ಇದೇ ಮೊದಲ ಬಾರಿಗೆ ಐಶ್ವರ್ಯ ರೈ ಪುತ್ರಿ ಆರಾಧ್ಯ ಬಚ್ಚನ್​ ಬಹಿರಂಗವಾಗಿ ಮಾತನಾಡಿದ್ದು, ಅಲ್ಲಿ ಅಮ್ಮನ ವಿಷಯ ತಿಳಿಸಿದ್ದಾಳೆ. 

ಐಶ್ವರ್ಯಾ ರೈ ಬಚ್ಚನ್ ನಿನ್ನೆ ಅಂದರೆ ನವೆಂಬರ್​ 1ರಂದು ತಮ್ಮ 50 ನೇ ಹುಟ್ಟುಹಬ್ಬವನ್ನು ನವೆಂಬರ್ 1 ರ ಬುಧವಾರದಂದು ಆಚರಿಸಿಕೊಂಡರು. ವಿಶೇಷ ದಿನದಂದು, ಬಾಲಿವುಡ್ ಸೂಪರ್‌ಸ್ಟಾರ್ ತಮ್ಮ ಮಗಳು ಆರಾಧ್ಯ ಬಚ್ಚನ್ ಮತ್ತು ತಾಯಿ ವೃಂದಾ ರೈ ಅವರೊಂದಿಗೆ ಕ್ಯಾನ್ಸರ್ ರೋಗಿಗಳ ಕಲ್ಯಾಣಕ್ಕಾಗಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಗಳು ಆರಾಧ್ಯ ಮೈಕ್ ತೆಗೆದುಕೊಂಡು ಸಾರ್ವಜನಿಕವಾಗಿ ಮೊದಲ ಬಾರಿಗೆ ಭಾವುಕರಾಗಿ ಅಮ್ಮನ ಬಗ್ಗೆ ಮಾತನಾಡಿದಳು. ಅವಳು ತನ್ನ ತಾಯಿಯನ್ನು ಹೊಗಳಿದ್ದು, ಇದನ್ನು ಕೇಳಿ ಐಶ್ವರ್ಯ ಭಾವುಕರಾದರು. ಅಷ್ಟಕ್ಕೂ, ಸಾಮಾನ್ಯವಾಗಿ ಐಶ್ವರ್ಯಾ ರೈ ಎಲ್ಲಿಗೆ ಹೋದರೂ ಅವರ ಮಗಳು ಆರಾಧ್ಯ ಅವರ ಜೊತೆಗಿರುತ್ತಾಳೆ. ನವೆಂಬರ್ 1 ರಂದು ಐಶ್ವರ್ಯಾ ಅವರ 50 ನೇ ಹುಟ್ಟುಹಬ್ಬದಂದು, ಅವರು ತಮ್ಮ ತಾಯಿ ವೃಂದಾ ರೈ ಮತ್ತು ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ವಿಶೇಷ ಉದ್ದೇಶಕ್ಕಾಗಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಿಳಿ ಚಿಕಂಕರಿ ಸಲ್ವಾರ್ ಸೂಟ್‌ನಲ್ಲಿ ಐಶ್ವರ್ಯಾ ಸುಂದರವಾಗಿ ಕಾಣುತ್ತಿದ್ದರು. ಮಾಧ್ಯಮಗಳಿಂದ ಸದಾ ಅಂತರ ಕಾಯ್ದುಕೊಳ್ಳುವ ಮಗಳು ಆರಾಧ್ಯ ಬಚ್ಚನ್​ ಮೊದಲ ಬಾರಿಗೆ ಸಾರ್ವಜನಿಕವಾಗಿ ಭಾಷಣ ಮಾಡಿದಳು. 

ನನ್ನ ಪ್ರೀತಿಯ ಅಮ್ಮ ನನ್ನ ಜೀವನ. ನನ್ನ ಅಮ್ಮ ಏನು ಮಾಡುತ್ತಿದ್ದಾರೆ ಎಂಬುದು ನಿಜವಾಗಿಯೂ ಮುಖ್ಯ ಮತ್ತು ನಿಜವಾಗಿಯೂ ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ನಿಜವಾಗಿಯೂ ಎಲ್ಲರನ್ನೂ ಪ್ರೇರೇಪಿಸುತ್ತದೆ ಎಂದು ಆರಾಧ್ಯಾ ಹೇಳಿದ್ದಾರೆ. ನನ್ನ ಅಮ್ಮ ಸದಾ ಸೇವೆಯಲ್ಲಿ ತೊಡಗುತ್ತಾರೆ. ಅವರು ಎಲ್ಲರಿಗೂ ನೆರವಾಗುತ್ತಾರೆ ಎಂದಿರುವ ಪುತ್ರಿ, ನೀವು ಮಾಡುತ್ತಿರುವುದು ನಿಜಕ್ಕೂ ನಂಬಲಸಾಧ್ಯ ಎಂದಿದ್ದಾಳೆ. ಅಮ್ಮ ಮಾಡುವ ಕೆಲಸಗಳನ್ನು ಆರಾಧ್ಯಾ ಶ್ಲಾಘಿಸಿದ್ದಾಳೆ. ಮಗಳು ಇಷ್ಟು ಮಾತನಾಡುವುದನ್ನು ಕೇಳಿದ ಅಮ್ಮ ಐಶ್ವರ್ಯಾ ಆಶ್ಚರ್ಯದಿಂದ ನೋಡಿದರು, ಜೊತೆಗೆ ಭಾವುಕರಾದರು.

Aishwarya Rai@50: ಅಭಿಷೇಕ್​ಗೆ ಮದ್ವೆಯಾದ್ರೆ ನಟಿಗಿತ್ತು ಅಪಾಯ! ಜಾತಕ ದೋಷದ ಪರಿಹಾರ ಮಾಡಿದ್ದು ಹೇಗೆ?

ಐಶ್ವರ್ಯ ಅವರ ಸಿನಿಮಾ ವಿಷಯದಲ್ಲಿ ಹೇಳುವುದಾದರೆ, ಐಶ್ವರ್ಯಾ ಕೊನೆಯ ಬಾರಿಗೆ ಐತಿಹಾಸಿಕ ಆಕ್ಷನ್ ನಾಟಕ 'ಪೊನ್ನಿಯಿನ್ ಸೆಲ್ವನ್: II' ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸದ್ಯ ಸಿನಿಮಾಗಳ ಆಯ್ಕೆಯಲ್ಲಿ ಸಖತ್​ ಚ್ಯೂಸಿ ಆಗಿದ್ದಾರೆ. ವಯಸ್ಸು 50 ಆದರೂ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಅವುಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಅವರಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ಸಿಗುತ್ತದೆ. ಅವರ ಒಟ್ಟು ಆಸ್ತಿ ಮೌಲ್ಯ 750 ಕೋಟಿ ರೂಪಾಯಿಗೂ ಆಧಿಕ. ಐಶ್ವರ್ಯಾ ರೈ ಪತಿ ಅಭಿಷೇಕ್​ ಬಚ್ಚನ್​, ಮಾವ ಅಮಿತಾಭ್​ ಬಚ್ಚನ್ ಮತ್ತು ಅತ್ತೆ ​ಜಯಾ ಬಚ್ಚನ್​ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. 

ಏತನ್ಮಧ್ಯೆ, ಆರಾಧ್ಯ ಇದೇ ನವೆಂಬರ್ 16 ರಂದು 12 ವರ್ಷ ಪೂರೈಸಿ 13ನೇ ವಯಸ್ಸಿಗೆ ಕಾಲಿಡಳಿದ್ದಾಳೆ. ಈ ಹಿಂದೆ ಆರಾಧ್ಯಳ ಶಾಲೆಯ ಶುಲ್ಕದ ವಿಷಯ ಸಕತ್​ ಸದ್ದು ಮಾಡಿತ್ತು. ಅಂದಹಾಗೆ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮಗಳು ಆರಾಧ್ಯ ಬಚ್ಚನ್ ಅವರು ದೇಶದ ಅತ್ಯಂತ ದುಬಾರಿ ಶಾಲೆಯಲ್ಲಿ ಓದುತ್ತಿದ್ದಾಳೆ. ಧೀರೂಭಾಯಿ ಅಂಬಾನಿ ಇಂಟರ್​ನ್ಯಾಷನಲ್ ಶಾಲೆಯಲ್ಲಿ 8ನೇ ತರಗತಿ ಈಕೆ ಓದುತ್ತಿದ್ದು, ಈ ಶಾಲೆಯಲ್ಲಿ ಎಲ್‌ಕೆಜಿಯಿಂದ 7ನೇ ತರಗತಿವರೆಗಿನ ಫೀಸ್ 1.70 ಲಕ್ಷ ರೂ., 8-10ನೇ ತರಗತಿಗೆ 4.48 ಲಕ್ಷ ರೂ. ಫೀಸ್ ಮತ್ತು 11 ಮತ್ತು 12ನೇ ತರಗತಿ 9.65 ಲಕ್ಷ ರೂ. ಶುಲ್ಕ ಇದೆ ಎನ್ನಲಾಗಿದೆ. ಈಕೆ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಾರೆ ಎಂಬ ಕೌತುಕ ಎಲ್ಲರಲ್ಲೂ ಇದೆ.

ಐಶ್ವರ್ಯ @50: ನಕಲಿ ಉಂಗುರ ಕೊಟ್ಟು ಪ್ರಪೋಸ್​ ಮಾಡಿದ್ದ ಅಭಿಷೇಕ್​- ಇಂಟರೆಸ್ಟಿಂಗ್​ ವಿಷ್ಯ ವೈರಲ್

View post on Instagram