Asianet Suvarna News Asianet Suvarna News

ಟಾಪ್ ಫ್ಲಾಪ್ ಸಿನಿಮಾಗಳ ಪಟ್ಟಿಗೆ ಸೇರಿದ ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ'; ಒಟ್ಟು ಗಳಿಕೆ ಎಷ್ಟು?

ಬಾಲಿವುಡ್‌ಗೆ 2022 ಉತ್ತಮ ವರ್ಷವಾಗಿಲ್ಲ. ಈ ವರ್ಷ ಬಾಲಿವುಡ್‌ನಲ್ಲಿ ಇನ್ನೂ ಯಾವುದೇ ಸಿನಿಮಾಗಳು ಬಾಕ್ಸ್ ಆಫೀಸ್ ಹಿಟ್‌ ನೀಡಿಲ್ಲ. ಅದರಲ್ಲೂ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಫ್ಲಾಪ್ ಸಿನಿಮಾ ಪಟ್ಟಿಗೆ ಸೇರಿರುವುದು ಅಚ್ಚರಿ ಮೂಡಿಸಿದೆ.

Aamir Khan starrer Laal Singh Chaddha is among top flops of 2022 sgk
Author
Bengaluru, First Published Aug 26, 2022, 1:23 PM IST

ಬಾಲಿವುಡ್‌ಗೆ 2022 ಉತ್ತಮ ವರ್ಷವಾಗಿಲ್ಲ. ಈ ವರ್ಷ ಬಾಲಿವುಡ್‌ನಲ್ಲಿ ಇನ್ನೂ ಯಾವುದೇ ಸಿನಿಮಾಗಳು ಬಾಕ್ಸ್ ಆಫೀಸ್ ಹಿಟ್‌ ನೀಡಿಲ್ಲ. ಕೊರೊನಾ ಬಳಿಕ ಹಿಂದಿ ಚಿತ್ರರಂಗ ಚೇತರಿಸಿಕೊಳ್ಳಲಿದೆ ಅಂದುಕೊಂಡಿದ್ದು ಈಗ ಸುಳ್ಳಾಗುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳು, ಸ್ಟಾರ್ ನಟರ ಸಿನಿಮಾಗಳು, ನಿರೀಕ್ಷೆಯ ಚಿತ್ರಗಳು ಹೀನಾಯ ಸೋಲು ಕಾಣುತ್ತಿವೆ.  ಅದರಲ್ಲೂ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಫ್ಲಾಪ್ ಸಿನಿಮಾ ಪಟ್ಟಿಗೆ ಸೇರಿರುವುದು ಅಚ್ಚರಿ ಮೂಡಿಸಿದೆ. ಆಮೀರ್ ಖಾನ್ ನಾಲ್ಕು ವರ್ಷಗಳ ನಂತರ ಲಾಲ್ ಸಿಂಗ್ ಚಡ್ಡಾ ಮೂಲಕ ಅಭಿಮಾನಿಗಳ ಮುಂದಿದ್ದರು.  ಆದರೆ ಈ ಸಿನಿಮಾ ಅಭಿಮಾನಿಗಳನ್ನು ಮೆಚ್ಚಿಸಲು ವಿಫಲವಾಗಿದೆ. ಅಲ್ಲದೇ ಗಲ್ಲಾಪೆಟ್ಟಿಗೆಯಲ್ಲೂ ಉತ್ತಮ ಕಮಾಯಿ ಮಾಡಲು ಸೋತಿದಿ. ಆಮೀರ್ ಖಾನ್ ಸಿನಿಮಾ ಹೀನಾಯ ಸೋತಿರುವುದು ಬಾಲಿವುಡ್‌ಗೆ ಮತ್ತೊಂದು ದೊಡ್ಡ ಶಾಕ್ ಆಗಿದೆ.  

ಒಟ್ಟು ಗಳಿಕೆ 

ಲಾಲ್ ಸಿಂಗ್ ಚಡ್ಡಾ, ಹಾಲಿವುಡ್‌ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದೆ. ಆದರೆ ಭಾರತೀಯ ಅಭಿಮಾನಿಗಳನ್ನು ಮೆಚ್ಚಿಸಲು ಆಮೀರ್ ಖಾನ್ ಸೋತಿದ್ದಾರೆ. ಈ ವರ್ಷದ ಟಾಪ್ ಫ್ಲಾಪ್ ಸಿನಿಮಾಗಳ ಪಟ್ಟಿಯಲ್ಲಿ ಲಾಲ್ ಸಿಂಗ್ ಚಡ್ಡಾ ಸೇರಿದೆ. ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಅಭಿಮಾನಿಗಳ ನಿರೀಕ್ಷೆ ಹುಸಿಗೊಳಿಸಿದೆ. 180 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾಗೆ ಬಾಯ್ಕಟ್ ಸಮಸ್ಯೆ ಕೂಡ ಎದುರಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಲಾಲ್ ಸಿಂಗ್ ಚಡ್ಡಾ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿ ಆಮೀರ್ ಖಾನ್ ಸಿನಿಮಾ ಬಹಿಷ್ಕರಿಸುವಂತೆ ಕರೆ ಕೊಟ್ಟಿದ್ದರು. ಈ ನಡುವೆಯೂ ಸಿನಿಮಾ ರಿಲೀಸ್ ಆಗಿತ್ತು. ಆದರೆ ರಿಲೀಸ್ ಆಗಿ 15 ದಿನ ವಾದರೂ ಲಾಲಿ ಸಿಂಗ್ ಚಡ್ಡಾ ಕೇವಲ 58.73 ಕೋಟಿ ರೂಪಾಯಿ ಅಷ್ಟೆ ಸಂಗ್ರಹ ಮಾಡಿದೆ. ಆಮೀರ್ ಖಾನ್ ಸಿನಿಮಾ ಮೊದಲ ದಿನವೇ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತಿತ್ತು. ಆದರೀಗ 15 ದಿನವಾದರೂ ಕೇವಲ 58 ಕೋಟಿ ಮಾಡಿರುವುದು ಅಚ್ಚರಿ ಮೂಡಿಸಿದೆ.  

ನಾಲ್ಕೈದು ಸಿನಿಮಾ ಹಿಟ್ ಆಗಿದ್ದಕ್ಕೆ ಸೌತ್‌ ಸಿನಿರಂಗ ಮಾದರಿ ಎನ್ನಲು ಸಾಧ್ಯವಿಲ್ಲ; ಆರ್ ಮಾಧವನ್

2022ರ ದೊಡ್ಡ ಫ್ಲಾಪ್ 

2022ರಲ್ಲಿ ಬಾಲಿವುಡ್ ಸಿನಿಮಾರಂಗ ದೊಡ್ಡ ನಷ್ಟ ಕಂಡಿದೆ. ಒಂದರಮೇಲೊಂದು ಸಿನಿಮಾಗಳು ಸೋಲುತ್ತಿವೆ. ರಣವೀರ್ ಸಿಂಗ್ ಅವರ ಜಯೇಶ್ ಭಾಯ್ ಜೋರ್ದಾರ್, ಅಕ್ಷಯ್ ಕುಮಾರ್ ಅವರ ಸಾಮ್ರಾಟ್ ಪೃಥ್ವಿರಾಜ್ ಸೋಲಿನ ಬಳಿಕ ಇತ್ತೀಚಿಗೆ ಬಂದ ರಣಬೀರ್ ಕಪೂರ್ ಅವರ ಶಂಶೇರ, ರಕ್ಷ ಬಂಧನ, ಹೀರೋಪಂತಿ 2, ತಾಪ್ಸಿ ಪನ್ನು ದೋಬೋರಾ ಹೀಗೆ ಸಾಲು ಸಾಲು ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಕೂಡ ಸೇರಿಕೊಂಡಿದೆ. 

ಬಾಲಿವುಡ್ ಖಾನ್‌ಗಳು ಲೆಜೆಂಡ್; ಬಾಯ್ಕಟ್ ಟ್ರೆಂಡ್‌ಗೆ ಏಕ್ತಾ ಕಪೂರ್ ರಿಯಾಕ್ಷನ್

ಲಾಲ್ ಸಿಂಗ್ ಚಡ್ಡಾ ಬಗ್ಗೆ

ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಆಗಸ್ಟ್ 11ರಂದು ರಿಲೀಸ್ ಆಗಿತ್ತು. ಆಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಕರೀನಾ ಕಪೂರ್ ಮಿಂಚಿದ್ದರು. ಅದ್ವೈತ್ ಚಂದನ್ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದೆ. ಲಾಲ್ ಸಿಂಗ್ ಚಡ್ಡಾ ರಿಲೀಸ್‌ಗೂ ಮೊದಲೇ ನೆಟ್ಟಿಗರು ಬಾಯ್ಕಟ್‌ಗೆ ಕರೆ ಕೊಟ್ಟಿದ್ದರು. ಆಮೀರ್ ಖಾನ್ ಈ ಹಿಂದೆ ನೀಡಿದ್ದ ಹೇಳಿಕೆ ಲಾಲ್ ಸಿಂಗ್ ಚಡ್ಡಾ ಮೇಲೆ ಪರಿಣಾಮ ಬೀರಿತ್ತು. ಭಾರತದಲ್ಲಿ ಅಸಹಿಷ್ಣತೆ ಕಾಡುತ್ತಿದೆ, ದೇಶ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದೆ ಎಂದು ಹೇಳಿದ್ದ ಆಮೀರ್ ಖಾನ್ ಹೇಳಿಕೆ ಸಿನಿಮಾ ಮೇಲೆ ಪರಿಣಾಮ ಬೀರಿತ್ತು. ಆಮೀರ್ ಖಾನ್ ಕ್ಷಮೆ ಕೇಳಿ ಸಿನಿಮಾ ನೋಡುವಂತೆ ಕೇಳಿಕೊಂಡರು ಸಹ ಪ್ರಯೋಜನವಾಗಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಹೀನಾಯ ಸೋಲು ಕಂಡಿದೆ. ಅದರಲ್ಲೂ ಟಾಪ್ ಫ್ಲಾಪ್ ಸಿನಿಮಾಗಳ ಪಟ್ಟಿಗೆ ಸೇರಿರುವುದು ನಿಜಕ್ಕೂ ದುರಂತ.    

Follow Us:
Download App:
  • android
  • ios