ಇಂದು ನಟಿ ಐಶ್ವರ್ಯ ರೈ ಅವರ 50ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ನಕಲಿ ಉಂಗುರ ಕೊಟ್ಟು ಪ್ರಪೋಸ್​ ಮಾಡಿದ್ದ ಅಭಿಷೇಕ್​ ವಿಷಯ ಬಹಿರಂಗಗೊಂಡಿದೆ. 

ವಿಶ್ವಸುಂದರಿ ಕಿರೀಟ ಎಷ್ಟೋ ಸುಂದರಿಯರ ಮುಡಿಗೆ ಏರಿದ್ದರೂ, ವಿಶ್ವಸುಂದರಿ ಎಂದಾಕ್ಷಣ ನೆನಪಿಗೆ ಬರುವವರು ನಟಿ ಐಶ್ವರ್ಯಾ ರೈ. ಇಂದು ಇವರ 50ನೇ ಹುಟ್ಟುಹಬ್ಬ 1973ರ ನವೆಂಬರ್‌ 1 ರಂದು ಜನಿಸಿರುವ ಈ ಸುಂದರಿಗೆ 50 ವರ್ಷ ಎಂದರೆ ನಂಬುವುದು ಕಷ್ಟವೇ. ವಯಸ್ಸು ಇಷ್ಟಾದರೂ ಇಂದಿಗೂ ಅದೇ ಸೌಂದರ್ಯವನ್ನು ಕಾಪಿಟ್ಟುಕೊಂಡಿದ್ದಾರೆ. ನಟಿ ಐಶ್ವರ್ಯ ಸಿನಿಮಾ ಬದುಕಿನಂತೆಯೇ ಅವರ ಪ್ರೇಮ ಪ್ರಕರಣಗಳಿಂದಲೂ ಹೆಚ್ಚಿನ ಸುದ್ದಿಯಲ್ಲಿರೋ ನಟಿ, ಅದು ಇಂದಿಗೂ ಚರ್ಚಿತವೇ. ಸಲ್ಮಾನ್ ಖಾನ್ ಜತೆಗಿನ ವಿವಾದಾತ್ಮಕ ಸಂಬಂಧದಿಂದ ಹಿಡಿದು ಅಭಿಷೇಕ್ ಬಚ್ಚನ್ ಮದುವೆಯವರೆಗೂ ಐಶ್ವರ್ಯಾ ಅವರ ಖಾಸಗಿ ಬದುಕಿನ ವಿಷಯ ಸದಾ ಚರ್ಚೆಯಲ್ಲಿ ಇರುವಂಥದ್ದು. ಇವರು ಕೈಕೊಟ್ಟಿದ್ದರಿಂದಲೇ ಕೊನೆಯವರೆಗೂ ಸಲ್ಮಾನ್‌ ಖಾನ್‌ ಒಂಟಿಯಾಗಿಯೇ ಉಳಿದರು ಎಂದೂ ಹೇಳಲಾಗುತ್ತದೆ. ಈ ಪ್ರೇಮಕಥೆಯ ಜೊತೆಗೆ ಐಶ್ವರ್ಯ ಹೆಸರು ವಿವೇಕ್ ಒಬೆರಾಯ್ ಅವರ ಜೊತೆಯೂ ಸೇರಿಕೊಂಡಿದೆ. ಐಶ್ವರ್ಯಾ-ಸಲ್ಮಾನ್ ಪ್ರೇಮ ಸಂಬಂಧದಂತೆಯೇ ಕುತೂಹಲ ಕೆರಳಿಸಿದ್ದು, ಐಶ್ವರ್ಯಾ-ವಿವೇಕ್ ಒಬೆರಾಯ್ ಪ್ರೇಮ ಸಲ್ಲಾಪ. ಇದು ಅಲ್ಪ ಕಾಲದ್ದಾಗಿದ್ದರೂ ಆ ಕಾಲದಲ್ಲಿ ಬಾಲಿವುಡ್‌ನಲ್ಲಿ ಭಾರಿ ಸದ್ದು ಮಾಡಿತ್ತು. 

ಇವೆಲ್ಲಾ ಗಾಸಿಪ್​ಗಳು ಏನೇ ಇದ್ದರೂ ನಟಿ ಸದ್ಯ ಅಭಿಷೇಕ್​ ಬಚ್ಚನ್​ ಮತ್ತು ಮಗಳು ಆರಾಧ್ಯ ಜೊತೆ ಸುಖ ಸಂಸಾರ ನಡೆಸುತ್ತಿದ್ದಾರೆ. ಅಮಿತಾಭ್​ ಬಚ್ಚನ್​ ಕುಟುಂಬದ ಸದಸ್ಯೆಯಾಗಿಯೂ ಸಕತ್​ ಫೇಮಸ್​ ಆಗಿರೋ ನಟಿಗೆ ಸೌಂದರ್ಯದಂತೆ ಅವಕಾಶಗಳ ಬಾಗಿಲೂ ಸದಾ ತೆರೆದೇ ಇರುತ್ತದೆ. ಇಂತಿಪ್ಪ ನಟಿಯ ಇಂಟರೆಸ್ಟಿಂಗ್​ ವಿಷ್ಯವೊಂದು ಇದೀಗ ಬಹಿರಂಗಗೊಂಡಿದೆ. ಅದೇನೆಂದರೆ, ಅಭಿಷೇಕ್​ ಬಚ್ಚನ್​ ಅವರು ನ್ಯೂಯಾರ್ಕ್​ನಲ್ಲಿ ಐಶ್ವರ್ಯ ಅವರನ್ನು ಪ್ರಪೋಸ್​ ಮಾಡಿದ್ದರು. ಆದರೆ ಆ ಸಮಯದಲ್ಲಿ ಅವರು ನಕಲಿ ಉಂಗುರ ಕೊಟ್ಟು ಪ್ರಪೋಸ್​ ಮಾಡಿದ್ದರು ಎನ್ನುವ ವಿಷಯವಿದು.

ಕೈಕೊಟ್ಟ ಐಶ್ವರ್ಯ ರೈ, ಮಾಜಿ ಪ್ರೇಮಿ ಸಲ್ಮಾನ್‌ರಿಂದ ಬೆದರಿಕೆ! ನೋವು ತೋಡಿಕೊಂಡ ವಿವೇಕ್‌ ಓಬಿರಾಯ್‌

ಹೌದು. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನ ಅತ್ಯುತ್ತಮ ಜೋಡಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 8 ವರ್ಷಗಳ ನಂತರ ಈ ಜೋಡಿ 'ಗುಲಾಬ್-ಜಾಮೂನ್' ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ಈ ಪರಿಪೂರ್ಣ ಜೋಡಿಯ ಬಗ್ಗೆ ಮಾತನಾಡುವುದಾದರೆ, ಐಶ್ ಒಮ್ಮೆ ಸಂದರ್ಶನವೊಂದರಲ್ಲಿ ನಮ್ಮ ಸಂಬಂಧದಲ್ಲಿ ಬೇಸರವಿಲ್ಲ ಎಂದು ಹೇಳಿದ್ದರು. ಈ ಮಾತು ಅವರು ಹೇಳಿದ್ದು, ಅಭಿಷೇಕ್​ ಅವರು ಮಾಡಿದ ಮೊದಲ ಪ್ರಪೋಸ್​ ಬಗ್ಗೆಯಾಗಿತ್ತು. 2007ರಲ್ಲಿ ಮಣಿರತ್ನಂ ಅಭಿನಯದ 'ಗುರು' ಚಿತ್ರದ ಸೆಟ್‌ನಲ್ಲಿ ಅಭಿಷೇಕ್ ಐಶ್‌ಗೆ ನಕಲಿ ಉಂಗುರ ನೀಡಿ ಪ್ರಪೋಸ್ ಮಾಡಿದ್ದರು. ಈ ಉಂಗುರವು ಶೂಟಿಂಗ್‌ನಲ್ಲಿ ಬಳಸಲಾಗುತ್ತದೆ. ಇದು ನಕಲಿ ಎಂದು ತಿಳಿದ ಮೇಲೂ ಐಶ್ವರ್ಯ ಅವರಿಗೆ ಕೋಪ ಬರಲಿಲ್ಲವಂತೆ, ಅಭಿಷೇಕ್ ಅವರ ಪ್ರಪೋಸಲ್ ಐಶ್​ಗೆ ತುಂಬಾ ಇಷ್ಟವಾಗಿತ್ತಂತೆ. ಹೀಗಂತೆ ನಟಿಯೇ ಹೇಳಿಕೊಂಡಿದ್ದಾರೆ. 

ಅಭಿಷೇಕ್ ಮತ್ತು ಐಶ್ವರ್ಯಾ ಪ್ರೀತಿಯಲ್ಲಿ ಬೀಳುವ ಮೊದಲು ಬಹಳ ಸಮಯದಿಂದ ಪರಸ್ಪರ ಪರಿಚಯವಿದ್ದರು. 2000 ರಲ್ಲಿ ಬಿಡುಗಡೆಯಾದ 'ಧಾಯ್​ ಅಕ್ಷರ ಪ್ರೇಮ್ ಕೆ' ಚಿತ್ರದ ಸೆಟ್‌ನಲ್ಲಿ ಇಬ್ಬರೂ ಭೇಟಿಯಾದರು. ಇದಾದ ನಂತರ 2003ರಲ್ಲಿ ತೆರೆಕಂಡ ‘ಕುಚ್ ನಾ ಕಹೋ’ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಆ ಸಮಯದಲ್ಲಿ ಇಬ್ಬರೂ ಸ್ನೇಹಿತರಾಗಿದ್ದು, ಆಗಾಗ ಭೇಟಿಯಾಗುತ್ತಿದ್ದರು. ವರದಿಗಳ ಪ್ರಕಾರ, 2005 ರ 'ಬಂಟಿ ಔರ್ ಬಬ್ಲಿ' ಚಿತ್ರದ ಪ್ರಸಿದ್ಧ ಹಾಡು 'ಕಜರಾರೇ-ಕಜರಾರೇ...' ಚಿತ್ರೀಕರಣದ ಸಮಯದಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾ ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸಿದರು. ಬಳಿಕ, 2006-07ರಲ್ಲಿ ಇಬ್ಬರೂ 'ಉಮ್ರಾವ್ ಜಾನ್', 'ಗುರು' ಮತ್ತು 'ಧೂಮ್-2' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಅವಧಿಯಲ್ಲಿ ಇಬ್ಬರೂ ಪರಸ್ಪರ ಹೆಚ್ಚು ಸಮಯ ಕಳೆದರು. ಅವರಿಬ್ಬರೂ 14 ಜನವರಿ 2007 ರಂದು ನಿಶ್ಚಿತಾರ್ಥ ಮಾಡಿಕೊಂಡರು.

ಅಮಿತಾಭ್​ ಪುತ್ರಿ ಶ್ವೇತಾಗೆ ಅತ್ತಿಗೆ ಐಶ್ವರ್ಯ ರೈ ಕಂಡ್ರೆ ಸಿಟ್ಟೇಕೆ? ವೈರಲ್​ ವಿಡಿಯೋದಿಂದ ಕಾರಣ ಬಹಿರಂಗ