Aishwarya Rai@50: ಅಭಿಷೇಕ್ಗೆ ಮದ್ವೆಯಾದ್ರೆ ನಟಿಗಿತ್ತು ಅಪಾಯ! ಜಾತಕ ದೋಷದ ಪರಿಹಾರ ಮಾಡಿದ್ದು ಹೇಗೆ?
ಅಭಿಷೇಕ್ ಅವರನ್ನು ಮದ್ವೆಯಾಗುವುದು ನಟಿ ಐಶ್ವರ್ಯ ಅವರಿಗೆ ಸುಲಭವಾಗಿರಲಿಲ್ಲ, ಇದಕ್ಕೆ ಕಾರಣ ಅವರ ಜಾತಕ. ಇದನ್ನು ಪರಿಹಾರ ಮಾಡಿದ್ದು ಹೇಗೆ?
ನಟಿ ಐಶ್ವರ್ಯ ರೈ ಅವರು ಇಂದು ಅಂದರೆ ನವೆಂಬರ್ 1ರಂದು ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೀಗ ಅವರ ಮದುವೆ ಮತ್ತು ಮಗುವಿನ ವಿಚಾರವಾಗಿ ಒಂದಿಷ್ಟು ಇಂಟರೆಸ್ಟಿಂಗ್ ವಿಷಯಗಳು ಬೆಳಕಿಗೆ ಬಂದಿವೆ. ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಜೀವನಕ್ಕೆ 14 ವರ್ಷಗಳನ್ನು ಪೂರೈಸಿದ್ದಾರೆ. ಮಗಳು ಆರಾಧ್ಯ ಹಾಗೂ ಬಚ್ಚನ್ ಫ್ಯಾಮಿಲಿ ಜೊತೆ ಐಶ್ವರ್ಯ ಸುಖಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಆದರೆ ಇವರ ವೈವಾಹಿಕ ಹಾದಿ ಇಷ್ಟು ಸುಗಮವಾಗಿರಲಿಲ್ಲ. ಮದುವೆಗೂ ಮುನ್ನವೇ ವಿಘ್ನಗಳ ಸರಮಾನೆ ಐಶ್ವರ್ಯ ಅವರನ್ನು ಸುತ್ತಿತ್ತು. ಮದುವೆಗೂ ಮುನ್ನ ಜೀವನ ನಟಿ ಐಶ್ವರ್ಯ ಅವರಿಗೆ ಶುಭ ಎಂದೇ ವಿದ್ವಾಂಸರು ಹೇಳಿದ್ದರು. ಮದುವೆಯಾದ ಮೇಲೆ ಸಂಕಷ್ಟ ಅನುಭವಿಸಬೇಕು ಎಂದು ಹೇಳಲಾಗಿತ್ತು. ಇದಕ್ಕೆ ಕಾರಣ ನಟಿ ಐಶ್ವರ್ಯ ರೈ ಅವರ ಜಾತಕದಲ್ಲಿದ್ದ ಮಾಂಗಳೀಕ ದೋಷ ಅಂದರೆ ಕುಜ ದೋಷ.
ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಅತ್ಯಂತ ನೆಚ್ಚಿನ ಜೋಡಿಗಳಲ್ಲಿ ಒಬ್ಬರು. ಅವರಿಬ್ಬರೂ 20 ಏಪ್ರಿಲ್ 2007 ರಂದು ವಿವಾಹವಾದರು. ಬಚ್ಚನ್ ಕುಟುಂಬದ ಪ್ರತೀಕ್ಷಾ ಬಂಗಲೆಯಲ್ಲಿ ಇಬ್ಬರ ವಿವಾಹ ವಿಧಿವಿಧಾನಗಳು ನಡೆದವು. ಐಶ್ ಮತ್ತು ಅಭಿಷೇಕ್ ಮದುವೆಯಾಗಿ ಇಂದಿಗೆ 14 ವರ್ಷಗಳು ಕಳೆದಿವೆ. ಆದರೆ ಇವರನ್ನು ಮದುವೆಯಾದರೆ ಈ ಮದುವೆ ಹೆಚ್ಚುಕಾಲ ಉಳಿಯುವುದಿಲ್ಲ ಎಂದು ಹೇಳಲಾಗಿತ್ತು. ಇದಕ್ಕೆ ಕಾರಣ ಮೊದಲೇ ಹೇಳಿದಂತೆ ಐಶ್ವರ್ಯ ಅವರ ಜಾತಕದಲ್ಲಿದ್ದ ಕುಜ ದೋಷ.
ಐಶ್ವರ್ಯ @50: ನಕಲಿ ಉಂಗುರ ಕೊಟ್ಟು ಪ್ರಪೋಸ್ ಮಾಡಿದ್ದ ಅಭಿಷೇಕ್- ಇಂಟರೆಸ್ಟಿಂಗ್ ವಿಷ್ಯ ವೈರಲ್
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಸಂಬಂಧ ಹೊಂದಿದ್ದಾಗ, ಈಕೆಯನ್ನು ಮದುವೆಯಾದರೆ ಇದು ಪತಿ ಮತ್ತು ಮದುವೆಯ ಮೇಲೆ ಪರಿಣಾಮ ಬೀರುತ್ತದೆ ಎಂದೇ ಜ್ಯೋತಿಷಿಗಳು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮದುವೆಗೂ ಮುನ್ನ ಐಶ್ವರ್ಯ ರೈ ಅವರ ಕುಜ ದೋಷ ನಿವಾರಣೆಗೆ ಅರಳಿ ಮರದ ಜೊತೆ ಮದುವೆ ಮಾಡಲಾಗಿತ್ತು. ಇದರಿಂದ ದೋಷವು ದೂರವಾಗುತ್ತದೆ ಎನ್ನುವ ಕಾರಣದಿಂದ ಈ ರೀತಿ ಮಾಡಲಾಗಿತ್ತು. ಈ ವೇಳೆ ಅಭಿಷೇಕ್ ತಂದೆ ಅಮಿತಾಭ್ ಬಚ್ಚನ್ ತಮ್ಮ ಇಡೀ ಕುಟುಂಬದೊಂದಿಗೆ ಕಾಶಿ ತಲುಪಿದ್ದರು. ಅಲ್ಲಿ ಅವರು ಬಾಬಾ ವಿಶ್ವನಾಥ್ ಮತ್ತು ಸಂಕಟ್ ಮೋಚನ್ ಅವರ ದರ್ಶನ ಪಡೆದರು. ವಿಶೇಷವೆಂದರೆ ಅಂದು ಬಚ್ಚನ್ ಕುಟುಂಬದೊಂದಿಗೆ ಭಾವಿ ಸೊಸೆ ಐಶ್ವರ್ಯಾ ರೈ ಬಚ್ಚನ್ ಕೂಡ ಇದ್ದರು. ಕಾಶಿಯಲ್ಲಿ ಬಚ್ಚನ್ ಕುಟುಂಬದೊಂದಿಗೆ ಐಶ್ವರ್ಯ ರೈ ಅವರನ್ನು ನೋಡಿ, ಕುಜ ದೋಷದಿಂದ ಮುಕ್ತಿ ಹೊಂದಲು ಬಚ್ಚನ್ ಕುಟುಂಬದೊಂದಿಗೆ ಅಲ್ಲಿಗೆ ತಲುಪಿದ್ದಾರೆ ಎಂಬ ಸುದ್ದಿ ವೇಗವಾಗಿ ಹರಡಿತು. ಅಷ್ಟೇ ಅಲ್ಲ, ಐಶ್ವರ್ಯಾ ಸಂಕಟ್ ಮೋಚನ್ ದೇವಸ್ಥಾನದಲ್ಲಿಯೇ ಅರಳಿ ಮರಕ್ಕೆ ಮದುವೆಯಾದರು.
ಇನ್ನು ಕುಜ ದೋಷದ ಬಗ್ಗೆ ಹೇಳುವುದಾದರೆ, ಸಾಮಾನ್ಯವಾಗಿ ಇಂಥ ದೋಷ ಇರುವವರಿಗೆ ಅರಳಿ ಮರ, ಕುಂಭ ವಿವಾಹ ಮತ್ತು ಸಾಲಿಗ್ರಾಮ್ ವಿವಾಹ ಮಾಡಿಸಲಾಗುತ್ತದೆ. ಅವರು ಮಂಗಳ ಯಂತ್ರವನ್ನು ಪೂಜಿಸುವ ಮೂಲಕ ಈ ಪರಿಣಾಮವನ್ನು ಕಡಿಮೆ ಮಾಡಬಹುದು. ಈ ದೋಷವು 28 ವರ್ಷಗಳ ನಂತರ ತಾನಾಗಿಯೇ ಮಾಯವಾಗುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು.
ಕೈಕೊಟ್ಟ ಐಶ್ವರ್ಯ ರೈ, ಮಾಜಿ ಪ್ರೇಮಿ ಸಲ್ಮಾನ್‌ರಿಂದ ಬೆದರಿಕೆ! ನೋವು ತೋಡಿಕೊಂಡ ವಿವೇಕ್ ಓಬಿರಾಯ್