಿ ಕಾಣಿಸಿಕೊಂಡರು. ನಯನತಾರಾ ಸೀತೆಯಾಗಿ ಸಾತ್ ನೀಡಿದರು. ಒಂದೇ ಹೊಡೆತಕ್ಕೆ ಲಾರಿ ಪುಡಿ ಮಾಡಬಲ್ಲ ಬಾಲಕೃಷ್ಣ ರಾಮನಾದದ್ದು ವಿಶೇಷವೇ.

'ಅರ್ನಾಬ್‌- ದಿ ನ್ಯೂಸ್‌ ಪ್ರಾಸ್ಟಿಟ್ಯೂಟ್‌'; ಆರ್‌ಜಿವಿ ಬ್ಯಾನರ್‌ನಲ್ಲಿ ಮತ್ತೊಂದು ಸಿನಿಮಾ! ...

ಹಿಂದಿಯ ಫೇಮಸ್ ನಟ ಜಿತೇಂದ್ರ ಕೂಡ ಶ್ರೀರಾಮ ನಾಗಿ ನಟಿಸಿದ್ದುಂಟು. ಲವಕುಶ ಫಿಲಂನಲ್ಲಿ ಅವರು ರಾಮನಾಗಿದ್ದರು. ಮರಾಠಿ, ಗುಜರಾತಿ ಮುಂತಾದ ಭಾಷೆಗಳಲ್ಲಿ ಲೆಕ್ಕವಿಲ್ಲದಷ್ಟು ಟಿವಿ ಸೀರಿಯಲ್‌ಗಳೂ, ಸಿನಿಮಾಗಳೂ ಶ್ರೀರಾಮನ ಮೇಲೆ ಬಂದಿವೆ. ಅದರಲ್ಲಿ ಶ್ರೀರಾಮನಾಗಿ ಕಾಣಿಸಿಕೊಂಡವರು ಮುಂದೆ ದೊಡ್ಡ ನಟರಾಗಿ, ರಾಜಕಾರಣಿಗಳಾಗಿ ಖ್ಯಾತರಾಗಿದ್ದಾರೆ. ಯಾರ ಬದುಕೂ ದುರಂತವಾಗಿಲ್ಲ ಎಂಬುದನ್ನು ಇಲ್ಲಿ ವಿಶೇಷವಾಗಿ ನೆನೆಯಲೇಬೇಕು.

ನಟಿ ಸಾನ್ವಿ ಫೇಸ್‌ಬುಕ್ ಖಾತೆ ಹ್ಯಾಕರ್ಸ್ ಮುಷ್ಠಿಯಲ್ಲಿ..!